ಜಲ ಪ್ರಳಯ.. ಜ್ವಾಲಾಮುಖಿ ಸ್ಫೋಟ! 3ನೇ ವಿಶ್ವ ಯುದ್ಧ, AI ಗಂಡಾಂತರ!
ಬಾಬಾ ವಂಗಾ ಭವಿಷ್ಯ ಭಯ ಹುಟ್ಟಿಸಿದ್ದೇಕೆ?

ಇವತ್ ಏನ್ ಆಗುತ್ತೆ ಅನ್ನೋದ್ದಕ್ಕಿಂತ ನಾಳೆ ಏನ್ ಆಗುತ್ತೆ ಅನ್ನೋದೆ ನಮ್ಮ ಜನಕ್ಕೆ ಚಿಂತೆ.. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಬಹುತೇಕ ಜನರಿಗೆ ಯೋಚನೆ ಆಗಿರುತ್ತೆ.. ಸಾಕಷ್ಟು ಜನ ಮುಂದಾಗುವ ಘಟನೆಗಳನ್ನ ಮೊದಲ ಹೇಳಿ ಜನ ಮನ್ನಣೆಯನ್ನ ಪಡೆದ ಸಾಕಷ್ಟು ಭವಿಷ್ಯಗಾರರಿದ್ದಾರೆ. ಈ ಪೈಕಿ ಮೊದಲ ಹೆಸರು ಬರುವುದು ಬಲ್ಗೇರಿಯನ್ ಭವಿಷ್ಯಗಾರ್ತಿ ಬಾಬಾ ವಂಗಾ. ವಿಶ್ವದ ಪ್ರಮುಖ ಘಟನೆಗಳ ಬಗ್ಗೆ ಅವರ ದೂರದೃಷ್ಟಿಯು ಆಸಕ್ತಿ ಮತ್ತು ವಿವಾದವನ್ನು ಹುಟ್ಟುಹಾಕುತ್ತಲೇ ಇದೆ.
2025ರಲ್ಲಿ ಬಾಬಾ ವಂಗಾ ವಿನಾಶಕಾರಿ ವಿಪತ್ತುಗಳು ಮತ್ತು ಜೀವಹಾನಿಯ ಬಗ್ಗೆ ಎಚ್ಚರಿಸಿದ್ದರು. ವಂಗಾರ ಭಯಾನಕ ಭವಿಷ್ಯವಾಣಿಗಳ ಪೈಕಿ ಅನೇಕ ಪ್ರಮುಖ ಘಟನೆಗಳು ನಿಜವಾಗಿವೆ. ಅವರು ಹೇಳಿದಂತೆಯೇ ಯಾವ ವರ್ಷದಲ್ಲಿ ಏನು ನಡಯಬೇಕೋ ಅದು ನಡೆಯುತ್ತದೆ ಎಂದು ನಂಬುವವರು ಇದ್ದಾರೆ. ಹೊಸ ವರ್ಷದ ಬಗ್ಗೆ ವಂಗಾ ನುಡಿದಿರುವ ಭವಿಷ್ಯಗಳು ಇನ್ನಷ್ಟು ಆತಂಕಕಾರಿಯಾಗಿವೆ. ಆದ್ರೆ ಇವರು ನುಡಿದ 2026ರ ಭವಿಷ್ಯ ದೊಡ್ಡ ಮಟ್ಟದಲ್ಲಿ ಈಗ ಚರ್ಚೆ ಆಗುತ್ತಿದೆ.. ಹಾಗಿದ್ರೆ ಬಾಬಾ ವಾಂಗ ಹೇಳಿದ್ದೇನು ಬನ್ನಿ ನೋಡೋಣ..
2026ರಲ್ಲಿ ಹೆಚ್ಚುತ್ತೆ ಭೂಕಂಪ, ಜ್ವಾಲಾಮುಖಿ ಸ್ಫೋಟ!
ಬಾಬಾ ವಂಗಾರ ಪ್ರಕಾರ, 2026ರಲ್ಲಿ ಜನರು ಮತ್ತು ಗ್ರಹಕ್ಕೆ ಹಾನಿ ಮಾಡಬಹುದಾದ ದೊಡ್ಡದಾದ ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಕಠಿಣ ಹವಾಮಾನದ ಸ್ಥಿತಿ ನಿರ್ಮಾಣವಾಗಲಿದೆ. ಭೂಮಿಯ ಸುಮಾರು 7 ರಿಂದ 8%ರಷ್ಟು ಭೂಮಿ ಈ ಘಟನೆಗಳಿಂದ ಹಾನಿಗೊಳಗಾಗಬಹುದು ಎಂದಿದ್ದಾರೆ. ಆದ್ರೆ ವಾಂಗಾ ಇದು ಹೇಗೆ ಪ್ರಾರಂಭವಾಗುತ್ತದೆ ಅಂತಾ ಅವರು ಸ್ಪಷ್ಟವಾಗಿ ಹೇಳದಿದ್ದರೂ, ಇದರ ಆರಂಭಿಕ ಲಕ್ಷಣಗಳು ಈಗಾಗಲೇ ಜಗತ್ತಿನ ವಿವಿಧ ಭಾಗಗಳಲ್ಲಿ ಗೋಚರಿಸುತ್ತಿವೆ ಎಂದು ಅನೇಕರು ನಂಬಿದ್ದಾರೆ.
2026ರಲ್ಲಿ ದೊಡ್ಡ ಜಾಗತಿಕ ಸಂಘರ್ಷ
ಬಾಬಾ ವಂಗಾ ಭವಿಷ್ಯವಾಣಿಯ ಪ್ರಕಾರ, 2026ರಲ್ಲಿ ಒಂದು ದೊಡ್ಡ ಜಾಗತಿಕ ಸಂಘರ್ಷ ಭುಗಿಲೇಳಬಹುದು ಎಂದು ಸೂಚಿಸಿದ್ದಾರೆ. 2025ರಲ್ಲಿ ಭಾರತ-ಪಾಕಿಸ್ತಾನದಿಂದ ಇರಾನ್ ಮತ್ತು ಇಸ್ರೇಲ್‌ವರೆಗೆ ಮತ್ತು ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ರಷ್ಯಾ-ಇಸ್ರೇಲ್ ಹೀಗೆ ಪ್ರಮುಖ ದೇಶಗಳ ನಡುವಿನ ಉದ್ವಿಗ್ನತೆಯನ್ನು ಜಗತ್ತು ಈಗಾಗಲೇ ಕಂಡಿದೆ. ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ಚೀನಾ ತೈವಾನ್ ಮೇಲೆ ದಾಳಿ ಮಾಡಬಹುದು ಮತ್ತು ರಷ್ಯಾ ಮತ್ತು ಅಮೆರಿಕದ ನಡುವೆ ನೇರ ಘರ್ಷಣೆಯ ಸಾಧ್ಯತೆಯೂ ಇದೆ. ಇದು ನಿಜವಾದರೆ ಮುಂದಿ ದಿನಗಳಲ್ಲಿ ಅಪಾಯಕಾರಿ ಘಟನೆಗಳಿಗೆ ಇಡೀ ಜಗತ್ತು ಸಾಕ್ಷಿಯಾಗಲಿದೆ.
Full Gfx: AI ಯಿಂದ ಆಗುತ್ತಾ ಕಂಟಕ
ಬಾಬಾ ವಂಗಾ ಪ್ರಕಾರ, 2026ರಲ್ಲಿ AI ಜಗತ್ತಿನಲ್ಲಿ ದೊಡ್ಡ ಬದಲಾವಣೆಯನ್ನ ತರಲಿದೆ. 2025ರಲ್ಲಿ AI ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಮಾನವನಂತಹ ಧ್ವನಿಗಳನ್ನು ರಚಿಸುವುದರಿಂದ ಹಿಡಿದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೆ, AI ಯಾರೂ ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕೆಲವರು ಇದನ್ನು ಪ್ರಗತಿ ಎಂದು ನೋಡಿದರೆ, ಅನೇಕರು ಇದ್ರ ಬಗ್ಗೆ ಚಿಂತೆ ಹೆಚ್ಚಾಗಿದೆ. ಇದು ನಿಧಾನವಾಗಿ ಅನೇಕ ಮಾನವ ಕಾರ್ಯಗಳನ್ನು ಅಂದರೆ ಕೆಲಸಗಳನ್ನ ಬದಲಾಯಿಸಲು ಪ್ರಾರಂಭಿಸುತ್ತಿದೆ. ವಂಗಾರ ಭವಿಷ್ಯವಾಣಿ ನಿಜವಾದರೆ, AI 2026ರಲ್ಲಿ ತನ್ನ ಉತ್ತುಂಗವನ್ನು ತಲುಪಬಹುದು. ಎಲ್ಲಾ ಕ್ಷೇತ್ರದಲ್ಲಿಯೂ ಅದು ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಅನ್ಯಲೋಕದ ಬಗ್ಗೆ ಬಾಬಾ ವಾಂಗ ಹೇಳಿದ ಭವಿಷ್ಯ ಸಾಕಷ್ಟು ಜನರ ನಿದ್ದೆಗೆಡಿಸಿದೆ. ವಂಗಾರ ಭವಿಷ್ಯವಾಣಿಯ ಪ್ರಕಾರ, ನವೆಂಬರ್ 2026ರಲ್ಲಿ ಒಂದು ಬೃಹತ್ ಅನ್ಯಲೋಕದ ಹಡಗು ಭೂಮಿಯ ಕಡೆಗೆ ಬರಲಿದೆಯಂತೆ. ಈ ಆಘಾತಕಾರಿ ಭವಿಷ್ಯವು, ಮಾನವರು ಮೊದಲ ಬಾರಿಗೆ ಅನ್ಯಲೋಕದವರೊಂದಿಗೆ ಸಂಪರ್ಕಕ್ಕೆ ಬರಬಹುದು ಎಂಬುದನ್ನ ಸೂಚಿಸುತ್ತದೆ. ಒಟ್ನಲ್ಲಿ ಬಾಬಾ ವಾಂಗ ಹೇಳಿದ ಭವಿಷ್ಯಕ್ಕೂ ಈಗ ಆಗುತ್ತಿರೋ ಕೆಲ ಘಟನೆಗಳಿಗೆ ಹೊಲಿಕೆ ಆಗುತ್ತಿದ್ದು, ಜನ ಭಯ ಬೀಳುತ್ತಿರುವುದಂತು ಸತ್ಯ.

ನೋಡಿರಿ

