ದಸರಾ ಆನೆಗಳಿಗೆ ತೂಕ ಪರೀಕ್ಷೆ – ಕ್ಯಾಪ್ಟನ್ ಅಭಿಮನ್ಯು ಮೀರಿಸಿದ ಭೀಮ

ದಸರಾ ಆನೆಗಳಿಗೆ ತೂಕ ಪರೀಕ್ಷೆ – ಕ್ಯಾಪ್ಟನ್ ಅಭಿಮನ್ಯು ಮೀರಿಸಿದ ಭೀಮ

ವಿಶ್ವ ವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಈಗಾಗಲೇ ಗಜಪಡೆಯ ಆಗಮನವಾಗಿದೆ. ಆನೆಗಳು ತಾಲೀಮಿನಲ್ಲಿ ನಿರತವಾಗಿವೆ. ಇದೀಗ ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ತೂಕದಲ್ಲಿ ಅಭಿಮನ್ಯು ಆನೆಯನ್ನು ಭೀಮ ಮೀರಿಸಿದ್ದಾನೆ.

ಇದನ್ನೂ ಓದಿ: ಏಷ್ಯಾಕಪ್ ಗೆ IPL ಮಾನದಂಡ – ಟಾಪ್ ಲಿಸ್ಟ್ ನಲ್ಲಿದ್ದವ್ರಿಗೆ ಜಾಕ್ ಪಾಟ್?

ಹೌದು, ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು ತಾಲೀಮಿನಲ್ಲಿ ನಿರತವಾಗಿವೆ. ಮೊದಲ ದಿನದ ತಾಲೀಮಿಗೂ ಮುನ್ನ ಮೊದಲ ತಂಡದ ಆನೆಗಳ ತೂಕ ಪರೀಕ್ಷಿಸಲಾಗಿದೆ. ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ಆನೆಗಿಂತಲೂ ಭೀಮನೇ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ. ಯಾವ ಆನೆಗಳು ಎಷ್ಟು ತೂಕ ಇದೆ ಅನೋ ಮಾಹಿತಿ ಇಲ್ಲಿದೆ.

ಯಾವ ಆನೆಯ ತೂಕ ಎಷ್ಟಿದೆ?

ಅಭಿಮನ್ಯು – 5,360 ಕೆಜಿ, ಭೀಮ – 5,465 ಕೆಜಿ, ಧನಂಜಯ – 5,310 ಕೆಜಿ, ಕಾವೇರಿ – 3,010 ಕೆಜಿ, ಲಕ್ಷ್ಮೀ – 3,730 ಕೆಜಿ, ಏಕಲವ್ಯ – 5,305 ಕೆಜಿ, ಮಹೇಂದ್ರ – 5,120 ಕೆಜಿ, ಕಂಜನ್ – 4,880 ಕೆಜಿ, ಪ್ರಶಾಂತ – 5,110 ಕೆಜಿ

ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಿ, ಬಳಿಕ ಮೆರವಣಿಗೆ ನಡೆಸಲಾಯಿತು. ಸತತ ಒಂದು ತಿಂಗಳ ಆನೆಗಳಿಗೆ ನಿತ್ಯ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತೆ. ಇದರೊಂದಿಗೆ ಪಟಾಕಿ, ಕುಶಾಲತೋಪು ಸಿಡಿಸುವ ತಾಲೀಮು, ಮರದ ಅಂಬಾರಿ ಮೆರವಣಿಗೆ ತಾಲೀಮು ಸಹ ನಡೆಯಲಿವೆ. ಸದ್ದುಗದ್ದಲದಿಂದ ವಿಚಲಿತವಾಗದಂತೆ ನೋಡಿಕೊಳ್ಳಲು ಆನೆಗಳಿಗೆ ರೀತಿಯ ತರಬೇತಿ ನೀಡಲಾಗುತ್ತೆ.

Shwetha M