KL ಮೇಲೆ ಲಕ್ನೋ ಸೂಪರ್ ಜೇಂಟ್ಸ್ ದ್ವೇಷ – ಫೋಟೋಗಳಲ್ಲೂ ಸಣ್ಣತನ ಬೇಕಿತ್ತಾ?
IND ಗೆದ್ರೂ ಗೋಯೆಂಕಾಗೆ IPL ಸೇಡು

KL ಮೇಲೆ ಲಕ್ನೋ ಸೂಪರ್ ಜೇಂಟ್ಸ್ ದ್ವೇಷ – ಫೋಟೋಗಳಲ್ಲೂ ಸಣ್ಣತನ ಬೇಕಿತ್ತಾ?IND ಗೆದ್ರೂ ಗೋಯೆಂಕಾಗೆ IPL ಸೇಡು

2025ರ ಌಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪರ್ಫಾಮೆನ್ಸ್ ನೋಡಿದ್ರೆ ನಾವೇ ವಿನ್ ಆಗ್ಬೇಕಿತ್ತು. ಹೆಚ್ಚಿನ ಸೆಷನ್​ಗಳಲ್ಲಿ ಭಾರತವೇ ಡಾಮಿನೇಟ್ ಮಾಡಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲೂ ಭಾರತದ ಆಟಗಾರರೇ ಶೈನ್ ಆಗಿದ್ದಾರೆ. ಅದ್ರಲ್ಲೂ ಕ್ಲೈಮ್ಯಾಕ್ಸ್​ ಮ್ಯಾಚ್​ನಲ್ಲಿ ಟೀಂ ಇಂಡಿಯಾ ರಣರೋಚಕ ರೀತಿಯಲ್ಲಿ ಗೆಲುವು ಸಾಧಿಸಿತ್ತು. ಐದು ಪಂದ್ಯಗಳ ಟೆಸ್ಟ್ ಸರಣಿಯನ್ನ ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಸರಣಿಯುದ್ದಕ್ಕೂ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರಲ್ಲಿ ಕೆಎಲ್ ರಾಹುಲ್ ಮುಂದಿದ್ದಾರೆ. ರಾಹುಲ್ ಅವ್ರ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್​ಗೆ ವಿದೇಶಿ ದಿಗ್ಗಜರೂ ಕೂಡ ಸಲ್ಯೂಟ್ ಅಂದಿದ್ದಾರೆ. ಬಟ್ ಲಕ್ನೋ ಸೂಪರ್ ಜೇಂಟ್ಸ್ ಫ್ರಾಂಚೈಸಿಯೊಂದನ್ನ ಬಿಟ್ಟು. ಐಪಿಎಲ್​ನಲ್ಲಾದ ಕಿರಿಕ್​ನೇ ಮುಂದಿಟ್ಟುಕೊಂಡು ರಾಹುಲ್ ವಿಚಾರವಾಗಿ ಹಗೆ ಸಾಧಿಸುತ್ತಲೇ ಇದ್ದಾರೆ.

ಇದನ್ನೂ ಓದಿ : ಏಷ್ಯಾಕಪ್ ಗೆ ಮೂವರು RCB ಸ್ಟಾರ್ಸ್? – ಜಿತೇಶ್, ಕೃನಾಲ್, ರಜತ್.. ಯಾರಿಗೆ ಲಕ್?

ಟೀಂ ಇಂಡಿಯಾದಲ್ಲಿ ಯಾವುದೇ ಪಂದ್ಯಗಳು ನಡೆದಾಗ ರಿಸಲ್ಟ್ ಏನಾದ್ರೂ ಆಗಿರ್ಲಿ. ಬಟ್ ಆಟಗಾರರು ಅದ್ಭುತ ಪ್ರದರ್ಶನ ನೀಡಿದಾಗ ಐಪಿಎಲ್​ನ ಫ್ರಾಂಚೈಸಿಗಳು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ಗಳಲ್ಲಿ ಆ ಮೂಮೆಂಟ್ಸ್​ನ ಫೋಟೋಸ್ ಹಾಕಿ ಕ್ಯಾಪ್ಟನ್ ಕೊಟ್ಟು ಪೋಸ್ಟ್​ಗಳನ್ನ ಹಾಕ್ತಾರೆ. ಭಾರತ-ಇಂಗ್ಲೆಂಡ್ ನಡುವಿನ ಸರಣಿಯಲ್ಲೂ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದಂತ ಆಟಗಾರರ ಫೋಟೋಗಳನ್ನ ಫ್ರಾಂಚೈಸಿಗಳ ಪೇಜ್​ಗಳಲ್ಲಿ ಶೇರ್ ಮಾಡಿದ್ರು. ಬಟ್ ಈ ವಿಚಾರದಲ್ಲಿ ಲಕ್ನೋ ಸೂಪರ್ ಜೇಂಟ್ಸ್ ಮಾತ್ರ ತನ್ನ ಅಸಲಿ ಬುದ್ಧಿಯನ್ನ ತೋರಿಸಿದೆ. ಕೆಎಲ್ ರಾಹುಲ್​ರನ್ನ ಬಿಟ್ಟು ಉಳಿದವರ ಫೋಟೋಗಳನ್ನಷ್ಟೇ ಶೇರ್ ಮಾಡಿದ್ದಾರೆ. ಅಂದ್ರೆ ರಾಹುಲ್​ರನ್ನ ಕಂಪ್ಲೀಟ್ ಆಗಿ ನಿರ್ಲಕ್ಷಿಸಿದೆ. ಌಕ್ಚುಲಿ ಇಲ್ಲಿ ರಾಹುಲ್ ಲಕ್ನೋ ತಂಡದ ಮಾಜಿ ಆಟಗಾರ. ಅದೆಲ್ಲಕ್ಕಿಂತ ಹೆಚ್ಚಾಗಿ ಮೂರು ವರ್ಷಗಳ ಕಾಲ ತಂಡವನ್ನ ಲೀಡ್ ಮಾಡಿದ್ದ ಕ್ಯಾಪ್ಟನ್. ಹೀಗಿದ್ರೂ ರಾಹುಲ್​ರನ್ನ ಬಿಟ್ಟು ಉಳಿದವ್ರ ಫೋಟೋಗಳನ್ನೇ ಹಾಕಿರೋದೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ತಂಡದ ಫೋಟೋಗಳನ್ನು ಕೊಲಾಜ್ ಮಾಡಿ ಕೆಎಲ್ ರಾಹುಲ್ ಅವ್ರ ಫೋಟೋವನ್ನ ಕೈಬಿಟ್ಟಿದ್ದಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಿಡಿ ಕಾರಿದ್ದಾರೆ. ಇಂಗ್ಲೆಂಡ್ ಸರಣಿಯ ಸಮಯದಲ್ಲಿ ಭಾರತೀಯ ಆಟಗಾರರ ಚಿತ್ರಗಳ ಕೊಲಾಜ್ ಅನ್ನು LSG ಹಂಚಿಕೊಂಡಿದೆ. ಆದ್ರೆ ಈ ಚಿತ್ರಗಳಲ್ಲಿ KL ರಾಹುಲ್ ಕಾಣಿಸಿಕೊಂಡಿಲ್ಲ. ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್ ಸೇರಿದಂತೆ ಅನೇಕರ ಫೋಟೋಗಳಿವೆ. ರಾಹುಲ್ ಮಾತ್ರ ಇಲ್ಲ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರೋ ಗಣೇಶ್, ಇದು ಮುಜುಗರದ ಸಂಗತಿಯಾಗುತ್ತಿದೆ. ನ್ಯೂ ಬಾಲ್ ಫೇಸ್ ಮಾಡಿ 500+ ರನ್ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ನ ಫೋಟೋನೇ ಸಿಗಲಿಲ್ಲ ಎಂದು ಟೀಕೆ ಮಾಡಿದ್ದಾರೆ. ಅಂದ್ರೆ ಸರಣಿಯಲ್ಲಿ ಶುಭ್​ಮನ್ ಗಿಲ್ ಹೊರತುಪಡಿಸಿದ್ರೆ ಭಾರತದ ಪರ  ಹೈಯೆಸ್ಟ್ ರನ್ಸ್ ಗಳಿಸಿದ್ದು ರಾಹುಲ್. ಹಾಗೇ ಮೊದಲ ನಾಲ್ಕು ಪಂದ್ಯಗಳಲ್ಲಿ ಒಂದು ಇನ್ನಿಂಗ್ಸ್​ನಲ್ಲಾದ್ರೂ 50ಕ್ಕಿಂತ ಹೆಚ್ಚು ರನ್ ಗಳಿಸಿ ಏಕೈಕ ಆಟಗಾರ. 2 ಶತಕಗಳೂ ಸೇರಿವೆ. ಹೀಗಿದ್ರೂ ರಾಹುಲ್​ರನ್ನ ಹೈಲೆಟ್ ಮಾಡದ ಲಕ್ನೋ ನಡೆಗೆ ಗಣೇಶ್ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ಇಲ್ಲಿ ಲಕ್ನೋ ತಂಡ ರಾಹುಲ್ ಮೇಲೆ ಹಗೆ ಸಾಧಿಸೋಕೆ ಕಾರಣವೇ 2024ರಲ್ಲಿ ನಡೆದ ಅದೊಂದು ಘಟನೆ.

ದ್ವೇಷ ಸಾಧಿಸುತ್ತಿದೆಯಾ ಲಕ್ನೋ?

2022ರಿಂದ 2024ರವರೆಗೆ ಅಂದ್ರೆ ಮೂರು ವರ್ಷಗಳ ಕ್ಯಾಪ್ಟನ್

2024ರಲ್ಲಿ ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ ಎಲ್ ​ಎಸ್ ​ಜಿ ಸೋಲು

ಸಂಜೀವ್ ಗೋಯೆಂಕಾ ರಾಹುಲ್ ಅವ್ರನ್ನ ಮೈದಾನದಲ್ಲೇ ತರಾಟೆಗೆ ತಗೊಂಡ್ರು

2025ರ ಐಪಿಎಲ್​ಗೂ ಮುನ್ನ ಮೆಗಾ ಹರಾಜಿನಲ್ಲಿ ರಾಹುಲ್ ಡೆಲ್ಲಿ ಪಾಲು

ರಾಹುಲ್ ಗೋಯೆಂಕಾ ವಿರುದ್ಧ ಮೈದಾನದಲ್ಲೇ ಸೇಡು ತೀರಿಸಿಕೊಂಡಿದ್ರು

ಅರ್ಧಶತಕ ಸಿಡಿಸಿ ನಾಟೌಟ್ ಆಗಿದ್ದ ರಾಹುಲ್ ಮೈದಾನದಲ್ಲೇ ಇದ್ರು

ಗೋಯೆಂಕಾ ರಾಹುಲ್ ಅವರ ಕೈ ಕುಲುಕಿ  ಮಾತಿಗೆ ಮುಂದಾಗಿದ್ರು

ರಾಹುಲ್ ಇಗ್ನೋರ್ ಮಾಡಿದ್ದನ್ನ ಗಮನಿಸಿದ ಗೋಯೆಂಕಾ ಟ್ರೋಲ್

Always good to be back in Lucknow ಎಂದು ಬರೆದುಕೊಂಡಿದ್ರು

ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ರಿಷಭ್ ಪಂತ್ ಖರೀದಿ

ಆರ್ ​ಸಿಬಿ ವಿರುದ್ಧ ಪಂತ್ ಶತಕ ಸಿಡಿಸಿದ್ದು ಬಿಟ್ರೆ ಉಳಿದ ಪಂದ್ಯಗಳಲ್ಲಿ ಫೇಲ್

ನಾಲ್ಕು ಪಂದ್ಯಗಳಲ್ಲಿ 479 ರನ್, ಕೊನೇ ಪಂದ್ಯದಲ್ಲಿ ಇಂಜುರಿಯಿಂದ ಡ್ರಾಪ್

Shantha Kumari