ಬೆಂಗಳೂರಲ್ಲಿ ತಲೆ ಎತ್ತಲಿದೆ ಬಹುದೊಡ್ಡ ಸ್ಟೇಡಿಯಂ – 75 ಎಕರೆ.. ₹1,650 ಕೋಟಿ.. ಜಾಗ ಎಲ್ಲಿ?
ನೆನಪಿನಂಗಳಕ್ಕೆ ಕ್ರಿಕೆಟ್ ಕಾಶಿ ಚಿನ್ನಸ್ವಾಮಿ!

ಬೆಂಗಳೂರಲ್ಲಿ ತಲೆ ಎತ್ತಲಿದೆ ಬಹುದೊಡ್ಡ ಸ್ಟೇಡಿಯಂ – 75 ಎಕರೆ.. ₹1,650 ಕೋಟಿ.. ಜಾಗ ಎಲ್ಲಿ?ನೆನಪಿನಂಗಳಕ್ಕೆ ಕ್ರಿಕೆಟ್ ಕಾಶಿ ಚಿನ್ನಸ್ವಾಮಿ!

18ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಜೂನ್ 3ರಂದು ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಆದ್ರೆ ಜೂನ್ ನಾಲ್ಕರಂದು ಬೆಂಗಳೂರಿನಲ್ಲಿ ವಿಜಯೋತ್ಸವ ನಡೆಯೋ ಮುನ್ನವೇ ಕಾಲ್ತುಳಿತ ಸಂಭವಿಸಿ 11 ಮಂದಿ ಪ್ರಾಣ ಬಿಟ್ಟಿದ್ರು. ಈ ದುರಂತದ ಬಳಿಕ ಹೊಸ ಮೈದಾನದ ಕೂಗು ಎದ್ದಿತ್ತು. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಬಿಗ್ ಅಪ್ ಡೇಟ್ ನೀಡಿದ್ದಾರೆ.

ಇದನ್ನೂ ಓದಿ : ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ಫೈನಲ್ ಆಡೇ ಇಲ್ಲ – ಟೂರ್ನಿಯಲ್ಲಿ ಯಶಸ್ವೀ ತಂಡ ಇಂಡಿಯಾ!

ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ನಡೆದ ಕಾಲ್ತುಳಿತದ ಕರಾಳ ನೆನಪು ಇನ್ನೂ ಹಸಿ ಹಸಿಯಾಗಿಯೇ ಇದೆ. 11 ಜನ ಪ್ರಾಣ ಕಳ್ಕೊಂಡು ಎರಡು ತಿಂಗಳು ಕಳೆದಿದೆ. ಇದೀಗ ಇನ್ಮುಂದಿನ ದಿನಗಳಲ್ಲಾದ್ರೂ ಈ ಥರದ ದುರಂತಗಳು ನಡೆಯದಂತೆ ಕರ್ನಾಟಕ ಸರ್ಕಾರ ಹೊಸ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದೆ. ದೇಶದಲ್ಲಿಯೇ ಎರಡನೇ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸುವ ಪ್ಲಾನ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ. ಬರೋಬ್ಬರಿ 1650 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್‌ ಕ್ರೀಡಾ ಸಂಕೀರ್ಣ ನಿರ್ಮಿಸಲು ಸರ್ಕಾರ ಮುಂದಾಗಿದೆ. ಅಂದ್ರೆ ಈಗಿನ ಚಿನ್ನಸ್ವಾಮಿ ಸ್ಟೇಡಿಯಂಗಿಂತ ಎರಡು ಪಟ್ಟು ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸೋ ಪ್ಲ್ಯಾನ್ ರೂಪಿಸಿದೆ.

ಹೈಟೆಕ್ ಸ್ಟೇಡಿಯಂ!

ಕಾಲ್ತುಳಿತ ದುರಂತ ರಾಜ್ಯ ಸರ್ಕಾರಕ್ಕೂ ತೀವ್ರ ಮುಜುಗರ

ಉದ್ಯಾನ ನಗರಿಯಲ್ಲಿ ಮತ್ತೊಂದು ಕ್ರಿಕೆಟ್​​ ಸ್ಟೇಡಿಯಂ ನಿರ್ಮಾಣ

ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಅಧಿಕೃತವಾಗಿ ಮಾಹಿತಿ

ಶಿವಕುಮಾರ್ ಅವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್​ ಶೇರ್

ಬೊಮ್ಮಸಂದ್ರದ ಸೂರ್ಯಸಿಟಿಯಲ್ಲಿ ಮೆಗಾ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​

75 ಎಕರೆಯಲ್ಲಿ 1,650 ಕೋಟಿ ರೂಪಾಯಿ ವೆಚ್ಚದಲ್ಲಿ 60,000 ಆಸನ

ರಾಜ್ಯದ ಅತಿ ದೊಡ್ಡ ಸ್ಟೇಡಿಯಂ ಇದಾಗಲಿದ್ದು ಇದರಲ್ಲಿ ಒಳಾಂಗಣ

ಹೊರಂಗಾಣ ಕ್ರೀಡಾಂಗಣಗಳು, ಅತ್ಯಾಧುನಿಕ ಜಿಮ್, ತರಬೇತಿ ಕೌಶಲ್ಯಗಳು

ಒಲಿಂಪಿಕ್​ ಗಾತ್ರದ ಈಜು ಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್​ಗಳು

ಹೋಟೆಲ್​ಗಳು ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳಿಗಾಗಿ ಕನ್ವೆನ್ಷನ್ ಹಾಲ್

ಚಿನ್ನಸ್ವಾಮಿ ಸ್ಟೇಡಿಯಂ ಚಿಕ್ಕದಾಗಿದ್ದು ಅಷ್ಟೊಂದು ಸ್ಥಳ ಇಲ್ಲದ ಕಾರಣದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಯಾವುದೇ ಪಂದ್ಯಗಳಿಗೆ ಅವಕಾಶ ನೀಡಿಲ್ಲ. ಅಲ್ದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗ, ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂದು ಹೇಳಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ ಯಾವುದೇ ದುರ್ಘಟನೆ ನಡೆಯಬಾರದು ಎನ್ನುವ ನಿಟ್ಟಿನಲ್ಲಿ ಯಾವುದೇ ಲೀಗ್​ಗಳಿಗೂ ಅನುಮತಿ ನೀಡುತ್ತಿಲ್ಲ. ಪರಿಣಾಮ ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದೆ. ಟೂರ್ನಿಯ ಪಂದ್ಯಗಳು ಆ.11ರಿಂದ 27ರ ವರೆಗೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನೂರಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಬೆಂಗಳೂರಿನ ಹೃದಯಭಾಗದಲ್ಲೇ ಇದ್ದ ಸ್ಟೇಡಿಯಂ ಇತಿಹಾಸದ ಪುಟ ಸೇರುವ ಗಳಿಗೆ ಹತ್ತಿರವಾದಂತಿದೆ.

Shantha Kumari