ರೋಹಿತ್ & ವಿರಾಟ್ ಏಕದಿನ ಮಾದರಿಯೂ ಯುಗಾಂತ್ಯ – BCCI ಪ್ಲ್ಯಾನ್ ವರ್ಕೌಟ್ ಆಗುತ್ತಾ?

ರೋಹಿತ್ & ವಿರಾಟ್ ಏಕದಿನ ಮಾದರಿಯೂ ಯುಗಾಂತ್ಯ – BCCI ಪ್ಲ್ಯಾನ್ ವರ್ಕೌಟ್ ಆಗುತ್ತಾ?

2024ರ ಟಿ-20 ವಿಶ್ವಕಪ್ ಗೆದ್ದ ಖುಷಿಯಲ್ಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್​ಗೆ ವಿದಾಯ ಘೋಷಿಸಿಬಿಟ್ಟಿದ್ರು. ಹಾಗೇ ಕಳೆದ ಮೇ ತಿಂಗಳಲ್ಲಿ ವಾರದ ಅಂತರದಲ್ಲೇ ಟೆಸ್ಟ್ ಕ್ರಿಕೆಟ್​​ನಿಂದಲೂ ಒಟ್ಟೊಟ್ಟಿಗೆ ನಿವೃತ್ತಿಯ ನಿರ್ಧಾರ ಮಾಡಿದ್ರು. ಸದ್ಯ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಕಂಟಿನ್ಯೂ ಆಗ್ತಾರೆ. ಈಗಿರೋ ಬ್ರೇಕಿಂಗ್ ನ್ಯೂಸ್ ಅಂದ್ರೆ ಇನ್ನೇನು ಕೆಲ ದಿನಗಳಲ್ಲೇ ಒಡಿಐ ಫಾರ್ಮೆಟ್​ನಿಂದಲೂ ಇಬ್ಬರು ದಿಗ್ಗಜ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್ ಜರ್ನಿ ಮುಗಿಯುತ್ತೆ ಅನ್ನೋ ಸುದ್ದಿ ಇದೆ. ಯಾಕಂದ್ರೆ ಹೊಸ ನಾಯಕನ ಜೊತೆ ಹೊಸ ಟೀಂ ಕಟ್ಟೋಕೆ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಸರ್ವಸನ್ನದ್ಧವಾಗಿದೆ.

ಇದನ್ನೂ ಓದಿ : IPLನಲ್ಲಿ ಕ್ಯಾಪ್ಟನ್ಸ್ ಸಿಕ್ಕಾಪಟ್ಟೆ ಕಾಸ್ಟ್ಲಿ – ಟ್ರೇಡ್ ವಿಂಡೋನಲ್ಲಿ ಎಷ್ಟು ರೇಟ್?

2023ರ ಏಕದಿನ ವಿಶ್ವಕಪ್​ನಲ್ಲಿ ಫೈನಲ್​ವರೆಗೂ ಸೋಲೇ ಕಾಣದೆ ಅಜೇಯವಾಗಿ ಕಾಲಿಟ್ಟಿದ್ದ ಟೀಂ ಇಂಡಿಯಾ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು. ಅದೂ ಕೂಡ ಭಾರತದಲ್ಲೇ ನಡೆದ ಟೂರ್ನಿಯಲ್ಲಿ ಸೋಲು ಕಂಡಿತ್ತು. ಬಟ್ 2027ರ ವಿಶ್ವಕಪ್​ನಲ್ಲಿ ಕಪ್ ಗೆಲ್ಲಲೇಬೇಕು ಅನ್ನೋ ಟಾರ್ಗೆಟ್​ನಲ್ಲಿದೆ ಭಾರತ. ಇದಕ್ಕಾಗಿ ಬಲಿಷ್ಠ ಹಾಗೇ ಯುವ ಡವನ್ನ ಕಟ್ಟಬೇಕಾದ ಅನಿವಾರ್ಯತೆಯೂ ಇದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯವ್ರನ್ನ ತಂಡದಿಂದ ಹೊರಗಿರೋ ಚಿಂತನೆಯಲ್ಲಿದೆ. ಅದೂ ಅಲ್ದೇ ಮುಂದಿನ ವರ್ಷದ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟಿ-20 ಪಂದ್ಯಗಳಿಗೆ ಹೆಚ್ಚಿನ ಪ್ರಿಫರೆನ್ಸ್ ನೀಡಿರೋದ್ರಿಂದ ಬೆರಳೆಣಿಕೆಯಷ್ಟೇ ಏಕದಿನ ಮಾದರಿ ಮ್ಯಾಚಸ್ ನಡೆಯುತ್ತೆ.

2025ನೇ ವರ್ಷ ಕಂಪ್ಲೀಟ್ ವೇಳೆಗೆ ಭಾರತ 6 ಏಕದಿನ ಪಂದ್ಯಗಳನ್ನಷ್ಟೇ ಆಡಲಿದೆ. ಅದ್ರಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳಷ್ಟೇ. 2026ರಲ್ಲಿ ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಹೀಗಾಗಿ ಫಿಟ್ನೆಸ್, ಫಾರ್ಮ್ ಉಳಿಸಿಕೊಳ್ಳುತ್ತಾರೆ ಅನ್ನೋದು ಪ್ರಶ್ನೆಯಾಗುತ್ತೆ. ವಿರಾಟ್ ಕೊಹ್ಲಿಗೆ  ಈಗ 36 ವರ್ಷ. ರೋಹಿತ್ ಶರ್ಮಾಗೆ 38 ವರ್ಷ ದಾಟಿದೆ. 2027ನೇ ವರ್ಷದಲ್ಲಿ ನಡೆಯಲಿರೋ ಏಕದಿನ ವಿಶ್ವಕಪ್ ವೇಳೆಗೆ ಇಬ್ಬರೂ 40 ವರ್ಷದ ಆಸುಪಾಸಿನಲ್ಲಿ ಇರ್ತಾರೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿ ಇಲ್ಲದೇ ಈಗಿನಿಂದಲೇ ಹೊಸ ಟೀಂ ಕಟ್ಟೋದು ಕೂಡ ಸವಾಲಾಗಿದೆ. ಇದಕ್ಕೆ ಪುಷ್ಠಿ ನೀಡುದಂತೆ ಭಾರತ ಮತ್ತು ಆಸ್ಟ್ರೇಲಿಯಾ ಸರಣಿ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಇಬ್ಬರು ಲೆಜೆಂಡರಿ ಆಟಗಾರರಿಗೆ ಬೀಳ್ಕೊಡುಗೆ ಪಂದ್ಯವನ್ನೂ ಆಯೋಜನೆ ಮಾಡಲು ಸಿದ್ಧ ಎಂದು ಘೋಷಿಸಿದೆ. ಇದೇ ಕಾರಣಕ್ಕೆ ರೋಹಿತ್ ಮತ್ತು ಕೊಹ್ಲಿ ಯುಗಾಂತ್ಯಕ್ಕೆ ಕಾಲ ಹತ್ತಿರವಾಯ್ತಾ ಅನ್ನೋ ಅನುಮಾನಗಳನ್ನ ಹೆಚ್ಚಿಸಿದೆ. ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 19, 23 ಮತ್ತು 25ರಂದು ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಮೂರು ODI ಪಂದ್ಯಗಳನ್ನು ಆಡಲಿದೆ. ಇದೇ ಪ್ರವಾಸದಲ್ಲಿ ಬಿಸಿಸಿಐ ಇಬ್ಬರಿಗೂ ನಿವೃತ್ತಿ ನೀಡಿದರೂ ಅಚ್ಚರಿಯಿಲ್ಲ. ರೋಹಿತ್ ಅವರಿಗೆ ನಾಯಕನಾಗಿಯೂ ತಂಡವನ್ನು ಮುನ್ನಡೆಸುವ ಕೊನೆಯ ಅವಕಾಶ ಸಿಗಬಹುದು. ಇನ್ನು ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತದ ಪರ ಕಾಣಿಸಿಕೊಂಡಿದ್ದರು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಟೀಂ ಇಂಡಿಯಾ 4 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಫೈನಲ್‌ನಲ್ಲಿ  ಅರ್ಧಶತಕ ಸಿಡಿಸಿದ್ದ ರೋಹಿತ್ ಶರ್ಮಾ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ರು. ಇನ್ನು ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 216 ರನ್ ಸಿಡಿಸಿ ಮಿಂಚಿದ್ದರು.

Shantha Kumari