ಹಿತಾಗಾಗಿ ದುರ್ಗಾ- ಶರತ್ ಮದ್ವೆ! – ಮಾಯ ಕುತಂತ್ರ.. ಬಲಿ ಯಾರು?
ಶತ್ರುಗಳ ಆಟಕ್ಕೆ ಅಂಬಿಕಾ, ಶಂಭು ಬ್ರೇಕ್!

ಶರತ್ ಹಿಂದೆ ಬಿದ್ದಿರೋ ಮಾಯಗೆ ಸೋಲು ಸೋಲೇ ಗತಿ.. ದುರ್ಗಾ ಶರತ್ ಮನೆಯಲ್ಲಿದ್ರೆ ಆತನನ್ನ ಮದುವೆ ಆಗಲು ಆಗಲ್ಲ.. ಅವಳೇ ಅಡ್ಡಿ ಆಗ್ಬೋದು ಅನ್ನೋ ಕಾರಣಕ್ಕೆ ಆಕೆಯನ್ನ ಮನೆಯಿಂದ ಆಚೆ ಹಾಕೋ ಪ್ರಯತ್ನ ಮಾಡ್ತಾ ಬಂದಿದ್ದಾಳೆ. ಆದ್ರೆ ಆಕೆಯ ಪ್ಲ್ಯಾನ್ ಫುಲ್ ಉಲ್ಟಾ ಆಗ್ತಿದೆ.. ದುರ್ಗಾ ಮದುವೆ ಕೂಡ ಮುರಿದು ಬಿತ್ತು.. ಬಳಿಕ ನಾನು ನಿನ್ನ ನೆರಳಾಗಿರ್ತೀನಿ ಅಂತ ಶರತ್ ದುರ್ಗಾಗೆ ಮಾತು ಕೂಡ ಕೊಟ್ಟಿದ್ದಾನೆ. ಇದೀಗ ದುರ್ಗಾ ಶರತ್‌ಗೆ ದಿನೇ ದಿನೇ ಹತ್ತಿರ ಆಗ್ತಿದ್ದಾಳೆ.. ಹಾಗಾದ್ರೆ ಹಿತಾಗಾಗಿ ಶರತ್ ದುರ್ಗಾಳನ್ನ ಮದುವೆ ಆಗ್ತಾನಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.
ಇದನ್ನೂ ಓದಿ: T20Iಗೆ ಶ್ರೇಯಸ್ ಅಯ್ಯರ್ ಕಂಬ್ಯಾಕ್?- ಏಷ್ಯಾಕಪ್ ಜೊತೆ ಟೆಸ್ಟ್‌ಗೂ ರೀಎಂಟ್ರಿ?
ನಾನಿನ್ನ ಬಿಡಲಾರೆ ಸೀರಿಯಲ್ ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್‌ನಿಂದ ಕೂಡಿದೆ. ಟಿಆರ್‌ಪಿ ರೇಸ್‌ನಲ್ಲೂ ಸೀರಿಯಲ್ ಮುಂದಿದೆ. ಶರತ್‌ನ ಮದುವೆ ಆಗ್ಬೇಕು ಅನ್ನೋದು ಮಾಯ ಆಸೆ.. ಇದಕ್ಕೆ ಅಡ್ಡಿ ಆದವರನ್ನ ಆಕೆ ಯಾವುದೇ ಕಾರಣಕ್ಕೂ ಸುಮ್ನೆ ಬಿಡೋದಿಲ್ಲ.. ಈಗಾಗ್ಲೇ ಮಾಯ ಅಂಬಿಕಾಳನ್ನ ಸಾಯಿಸಿದ್ಲು.. ಅದಾದ್ಮೇಲೆ ಹಿತಾಳಿಗೂ ಸಾಕಷ್ಟು ಚಿತ್ರ ಹಿಂಸೆ ನೀಡಿದ್ಲು.. ಬಳಿಕ ಸಾಯಿಸಲು ಕೂಡ ಹೊರಟಿದ್ಲು.. ಆಗ ದುರ್ಗಾ ದೇವರಂತೆ ಬಂದು ಹಿತಾಳನ್ನ ಕಾಪಾಡಿದ್ಲು. ದುರ್ಗಾ ಇದ್ರೆ ಹಿತಾ ಸೇಫ್ ಆಗಿರ್ತಾಳೆ ಅಂತ ಆಕೆಯನ್ನ ಹಿತಾ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಯ್ತು.. ದುರ್ಗಾ ಶರತ್ ಮನೆಗೆ ಬಂದ್ಮೇಲೆ ಹಿತಾ ಖುಷಿಯಾಗಿದ್ದಾಳೆ.. ಈಗ ಹಿತಾ ಮಾತು ಕೂಡ ಆಡ್ತಿದ್ದಾಳೆ.. ಅಷ್ಟೇ ಅಲ್ಲ.. ಅಪ್ಪನನ್ನ ಕಂಡ್ರೆ ದ್ವೇಷ ಮಾಡ್ತಿದ್ದ ಹಿತಾ ಶರತ್ ಜೊತೆ ಮಾತನಾಡ್ತಿದ್ದಾಳೆ.. ಹಿತಾ ಅಪ್ಪ ಕರೆಯುವಂತೆ ಮಾಡ್ತೀನಿ ಅಂತ ದುರ್ಗಾ ಕೂಡ ಶರತ್ ಗೆ ಮಾತು ಕೊಟ್ಟಿದ್ದಾಳೆ.. ಇದೀಗ ಹಿತಾಗಾಗಿ ದುರ್ಗಾ ಶರತ್ ಮದ್ವೆ ಆಗ್ತಾರಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.
ಹೌದು.. ದುರ್ಗಾ ಮನೆಗೆ ಬಂದ್ಮೇಲೆ ಮಾಯ ಕುಂತಂತ್ರ ನಡಿತಾ ಇಲ್ಲ. ಎಲ್ಲಾ ಪ್ಲ್ಯಾನ್ ಉಲ್ಟಾ ಆಗ್ತಿದೆ..ದುರ್ಗಾ ಇದೇ ಮನೆಯಲ್ಲಿದ್ರೆ ತನಗೆ ತೊಂದ್ರೆ.. ಶರತ್ ಜೊತೆ ಕೂಡ ಕ್ಲೋಸ್ ಆಗ್ತಾಳೆ ಅಂತ ಮಾಯ ದುರ್ಗಾಳನ್ನ ಆಚೆ ಹಾಕಲು ಪ್ರಯತ್ನಪಟ್ಟಿದ್ಲು.. ಆದ್ರೆ ಅದು ಸಾಧ್ಯವಾಗಿಲ್ಲ.. ಬಳಿಕ ದುರ್ಗಾ ಚಿಕ್ಕಮ್ಮನ ಜೊತೆ ಸೇರ್ಕೊಂಡು ಆಕೆಯ ಮದುವೆ ಮಾಡಿಸಲು ಮುಂದಾಗಿದ್ಲು.. ಆಗ ಹಿತಾ ಸಿದ್ಧಾಂತ್ ಬಣ್ಣ ಬಯಲು ಮಾಡಿದ್ಲು.. ಅದಾದ ಬಳಿಕ ದುರ್ಗಾ ಮದುವೆಯನ್ನ ಶರತ್ ನಿಲ್ಲಿಸಿದ್ದಾಳೆ. ಮದುವೆ ನಿಲ್ತಿದ್ದಂತೆ ಆಕೆಯ ಚಿಕ್ಕಮ್ಮ ಬಾಯಿಗೆ ಬಂದಂತೆ ದುರ್ಗಾಳನ್ನ ನಿಂದಿಸಿದ್ಲು.. ಇದ್ರಿಂದ ನೊಂದ ದುರ್ಗಾ ಮನೆಬಿಟ್ಟು ಹೊರಟಿದ್ಲು.. ಆಗ ಶರತ್ ಬಂದು ನೀನು ಅನಿಷ್ಟ ಅಲ್ಲ.. ಅದೃಷ್ಟ.. ನೀನು ಕಾಲಿಟ್ಟಲೆಲ್ಲ ಒಳ್ಳೆಯದ್ದೇ ಆಗಿದೆ.. ನಿನಗೆ ಏನೇ ಕಷ್ಟ ಬಂದ್ರೂ ನಾನು ಜೊತೆಯಾಗಿರ್ತೀನಿ.. ಅಂತಾ ಹೇಳಿ, ಶರತ್ ಆಕೆಯನ್ನ ಮನೆಗೆ ಕರ್ಕೊಂಡು ಬಂದಿದ್ದಾನೆ.. ದುರ್ಗಾ ಮದುವೆ ನಿಲ್ತಿದ್ದಂತೆ ಹಿತಾ ಶರತ್ ಜೊತೆ ಮಾತನಾಡ್ತಿದ್ದಾಳೆ. ಆಕೆ ಹೇಳಿದಂತೆ ಕೇಳ್ತಿದ್ದಾನೆ ಶರತ್.. ಇದೀಗ ತನಗೆ ದಮಯಂತಿ ಕಾಟ ಕೊಟ್ಟಿರೋದನ್ನೂ ಶರತ್ ಜೊತೆ ಹೇಳಿದ್ಲು.. ದಮಯಂತಿಗೆ ಶರತ್ ಸರಿಯಾಗೇ ವಾರ್ನ್ ಮಾಡಿದ್ದಾನೆ.. ಇದ್ರಿಂದಾಗಿ ಮಾಯ ಕೂಡ ಸರಿಯಾಗೇ ಉರ್ಕೊಂಡಿದ್ದಾಳೆ. ಇದೀಗ ಮಾಯ ದುರ್ಗಾಗೆ ತೊಂದ್ರೆ ಕೊಡೋ ಸಾಧ್ಯತೆ ಇದೆ..
ಮತ್ತೊಂದ್ಕಡೆ.. ಮಾಳವಿಕಾ ಏನೋ ಷಡ್ಯಂತರ ಮಾಡ್ತಿದ್ದಾಳೆ. ತನ್ನ ಅಮ್ಮನಿಗೆ ಮುಕ್ತಿ ಕೊಡಿಸ್ಬೇಕು ಅಂತ ಇಬ್ಬರನ್ನ ಬಲಿ ಕೊಡಲು ಮುಂದಾಗಿದ್ದಾಳೆ. ಈಗಾಗಲೇ ಮಂತ್ರವಾದಿ ಬಳಿ ಹೋಗಿ, ಎರಡು ಮಡಿಕೆ ರೆಡಿ ಮಾಡು ಅಂತ ಹೇಳಿದ್ದಾಳೆ.. ಯಾರನ್ನ ಬಲಿ ಕೊಡಲಿದೆ ಅಂತಾ ಮಂತ್ರವಾದಿ ಕೇಳಿದಾಗ ಆ ಗುಟ್ಟನ್ನ ಆಕೆ ಬಿಟ್ಟುಕೊಟ್ಟಿಲ್ಲ.. ಅಮ್ಮನಿಗೆ ಮುಕ್ತಿ ಕೊಡಿಸೋದಾಗಿ ಮಾತ್ರ ಹೇಳಿದ್ದಾಳೆ.. ಹಾಗಾದ್ರೆ ಮಾಳವಿಕಾ ಹಿತಾ, ದುರ್ಗಾಳನ್ನ ಬಲಿ ಕೊಡಲು ಮುಂದಾಗಿದ್ದಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಂದ್ವೇಳೆ ಹಿತಾ, ದುರ್ಗಾಳನ್ನ ಬಲಿ ಕೊಡಲು ಪ್ಲ್ಯಾನ್ ಮಾಡಿದ್ರೂ ಅದು ಸಾಧ್ಯವಾಗೋದಿಲ್ಲ.. ಹಿತಾ ದುರ್ಗಾಗೆ ಕಾವಲಾಗಿ ಶಂಭು ಹಾಗೂ ಅಂಬಿಕಾ ಇರ್ತಾರೆ..
ಇನ್ನು ಶರತ್ ಮಾಯ ಮದುವೆಯ ಇನ್ವಿಟೇಷನ್ ಕಾರ್ಡ್ ಬಂದಿದೆ. ಇದ್ರಲ್ಲಿ ಶರತ್ ಮಾಯ ಹೆಸ್ರಿನ ಬದಲು ಶರತ್ ದುರ್ಗಾ ಅಂತಾ ಪ್ರಿಂಟ್ ಆಗಿದೆ.. ಈ ಬೆನ್ನಲ್ಲೇ ಮಾಳವಿಕಾ ಶರತ್ ಬಳಿ ಆಣೆ ಮಾಡಿಸಿಕೊಂಡಿದ್ದಾಳೆ. ಏನೇ ಆದ್ರೂ ನೀನು ಮಾಯಳನ್ನ ಮದ್ವೆ ಆಗ್ಬೇಕು ಅಂತಾ ಹೇಳಿದ್ದಾಳೆ. ಆದ್ರೆ ಇತ್ತ ಹಿತಾ ನೀನು ಮಾಯಳನ್ನ ಮದ್ವೆ ಆಗಲ್ಲ ಅಂತಾ ಮಾತು ಕೊಡು ಅಂತಾ ಹೇಳಿದ್ದಾಳೆ. ಆದ್ರೆ ಮಾಳವಿಕಾ ಮಾತಿಗೆ ಕಟ್ಟುಬಿದ್ದು, ಶರತ್ ಹಿತಾಗೆ ಮಾತು ಕೊಡೋದಿಕ್ಕೆ ರೆಡಿಯಿಲ್ಲ.. ಇದೀಗ ಮತ್ತೆ ಅಪ್ಪ ಮಗಳು ದೂರ ಆಗಿದ್ದಾರೆ.. ಆದ್ರೀಗ ಶರತ್ ಹಿತಾಗಾಗಿ ದುರ್ಗಾಳನ್ನ ಮದುವೆ ಆಗೋದು ಫಿಕ್ಸ್.. ಯಾಕಂದ್ರೆ ದುರ್ಗಾ ಶರತ್ ನ ಒಂದು ಮಾಡ್ಬೇಕು ಅಂತಾ ಅಂಬಿಕಾ ಕೂಡ ಅಂದ್ಕೊಂಡಿದ್ದಾಳೆ. ಮುಂದೆ ಹಿತಾ ಒಳಿತಿಗಾಗಿ ಶರತ್‌ನ ದುರ್ಗಾ ಮದುವೆ ಆಗೋದು ಫಿಕ್ಸ್.

ನೋಡಿರಿ

