ಮಕ್ಕಳನ್ನ ಡೇಕೇರ್ನಲ್ಲಿ ಬಿಡೋ ಮುನ್ನ ಎಚ್ಚರ! – ಮಗು ಅತ್ತಿತೆಂದು ಹೊಡೆದು, ಕಚ್ಚಿ ವಿಕೃತಿ ಮೆರೆದ ಮಹಿಳೆ!

ಈಗೀಗ ಪೋಷಕರು ಸಿಕ್ಕಾಪಟ್ಟೆ ಬ್ಯುಸಿ. ಮನೆ ನಿಭಾಯಿಸ್ಬೇಕು ಅಂದ್ರೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ. ಹೀಗಾಗಿ ಮಕ್ಕಳನ್ನ ಡೇಕೇರ್ನಲ್ಲಿ ಬಿಟ್ಟು ಕೆಲಸಕ್ಕೆ ಹೋಗೋದು ಸಾಮಾನ್ಯ ಆಗಿದೆ. ಆದ್ರೀಗ ಮಕ್ಕಳನ್ನ ಡೇಕೇರ್ನಲ್ಲಿ ಬಿಟ್ಟು ಹೋಗೋ ಮುನ್ನ ಎಚ್ಚರ.. ಪೋಷಕರು ಸ್ವಲ್ಪ ಯಾಮಾರಿದ್ರೂ ಮಕ್ಕಳ ಜೀವಕ್ಕೆ ಅಪಾಯ ಆಗೋ ಸಾಧ್ಯತೆ ಇದೆ. ಇಲ್ಲೊಬ್ಬಳು ಪಾಪಿ ಮಗು ಅಳುತ್ತಿದೆ ಎಂದು ಮಗುವಿಗೆ ಹೊಡೆದು, ಕಚ್ಚಿ ವಿಕೃತಿ ಮೆರೆದಿದ್ದಾಳೆ.
ಇದನ್ನೂ ಓದಿ: ರೋಹಿತ್ & ವಿರಾಟ್ ಏಕದಿನ ಮಾದರಿಯೂ ಯುಗಾಂತ್ಯ – BCCI ಪ್ಲ್ಯಾನ್ ವರ್ಕೌಟ್ ಆಗುತ್ತಾ?
ಈ ಘಟನೆ ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 15 ತಿಂಗಳ ಹೆಣ್ಣು ಮಗುವನ್ನ ಆ.4ರಂದು ಪೋಷಕರು ಡೇಕೇರ್ ಸೆಂಟರ್ನಲ್ಲಿ ಬಿಟ್ಟು ಹೋಗಿದ್ರು. ಸಂಜೆ ಬಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಮಗು ಜೋರಾಗಿ ಅಳುತ್ತಿತ್ತು. ಆದ್ರೆ ಏನು ಕಾರಣ ಎಂದು ತಾಯಿಗೆ ಗೊತ್ತಾಗಿರ್ಲಿಲ್ಲ. ಮಗುವಿನ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ತಾಯಿ ಮಗುವಿನ ದೇಹದ ತುಂಬಾ ಗಾಯ ಆಗಿದ್ದನ್ನ ಗಮನಿಸಿದ್ದಾರೆ. ಮಗುವಿನ ಕಾಲಿನ ಮೇಲೆ ವೃತ್ತಾಕಾರದ ಗುರುತುಗಳನ್ನು ಕಂಡು ಗಾಬರಿಗೊಂಡು ಮಗುವನ್ನು ವೈದ್ಯರ ಬಳಿ ಕರೆದುಕೊಂಡು ಹೋದರು. ಆಗ ವೈದ್ಯರು ಮಗುವಿಗೆ ಯಾರೋ ಕಚ್ಚಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಡೇಕೇರ್ ಸೆಂಟರ್ಗೆ ತೆರಳಿದ ಪೋಷಕರು ಅಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಹಲ್ಲೆ ಮಾಡಿರುವುದಾಗಿ ಕಂಡುಬಂದಿದೆ.
ಡೇಕೇರ್ನಲ್ಲಿ ಮಗು ಅತ್ತಿದೆ. ಮಗುವಿನ ಅಳು ನಿಲ್ಲಿಸಲು ಡೇಕೇರ್ನ ಮಹಿಳಾ ಸಿಬ್ಬಂದಿ ತೊಡೆಗೆ ಕಚ್ಚಿ, ನೆಲಕ್ಕೆ ಎಸೆದು, ಕೆನ್ನೆಗೆ ಹೊಡೆದಿರುವುದು, ಕಚ್ಚಿರುವುದು, ಪ್ಲಾಸ್ಟಿಕ್ ಬ್ಯಾಟ್ನಿಂದ ಹೊಡೆದಿರುವ ದೃಶ್ಯಗಳು ಸೆರೆಯಾಗಿವೆ.
ಸದ್ಯ ಈ ಕುರಿತು ಮಗುವಿನ ಪೋಷಕರು ನೋಯ್ಡಾದ ಸೆಕ್ಟರ್-142 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡೇಕೇರ್ ಮಹಿಳಾ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಡೇಕೇರ್ ಮುಖ್ಯಸ್ಥರು ಮಗುವನ್ನು ಸಮಾಧಾನಪಡಿಸಲು ಹಾಗೂ ಸಿಬ್ಬಂದಿ ಹೊಡೆಯುತ್ತಿರುವಾಗ ರಕ್ಷಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಮಗುವಿಗೆ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ನೋಡಿರಿ

