ಧರ್ಮಸ್ಥಳದಲ್ಲಿ ಎಲುಬು ಕರಗಿ ಹೋದ್ವಾ? – ಮೂಳೆ ಮಣ್ಣಾಗಲು ಎಷ್ಟು ವರ್ಷ ಬೇಕು?
ಅಸ್ಥಿಪಂಜರ ಕಂಪ್ಲೀಟ್‌ ನಾಶ ಆಗುತ್ತಾ?

ಧರ್ಮಸ್ಥಳದಲ್ಲಿ ಎಲುಬು ಕರಗಿ ಹೋದ್ವಾ?  – ಮೂಳೆ ಮಣ್ಣಾಗಲು ಎಷ್ಟು ವರ್ಷ ಬೇಕು?ಅಸ್ಥಿಪಂಜರ ಕಂಪ್ಲೀಟ್‌ ನಾಶ ಆಗುತ್ತಾ?

ಧರ್ಮಸ್ಥಳದ ಕೇಸ್‌ ನಂತ್ರ ಸಾಕಷ್ಟು ಜನರಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿದೆ. ಅನಾಮಿಕ ವ್ಯಕ್ತಿ ಹೂತಿಟ್ಟ ಎಲ್ಲಾ ಜಾಗದಲ್ಲೂ ಅಸ್ತಿ ಪಂಜರ ಸಿಕ್ಕಿಲ್ಲ..ಹಾಗಂತ ಸಿಗದೇನೂ ಇಲ್ಲ.. ಅಲ್ಲೊಂದು ಇಲ್ಲೊಂದು ಅಸ್ತಿ ಪಂಜರಗಳು ಸಿಗುತ್ತಿವೆ..ಆದ್ರೆ ಆತ ಹೇಳಿದ್ದಂತೆ ಆ ಜಾಗದಲ್ಲೂ ಅಸ್ತಿ ಪಂಜರ ಇತ್ತೇನೂ.. ತುಂಬಾ ಟೈಂ ಆಗಿದ್ದಕ್ಕೆ ಕರಗಿ ಹೋದ್ವೇನು ಅನ್ನೋ ಪ್ರಶ್ನೆಗಳು ಸಾಕಷ್ಟು ಜನರಲ್ಲಿ ಕಾಡ್ತಿದೆ.

ಒಬ್ಬ ವ್ಯಕ್ತಿ ಸತ್ತ ನಂತ್ರ ಆತನ ದೇಹ ಮಣ್ಣಲ್ಲಿ ಸೇರಿ ಡಿಕಂಪೋಸ್ ಆಗೋಕೆ 4- 5 ಸ್ಟೇಜ್ ಬೇಕಾಗುತ್ತೆ.. ಇಲ್ಲಿ 5ನೇ  ಸ್ಟೇಜ್‌ನಲ್ಲಿ ಕಂಪ್ಲೀಟ್ ಡಿ ಕಂಪೋಸ್ ಆಗುತ್ತೆ.. ಅಂದ್ರೆ ಮೂಳೆ ಅನ್ನೋದು ಕೂಡ ಸಿಗೋದಿಲ್ಲ.. ಮೂಳೆ ಕೂಡ ಕರಗಿ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೆ. ಇದ್ರಲ್ಲಿ ಒಬ್ಬ ವ್ಯಕ್ತಿಯ ದೇಹ ಹೊರಗೆ ಅಂದ್ರೆ ಭೂಮಿ ಮೇಲೆ ಬಿದ್ರೆ ಅದ್ದಕ್ಕೆ ಮಣ್ಣು ಮುಚ್ಚಿಲ್ಲ ಅಂದ್ರೆ ಅದು ಬೇಗ ಡಿಕಂಪೋಸ್ ಆಗುತ್ತೆ. ಇದ್ದಕ್ಕೆ ಕಾರಣವಿದೆ. ಬಯಲು ಪ್ರದೇಶದಲ್ಲಿ ಇರೋದ್ರಿಂದ ಹುಳಗಳು ಮತ್ತು ಡಿಕಂಪೋಸ್ ಬ್ಯಾಕ್ಟರಿಗಳು ಕುರುವುದರಿಂದ ಬೇಗ ಡಿಕಂಪೋಸ್ ಆಗುತ್ತೆ. 5-6 ವಾರದಲ್ಲಿ ದೇಹ ಕರಗಿ, 3-4 ವಾರದಲ್ಲಿ ಕೇವಲ ಮೂಳೆಗಳು ಮಾತ್ರ ಉಳಿಯುತ್ತೆ. ಮೂಳೆ ಭೂಮಿ ಮೇಲೆ ಇದ್ರೆ ಕೇವಲ 10- 15 ವರ್ಷದಲ್ಲಿ ಕರಗಿ ಹೋಗುತ್ತೆ..  ಇದು ಭೂಮಿಮೇಲೆ ಆ ದೇಹ ಇದ್ದರೆ.. ಈ ಟೈಂನಲ್ಲಿ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುತ್ತೆ.

ಈಗ ನಾವು ಭೂಮಿಯ ಒಳಗೆ ಇರೋ ದೇಹ ಅಂದ್ರೆ ಮಣ್ಣಲ್ಲಿ ಹೂತಾಕಿರೋ ದೇಹ ಎಷ್ಟು ಟೈಂನಲ್ಲಿ ಡಿಕಂಪೋಸ್ ಆಗುತ್ತೆ ಅಂತ ನೋಡೋದಾದ್ರೆ.. ಇದು ಆಳದ ಮೇಲೆ ಅವಲಂಬಿತವಾಗಿರುತ್ತೆ. ಎಷ್ಟು ಆಳದಲ್ಲಿ ಹೂತು ಹಾಕಿರ್ತಾರೆ ಅದರ ಆಧಾರದ ಮೇಲೆ ನಿರ್ಧಾರ ಆಗುತ್ತೆ. 2-3 ಅಡಿ ಆಳದಲ್ಲೇ ಹೂತು ಹಾಕಿದ್ರೆ ಬಯಲು ಪ್ರದೇಶದ್ದಕ್ಕಿಂತ 3 ಪಟ್ಟು ಟೈಂ ತೆಗೆದುಕೊಳ್ಳುತ್ತೆ.. ಅಂದ್ರೆ 30 ರಿಂದ 40 ವರ್ಷ ಟೈಂ ಆಗುತ್ತೆ..ಮೂಳೆಗಳು ಮಣ್ಣಲ್ಲಿ ಮಣ್ಣಾಗೋಕೆ. ಆಳ ಹೂತು ಹಾಕಿದಂತೆ ಡಿ ಕಂಪೋಸ್ ಪ್ರಕ್ರಿಯೇ ಕಡಿಮೆ ಆಗುತ್ತಾ ಹೋಗುತ್ತೆ. ಮೂಳೆ ಕರಗುವ ಪ್ರಕ್ರಿಯೇ ಡಬಲ್ ಡಬಲ್ ಆಗುತ್ತಾ ಹೋಗುತ್ತೆ..ಯಾಕಂದ್ರೆ ಅಳಕ್ಕೆ ಬ್ಯಾಕ್ಟೀರಿಯಾಗಳು ಹೋಗಿ   ಡಿಕಂಪೋಸ್ ಮಾಡೋದು ಕಷ್ಟ ಆಗುತ್ತೆ.. ಬಿಸಿಲು ಕೂಡ ಬೀಳುವುದಿಲ್ಲ ಹಾಗಾಗಿ ಡಿಕಂಪೋಸ್ ಪ್ರಕ್ರಿಯೆ ತುಂಬಾ ಲೇಟ್ ಆಗುತ್ತೆ. ನೀರಿನ ಅಂಶ ಇದ್ದ ಜಾಗದಲ್ಲಿ ತುಂಬಾ ಲೇಟ್ ಆಗುತ್ತೆ ಮೂಳೆಗಳು ಮಣ್ಣಲ್ಲಿ ಮಣ್ಣಾಗೋಕೆ. ಡಿಕಂಪೋಸಿಶನ್‌ಗೆ ಆಕ್ಸಿಜನ್ ಬೇಕಾಗುತ್ತೆ.. ಭೂಮಿ ಆಳಕ್ಕೆ ಆಕ್ಸಿಜನ್ ಸಪ್ಲೈ ಆಗಲ್ಲ.. ಹಾಗಾಗಿ ಡಿಕಂಪೋಸಿಶನ್ ಆಗಲ್ಲ.. ಇನ್ನೂ ಚಳಿ ಪ್ರದೇಶ, ವರ್ಷವಿಡಿತೇವ ಇರೋ ಪ್ರದೇಶದಲ್ಲಿ ಎಷ್ಟೇ ವರ್ಷವಾದ್ರೂ 100 ವರ್ಷ ಆದ್ರೂ ದೇಹ ಡಿಕಂಪೋಸಿಶನ್ ಆಗಲ್ಲ. ಪಳೆಯುಳಿಕೆ ತರ ಆಗುತ್ತೆ.

ಇನ್ನೂ ಭೂಮಿಯಲ್ಲಿ ಸಾಕಷ್ಟು ವರ್ಷದ ನಂತ್ರ ಮೂಳೆ ಸಿಕ್ಕಿದ್ರೆ ಮೊದಲು ಮಾಡೋ ಕೆಲಸ ಏನಂದ್ರೆ ಆ ಮೂಳೆ ಯಾರದ್ದು  ಅನ್ನೋದನ್ನ ಕಂಡು ಹಿಡಿಯೋದು.. ಮನುಷ್ಯನ ಮೂಳೆನಾ ಅಥವಾ ಪ್ರಾಣಿ ಮೂಳೆನಾ ಅನ್ನೋದು ಕಂಡು ಹಿಡಿತಾರೆ.. ಮನುಷ್ಯನ ಮೂಳೆ ಆಗಿದ್ರೆ ಗಂಡ ಹೆಣ್ಣಿಂದ ಅನ್ನೋದು ಕಂಡು ಹಿಡಿತಾರೆ. ಮೂಳೆಯ ಲೆಂತ್ ಮೇಲೆ  ಆ ಮನುಷ್ಯನ ಹೈಟ್ ಕಂಡು ಹಿಡಿಯಲಾಗುತ್ತೆ. ಇನ್ನೂ ಆ ವ್ಯಕ್ತಿ ಯಾರು ಅನ್ನೋದ್ದನ್ನ ಡಿಎನ್‌ಎ ಮೂಲಕ ಕಂಡು ಹಿಡಿಯಲಾಗುತ್ತೆ. ಕೆಲ ಮೂಳೆಗಳಿಂದ ಹೇಗೆ ಸತ್ತ ಅನ್ನೋದು ಗೊತ್ತಾಗುತ್ತೆ.. ಅಂದ್ರೆ ಮೂಳೆಗೆ ಪೆಟ್ಟಾಗಿದ್ರೆ, ಗುಂಡು ತಗಲಿ ಮೃತಪಟ್ಟಿದ್ದಾನಾ? ಹೊಡೆದು ಬಡಿದು ಕೊಲೆ ಮಾಡಿದ್ರಾ ಗೊತ್ತಾಗುತ್ತೆ. ಹಾಗೇ ಮೂಳೆಗಳ ಸಿಕ್ಕ ಜಾಗದ ಆಧಾರ ಮೇಲೆ ಎಷ್ಟು ವರ್ಷ ಆಗಿದೆ ಮೃತಪಟ್ಟು ಅನ್ನೋದು ಗೊತ್ತಾಗುತ್ತೆ.. ಅಲ್ಲಿನ ಮಣ್ಣನ್ನ ಕೂಡ ಟೆಸ್ಟ್ ಮಾಡಬೇಕಾಗುತ್ತೆ.

 

Kishor KV