HITಮ್ಯಾನ್ ಸ್ಥಾನಕ್ಕೆ ಐವರ ರೇಸ್ – ಅಭಿ, ಕಿಶನ್, ವೈಭವ್.. ಯಾರು ಬೆಸ್ಟ್?
ODI ವಿಶ್ವಕಪ್ ಲೆಕ್ಕಾಚಾರ ಹೇಗಿದೆ?

2024ರ ಟಿ-20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಬಳಿಕ ಸೂರ್ಯಕುಮಾರ್ ಯಾದವ್ ಚುಟುಕು ಸಮರದ ಸಾರಥಿಯಾಗಿದ್ರು. ಇನ್ನು ಮೇ ತಿಂಗಳಲ್ಲಿ ಹಿಟ್ಮ್ಯಾನ್ ಟೆಸ್ಟ್ ಕ್ರಿಕೆಟ್ಗೂ ನಿವೃತ್ತಿ ಘೋಷಣೆ ಮಾಡಿದ್ರು. ಹೀಗಾಗಿ ಶುಭ್ಮನ್ ಗಿಲ್ ಸದ್ಯ ರೆಡ್ ಬಾಲ್ ಫಾರ್ಮೆಟ್ನ ಮುನ್ನಡೆಸ್ತಾ ಇದ್ದಾರೆ. ಏಕದಿನ ಮಾದರಿಯಲ್ಲಿ ಮಾತ್ರ ರೋಹಿತ್ ಕಂಟಿನ್ಯೂ ಆಗ್ತಾರೆ ಅಂದ್ರೂ ಕೂಡ ಅದು ಇನ್ನೆಷ್ಟು ದಿನ ಹೇಳೋಕಾಗಲ್ಲ. ಬಹುಶಃ ಆಸ್ಟ್ರೇಲಿಯಾ ಸರಣಿಯೇ ರೋಹಿತ್ ಪಾಲಿಗೆ ಕೊನೇ ಏಕದಿನ ಸರಣಿ ಆಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಭಾರತ ಕಂಡ ಪವರ್ ಫುಲ್ ಬ್ಯಾಟರ್ ಮತ್ತು ಕ್ಯಾಪ್ಟನ್ ಆಗಿರೋ ರೋಹಿತ್ ಶರ್ಮಾ ತಮ್ಮ ಜರ್ನಿಯಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ. ತಂಡದ ಪರ ಓಪನಿಂಗ್ ಬ್ಯಾಟ್ಸ್‌ಮನ್ ಆಗಿ ಚರಿತ್ರೆ ಸೃಷ್ಟಿಸಿದ್ದಾರೆ. ಇದೀಗ ರೋಹಿತ್ ಕ್ರಿಕೆಟ್ ಯುಗಾಂತ್ಯ ಆದ್ರೆ ಅವ್ರ ಸ್ಥಾನವನ್ನ ತುಂಬಬಲ್ಲ ಐವರು ಆಟಗಾರರಿದ್ದಾರೆ.
ಇದನ್ನೂ ಓದಿ : ಕ್ರಿಕೆಟ್ ಮರೆತ PAK ಪ್ಲೇಯರ್ಸ್ – 295 ಟಾರ್ಗೆಟ್.. 92 ರನ್ ಗೆ ಆಲೌಟ್!
ರೋಹಿತ್ ಸ್ಥಾನ ತುಂಬುತ್ತಾರಾ ಅಭಿಷೇಕ್ ಶರ್ಮಾ?
ವೈಟ್ ಬಾಲ್ ಫಾರ್ಮೆಟ್ನಲ್ಲಿ ಸೂಪರ್ ಸ್ಟ್ರೋಕ್ ಪ್ಲೇ ಮತ್ತು ಕನ್ಸಿಸ್ಟೆನ್ಸಿಗೆ ಹೆಸರಾಗಿರೋ ಅಭಿಷೇಕ್ ಶರ್ಮಾ ಈ ಲಿಸ್ಟ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಎಂಥದ್ದೇ ಪ್ರೆಶರ್ನಲ್ಲೂ ಆಡಬಲ್ಲ ಹಾಗೇ ತಮ್ಮ ಸ್ಟೈಕ್ನ ಪರಿಣಾಮಕಾರಿಯಾಗಿ ಕನ್ವರ್ಟ್ ಮಾಡುವ ಸಾಮರ್ಥ್ಯ ಇದೆ. ಈಗಾಗ್ಲೇ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಪ್ರಭಾವ ಬೀರಿದ್ದಾರೆ. ಅವರ ಇತ್ತೀಚಿನ ಟಿ20ಐ ಪ್ರದರ್ಶನಗಳು ಅವರನ್ನು ಭವಿಷ್ಯದ ಸೂಪರ್ ಸ್ಟಾರ್ ಎನ್ನುವಂತೆಯೇ ಬಿಂಬಿಸುತ್ತಿವೆ. ಭಾರತದ ಪರ ಈವರೆಗೂ ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನ ಆಡಲು ಅವಕಾಶ ಸಿಕ್ಕಿಲ್ಲ. ಆದ್ರೆ ಈಗಾಗ್ಲೇ 17 ಟಿ-20ಐ ಪಂದ್ಯಗಳನ್ನ ಆಡಿದ್ದು 535 ರನ್ ಕಲೆ ಹಾಕಿದ್ದಾರೆ. ಅದೂ ಕೂಡ 193.85 ಸ್ಟ್ರೈಕ್ ರೇಟ್ ಅನ್ನೋದೇ ಮೋಸ್ಟ್ ಇಂಪಾರ್ಟೆಂಟ್.
ಮೂರೂ ಮಾದರಿ ಭರವಸೆ ಆಟಗಾರ ಯಶಸ್ವಿ ಜೈಸ್ವಾಲ್
ಇನ್ನು ಭಾರತದ ಓಪನರ್ ಆಗಿ ಇತ್ತಿಚಿನ ದಿನಗಳಲ್ಲಿ ಶೈನ್ ಆಗ್ತಿರೋ ಮತ್ತೊಬ್ಬ ಆಟಗಾರ ಯಶಸ್ವಿ ಜೈಸ್ವಾಲ್. ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಗ್ತಿದ್ದಾರೆ. ಬಹುಶಃ ರೋಹಿತ್ ಏಕದಿನ ಮಾದರಿಯಿಂದ ನಿವೃತ್ತರಾದರೆ ಜೈಸ್ವಾಲ್ ಅವ್ರನ್ನ ಏಕದಿನ ತಂಡಕ್ಕೆ ಸೇರಿಸಿಕೊಳ್ಳಬಹುದು. ಭಾರತದ ಎಲ್ಲಾ ಮಾದರಿಗಳ ಟಾಪ್ ಆರ್ಡರ್‌ನಲ್ಲಿ ಭವಿಷ್ಯದ ಪ್ರಮುಖ ಆಟಗಾರನಾಗಿಯೇ ಜೈಸ್ವಾಲ್ ಬೆಳೀತಿದ್ದಾರೆ. ಇನ್ನು ಭಾರತದ ಪರ ಜೈಸ್ವಾಲ್ ಮೂರೂ ಮಾದರಿಯಲ್ಲೂ ಕಣಕ್ಕಿಳಿದಿದ್ದಾರೆ. ಆದ್ರೆ ಏಕದಿನ ಮಾದರಿಯಲ್ಲಿ ಒಂದೇ ಪಂದ್ಯ ಆಡಿದ್ದು 15 ರನ್ ಅಷ್ಟೇ ಗಳಿಸಿದ್ದಾರೆ. ಇನ್ನು ಟಿ-20ಐನಲ್ಲಿ 23 ಪಂದ್ಯಗಳನ್ನ ಆಡಿದ್ದು 723 ರನ್ ಕಲೆ ಹಾಕಿದ್ದಾರೆ. ಟೆಸ್ಟ್ ನಲ್ಲಿ 46 ಇನ್ನಿಂಗ್ಸ್ ಗಳಿಂದ 2209 ರನ್ ಸ್ಕೋರ್ ಮಾಡಿದ್ದಾರೆ.
ಸಾಯಿ ಸುದರ್ಶನ್ ಗೆ ಸಿಗುತ್ತಾ ಬಿಗ್ ಚಾನ್ಸ್?
2025ರ ಐಪಿಎಲ್ ನಲ್ಲಿ ಸಿಕ್ಕಾಪಟ್ಟೆ ಶೈನ್ ಆಗಿರೋ ಸಾಯಿ ಸುದರ್ಶನ್ ಕೂಡ ಲಿಸ್ಟ್ ನಲ್ಲಿದ್ದಾರೆ. ಲೆಫ್ಟ್ ಹ್ಯಾಂಡೆಡ್ ಬ್ಯಾಟರ್ ಆಗಿರೋ ಸುದರ್ಶನ್ ಭಾರತರ ಪರ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರೋಹಿತ್ ತಂಡದಿಂದ ದೂರವಾದ್ರೆ ಸುದರ್ಶನ್ ಕೂಡ ಸ್ಥಾನ ಪಡೆಯೋ ಭರವಸೆಯಲ್ಲಿದ್ದಾರೆ. ಸಾಯಿ ಸುದರ್ಶನ್ ಈಗಾಗ್ಳೇ ಭಾರತದ ಪರ 3 ಏಕದಿನ ಹಾಗೇ 3 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ಇಶಾನ್ ಕಿಶನ್ ಗೆ ಸಿಗುತ್ತಾ ಬಿಗ್ ಆಪರ್ಚುನಿಟಿ?
ಇನ್ನು ಸ್ಫೋಟಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರೋ ಇಶಾನ್ ಕಿಶನ್ ಹೆಸರೂ ಕೂಡ ಕೇಳಿ ಬರ್ತಿದೆ. ಅಗ್ರೆಸ್ಸಿವ್ ಌಂಡ್ ಪವರ್-ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅಂತರರಾಷ್ಟ್ರೀಯ ಟಿ20 ಅನುಭವ ಮತ್ತು ಸ್ಟಾರ್ ಬ್ಯಾಟ್ಸ್ ಮನ್ ಆಗಿದ್ದು ಐಪಿಎಲ್ ನಲ್ಲಿ ಯಶಸ್ಸು ಕಂಡಿದ್ದಾರೆ. ಸ್ಟ್ರೈಕ್ ರೇಟ್ ಸಾಮರ್ಥ್ಯ ಮತ್ತು ಅತ್ಯುತ್ತಮ ಗ್ಲೋವ್‌ವರ್ಕ್ ನಿಂದ ಬ್ಯಾಟ್ ಬೀಸ್ತಾರೆ. ಹೀಗಾಗಿ ರೋಹಿತ್ ದೂರ ಸರಿದ್ರೆ ಇಶಾನ್ ಕಿಶನ್ ಗೆ ಆಪರ್ಚುನಿಟಿ ಸಿಗಬಹುದು. ಕಿಶನ್ ಕೂಡ ಮೂರೂ ಮಾದರಿಯಲ್ಲೂ ಭಾರತದ ಜೆರ್ಸಿ ತೊಟ್ಟಿದ್ದಾರೆ.
ಹಿರಿಯರ ಜೊತೆ ರೇಸ್ ಗೆ ಬಂದ ಸೂರ್ಯವಂಶಿ
ಸದ್ಯ ರೋಹಿತ್ ಸ್ಥಾನಕ್ಕೆ ಕೇಳಿ ಬರ್ತಿರೋ ಹೆಸರುಗಳಲ್ಲಿ ಅಚ್ಚರಿ ಎನ್ನುವಂತೆ ವೈಭವ್ ಸೂರ್ಯವಂಶಿ ಹೆಸರೂ ಸೇರ್ಪಡೆಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸದ್ದು ಮಾಡಿದ್ದ ವೈಭವ್ 2025ರ ಐಪಿಎಲ್ ನಲ್ಲೂ ರಾಜಸ್ಥಾನ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇನ್ನು ಅಂಡರ್ 19 ತಂಡದಲ್ಲೂ ಭಾರತದ ಪರ ಈಗಾಗ್ಲೇ ಸದ್ದು ಮಾಡ್ತಿದ್ದಾರೆ. ಸೋ ಮುಂದಿನ ದಿನಗಳಲ್ಲಿ ವೈಭವ್ ಕೂಡ ಸ್ಫೋಟಕ ಬ್ಯಾಟರ್ ಆಗೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ರೋಹಿತ್ ಲೆಗೆಸಿಯನ್ನ ಮುನ್ನಡೆಸೋಕೆ ವೈಭಸ್ ಹೆಸರೂ ಕಾಣಿಸಿಕೊಳ್ತಿದೆ.

ನೋಡಿರಿ

