ಸಚಿವ ಸ್ಥಾನಕ್ಕೆ ಕೆಎನ್ ರಾಜಣ್ಣ ರಾಜೀನಾಮೆ – ರಾಹುಲ್ ಗಾಂಧಿಯವರ ಹೋರಾಟ ವಿರೋಧಿಸಿದ್ದಕ್ಕೆ ತಲೆದಂಡ?

ಸಿಎಂ ಬದಲಾವಣೆ ಕುರಿತಂತೆ ಆಗಿದ್ದಾಂಗೆ ಸ್ಫೋಟಕ ಹೇಳಿಕೆಗಳನ್ನ ನೀಡುತ್ತಾ ಸುದ್ದಿಯಲ್ಲಿದ್ದ ಸಹಕಾರ ಸಚಿವ ಕೆಎಲ್ ರಾಜಣ್ಣ ದಿಢೀರ್ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿರೋ ಮಾಹಿತಿ ಇದೆ. ಅದೂ ಕೂಡ ರಾಹುಲ್ ಗಾಂಧಿಯವರ ಮತಗಳ್ಳತನ ಹೋರಾಟವನ್ನ ವಿರೋಧ ಮಾಡಿದ್ದಕ್ಕೆ ರಾಜೀನಾಮೆ ಶಿಕ್ಷೆ ನೀಡಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆರೋಪ – ರಾಹುಲ್ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್!
ಕಾಂಗ್ರೆಸ್ ನಾಯಕ ಹಾಗೇ ಲೋಕಸಭೆ ವಿಪಕ್ಷನಾಯಕರಾಗಿರುವ ರಾಹುಲ್ ಗಾಂಧಿ ಅವರು ವೋಟರ್ ಐಡಿ ಮತ್ತು ಮತದಾನ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಹೋರಾಟ ಮಾಡಿದ್ದರು. ಆದರೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದನ್ನು ವಿರೋಧಿಸಿ, ಆಗ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು. ನಮಗೇ ಅವಮಾನ ಆಗಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ವೋಟರ್ ಐಡಿ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ಹಿನ್ನೆಲೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಅಧಿವೇಶನದ ಮೊದಲ ದಿನವೇ ಕೆ.ಎನ್. ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿ ಸೆಪ್ಟಂಬರ್ ಕ್ರಾಂತಿ ಆಗಲಿದೆ ಎಂದು ಹೇಳಿ, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದ ಕೆ.ಎನ್. ರಾಜಣ್ಣ ಹಿರಿಯ ನಾಯಕರಿಂದ ಅಂತರ ಕಾಯ್ದುಕೊಂಡೇ ಬಂದಿದ್ದರು. ತುಮಕೂರು ಮೂಲದವರಾದರೂ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಅವರು ತಮ್ಮ ವಿರುದ್ಧ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ. ಈ ಬಗ್ಗೆ ಹನಿಟ್ರ್ಯಾಪ್ ಮಾಡಿದವರ ಕೆಲವು ಸಾಕ್ಷಿಗಳು ತಮ್ಮ ಬಳಿಯಿದ್ದು, ಗೃಹಮಂತ್ರಿಗೆ ತನಿಖೆಗಾಗಿ ಕೊಡುವುದಾಗಿ ಹೇಳಿದ್ದರು. ಕೊನೆಗೆ, ತನ್ನ ಮಗನ ಮೇಲೆ ಕೊಲೆ ಪ್ರಯತ್ನ ನಡೆದಿದೆ ಎಂದು ದೂರು ನೀಡಿ, ಹನಿಟ್ರ್ಯಾಪ್ ಬಗ್ಗೆ ಯಾವುದೆ ದೂರು ನೀಡಿದೇ ಸುಮ್ಮನಾಗಿದ್ದರು.
ಇನ್ನೂ, ತಂದೆಯ ರಾಜೀನಾಮೆ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ, ನಾನು ಈಗ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇನೆ. ಹಾಗೂ ನಮ್ಮ ತಂದೆಯನ್ನು ಭೇಟಿ ಮಾಡುತ್ತೇನೆ. ಈಗ ಅಸೆಂಬ್ಲಿ ನಡೆಯುತ್ತಿದೆ. ರಾಜೀನಾಮೆ ಪ್ರಸ್ತಾಪದ ವಿಚಾರ ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ. ಸರ್ಕಾರದಲ್ಲಿ ಸಚಿವರಿದ್ದಾರೆ. ಇಲ್ಲಿ ಗುಂಪು ಅನ್ನೋದು ಇಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಸರ್ಕಾರ ಇತ್ತು. ಲೋಪದೋಷಗಳು ಆದ್ರೆ ಸರಿಪಡಿಸಬೇಕು ಎಂದು ಹೇಳಿದ್ದರು. ಹೀಗೆ ಹೇಳೋದಕ್ಕೆ ಕೆಎನ್ ರಾಜಣ್ಣ ಸಣ್ಣ ವ್ಯಕ್ತಿ ಅಲ್ಲ. ಅವರು ಪ್ರಭಾವಿ ನಾಯಕರು. ಏನೇ ಆದರೂ ನಾನು ಸಿಎಂ ಅವರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.

ನೋಡಿರಿ

