ಸಕ್ಕರೆ ಕಾಯಿಲೆ ಗುಣಪಡಿಸೋ ದೇವರು – 5 ನಿಮಿಷದಲ್ಲಿ ವಾಸಿ, ಕಣ್ಣುಂದೆ ಪವಾಡ
ಇರುವೆ ಸಕ್ಕರೆ ತಿನ್ನುತ್ತಿದ್ದಂತೆ ಚಮತ್ಕಾರ

ಸಕ್ಕರೆ ಕಾಯಿಲೆ ಗುಣಪಡಿಸೋ ದೇವರು  – 5 ನಿಮಿಷದಲ್ಲಿ ವಾಸಿ, ಕಣ್ಣುಂದೆ ಪವಾಡಇರುವೆ ಸಕ್ಕರೆ ತಿನ್ನುತ್ತಿದ್ದಂತೆ ಚಮತ್ಕಾರ

ಸಕ್ಕರೆ ಕಾಯಲೆ ಅನ್ನೋದು ದೊಡ್ಡವರಿಂದ ಹಿಡಿದು ಹಿಡಿದು ಚಿಕ್ಕವರ ತನಕ ಎಲ್ಲರಿಗೂ ಇದೆ. ಇದ್ದಕ್ಕೆ ವಯಸ್ಸಿನ ಮಿತಿ ಇಲ್ಲ.. ಹೊರಗಿನ ಆಹಾರ ಆಗಿರ್ಬೋದು. ಸಕ್ಕರೆ ಕಾಯಿಲೆ  ಬಂದ್ರೆ  ಮತ್ತೆ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಔಷಧಿ ಮೂಲಕ ನಿಯಂತ್ರದಲ್ಲಿ ಇಟ್ಟುಕೊಳ್ಳಬಹುದು.. ಆದ್ರೇ ನಿವೆಲ್ಲಾದ್ರೂ ದೇವಸ್ಥಾನಕ್ಕೆ ಹೋದ್ರೆ ಸಕ್ಕರೆ ಖಾಯಲೆ ಗುಣೆ ಆಗುತ್ತೆ ಅನ್ನೋದ್ದನ್ನ ಕೇಳಿದ್ದೀರಾ.. ನಮ್ಮದೇ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ಸಕ್ಕರೆ ಕಾಯಿಲೆಯನ್ನು ಗುಣಪಡಿಸುವ ದೇವಸ್ಥಾನವೊಂದು ಇದೆ.. ಸಕ್ಕರೆ ಕಾಯಿಲೆ ಇದ್ದವರು ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕೆಲವೇ ಕ್ಷಣದಲ್ಲಿ ನಿಮ್ಮ ಕಾಯಿಲೆ ವಾಸಿಯಾಗುತ್ತೆ..

ತಮಿಳುನಾಡಿನ ತಂಜಾವೂರು ನಗರದಿಂದ ಸುಮಾರು 26 ಕಿ.ಮೀ. ದೂರದಲ್ಲಿರುವ ಅಮ್ಮಪೇಟೆ ಎಂಬ ಗ್ರಾಮದಲ್ಲಿ ನೆಲೆಸಿರುವ ವೀಣಿ ಕರುಂಬೇಶ್ವರ ದೇವಸ್ಥಾನವೇ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯುವ ಪುಣ್ಯ ಕ್ಷೇತ್ರ..  ದಿನವೊಂದಕ್ಕೆ ಇಲ್ಲಿಗೆ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಸಕ್ಕರೆ ಕಾಯಿಲೆ ಇದ್ದವರೂ ಈ ದೇವಸ್ಥಾನಕ್ಕೆ ಬಂದು ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿ ಈ ದೇವಸ್ಥಾನದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ತಮ್ಮ ಕಾಯಿಲೆಯಿಂದ ಮುಕ್ತಿ ಪಡೆಯುತ್ತಿದ್ದಾರೆ.

ಅಂದಹಾಗೆ ವೀಣಿ ಕರುಂಬೇಶ್ವರ ದೇವಸ್ಥಾನ ಸುಮಾರು 5000 ವರ್ಷ ಹಳೆಯದು ಎಂದು ಹೇಳಲಾಗುತ್ತೆ.. ಈ ದೇವಸ್ಥಾನದ ಗರ್ಭಗುಡಿಯಲ್ಲಿರುವ ಶಿವಲಿಂಗ ನೋಡುವಾಗ ಕಬ್ಬಿನ ರಾಶಿಯಲ್ಲಿ ಉದ್ಭವವಾದಂತೆ ಭಾಸವಾಗುತ್ತದೆ. ಅಲ್ಲದೆ ಇಲ್ಲಿನ ದೇವಸ್ಥಾನಕ್ಕೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ ಎಂದು ಹೇಳಲಾಗಿದೆ.

ಇನ್ನೂ ಸಕ್ಕರೆ ಕಾಯಿಲೆಯಿಂದ ಮುಕ್ತರಾಗಬೇಕಾದರೆ ಇಲ್ಲಿಗೆ ಬರುವ ಭಕ್ತರು ಅರ್ಧ ಕೆಜಿ ರವೆ ಮತ್ತು ಅಷ್ಟೇ ಪ್ರಮಾಣದ ಸಕ್ಕರೆಯನ್ನು ಮಿಶ್ರಣ ಮಾಡಿಕೊಂಡು ದೇವಸ್ಥಾನಕ್ಕೆ ತರಬೇಕು.. ಬಳಿಕ ದೇವರ ಎದುರು ಭಕ್ತಿಯಿಂದ ಬೇಡಿಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಇದಾದ ಬಳಿಕ ದೇವಸ್ಥಾನದ ಹೊರಭಾಗದಲ್ಲಿ ಸಕ್ಕರೆ ಮತ್ತು ರವೆ ಮಿಶ್ರಣವನ್ನು ಹಾಕಬೇಕು ಈ ವೇಳೆ ಅಲ್ಲಿಗೆ ಬರುವ ಇರುವೆಗಳು ರವೆಯನ್ನು ಬಿಟ್ಟು ಕೇವಲ ಸಕ್ಕರೆಯನ್ನು ಮಾತ್ರ ತಿನ್ನುತ್ತವೆ ಈ ವೇಳೆ ಮಿಶ್ರಣದಲ್ಲಿ ಹೇಗೆ ಸಕ್ಕರೆ ಕಡಿಮೆಯಾಗುತ್ತದೋ ಅದೇ ರೀತಿ ಮನುಷ್ಯನ ದೇಹದಲ್ಲಿರುವ ಸಕ್ಕರೆ ಅಂಶಗಳು ಕಡಿಮೆಯಾಗುತ್ತಾ ಹೋಗುತ್ತದೆಯಂತೆ ಅನ್ನೋದು ನಂಬಿಕೆ..

ಇನ್ನು ಇಲ್ಲಿನ ಪವಾಡ ನೋಡಿ ವೈದ್ಯರು, ವಿಜ್ಞಾನಿಗಳೇ ಶಾಕ್ ಆಗಿದ್ದಾರೆ ಅಂತ ಹೇಳಲಾಗುತ್ತೆ.. ಇಲ್ಲಿಗೆ ಭೇಟಿ ನೀಡಿ ಗುಣಮುಖರಾಗಿರೋ ಜನರನ್ನ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸಿ ಬೆರಗಾಗಿದ್ದಾರೆ.. ಅಲ್ಲದೆ ವೈದ್ಯರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ..ಅಲ್ಲದೇ ವ್ಯಕ್ತಿ ಇರುವೆಗಳಿಗೆ ಸಕ್ಕರೆ ಹಾಕಿದಾದ ಇರುವೆಗಳು ಸಕ್ಕರೆಯನ್ನು ತಿನ್ನುತ್ತಿದ್ದಂತೆ ವ್ಯಕ್ತಿಯ ಜೀವದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುವುದನ್ನು ಕಂಡು ಸ್ವತಃ ವೈದ್ಯರೇ ಬೆರಗಾಗಿ ದೇವಳದ ಪವಾಡವನ್ನು ಒಪ್ಪಿಕೊಂಡಿದ್ದಾರೆ.

ಮನುಷ್ಯನ ದೇಹದಲ್ಲಿರುವ ಸಕ್ಕರೆ ಅಂಶಗಳನ್ನು ಹೀರಿ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯುವಂತೆ ಮಾಡುವ ಇಲ್ಲಿನ ಇರುವೆಗಳನ್ನು ‘ದೇವರ ಇರುವೆ’ ಎಂದು ಕರೆಯುತ್ತಾರೆ, ಇಲ್ಲಿನ ಇರುವೆಗಳಿಂದಲೇ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಗುಣಮುಖರಾಗುತ್ತಿದ್ದಾರೆ. ಹಾಗಾಗಿ ದೇವಸ್ಥಾನದ ವಠಾರದಲ್ಲಿರುವ ಇರುವೆಗಳನ್ನು ಇಲ್ಲಿನ ಜನರು ಹಾಗೂ ಭಕ್ತರು ಪೂಜ್ಯನೀಯ ಭಾವನೆಯಿಂದ ನೋಡಿಕೊಳ್ಳುತ್ತಾರೆ. ನಿಮಗೂ ಸಕ್ಕರೆ ಖಾಯಿಲೆ ಇದ್ದರೆ ಒಮ್ಮೆ ಭೇಟಿ ನೀಡಿ , ಯಾರಿಗೆ ಗೊತ್ತು ಸಕ್ಕರೆ ಕಾಯಿಲೆ ಕಮ್ಮಿಯಾದ್ರೂ ಆಗಬಹುದು..

Kishor KV