‘ಸು ಫ್ರಮ್ ಸೋ’ ಹೊಸ ದಾಖಲೆ – ಮೂರನೇ ವಾರ ಸೋಮೇಶ್ವರದ ಸುಲೋಚನ ಗಳಿಸಿದ್ದೆಷ್ಟು?

ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ರಿಲೀಸ್ ಆಗಿ, 3 ವಾರ ಆಗ್ತಾ ಬಂತು. ಆದ್ರೂ ಕೂಡ ಸಿನಿಮಾ ಅಬ್ಬರ ಕಡಿಮೆಯಾಗಿಲ್ಲ.. ಸಿನಿ ಪ್ರೇಕ್ಷಕರು ಸಿನಿಮಾ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡ್ತಿದ್ದಾರೆ. ಈ ಸಿನಿಮಾದ ಕಲೆಕ್ಷನ್ ಕೂಡ ಒಂದೇ ರೀತಿಯಲ್ಲಿ ಸಾಗುತ್ತಿದೆ. ಸತತ 10 ದಿನ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಈಗ ‘ಸು ಫ್ರಮ್ ಸೋ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 60 ಕೋಟಿ ರೂಪಾಯಿ ಗಳಿಕೆ ಮಾಡಿ ಗಮನ ಸೆಳೆದಿದೆ. 15 ದಿನಗಳಲ್ಲಿ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆದಿದೆ.
ಇದನ್ನೂ ಓದಿ: ಈ ಪಾತ್ರೆಗಳಲ್ಲಿ ಹಾಲು ಕಾಯಿಸುವ ಮುನ್ನ ಎಚ್ಚರ! – ಹಾಲು ಕೆಡೋದು ಮಾತ್ರವಲ್ಲ.. ಆರೋಗ್ಯಕ್ಕೂ ಕಂಟಕ!
ಸು ಫ್ರಮ್ ಸೋ ಸಿನಿಮಾ ಭಾರತದಲ್ಲಿ 56 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೊರ ದೇಶಗಳಿಂದ 4.4 ಕೋಟಿ ರೂಪಾಯಿ ಹರಿದು ಬಂದಿದೆ. ಮಲಯಾಳಂ ಕಲೆಕ್ಷನ್ ಅಚ್ಚರಿ ಮೂಡಿಸುವಂತೆ ಇದೆ. ದಿನವೂ ಚಿತ್ರಕ್ಕೆ 40 ಲಕ್ಷ ರೂಪಾಯಿಯಷ್ಟು ಗಳಿಕೆ ಆಗುತ್ತಿದೆ. ಈ ಮೂಲಕ ಮಲಯಾಳಂನಲ್ಲಿ ಸಿನಿಮಾದ ಒಟ್ಟೂ ಗಳಿಕೆ 2.15 ಕೋಟಿ ರೂಪಾಯಿ ಆಗಿದೆ.
ಇನ್ನು ಸು ಫ್ರಮ್ ಸೋ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಆಗಸ್ಟ್ 8ರಿಂದ ಸಿನಿಮಾ ಅಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಅಲ್ಲಿ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಇಷ್ಟ ಆದರೆ, ಕೆಲವರು ಸಿನಿಮಾನ ಎವರೇಜ್ ಎಂದು ಕರೆದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಸಿನಿಮಾದ ಭಾಷೆ. ಮಂಗಳೂರು ಕನ್ನಡ ಚಿತ್ರದ ಹೈಲೈಟ್. ಆದರೆ, ತೆಲುಗಿನಲ್ಲಿ ಆ ರೀತಿ ಡಬ್ ಮಾಡೋಕೆ ಸಾಧ್ಯವಿಲ್ಲ. ಇದು ಚಿತ್ರಕ್ಕೆ ಸ್ವಲ್ಪ ಹಿನ್ನಡೆ ತಂದಿರಬಹುದು.
ಶುಕ್ರವಾರ (ಆಗಸ್ಟ್ 8) ಚಿತ್ರ ಉತ್ತಮ ಗಳಿಕೆ ಮಾಡಿದೆ. ಈ ಚಿತ್ರ ಶುಕ್ರವಾರ ಒಂದೇ ದಿನ 3 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಅನ್ನೋದು ವಿಶೇಷ. ಇದರಲ್ಲಿ ತೆಲುಗು ಹಾಗೂ ಮಲಯಾಳಂ ಕಲೆಕ್ಷನ್ ಕೂಡ ಸೇರಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಗಳಿಕೆ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

ನೋಡಿರಿ

