ಮಜಾಭಾರತ ರಾಘು – ಮಾನಸ ಲವ್?  -‌ ಕಡೆಗೂ ಮದುವೆ ಗುಟ್ಟು ರಿವೀಲ್‌ ಮಾಡಿದ ಮಾನಸ!

ಮಜಾಭಾರತ ರಾಘು – ಮಾನಸ ಲವ್?  -‌ ಕಡೆಗೂ ಮದುವೆ ಗುಟ್ಟು ರಿವೀಲ್‌ ಮಾಡಿದ ಮಾನಸ!

ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತ ನಟನೆ ಮೂಲಕ ಫೇಮಸ್‌ ಆಗಿರೋ ಯುವನಟ ಎಂದರೆ ಅದು ರಾಘವೇಂದ್ರ. ಮಿಡಲ್‌ ಕ್ಲಾಸ್‌ ಕುಟುಂಬದ ಈ ಕಲಾವಿದ ಅವಕಾಶಕ್ಕಾಗಿ ದೂರದ ಬೆಂಗಳೂರಿಗೆ ಬಂದು ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮಿಂಚಿದ್ರು.. ಇದೀಗ ಕರುನಾಡಿನಾದ್ಯಂತ ರಾಘವೇಂದ್ರ ಅನ್ನೋದಿಕ್ಕಿಂತ ರಾಗಿಣಿ ಅಂತಾನೇ ಫೇಮಸ್‌ ಆಗಿದ್ದಾರೆ. ಹೆಣ್ಣಿನ ಪಾತ್ರದ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೀಗ ರಾಘವೇಂದ್ರ ಅಲಿಯಾಸ್‌ ರಾಗಿಣಿ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ರಾಘವೇಂದ್ರ ಮದುವೆ ಬಗ್ಗೆ ಜೋರಾಗಿ ಚರ್ಚೆ ನಡಿತಾ ಇದೆ. ರಾಘವೇಂದ್ರ ಮಾನಸಾ ಜೊತೆ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ.. ಇದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಅನ್ನೋ ಸುದ್ದಿ ಸದ್ದು ಮಾಡ್ತಿದೆ.

ಇದನ್ನೂ ಓದಿ: ಟಿ-20 ಪಂದ್ಯಗಳನ್ನಷ್ಟೇ ಆಡ್ತಾರಂತೆ ಟಿಮ್ ಡೇವಿಡ್ – ಆಫರ್ ಕೊಟ್ರೂ ನಿರಾಕರಿಸಿದ್ದೇಕೆ RCB ಸ್ಟಾರ್?

ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ರಾಘವೇಂದ್ರ ಈಗ ಮನೆಮಾತಾಗಿದ್ದಾರೆ. ರಿಯಾಲಿಟಿ ಶೋ ಗಳಲ್ಲಿ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರೋ ರಾಘವೇಂದ್ರ, ಹೆಣ್ಣಿನ ಪಾತ್ರಗಳ ಮೂಲಕವೇ ಮೋಡಿ ಮಾಡಿದ್ದಾರೆ. ಹೆಣ್ಣು ಮಗಳ ಪಾತ್ರಗಳೇ ರಾಘವೇಂದ್ರ ಅವರಿಗೆ ಹೊಸ ಇಮೇಜ್‌ ತಂದುಕೊಟ್ಟಿವೆ. ನಟನೆಯಲ್ಲಿ ರಾಘವೇಂದ್ರ ಕ್ಲಿಕ್‌ ಆಗ್ತಿದ್ದಂತೆ ತನ್ನ ಕನಸಿನ ಮನೆ ಕೂಡ ಕಟ್ಟಿದ್ರು. ಇದೀಗ ರಾಘವೇಂದ್ರ ಅವರ ಮದುವೆ ಬಗ್ಗೆ ಜೋರಾಗಿ ಚರ್ಚೆ ನಡಿತಾ ಇದೆ. ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ಖ್ಯಾತಿಯ ಮಾನಸ ಜೊತೆ ಮದುವೆ ಆಗಲಿದ್ದಾರೆ ಎಂಬ ಅಂತೆ ಕಂತೆಗಳು ಸುಂಟರಗಾಳಿಯಂತೆ ಹಬ್ತಾ ಇದೆ.

ಹೌದು, ಮಾನಸಾ ಹಾಗೂ ರಾಘವೇಂದ್ರ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇಬ್ಬರೂ ಒಟ್ಟಿಗೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಕೆಲ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ತಾರೆ.. ಇತ್ತೀಚೆಗೆ ಮಾನಸ ಹುಟ್ಟು ಹಬ್ಬಕ್ಕೂ ಕೂಡ ರಾಘವೇಂದ್ರ ಸ್ಪೆಷಲ್‌ ಗಿಫ್ಟ್‌ ಕೊಟ್ಟು ವಿಶ್‌ ಮಾಡಿದ್ರು.. ಇದ್ರ ಫೋಟೋ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ಇವರಿಬ್ಬರ ಮಧ್ಯೆ ಪ್ರೀತಿ ಇದೆ.. ಸದ್ಯದಲ್ಲೇ ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಲಿದ್ದಾರೆ. ಎಂಬ ಗಾಸಿಪ್‌ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಇದೀಗ ಈ ಬಗ್ಗೆ ಮಾನಸ ಪ್ರತಿಕ್ರಿಯಿಸಿದ್ದಾರೆ. ನಮ್ಮ ನಡುವೆ ಅಕ್ಕ ತಮ್ಮನ ಬಾಂಧವ್ಯ ಇದೆ.. ಅಂತಾ ಹೇಳಿದ್ದಾರೆ.

ಹೌದು.. ಮಾನಸಾ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್‌ ಹಾಕಿದ್ದಾರೆ.  ನನ್ನ ಹಾಗೂ ರಾಘು ಸಾಕಷ್ಟು ಗಾಳಿ ಸುದ್ದಿ ಹಬ್ತಿದೆ. ನಾವಿಬ್ಬರು ಮದುವೆ ಆಗ್ತಾ ಇದ್ದೀವಿ.. ಇಡೀ ಕರ್ನಾಟಕಕ್ಕೆ ಬಾಡೂಟ ಹಾಕಿಸುತ್ತೇವೆ ಅಂತ ಹೇಳಿದವರೇ ಬಾಡೂಟ ಹಾಕಿಸಬೇಕು. ಇದು ಸತ್ಯವಲ್ಲ. ನಾನು ಅವನು ಅಕ್ಕ ತಮ್ಮ. ಹಲವು ವರ್ಷಗಳಿಂದ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ  ಎಂದು ಹೇಳಿ ಮಾನಸಾ ಕ್ಲಾರಿಟಿ ಕೊಟ್ಟಿದ್ದಾರೆ. ಆ ಮೂಲಕ ಎಲ್ಲಾ ಅಂತೆ-ಕಂತೆಗಳಿಗೆ ಮಾನಸಾ ಫುಲ್ ಸ್ಟಾಪ್ ಇಟ್ಟಿದ್ದಾರೆ.

Shwetha M