ನಿವೃತ್ತಿ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ಸ್ – ಸಿಗ್ತಿಲ್ಲ ಚಾನ್ಸ್.. ವಿದಾಯವೊಂದೇ ದಾರಿ!
ಚಹಾಲ್, ರಹಾನೆ, ಪೂಜಾರ.. ಯಾರೆಲ್ಲಾ?

ನಿವೃತ್ತಿ ಲಿಸ್ಟ್ ನಲ್ಲಿ ಸೂಪರ್ ಸ್ಟಾರ್ಸ್ – ಸಿಗ್ತಿಲ್ಲ ಚಾನ್ಸ್.. ವಿದಾಯವೊಂದೇ ದಾರಿ!ಚಹಾಲ್, ರಹಾನೆ, ಪೂಜಾರ.. ಯಾರೆಲ್ಲಾ?

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಎಲ್ಲಾ ಫಾರ್ಮೆಟ್​ಗಳಲ್ಲೂ ಸ್ಥಿರ ಪ್ರದರ್ಶನ ನೀಡ್ತಿದೆ. ಅದ್ರಲ್ಲೂ ವಿದೇಶಿ ಪಿಚ್​ಗಳಲ್ಲಿ ಗೆಲುವಿನ ಸಂಖ್ಯೆ ಜಾಸ್ತಿಯಾಗ್ತಿದೆ. ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್​ಗಳ ಅಬ್ಬರ ಜೋರಾಗಿದ್ದು ವಿಶ್ವಕ್ರಿಕೆಟ್​ನಲ್ಲಿ ಸಂಚಲನ ಸೃಷ್ಟಿಸ್ತಿದ್ದಾರೆ. ಆದ್ರೆ ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಯ್ತು ಅನ್ನೋ ಹಾಗೇ ಇನ್ನೂ ಕೆಲ ಸೀನಿಯರ್ ಪ್ಲೇಯರ್ಸ್ ಸೈಡ್​ಲೈನ್ ಆಗಿದ್ದಾರೆ. ಭಾರತ ತಂಡದಲ್ಲಿ ಅವಕಾಶ ಸಿಗದೆ ಸಾಕಷ್ಟು ಪ್ಲೇಯರ್ಸ್ ನಿವೃತ್ತಿ ಸನಿಹಕ್ಕೆ ಬಂದಿದ್ದಾರೆ. ಯಾವುದೇ ಕ್ಷಣದಲ್ಲಾದ್ರೂ ರಿಟೈರ್​ಮೆಂಟ್ ಘೋಷಣೆ ಮಾಡಬಹುದು.

ಇದನ್ನೂ ಓದಿ : ಜಾಮೀನು ರದ್ದು ಬೆನ್ನಲ್ಲೇ ದರ್ಶನ್‌ ಬಂಧನಕ್ಕೆ ಕೋರ್ಟ್‌ ಆದೇಶ – ತಮಿಳುನಾಡಿನಲ್ಲಿ ಅರೆಸ್ಟ್‌ ಆಗ್ತಾರಾ ನಟ ದರ್ಶನ್?‌  

2023ರ ಬಳಿಕ ಭಾರತ ತಂಡದ ಜೆರ್ಸಿ ತೊಟ್ಟಿಲ್ಲ ಚಹಾಲ್!

ಸುಮಾರು ಏಳು ವರ್ಷಗಳ ಕಾಲ ಭಾರತದ ಪ್ರಮುಖ ವೈಟ್-ಬಾಲ್ ಆಟಗಾರನಾಗಿದ್ದ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಯಾವುದೇ ಕ್ಷಣದಲ್ಲಾದ್ರೂ ನಿವೃತ್ತಿ ಘೋಷಣೆ ಮಾಡ್ಬೋದು. 2023 ರಲ್ಲಿ ಕೊನೆಯ ಬಾರಿಗೆ ಆಡಿದ ಚಾಹಲ್ ಏಕದಿನ ಮಾದರಿಯಲ್ಲಿ 121 ವಿಕೆಟ್‌ಗಳು ಮತ್ತು 96 ಟಿ20ಐ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಅತ್ಯುತ್ತಮ ಟಿ20ಐ ಅಂಕಿ ಅಂಶ ಅಂದ್ರೆ 2017 ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ 25 ರನ್​ಗಳನ್ನ ನೀಡಿ 6 ವಿಕೆಟ್ ಬೇಟೆಯಾಡಿದ್ರು.

2 ವರ್ಷಗಳಿಂದ ಬ್ಲ್ಯೂ ಜೆರ್ಸಿ ತೊಟ್ಟಿಲ್ಲ ರಹಾನೆ!

ಇನ್ನು ಭಾರತ ಟೆಸ್ಟ್ ತಂಡ ಕಂಡ ಅದ್ಭುತ ಆಟಗಾರರಲ್ಲಿ ಅಜಿಂಕ್ಯ ರಹಾನೆ ಕೂಡ ಒಬ್ರು. ಆದ್ರೆ ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪರ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ ಆಡಿದ್ದರು. ಮಿಡಲ್ ಆರ್ಡರ್​ನಲ್ಲಿ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿರುವ ಅವರು 144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 5077 ರನ್, ಏಕದಿನ ಪಂದ್ಯಗಳಲ್ಲಿ 2962 ರನ್ ಮತ್ತು ಟಿ20ಐಗಳಲ್ಲಿ 375 ರನ್ ಗಳಿಸಿದ್ದಾರೆ. ವೈಟ್-ಬಾಲ್ ಕೊಡುಗೆಗಳು ಸೀಮಿತವಾಗಿದ್ದರೂ, ಬಲಿಷ್ಠ ಟೆಸ್ಟ್ ಆಟಗಾರನಾಗಿ ಉಳಿದಿದ್ದಾರೆ. ಆದರೆ ತಂಡದಲ್ಲಿ ಸ್ಥಾನವಿಲ್ಲದ ಕಾರಣ ನಿವೃತ್ತಿ ಅಂಚಿನಲ್ಲಿದ್ದಾರೆ.

ಅನುಭವಿ ಚೇತೇಶ್ವರ ಪೂಜಾರಗೂ ಇಲ್ಲ ಅವಕಾಶ!

2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತದ ಪರ ಕಾಣಿಸಿಕೊಂಡ ಅನುಭವಿ ಚೇತೇಶ್ವರ ಪೂಜಾರ ಕೂಡ ನಿವೃತ್ತಿ ಹೊಂದುವ ಸಾಧ್ಯತೆ ಇದೆ. ಪೂಜಾರ ಕೇವಲ ಐದು ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದರೂ, ಟೆಸ್ಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 176 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 43.60 ರ ಸರಾಸರಿಯಲ್ಲಿ 7195 ರನ್ ಗಳಿಸಿದ್ದಾರೆ. ಆದ್ರೆ ವಯಸ್ಸು ಅವರ ಪರವಾಗಿಲ್ಲದ ಕಾರಣ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ.

5 ವರ್ಷಗಳಿಂದ ಅವಕಾಶದ ನಿರೀಕ್ಷೆಯಲ್ಲಿ ವಿಜಯ್ ಶಂಕರ್!

ಇನ್ನು 2019 ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಆಲ್‌ರೌಂಡರ್ ವಿಜಯ್ ಶಂಕರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇನು ಸದ್ದು ಮಾಡಿಲ್ಲ.  12 ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರ ಸ್ಥಾನಕ್ಕಾಗಿ ಸ್ಪರ್ಧೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು. ಸದ್ಯಕ್ಕೆ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ.

ತೂಗುಯ್ಯಾಲೆಯಲ್ಲಿ ಜಯದೇವ್ ಉನಾದ್ಕಟ್ ಭವಿಷ್ಯ!

ಎಡಗೈ ವೇಗಿ ಜಯದೇವ್ ಉನಾದ್ಕಟ್ ಭಾರತದ ಪರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಆದರೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. 2023 ರಲ್ಲಿ ಕೊನೆಯ ಬಾರಿಗೆ ಆಡಿರುವ ಅವರು ನಾಲ್ಕು ಟೆಸ್ಟ್, ಎಂಟು ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯಕ್ಕೆ ಭಾರತದ ಫಾಸ್ಟ್ ಬೌಲಿಂಗ್ ವಿಭಾಗ ಸ್ಟ್ರಾಂಗ್ ಆಗಿದ್ದು ಇವ್ರು ನಿವೃತ್ತಿ ಹೊಂದುವ ಸಾಧ್ಯತೆ ಹೆಚ್ಚಿದೆ.

2017ರಲ್ಲಿ ಕೊನೇ ಬಾರಿಗೆ ಆಡಿರುವ ಅಮಿತ್ ಮಿಶ್ರಾ!

42 ವರ್ಷದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 2017 ರಲ್ಲಿ ಕೊನೆಯ ಬಾರಿಗೆ ಆಡಿದ್ರು. 2003 ರಿಂದ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನ  ಹೊಂದಿದ್ದಾರೆ. 76 ಟೆಸ್ಟ್ ವಿಕೆಟ್‌ಗಳು, 64 ಏಕದಿನ ವಿಕೆಟ್‌ಗಳು ಮತ್ತು 16 ಟಿ20ಐ ವಿಕೆಟ್‌ಗಳೊಂದಿಗೆ ಒಳ್ಳೆ ನಂಬರ್ಸ್ ಇದ್ರೂ ವಯಸ್ಸಿನ ಕಾರಣದಿಂದ ಇನ್ಮುಂದೆ ಅವಕಾಶಗಳು ಸಿಗಲ್ಲ. ಹೀಗಾಗಿ ನಿವೃತ್ತಿಯೊಂದೇ ಉಳಿದಿರೋ ದಾರಿ.

ನಿವೃತ್ತಿಯ ಅಂಚಿನಲ್ಲಿ ಮನೀಶ್ ಪಾಂಡೆ!

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ 2021 ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು, 29 ಏಕದಿನ ಮತ್ತು 39 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಡಿಮೆ ಟೈಮಲ್ಲಿ ಆಡಿದ್ರೂ ಉತ್ತಮ ದಾಖಲೆ ಹೊಂದಿದ್ದಾರೆ. ಆದ್ರೂ ಕಂಟಿನ್ಯೂಯಸ್ ಆಗಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೆಣಗಾಡಿದ್ದಾರೆ. ಇದೇ  ನಿವೃತ್ತಿಯ ಸಾಧ್ಯತೆಯನ್ನು ಹೆಚ್ಚಿಸಿದೆ. ಪ್ರಸ್ತುತ ಮನೀಶ್ 2025 ರ ಮಹಾರಾಜ ಟಿ20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಅನ್ನು ಮುನ್ನಡೆಸುತ್ತಿದ್ದಾರೆ.

2023ರಲ್ಲಿ ಕೊನೇ ಬಾರಿಗೆ ಆಡಿದ್ದ ಹರ್ಷಲ್ ಪಟೇಲ್!

ಭಾರತದ ಪರ 25 ಟಿ20 ಪಂದ್ಯಗಳನ್ನು ಆಡಿರುವ ಹರ್ಷಲ್ ಪಟೇಲ್ 29 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬಲಗೈ ವೇಗಿ ಹರ್ಷಲ್ ಪಟೇಲ್ ಕೊನೆಯ ಬಾರಿಗೆ 2023 ರಲ್ಲಿ ಕಾಣಿಸಿಕೊಂಡರು. ಹರ್ಷಲ್‌ಗೆ ಅವಕಾಶಗಳೂ ಸಿಕ್ಕಿದ್ದು ಕೂಡ ಕಡಿಮೆಯೇ. ಇನ್ನೇನಿದ್ರೂ ವಿದಾಯವೊಂದೇ ದಾರಿ.

ಅವಕಾಶದ ನಿರೀಕ್ಷೆಯಲ್ಲಿ ನಿವೃತ್ತಿಯತ್ತ ದೀಪಕ್ ಹೂಡಾ!

ಬ್ಯಾಟಿಂಗ್ ಆಲ್‌ರೌಂಡರ್ ದೀಪಕ್ ಹೂಡಾರದ್ದೂ ಇದೇ ಕಥೆ. ಕೊನೆಯ ಬಾರಿಗೆ 2023 ರಲ್ಲಿ ಭಾರತದ ಪರ ಆಡಿದ್ದರು. ಅಲ್ದೇ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ, 10 ಏಕದಿನ ಮತ್ತು 21 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.

ಕರಿಯರ್ ಎಂಡ್ ಹೊಸ್ತಿಲಲ್ಲಿ ಹನುಮ ವಿಹಾರಿ!

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹನುಮ ವಿಹಾರಿ ದೇಶೀಯ ಟೂರ್ನಿಯಲ್ಲಿ ಸದ್ದು ಮಾಡಿ 24 ನೇ ವಯಸ್ಸಿನಲ್ಲಿ ಭಾರತಕ್ಕಾಗಿ ಪಾದಾರ್ಪಣೆ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಸದ್ದು ಮಾಡಿದ್ರು. ಆದ್ರೆ ಕೊನೆಯ ಬಾರಿಗೆ 2022 ರಲ್ಲಿ ಕಣಕ್ಕಿಳಿದಿದ್ರು. ಒಟ್ಟಾರೆಯಾಗಿ 28 ಇನ್ನಿಂಗ್ಸ್‌ಗಳಲ್ಲಿ 839 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೀರ್ಘ ಅಂತರದೊಂದಿಗೆ ನಿವೃತ್ತಿಯ ಹತ್ತಿರದಲ್ಲಿದ್ದಾರೆ.

Shantha Kumari