ಏಷ್ಯಾಕಪ್ ನಿಂದ ರಾಹುಲ್ ಔಟ್ – ODI, Test ಓಕೆ.. T-20Iಗೆ ಯಾಕಿಲ್ಲ?
KL ಚುಟುಕು ಕ್ರಿಕೆಟ್ ಕರಿಯರ್ ಅಂತ್ಯ!

ಸೆಪ್ಟೆಂಬರ್ 9ರಿಂದ ಏಷ್ಯಾಕಪ್ 2025 ಟೂರ್ನಿ ಆರಂಭವಾಗಲಿದೆ. ಒಟ್ಟು 8 ತಂಡಗಳು ಅಖಾಡಕ್ಕಿಳಿಯಲಿವೆ. ಇದ್ರಲ್ಲಿ ಪ್ರತೀ ನಾಲ್ಕು ತಂಡಗಳನ್ನ ಸೇರಿಸಿ ಎರಡು ಗ್ರೂಪ್ ಮಾಡಲಾಗಿದೆ. ಟಾಪ್ ಟುನಲ್ಲಿ ಬಂದವ್ರು ನೆಕ್ಸ್ಟ್ ಲೆವೆಲ್ಗೆ ಹೋಗ್ತಾರೆ. ಅಲ್ಲೂ ಕೂಡ ಟಾಪ್ 2ನಲ್ಲಿ ಇದ್ದವ್ರೇ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗ್ತಾರೆ. ಸೋ ಇದಿಷ್ಟು ಆಟದ ಫಾರ್ಮೇಟ್ ಆದ್ರೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲಾ ಮಣೆ ಹಾಕುತ್ತೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದನ್ನೂ ಓದಿ : KL ಮೇಲೆ ಬಿತ್ತು CSK ಕಣ್ಣು? – ಕ್ಯಾಪ್ಟನ್, ಬ್ಯಾಟರ್, ಕೀಪರ್ ಟಾಸ್ಕ್!
ಏಷ್ಯಾಕಪ್ ಟೂರ್ನಿಗೆ ಸೆಲೆಕ್ಟ್ ಆಗಲ್ಲ ಕೆಎಲ್ ರಾಹುಲ್!
ಟಿ20ಐ ಮಾದರಿಯಲ್ಲಿ ನಡೆಯಲಿರೋ ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದಲ್ಲಿ ಯಂಗ್ಸ್ಟರ್ಸ್ಗೆ ಮಣೆ ಹಾಕೋದು ಪಕ್ಕಾ. ಹೀಗಾಗಿ ಕೆಎಲ್ ರಾಹುಲ್ಗೆ ಅವಕಾಶ ಸಿಗೋದು ಕಷ್ಟಸಾಧ್ಯ. ಇನ್ನು ವಿಕೆಟ್ ಕೀಪಿಂಗ್ ಕೋಟಾದಲ್ಲಿ ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯಾಗಿದ್ದಾರೆ. ರಿಷಭ್ ಪಂತ್ ಇಂಜುರಿ ಆಗಿರೋದ್ರಿಂದ ಧ್ರುವ್ ಜುರೇಲ್ ಸೆಕೆಂಡ್ ಆಪ್ಶನ್ ಆಗಬಹುದು. ಇನ್ನು ಇಶಾನ್ ಕಿಶನ್ ಕೂಡ ಏಷ್ಯಾಕಪ್ ಮೂಲಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಬಹುದು ಅನ್ನೋ ಟಾಕ್ ಇದೆ. ಇದೆಲ್ಲದ್ರ ನಡುವೆ ಆರ್ಸಿಬಿ ಸ್ಟಾರ್ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡ ರೇಸ್ನಲ್ಲಿದ್ದಾರೆ. ಫೈನಲ್ ಆಗಿ ಸಂಜು ಅಂತೂ ಫೈನಲ್ ಆಗ್ತಾರೆ ಇನ್ನೊಬ್ರು ಯಾರು ಅನ್ನೋದು ಚರ್ಚೆಯಾಗ್ತಿದೆ. ಬಟ್ ರಾಹುಲ್ ಮಾತ್ರ ಟಿ-20ಐ ಟೀಮ್ನಲ್ಲಿ ಇನ್ಮುಂದೆ ಸ್ಥಾನ ಪಡೆಯೋದು ಡೌಟ್.
ಚುಟುಕು ಸಮರದಲ್ಲೂ ಸುಲ್ತಾನ!
ರಾಹುಲ್ ಸ್ಟಾರ್ ಬ್ಯಾಟರ್, ಯಾವ ಸ್ಲಾಟ್ ನಲ್ಲೂ ಬ್ಯಾಟಿಂಗ್
ಟೆಸ್ಟ್, ಏಕದಿನ, ಐಪಿಎಲ್ ಎಲ್ಲಾ ಮಾದರಿಯಲ್ಲೂ ಅದ್ಬುತ ಆಟ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ 2ನೇ ಅತಿ ಹೆಚ್ಚು ರನ್
2022ರ ಬಳಿಕ ಟಿ20 ಮಾದರಿಯಿಂದ ರಾಹುಲ್ ಅವ್ರನ್ನ ಹೊರಗಿಡಲಾಗಿದೆ
2024ರಲ್ಲಿ ನಡೆದ ಟಿ20 ವಿಶ್ವಕಪ್ ಗೆ ರಾಹುಲ್ ಅವರನ್ನು ಆಯ್ಕೆ ಮಾಡಿರಲಿಲ್ಲ
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲೂ ಚಾನ್ಸ್ ನೀಡಿರಲಿಲ್ಲ
ಏಷ್ಯಾಕಪ್ ನಲ್ಲೂ ಕೆಎಲ್ ರಾಹುಲ್ ಕಾಣಿಸಿಕೊಳ್ಳೋದು ತೀರಾ ಕಷ್ಟ
ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ
72 ಟಿ20 ಪಂದ್ಯ, 68 ಇನಿಂಗ್ಸ್ ಆಡಿರುವ ಅವರು 2265 ರನ್ ಕಲೆ
2 ಶತಕ ಹಾಗೂ 22 ಅರ್ಧಶತಕ, ಅತ್ಯಧಿಕ ರನ್ ಗಳಿಸಿದ 4ನೇ ಆಟಗಾರ
ಇಲ್ಲಿ ರಾಹುಲ್ರನ್ನ ಟಿ-20ಐನಿಂದ ಹೊರಗಿಡೋಕೆ ಕೆಲವರು ಕೊಡುವಂತ ವಾದ ಅವ್ರ ಸ್ಟ್ರೈಕ್ ರೇಟ್ ಕಮ್ಮಿ ಇದೆ ಅನ್ನೋದು. ಬಟ್ ನಿಜ ಹೇಳ್ಬೇಕು ಅಂದ್ರೆ ಭಾರತದ ಪರ ಅತೀ ವೇಗವಾಗಿ ಟಿ-20 ಫಾರ್ಮೆಟ್ನಲ್ಲಿ 8 ಸಾವಿರ ರನ್ ಕಂಪ್ಲೀಟ್ ಮಾಡಿರುವಂತ ಆಟಗಾರ ಕೆಎಲ್ ರಾಹುಲ್. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8,000 ರನ್‌ಗಳನ್ನು ಪೂರ್ಣಗೊಳಿಸಿದ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ರಾಹುಲ್ ಕೇವಲ 224 ಇನ್ನಿಂಗ್ಸ್‌ಗಳಲ್ಲಿ 8,000 ರನ್‌ಗಳ ಮೈಲುಗಲ್ಲನ್ನ ದಾಟಿದ್ದಾರೆ. ರನ್ ಮಷಿನ್ ಅಂತಾನೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಟೋಟಲ್ಲಾಗಿ 243 ಇನ್ನಿಂಗ್ಸ್ ಗಳ ಬಳಿಕ ಈ ರೆಕಾರ್ಡ್ ಮಾಡಿದ್ರು. ಹೀಗೆ ನೋಡಿದ್ರೆ ವಿರಾಟ್ ಕೊಹ್ಲಿಗಿಂತ 19 ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಹಾಗೇ ಒಟ್ಟಾರೆಯಾಗಿ, ರಾಹುಲ್ ಟಿ20 ಕ್ರಿಕೆಟ್‌ನಲ್ಲಿ 8,000 ರನ್‌ಗಳನ್ನು ತಲುಪಿದ ವಿಶ್ವದ ಮೂರನೇ ಅತಿ ವೇಗದ ಆಟಗಾರರಾಗಿದ್ದಾರೆ. ವಿಂಡೀಸ್ ದಂತಕಥೆ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ರೆ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಸೆಕೆಂಡ್ ಪ್ಲೇಸ್ನಲ್ಲಿದ್ದಾರೆ.

ನೋಡಿರಿ

