ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ಫೈನಲ್ ಆಡೇ ಇಲ್ಲ – ಟೂರ್ನಿಯಲ್ಲಿ ಯಶಸ್ವೀ ತಂಡ ಇಂಡಿಯಾ!

ಏಷ್ಯಾಕಪ್ ನಲ್ಲಿ ಭಾರತ-ಪಾಕಿಸ್ತಾನ ಫೈನಲ್ ಆಡೇ ಇಲ್ಲ – ಟೂರ್ನಿಯಲ್ಲಿ ಯಶಸ್ವೀ ತಂಡ ಇಂಡಿಯಾ!

ಏಷ್ಯಾಕಪ್ ಕ್ರಿಕೆಟ್ ಟೂರ್ನಿ. ಏಷ್ಯಾದ ರಾಷ್ಟ್ರೀಯ ತಂಡಗಳು ಭಾಗವಹಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ. ಎರಡು ವರ್ಷಗಳಿಗೊಮ್ಮೆ ಆಯೋಜನೆಯಾಗುವ ಈ ಟೂರ್ನಿಗಾಗಿ 1983ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆರಂಭವಾಗಿದೆ. 1984ರಲ್ಲಿ ಏಷ್ಯಾಕಪ್ ಮೊದಲ ಆವೃತ್ತಿಯನ್ನ ಆಯೋಜನೆ ಮಾಡಲಾಗಿತ್ತು. ಈ ಪಂದ್ಯಾವಳಿಯನ್ನು ಏಕದಿನ ಅಂತರರಾಷ್ಟ್ರೀಯ ಮತ್ತು ಟ್ವೆಂಟಿ-20 ಅಂತರರಾಷ್ಟ್ರೀಯ ಫಾರ್ಮೆಟ್​ಗಳಲ್ಲಿ ಆಡಿಸಲಾಗ್ತಿದೆ. 2026ರ ಐಸಿಸಿ ಟಿ-20 ವಿಶ್ವಕಪ್​ ಅನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ಏಷ್ಯಾಕಪ್ ಟೂರ್ನಿಯನ್ನ ಟಿ20ಐ ಮಾದರಿಯಲ್ಲಿ ನಡೆಸಲಾಗ್ತಿದೆ.

ಇದನ್ನೂ ಓದಿ : IPLನಲ್ಲಿ ಕ್ಯಾಪ್ಟನ್ಸ್ ಸಿಕ್ಕಾಪಟ್ಟೆ ಕಾಸ್ಟ್ಲಿ – ಟ್ರೇಡ್ ವಿಂಡೋನಲ್ಲಿ ಎಷ್ಟು ರೇಟ್?

ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಭಾರತ!

ಏಷ್ಯಾಕಪ್ ಟೂರ್ನಿಯು ಇದುವರೆಗೆ 16 ಆವೃತ್ತಿಗಳನ್ನ ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದು ಈ ಬಾರಿ 17ನೇ ಆವೃತ್ತಿ ನಡೆಯಲಿದೆ. ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವೀ ತಂಡವಾಗಿದೆ. ಭಾರತ ಎಂಟು ಪ್ರಶಸ್ತಿಗಳೊಂದಿಗೆ ನಂಬರ್ 1 ಪ್ಲೇಸ್​ನಲ್ಲಿದ್ರೆ  ಶ್ರೀಲಂಕಾ ಆರು ಪ್ರಶಸ್ತಿಗಳೊಂದಿಗೆ ಸೆಕೆಂಡ್ ಪ್ಲೇಸ್​ನಲ್ಲಿದೆ. ಇನ್ನು ಪಾಕಿಸ್ತಾನ ಮೊದಲ ಆವೃತ್ತಿಯಿಂದಲೂ ಪೈಪೋಟಿ ನಡೆಸುತ್ತಾ ಬಂದಿದೆಯಾದ್ರೂ ಎರಡು ಬಾರಿ ಮಾತ್ರವೇ ಕಪ್ ಗೆಲ್ಲೋಕೆ ಸಾಧ್ಯವಾಗಿದೆ. ಉಳಿದಂತೆ ಬೇರೆ ಯಾವುದೇ ತಂಡ ಚಾಂಪಿಯನ್ ಪಟ್ಟಕ್ಕೇರಿಲ್ಲ. ಇನ್ನು ಈ ಬಾರಿ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿವೆ: ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್ ಕಾಂಗ್ ಮತ್ತು ಓಮನ್ ರಾಷ್ಟ್ರಗಳ ನಡುವೆ ಫೈಟ್ ನಡೆಯಲಿದೆ. ಇನ್ನು ಏಷ್ಯಾಕಪ್ ಬಗೆಗಿನ ಒಂದಷ್ಟು ಕುತೂಹಲಕಾರಿ ಮಾಹಿತಿಗಳನ್ನ ನೋಡೋದಾದ್ರೆ..

ಏಷ್ಯಾಕಪ್ ನ ರೋಚಕ ಜರ್ನಿ!

1984ರಲ್ಲಿ ಏಷ್ಯಾಕಪ್ ಮೊದಲ ಆವೃತ್ತಿ, ಭಾರತಕ್ಕೆ ಚೊಚ್ಚಲ ಕಪ್

1986ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್

1988ರ ಏಷ್ಯಾಕಪ್ ಶ್ರೀಲಂಕಾ ತಂಡವನ್ನು ಮಣಿಸಿ ಭಾರತಕ್ಕೆ ಗೆಲುವು

1990ರ ಆವೃತ್ತಿಯ ಏಷ್ಯಾಕಪ್ ಇಂಡಿಯಾ ಮೂರನೇ ಬಾರಿಗೆ ಪ್ರಶಸ್ತಿ

1995ರಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆದ್ದು ಮತ್ತೊಮ್ಮೆ ಪ್ರಶಸ್ತಿಗೆ ಮುತ್ತು

1997ರ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನ ಮಣಿಸಿದ ಶ್ರೀಲಂಕಾ

2000ರ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು

2004ರಲ್ಲಿ ನಡೆದ 8ನೇ ಏಷ್ಯಾಕಪ್ ಸೀಸನ್​ ನಲ್ಲಿ ಶ್ರೀಲಂಕಾ ಮತ್ತೊಮ್ಮೆ ಜಯ

2008ನೇ ಆವೃತ್ತಿಯ ಏಷ್ಯಾಕಪ್ ​ನಲ್ಲಿ ಶ್ರೀಲಂಕಾ ತನ್ನ ಪ್ರಾಬಲ್ಯ ಗೆದ್ದು ಬೀಗಿತ್ತು

2010 ರಲ್ಲಿ ಧೋನಿ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿತು

ಪಾಕಿಸ್ತಾನವು 2012 ರಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದು

2014ರಲ್ಲಿ ನಡೆದ ಏಷ್ಯಾಕಪ್‌ನ 12ನೇ ಆವೃತ್ತಿಯಲ್ಲಿ ಶ್ರೀಲಂಕಾ ಐದನೇ ಬಾರಿಗೆ

2016ರಲ್ಲಿ ನಡೆದ 13ನೇ ಆವೃತ್ತಿಯ ಧೋನಿ ನಾಯಕತ್ವದಲ್ಲಿ ಭಾರತ ತಂಡ ಪ್ರಶಸ್ತಿ

2018 ರ 14 ನೇ ಆವೃತ್ತಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಗೆಲುವು

2022ರಲ್ಲಿ ನಡೆದ ಟೂರ್ನಿಯಲ್ಲಿ ಶ್ರೀಲಂಕಾ ಫೈನಲ್ ನಲ್ಲಿ ಗೆದ್ದು ಬೀಗಿತ್ತು

2023ರಲ್ಲಿ ನಡೆದ 16ನೇ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆಲುವು

ಇನ್ನು ಟೂರ್ನಿಯಲ್ಲಿ ಭಾರತ ಒಟ್ಟಾರೆಯಾಗಿ 8 ಬಾರಿ ಗೆದ್ದು 3 ಬಾರಿ ರನ್ನರ್ ಅಪ್ ಆಗಿದೆ. ಹಾಗೇ ಶ್ರೀಲಂಕಾ 6 ಬಾರಿ ಪ್ರಶಸ್ತಿ ಸುತ್ತಿನಲ್ಲಿ ಗೆದ್ದಿದ್ರೆ 7 ಬಾರಿ ರನ್ನರ್ ಅಪ್ ಆಗಿದೆ. ಅಂದ್ರೆ ಇಲ್ಲಿ ಭಾರತ ಹೆಚ್ಚು ಟ್ರೋಫಿ ಗೆದ್ದಿದ್ರೂ ಅತೀ ಹೆಚ್ಚು ಬಾರಿ ಫೈನಲ್ ಪ್ರವೇಶ ಪಡೆದಿರೋದು ಶ್ರೀಲಂಕಾ. 16 ಆವೃತ್ತಿಗಳ ಜರ್ನಿಯಲ್ಲಿ ಶ್ರೀಲಂಕಾ 13 ಬಾರಿ ಫೈನಲ್ ಪ್ರವೇಶ ಪಡೆದು ಯಶಸ್ವಿ ತಂಡ ಎನಿಸಿಕೊಂಡಿದೆ. ಇನ್ನು ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ವಿಚಾರವೂ ಇದೆ. ಏಷ್ಯಾಕಪ್ ಟೂರ್ನಿಯಲ್ಲಿ ಹೈವೋಲ್ಟೇಜ್ ಮ್ಯಾಚ್ ಅಂದ್ರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ. ಆದ್ರೆ ವಿಷ್ಯ ಅಂದ್ರೆ ಈ 16 ಸೀಸನ್​ಗಳ ಆವೃತ್ತಿಯಲ್ಲಿ ಒಮ್ಮೆಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ.

Shantha Kumari