ಏಷ್ಯಾಕಪ್ ಗೆ ಮೂವರು RCB ಸ್ಟಾರ್ಸ್? – ಜಿತೇಶ್, ಕೃನಾಲ್, ರಜತ್.. ಯಾರಿಗೆ ಲಕ್?
ಮಿಡಲ್ ಆರ್ಡರ್ ಲೆಕ್ಕಾಚಾರ ಹೇಗಿದೆ?

ಏಷ್ಯಾಕಪ್ ಗೆ ಮೂವರು RCB ಸ್ಟಾರ್ಸ್? – ಜಿತೇಶ್, ಕೃನಾಲ್, ರಜತ್.. ಯಾರಿಗೆ ಲಕ್?ಮಿಡಲ್ ಆರ್ಡರ್ ಲೆಕ್ಕಾಚಾರ ಹೇಗಿದೆ?

ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನ ಟಿ-20 ಮಾದರಿಯಲ್ಲಿ ಆಯೋಜನೆ ಮಾಡೋಕೆ ನಿರ್ಧಾರ ಮಾಡ್ಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಭಾರತ ತಂಡ ಕೊನೇ ಬಾರಿ ಟಿ-20 ಪಂದ್ಯಗಳನ್ನ ಆಡಿ ಬರೋಬ್ಬರಿ ಆರು ತಿಂಗಳೇ ಕಳೆದಿದೆ. 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20ಐ ಸರಣಿ ಆಡಿದ್ದೇ ಲಾಸ್ಟ್. ಆ ಬಳಿಕ ಇಂಗ್ಲೆಂಡ್ ವಿರುದ್ಧ ಏಕದಿನ, ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಹಾಗೇ ಇತ್ತೀಚೆಗಷ್ಟೇ ಮುಗಿದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿತ್ತು. ಈಗ ಆಫ್ಟರ್ ಎ ಲಾಂಗ್ ಬ್ರೇಕ್ ಬಳಿಕ ಮತ್ತೆ ಚುಟುಕು ಸಮರದತ್ತ ಮುಖ ಮಾಡ್ತಿದೆ. ಈ ಟೂರ್ನಿಗೆ ಆಟಗಾರರನ್ನ ಸೆಲೆಕ್ಷನ್ ಈಗ ಐಪಿಎಲ್​ನೂ ಕೂಡ ಮಾನದಂಡವಾಗಿ ಬಳಸೋ ಸಾಧ್ಯತೆ ಇದೆ. ಹೀಗೆ ಮಾಡಿದ್ರೆ ಆರ್​ಸಿಬಿಯ ಮೂವರು ಪ್ಲೇಯರ್ಸ್ ಹೆಸರು ಕೂಡ ರೇಸ್​ಗೆ ಬಂದಿದೆ.

ಇದನ್ನೂ ಓದಿ : ಏಷ್ಯಾಕಪ್ ಗೆ IND ಫೈಟರ್ಸ್ ಫೈನಲ್? – ಸೂರ್ಯ ಕ್ಯಾಪ್ಟನ್.. ಹೇಗಿದೆ ಟೀಂ?

ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ಹೆಸರು ಮುಂಚೂಣಿ!

2025ರ ಐಪಿಎಲ್​ಗೂ ಮುನ್ನ ಆರ್​ಸಿಬಿ ತಂಡ ಜಿತೇಶ್ ಶರ್ಮಾಗೆ ಬರೋಬ್ಬರಿ 11 ಕೋಟಿ ನೀಡಿ ಖರೀದಿ ಮಾಡಿತ್ತು. ಆಗೆಲ್ಲಾ ಜಿತೇಶ್​ಗೆ ಇಷ್ಟೊಂದು ಹಣ ಕೊಡ್ಬೇಕಿತ್ತಾ ಅನ್ನೋ ಬಗ್ಗೆ ಚರ್ಚೆಯಾಗಿತ್ತು. ಬಟ್ ಅಷ್ಟು ಹಣ ಇನ್ವೆಸ್ಟ್ ಮಾಡಿದ್ದು ಯಾಕೆ ಅನ್ನೋದು ಅವ್ರ ಪರ್ಫಾಮೆನ್ಸ್​ನಿಂದ ಗೊತ್ತಾಗಿತ್ತು. ವಿಕೆಟ್ ಕೀಪರ್ ಬ್ಯಾಟರ್ ಆಗಿರೋ ಜಿತೇಶ್ ಮಿಡಲ್ ಆರ್ಡರ್​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಹಾಗೇ ಟಿ20ಐಗೆ ಸೂಟೆಬಲ್ ಪ್ಲೇಯರ್. 18ನೇ ಸೀಸನ್ ಐಪಿಎಲ್​ನಲ್ಲಿ ಆರ್‌ಸಿಬಿ ಪರ ನಿರ್ಣಾಯಕ ಫಿನಿಶಿಂಗ್ ರೋಲ್ ಪ್ಲೇ ಮಾಡಿದ್ರು. 11 ಇನ್ನಿಂಗ್ಸ್‌ಗಳಲ್ಲಿ 37.29 ಸರಾಸರಿ ಮತ್ತು 176.3 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 261 ರನ್ ಗಳಿಸಿದರು. ಹೀಗಾಗಿ ಸಂಜು ಸ್ಯಾಮ್ಸನ್ ಹೊರತುಪಡಿಸಿದ್ರೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಜಿತೇಶ್​ಗೆ ಅವಕಾಶ ಕೊಡ್ಬೋದು. ಸ್ಯಾಮ್ಸನ್ ಗಾಯಗೊಂಡರೆ ಅಥವಾ ಫಾರ್ಮ್‌ ಕಳ್ಕೊಂಡ್ರೆ ಜಿತೇಶ್​ರನ್ನ ಕಣಕ್ಕಿಳಿಸಬಹುದು. ಇನ್ನು ಜಿತೇಶ್ ಇದುವರೆಗೆ ಭಾರತದ ಪರ ಜಿತೇಶ್ 9 ಪಂದ್ಯಗಳನ್ನ ಆಡಿದ್ದಾರೆ.

ಆರ್ ಸಿಬಿ ಶೈನಿಂಗ್ ಸ್ಟಾರ್ ಕೃನಾಲ್ ಪಾಂಡ್ಯಗೆ ಆಫರ್?

ಆಲ್ ರೌಂಡರ್ ಆಗಿ ಆರ್ ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದ ಕೃನಾಲ್ ಪಾಂಡ್ಯ ಹೆಸರು ಕೂಡ ಚರ್ಚೆಯಲ್ಲಿದೆ. ಕೃನಾಲ್ 2025 ರ ಋತುವಿನಲ್ಲಿ, ವಿಶೇಷವಾಗಿ ಬೌಲಿಂಗ್‌ನಲ್ಲಿ ಸಾಲಿಡ್ ಪ್ರದರ್ಶನ ನೀಡಿದರು. ಎಡಗೈ ಸ್ಪಿನ್ನರ್ 8.2 ರ ಎಕಾನಮಿ ದರದಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 47 ಎಸೆತಗಳಲ್ಲಿ 73* ರನ್‌ಗಳನ್ನು ಗಳಿಸಿ ಪಂದ್ಯವನ್ನ ಗೆಲ್ಲೋಕೆ ಮಹತ್ವದ ಪಾತ್ರ ವಹಿಸಿದ್ರು. ಸೋ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸ್ಟ್ರೆಂಥ್ ಆಗ್ತಾರೆ. ಕೃನಾಲ್ ಅವರ ರಕ್ಷಣಾತ್ಮಕ ಬೌಲಿಂಗ್ ಕೌಶಲ್ಯ, ಅವರ ಅನುಭವ ಮತ್ತು ಆಲ್‌ರೌಂಡ್ ಸಾಮರ್ಥ್ಯಗಳನ್ನ ನೋಡಿದ್ರೆ ಪರಿಗಣನೆಗೆ ತೆಗೆದುಕೊಳ್ಳಬಹುದು.

ಭಾರತ ತಂಡದ ಟಿ-20ಐಗೆ ಪದಾರ್ಪಣೆ ಮಾಡ್ತಾರಾ ರಜತ್?

ಇನ್ನು ಕ್ಯಾಪ್ಟನ್ ಆಗಿ ಫಸ್ಟ್ ಸೀಸನ್​ನಲ್ಲೇ ಆರ್​ಸಿಬಿಯನ್ನ ಚಾಂಪಿಯನ್ ಮಾಡಿದ ರಜತ್ ಪಾಟಿದಾರ್ ಹೆಸರೂ ಮುನ್ನಲೆಯಲ್ಲಿದೆ. ಈಗಾಗ್ಲೇ ಪಾಟಿದಾರ್ ಭಾರತದ ಪರ ಮೂರು ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದರೂ, ಅವರು ಇನ್ನೂ ಟಿ20ಐ ಪಂದ್ಯಗಳಿಗೆ ಪಾದಾರ್ಪಣೆ ಮಾಡಿಲ್ಲ. ಐಪಿಎಲ್ ನಲ್ಲಿ ಈಗಾಗ್ಲೇ ತಮ್ಮ ಕೆಪಾಸಿಟಿ ತೋರಿಸಿದ್ದಾರೆ. ಐಪಿಎಲ್ 2022 ರಿಂದ, ಸ್ಪಿನ್ ವಿರುದ್ಧ ಕನಿಷ್ಠ 500 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ, ಪಾಟಿದಾರ್ 55.89 ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ, 174.1 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.. ಆ ಗುಂಪಿನಲ್ಲಿ ನಾಲ್ಕನೇ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ. ಸ್ಪಿನ್‌ನಲ್ಲಿ ಪ್ರಾಬಲ್ಯ ಸಾಧಿಸುವ ಅವರ ಸಾಮರ್ಥ್ಯವು ಅವರನ್ನು ಭಾರತದ ಮಧ್ಯಮ ಕ್ರಮಾಂಕಕ್ಕೆ ಸ್ವಾಭಾವಿಕವಾಗಿ ಹೊಂದಿಕೊಳ್ಳುವಂತೆ ಮಾಡುತ್ತೆ. ಹೀಗಾಗಿ ರಜತ್ ಹೆಸರೂ ಚರ್ಚೆಯಲ್ಲಿದೆ.

Shantha Kumari