ಐಶಾರಾಮಿ ಕಾರು ಖರೀದಿ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರನಿಗೆ ನೋಟಿಸ್! – ಆಕಾಶ್ ದೀಪ್ ಮಾಡಿದ ತಪ್ಪೇನು?

ಟೀಮ್ ಇಂಡಿಯಾದ ಯುವ ಆಟಗಾರ ಆಕಾಶ್ ದೀಪ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಸರಣಿ ಮುಗಿಯುತ್ತಿದ್ದಂತೆ ಆಕಾಶ್ ದೀಪ್ ಐಶಾರಾಮಿ ಕಾರನ್ನ ಖರೀದಿಸಿದ್ರು. ಈ ಖುಷಿಯ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸಿದ್ರು. ಆದ್ರೀಗ ಉತ್ತರ ಪ್ರದೇಶದ ಸಾರಿಗೆ ಸಂಸ್ಥೆ ಯುವ ಆಟಗಾರನಿಗೆ ಶಾಕ್ ನೀಡಿದೆ. ಕಾರು ರಸ್ತೆಯಲ್ಲಿ ಚಲಾಯಿಸುವುದು ಕಂಡುಬಂದರೆ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಹೊಸ ಐಶರಾಮಿ ಕಾರು ಖರೀದಿಸಿದ ಹಿಟ್‌ಮ್ಯಾನ್! – ರೋಹಿತ್ ಶರ್ಮಾ ಕಾರಿನ ನಂಬರ್ ಪ್ಲೇಟ್ ವಿಶೇಷತೆಯೇನು?
ಆಕಾಶ್ ದೀಪ್ ಆಗಸ್ಟ್ 7 ರಂದು ಕಪ್ಪು ಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು ಖರೀದಿಸಿದರು. ಆದ್ರೀಗ ಉತ್ತರಪ್ರದೇಶದ ಸಾರಿಗೆ ಸಂಸ್ಥೆ ಆಕಾಶ್ ದೀಪ್‌ಗೆ ನೋಟಿಸ್ ಜಾರಿ ಮಾಡಿದೆ. ಯಾಕಂದ್ರೆ ಆಕಾಶ್ ದೀಪ್ ಖರೀದಿಸಿದ ಕಾರಿನ ನೋಂದಣಿ ಪೂರ್ಣಗೊಳ್ಳುವ ಮುನ್ನವೇ ರಸ್ತೆಯಲ್ಲಿ ಕಾರು ಓಡಿಸಿದ್ದಾರೆ. ಇದೀಗ ನೋಂದಣಿ ಮತ್ತು HSRP ನಂಬರ್ ಪ್ಲೇಟ್ ಇಲ್ಲದೆ ಐಷಾರಾಮಿ ಕಾರನ್ನು ಖರೀದಿಸಿದ ಆರೋಪ ಆಕಾಶ್ ದೀಪ್ ಮೇಲಿದೆ. ನೋಂದಣಿಯಾಗುವವರೆಗೆ ಕಾರನ್ನು ರಸ್ತೆಯಲ್ಲಿ ಓಡಿಸದಂತೆ ಆಕಾಶ್ ದೀಪ್‌ಗೆ ಸೂಚನೆ ನೀಡಲಾಗಿದೆ. ಕಾರು ರಸ್ತೆಯಲ್ಲಿ ಚಲಾಯಿಸುತ್ತಿರುವುದು ಕಂಡುಬಂದರೆ ಅದನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ, ನೋಂದಣಿ ಮತ್ತು ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಇಲ್ಲದೆ ಯಾವುದೇ ವಾಹನವನ್ನು ಓಡಿಸುವಂತಿಲ್ಲ. ಕಾರನ್ನು ಮಾರಾಟ ಮಾಡಿದ ಶೋ ರೂಂಗೆ ಸಾರಿಗೆ ಇಲಾಖೆ ದಂಡ ವಿಧಿಸಿದೆ ಮತ್ತು ಕಾನೂನಿನ ಪ್ರಕಾರ, ಶೋ ರೂಂ ನೋಂದಣಿ ಮತ್ತು ಹೆಚ್ಚಿನ ಭದ್ರತಾ ನಂಬರ್ ಪ್ಲೇಟ್ ಇಲ್ಲದೆ ಗ್ರಾಹಕರಿಗೆ ಕಾರನ್ನು ನೀಡಲು ಸಾಧ್ಯವಿಲ್ಲದ ಕಾರಣ ಡೀಲರ್ಶಿಪ್ ಅನ್ನು ಒಂದು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.

ನೋಡಿರಿ

