IND Vs PAK ಮ್ಯಾಚ್ ನಡೀಬೇಕಾ? – ಏಷ್ಯಾಕಪ್ ಗೂ ಬ್ಯಾನ್ ಬಿಸಿ ತಟ್ಟುತ್ತಾ?
ಶೆಡ್ಯೂಲ್ ಫಿಕ್ಸ್.. ಕ್ಯಾನ್ಸಲ್ ಕಷ್ಟ ಕಷ್ಟ!

ಸೆಪ್ಟೆಂಬರ್ 09 ರಿಂದ ದುಬೈನಲ್ಲಿ ನಡೆಯಲಿರೋ ಏಷ್ಯಾಕಪ್ ಟೂರ್ನಿಯಲ್ಲಿ ಈ ಸಲ ಎರಡು ತಂಡಗಳು ಌಡ್ ಆಗಿದ್ದು ಟೋಟಲ್ 8 ತಂಡಗಳ ನಡುವೆ ಸಮರ ನಡೆಯಲಿದೆ. ಭಾರತ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧದದ ಪಂದ್ಯದ ಮೂಲಕ ತನ್ನ ಜರ್ನಿ ಆರಂಭಿಸಲಿದೆ. ಇದಾದ ಮೇಲೆ ಭಾರತದ ಎರಡನೇ ಪಂದ್ಯ ಬದ್ಧ ವೈರಿ ರಾಷ್ಟ್ರವಾಗಿರುವ ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಆದ್ರೆ ಈ ಮ್ಯಾಚ್ ಆಡ್ಬೇಕಾ ಬೇಡ್ವಾ ಅನ್ನೋದೇ ಬಿಗ್ ಕನ್ಫ್ಯೂಷನ್ ಆಗಿದೆ.
ಇದನ್ನೂ ಓದಿ : T20Iಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್?- ಏಷ್ಯಾಕಪ್ ಜೊತೆ ಟೆಸ್ಟ್‌ಗೂ ರೀಎಂಟ್ರಿ?
ಅಷ್ಟಕ್ಕೂ ಇಲ್ಲಿ ಭಾರತ ಪಾಕಿಸ್ತಾನದ ನಡುವೆ ಪಂದ್ಯದ ಬಗ್ಗೆ ಇಷ್ಟೊಂದು ಅಪಸ್ವರಗಳು ಕೇಳಿ ಬರೋದಕ್ಕೆ ಕಾರಣವೇ ಡಬ್ಲ್ಯೂಸಿಎಲ್ ನಲ್ಲಾದ ಡವಲಪ್ ಮೆಂಟ್ಸ್. ಭಾರತದ ಲೆಜೆಂಡ್ಸ್ ಟೀಂ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಿರಲಿಲ್ಲ. ಪೆಹಲ್ಗಾಮ್ನಲ್ಲಿ ನಡೆದ ದಾಳಿಯನ್ನ ಖಂಡಿಸಿ ನಾವು ಪಾಕಿಸ್ತಾನ ಆಟಗಾರರ ವಿರುದ್ಧ ಕಣಕ್ಕಿಳಿಯೋದಿಲ್ಲ ಎಂದಿದ್ರು. ಗ್ರೂಪ್ ಹಂತದ ಮ್ಯಾಚ್ ಜೊತೆಗೆ ಸೆಮಿಫೈನಲ್ನಲ್ಲೂ ಪಾಕ್ ವಿರುದ್ಧ ಕಣಕ್ಕಿಳಿದಿರಲಿಲ್ಲ. ಇದ್ರಿಂದಾಗಿ ಪಾಕಿಸ್ತಾನ ಡೈರೆಕ್ಟ್ ಫೈನಲ್ ತಲುಪಿತ್ತು. ಬಟ್ ಅಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತು ಮನೆಗೆ ಹೋಗಿತ್ತು. WCLನಲ್ಲಿ ಪಾಕ್ ವಿರುದ್ಧದ ಪಂದ್ಯದಿಂದ ಭಾರತ ಹಿಂದೆ ಸರಿದಿದ್ದದ್ದ ಫ್ಯಾನ್ಸ್ ಕೂಡ ಒಪ್ಪಿಕೊಂಡಿದ್ರು. ಇದೀಗ ಏಷ್ಯಾಕಪ್ನಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುವುದು ಬೇಡ ಅಂತಿದ್ದಾರೆ. ಈಗ ಆಲ್ರೆಡಿ ಶೆಡ್ಯೂಲ್ ಫಿಕ್ಸ್ ಆಗಿದೆ. ಏಷ್ಯಾಕಪ್ನಲ್ಲಿ ಈಬಾರಿ 8 ತಂಡಗಳು ಕಣಕಕ್ಕಿಳಿಯುತ್ತಿದ್ದು ಗುಂಪು ಹಂತದಲ್ಲಿ ಭಾರತ ಮತ್ತು ಪಾಕ್ ತಂಡಗಳು ಮುಖಾಮುಖಿ ಆಗಲಿವೆ. ಆ ಬಳಿಕ ನಾಕೌಟ್ನಲ್ಲೂ ಎದುರು ಬದುರಾಗೋ ಸಾಧ್ಯತೆ ಇದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದತಿಗೆ ಕೂಗು ಜೋರಾಗ್ತಿರೋ ಬೆನ್ನಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ನಿರ್ವಾಹಕ ಶುಭಮ್ ಅಹ್ಮದ್ ಈ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಭಾರತ-ಪಾಕಿಸ್ತಾನ ಪಂದ್ಯವನ್ನು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲಿ ರದ್ದುಪಡಿಸಿದಂತೆ ಏಷ್ಯಾಕಪ್ನಲ್ಲಿ ರದ್ದುಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಏಷ್ಯಾಕಪ್‌ನಂತಹ ಪಂದ್ಯಾವಳಿಯನ್ನು ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಂತಹ ಖಾಸಗಿ ಲೀಗ್‌ನೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಭಾರತ ಆಗಲಿ ಪಾಕಿಸ್ತಾನ ತಂಡವಾಗಲಿ ಏಷ್ಯಾ ಕಪ್‌ನಲ್ಲಿ ಭಾಗವಹಿಸಲು ಮೊದಲೇ ಸರ್ಕಾರದಿಂದ ಅನುಮತಿ ಪಡೆದುಕೊಂಡಿರುತ್ತವೆ. ಇದಾದ ಬಳಿಕವೇ ವೇಳಾಪಟ್ಟಿಯನ್ನು ಘೋಷಿಸಲಾಗುತ್ತದೆ. ಆದ್ರೆ ಫೈನಲ್ ಆಗಿ ಆಡುವುದು ತಂಡಗಳೇ ಆದ್ದರಿಂದ ಮುಂದೆ ಏನಾಗುತ್ತೋ ನೋಡ್ಬೇಕು ಎಂದಿದ್ದಾರೆ.
ಇನ್ನು ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯನ್ನ ಟಿ20 ಮಾದರಿಯಲ್ಲಿ ನಡೆಸೋಕೆ ನಿರ್ಧಾರ ಮಾಡಲಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಯುಎಇ, ಹಾಂಗ್ ಕಾಂಗ್ ಮತ್ತು ಓಮನ್ ತಂಡಗಳು ಭಾಗವಹಿಸಲಿವೆ. ಇನ್ನು ಭಾರತ ಮತ್ತು ಪಾಕಿಸ್ತಾನಕ್ಕೆ ಗ್ರೂಪ್ ಹಂತ, ಸೂಪರ್ ಫೋರ್ ಮತ್ತು ಫೈನಲ್ ತಲುಪಿದರೆ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮೂರು ಬಾರಿ ಮುಖಾಮುಖಿಯಾಗಬಹುದು. ಇನ್ನು ಭಾರತ ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿ 8 ಪ್ರಶಸ್ತಿಗಳನ್ನು ಗೆದ್ದಿದೆ. ತಂಡವು ಮೊದಲು 1984 ರ ಉದ್ಘಾಟನಾ ಆವೃತ್ತಿಯಲ್ಲಿ ಟ್ರೋಫಿಯನ್ನ ಎತ್ತಿ ಹಿಡಿದಿತ್ತು. ಹಾಗೇ ಇತ್ತೀಚೆಗೆ 2023 ರಲ್ಲಿ ಪ್ರಶಸ್ತಿಯನ್ನು ಗೆದ್ದು ಹಾಲಿ ಚಾಂಪಿಯನ್ ಆಗಿದೆ. ಹಾಗೇ ಶ್ರೀಲಂಕಾ ತಂಡವು 6 ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಅತ್ಯಂತ ಶಕ್ತಿಶಾಲಿಯಾಗಿದೆ. ಪಾಕಿಸ್ತಾನ ತಂಡವು 2000 ಮತ್ತು 2012 ರಲ್ಲಿ ಎರಡು ಬಾರಿ ಏಷ್ಯಾಕಪ್ ಗೆದ್ದಿದೆ.

ನೋಡಿರಿ

