ರಜನಿಕಾಂತ್ ಕೂಲಿ ಸಿನಿಮಾ ಟಿಕೆಟ್ ದರ 2,000 ರೂ! – ಚಿತ್ರ ತಂಡಕ್ಕೆ ಶಾಕ್ ಕೊಡುತ್ತಾ ಸರ್ಕಾರ?

ನಟ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಕೂಲಿ ಸಿನಿಮಾ ಆಗಸ್ಟ್ 14ರ ಗುರುವಾರ ರಿಲೀಸ್ ಆಗುತ್ತಿದೆ. ನಟ ಉಪೇಂದ್ರ, ಪೂಜಾ ಹೆಗ್ಡೆ, ರಚಿತಾ ರಾಮ್ ಸೇರಿ ಕನ್ನಡ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಬಹುತಾರಾಗಣದ ಈ ಸಿನಿಮಾ ರಿಲೀಸ್ಗೂ ಮುನ್ನವೇ ಪ್ರೀಬುಕ್ಕಿಂಗ್ನಲ್ಲಿ ದಾಖಲೆ ಬರೆದಿದೆ. ಇದೀಗ ಕೂಲಿ ಸಿನಿಮಾ ಟಿಕೆಟ್ ದರ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಇದನ್ನೂ ಓದಿ: 3 ದಶಕಗಳ ಬಳಿಕ ಸಹಪಾಠಿಗಳ ಪುನರ್ ಮಿಲನ! – ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಸಂತ ಫಿಲೋಮಿನಾ ಕಾಲೇಜು!
ಬಹುನಿರೀಕ್ಷಿತ ಕೂಲಿ ಚಿತ್ರದ ಟಿಕೆಟ್ ಬೆಲೆ ಕೇಳಿ ಸಿನಿ ಪ್ರೇಮಿಗಳು ಶಾಕ್ ಆಗಿದ್ದಾರೆ. ಕೇರಳ ಮತ್ತು ಕರ್ನಾಟಕದಲ್ಲಿ ಕೂಲಿ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ದರ ಮಿತಿಮೀರಿ ಏರಿಕೆ ಮಾಡಲಾಗಿದೆ. ಬೆಂಗಳೂರುದಲ್ಲಿ ಏಕಕಾಲದಲ್ಲಿ ಪ್ರದರ್ಶನ ಮಾಡುವ ಚಲನಚಿತ್ರ ಮಂದಿರಗಳಲ್ಲಿ, ಟಿಕೆಟ್ಗಳನ್ನು 2,000 ರೂ.ಗೆ ಮಾರಲಾಗುತ್ತಿದೆ. ಸದ್ಯ ವೀಕೆಂಡ್ನಲ್ಲಿ ಮಲ್ಟಿಪ್ಲೆಕ್ಸ್ನಲ್ಲಿ ಕೂಲಿ ಸಿನಿಮಾದ ಟಿಕೆಟ್ ದರ 400 ರೂಪಾಯಿಯಿಂದ ಸಾವಿರ ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಬುಕ್ ಮೈ ಶೋ ತೆರಿಗೆ ಸೇರಿದರೆ ಈ ದರ ಮತ್ತಷ್ಟು ಹೆಚ್ಚಲಿದೆ. ಇದು ಸಿನಿಮಾ ಪ್ರೇಕ್ಷಕರ ಅಸಮಧಾನಕ್ಕೆ ಕಾರಣವಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಸಿನಿಮಾದ ಟಿಕೆಟ್ ದರ 200 ರೂಪಾಯಿ ಮಿತಿ ದಾಟದಂತೆ ಸರ್ಕಾರ ಆದೇಶ ಹೊರಡಿಸುವಂತೆ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಒಂದು ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ. ಸಿನಿಮಾದ ಟಿಕೆಟ್ ದರ 200 ರೂಪಾಯಿ ಮಿತಿ ದಾಟದಂತೆ ಆದೇಶ ಇದೆ. ಈ ಆದೇಶಕ್ಕೆ ವಿರೋಧವಿದ್ದರೆ ತಿಳಿಸುವಂತೆ ಸರ್ಕಾರ ಸೂಚಿಸಿದೆ. ಈ ಆದೇಶ ಇನ್ನು ಎರಡರಿಂದ ಮೂರು ದಿನಗಳಲ್ಲಿ ಜಾರಿಗೆ ಬರುವ ನಿರೀಕ್ಷೆ ಇದೆ ಎಂಬುದು ನರಸಿಂಹಲು ಅವರ ಮಾತು. ಈ ರೀತಿಯ ಬೆಲೆ ಏರಿಕೆಯನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಈ ಆದೇಶ ಜಾರಿಗೆ ಬಂದರೆ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ.

ನೋಡಿರಿ

