ನಿತ್ಯಾ ಹೃದಯ ಗೆದ್ದ ಕರ್ಣ! – ಬೇರೆ ಹುಡುಗನ ಜೊತೆ ನಿಧಿ ಮದ್ವೆ!
ಅಜ್ಜಿಗಾಗಿ ಒಪ್ಪಿಗೆ ಕೊಟ್ಟ ನಿಧಿ!

ನಿತ್ಯಾ ಹೃದಯ ಗೆದ್ದ ಕರ್ಣ! – ಬೇರೆ ಹುಡುಗನ ಜೊತೆ ನಿಧಿ ಮದ್ವೆ!ಅಜ್ಜಿಗಾಗಿ ಒಪ್ಪಿಗೆ ಕೊಟ್ಟ ನಿಧಿ!

ನಿಧಿ ಕರ್ಣನನ್ನ ಪ್ರೀತಿಸ್ತಿದ್ದಾಳೆ.. ಆತನನ್ನೇ ಮದುವೆ ಆಗ್ಬೇಕು ಕನಸು ಕಾಣ್ತಿದ್ದಾಳೆ..  ಮೂರ್ಹೊತ್ತು ಕರ್ಣ ಸರ್..‌ ಕರ್ಣ ಸರ್‌ ಅಂತ ಜಪ ಮಾಡ್ತಿರ್ತಾಳೆ.. ಆದ್ರೀಗ ನಿಧಿಗೆ ಕುತಂತ್ರಿಗಳು ಶಾಕ್‌ ಕೊಟ್ಟಿದ್ದಾರೆ. ನಿಧಿಯನ್ನ ಕರ್ಣನಿಂದ ದೂರ ಮಾಡಲು ಹೊಸ ಪ್ಲ್ಯಾನ್‌ ಮಾಡಿದ್ದಾರೆ. ಇದೀಗ ನಯನತಾರಾ ನಿಧಿ ಮದುವೆ ಮುಂದಾಗಿದ್ದು, ಹುಡುಗ ಬೇರೆ ಹುಡುಕಿದ್ದಾಳೆ. ಮತ್ತೊಂದ್ಕಡೆ ಕರ್ಣನನನ್ನ ಕಡ್ರೆ ಉರಿದು ಬೀಳ್ತಿದ್ದ ನಿತ್ಯಗೆ ಈಗ ಆತ ಒಳ್ಳೆಯವನು ಅಂತ ಗೊತ್ತಾಗಿದೆ. ಕರ್ಣನ ಸಿಂಪ್ಲಿಸಿಟಿ ನೋಡಿ ನಿತ್ಯ ಫುಲ್‌ ಫಿದಾ ಆಗಿದ್ದಾಳೆ.. ಇದನ್ನ ನೋಡಿದ ಸೀರಿಯಲ್‌ ಫ್ಯಾನ್ಸ್‌ ಸ್ಟೋರಿಯಲ್ಲಿ ಬಿಗ್‌ ಟ್ವಿಸ್ಟ್‌ ಕಾದಿರೋದು ಪಕ್ಕಾ ಅಂತ ಹೇಳ್ತಿದ್ದಾರೆ.

ಇದನ್ನೂ ಓದಿ: ಇಂಡಿಯಾ-ಪಾಕ್ ಪಂದ್ಯ ನಡೆಯುತ್ತಾ – 2ನೇ ಆವೃತ್ತಿ ಏಷ್ಯಾಕಪ್ ಬಹಿಷ್ಕರಿಸಿದ್ದೇಕೆ ಭಾರತ?

ಕರ್ಣ ಸೀರಿಯಲ್‌ ಅತೀ ಕಡಿಮೆ ಸಮಯದಲ್ಲೇ ಪ್ರೇಕ್ಷಕರ ಮನಗೆದ್ದಿದೆ. ಟಿಆರ್‌ಪಿ ರೇಸ್‌ ನಲ್ಲೂ ಕರ್ಣ ಮುಂದಿದ್ದಾನೆ. ಇದೀಗ ಸೀರಿಯಲ್‌ ಸ್ಟೋರಿ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದೆ. ನಿತ್ಯ ಮದುವೆಯ ಜವಾಬ್ದಾರಿ ಕರ್ಣ ಮೇಲಿದೆ. ಏನೇ ತೊಂದರೆಯಾಗದಂತೆ ಮದುವೆ ಮಾಡಿಸೋದಾಗಿ ಕರ್ಣ ಅಜ್ಜಿಗೆ ಮಾತು ಕೊಟ್ಟಿದ್ದಾನೆ. ಈಗಾಗಲೇ ನಿತ್ಯ ನಿಶ್ಚಿತಾರ್ಥ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದಾನೆ. ಏನೇ ತಪ್ಪು ಆದ್ರೂ ತನ್ನ ಮೇಲೆಯೇ ಹಾಕಿಕೊಂಡು ನೋವು ನುಂಗಿದ್ದಾನೆ. ಆದ್ರೆ ನಿತ್ಯಗೆ ಇದ್ಯಾವುದರೂ ಅರಿವೂ ಇರ್ಲಿಲ್ಲ. ಹೀಗಾಗಿ ಕರ್ಣ ಮೇಲೆ ರೇಗುತ್ತಾ ಬಂದಿದ್ಲು.. ಇದೀಗ ಕರ್ಣನ ಒಳ್ಳೆತನ ನಿತ್ಯಗೆ ಗೊತ್ತಾಗಿದೆ. ಇದೀಗ ಆತನ ಮೇಲಿದ್ದ ಕೆಟ್ಟ ಅಭಿಪ್ರಾಯ ದೂರ ಆಗಿದೆ. ಇದೀಗ ಕರ್ಣ ನಿತ್ಯ ಹೃದಯ ಗೆದ್ದಿದ್ದಾನೆ. ಇದ್ರ ಬೆನ್ನಲ್ಲೇ ನಿತ್ಯಗೆ ಕರ್ಣನ ಮೇಲೆ ಲವ್‌ ಆಗುತ್ತಾ ಅನ್ನೋ ಅನುಮಾನ ವೀಕ್ಷಕರಿಗೆ ಕಾಡಿದೆ. ಮತ್ತೊಂದ್ಕಡೆ ನಿಧಿಗೆ ಗೊತ್ತಿಲ್ಲದೇ ಆಕೆಯ  ಮದುವೆಗೆ ಸಿದ್ಧತೆ ನಡಿತಾ ಇದೆ.

ನಿಧಿಗೆ ಕರ್ಣ ಅಂದ್ರೆ ತುಂಬಾ ಇಷ್ಟ.. ಆತನನ್ನ ಲವ್‌ ಮಾಡ್ತಿದ್ದಾಳೆ. ಕರ್ಣನನ್ನೇ ಮದುವೆ ಆಗೋ ಕನಸು ಕೂಡ ಕಾಣ್ತಿದ್ದಾಳೆ. ಕರ್ಣನಿಗೆ ತೊಂದ್ರೆ ಆದ್ರೆ ಸಹಿಸೋದಿಲ್ಲ.. ಈಗಾಗಲೇ ಕರ್ಣನಿಗೆ ತೊಂದ್ರೆ ಕೊಟ್ತಿದ್ದ ರಮೇಶ, ನಯನತಾರಾಗೆ ನಿಧಿ ಸರಿಯಾಗೇ ವಾರ್ನ್‌ ಮಾಡಿದ್ಲು.. ಹೀಗಾಗಿ ನಿಧಿ ಮೇಲೆ ಸೇಡು ತೀರಿಸಿಕೊಳ್ಳಲು ನಯನತಾರ ಹೊಸ ಪ್ಲ್ಯಾನ್‌ ಮಾಡಿದ್ದಾಳೆ. ನಿಧಿ ಕರ್ಣನ ಜೊತೆ ಇದ್ರೆ, ತಮ್ಮ ಕೆಲಸಕ್ಕೆ ತೊಂದರೆ ಆಗುತ್ತೆ ಅನ್ನೋದು ಆಕೆಗೆ ಗೊತ್ತಾಗಿದೆ. ಹೀಗಾಗೇ ನಿಧಿಯನ್ನ ಕರ್ಣನಿಂದ ದೂರ ಮಾಡ್ಬೇಕು ಅಂತಾ ಆಕೆಗೆ ಮದುವೆ ಮಾಡಿಸಲು ಮುಂದಾಗಿದ್ದಾಳೆ.

ನಿಧಿ ಅಜ್ಜಿ ಜೊತೆ ಕರ್ಣನ ಮನೆಗೆ ಬಂದಿದ್ದಾಳೆ. ಮನೆಗೆ ಬರ್ತಿದ್ದಂತೆ ಹೊಸ ಲೋಕದಲ್ಲಿ ತೇಲಾಡಿದ್ದಾಳೆ. ಆಕೆಯೇ ಸೇರು ಒದ್ದು ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾಳೆ. ಕರ್ಣ ರೂಮ್‌ ಗೆ ಬಂದ ನಿಧಿ.. ಇದೇ ಗೋಡೆ ಮೇಲೆ ನಂದು ಒಂದು ಫೋಟೋ ಇರ್ಬೇಕು ಅಂತ ಹೇಳಿದ್ದಾಳೆ. ಆದ್ರೆ ಅಷ್ಟೊತ್ತಿಗೆ ನಿಧಿಗೆ ನಯನತಾರಾ ಶಾಕ್‌ ಕೊಟ್ಟಿದ್ದಾಳೆ. ಮನೆಗೆ ಹುಡುಗನ ಕಡೆಯವರನ್ನ ಕರೆಸಿ, ನೀವು ನೋಡೋಕೆ ಬಂದಿರೋ ಮುದ್ದಾದ ರಾಜಕುಮಾರಿ ಇವಳೇ ಅಂತಾ ನಯನತಾರ ಹೇಳಿದ್ದಾಳೆ. ಆಕೆಯ ಮಾತು ಕೇಳ್ತಿದ್ದಂತೆ ನಿಧಿ ಮಾತ್ರವಲ್ಲ.. ಕರ್ಣ ಕೂಡ ಶಾಕ್‌ ಆಗಿದ್ದಾನೆ. ಇದೀಗ ನಿಧಿ ಕನಸು ಚೂರು ಚೂರಾಗಿದೆ. ಹಾಗಾದ್ರೆ ನಿಧಿ ಮುಂದೇನು ಮಾಡ್ತಾಳೆ.. ಪ್ರೀತಿಯನ್ನಉಳಿಸಿಕೊಳ್ತಾಳಾ ಅಥವಾ ಅಜ್ಜಿಗಾಗಿ ಈ ಮದುವೆ ಆಗ್ತಾಳಾ ಅನ್ನೋ ಕುತೂಹಲ ಮೂಡಿದೆ.

ಮತ್ತೊಂದ್ಕಡೆ ಕರ್ಣ ನಿತ್ಯಾಗೆ ಸಾಕಷ್ಟು ಸಹಾಯ ಮಾಡಿದ್ದಾನೆ.. ಆತನಿಂದ ತುಂಬಾ ಒಳಿತಾಗಿದೆ. ಇದು ನಿತ್ಯಾಗೂ ಗೊತ್ತಾಗಿದೆ. ಇದೀಗ ಕರ್ಣ ನಿತ್ಯ ಹೃದಯ ಗೆದ್ದಾಗಿದೆ. ಹೀಗಾಗಿ ಕರ್ಣನನ್ನ ಮದುವೆ ಆಗೋದು ನಿಧಿ ಅಲ್ಲ ನಿತ್ಯ ಅಂತಾ ವೀಕ್ಷಕರು ಕೂಡ ಕಾಮೆಂಟ್‌ ಮಾಡ್ತಿದ್ದಾರೆ. ಒಟ್ಟಿನಲ್ಲಿ ಕರ್ಣ ಸೀರಿಯಲ್‌ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M