ಶುರುವಾಯ್ತು ಮತ್ತೊಂದು ವಿಚಿತ್ರ ಟ್ರೆಂಡ್!‌ –  ಅತ್ತೆಯಾಗುವವರ ಬಾಯಿಗೆ ಗಮ್‌ಟೇಪ್ ಅಂಟಿಸಿ ‘Sass To Be’ ಆಚರಿಸಿದ ಮಹಿಳೆಯರು!

ಶುರುವಾಯ್ತು ಮತ್ತೊಂದು ವಿಚಿತ್ರ ಟ್ರೆಂಡ್!‌ –  ಅತ್ತೆಯಾಗುವವರ ಬಾಯಿಗೆ ಗಮ್‌ಟೇಪ್ ಅಂಟಿಸಿ ‘Sass To Be’ ಆಚರಿಸಿದ ಮಹಿಳೆಯರು!

ಇದು ಸೋಶಿಯಲ್‌ ಮೀಡಿಯಾ ಜಮಾನ.. ಏನೇ ಮಾಡಿದ್ರೂ ಡಿಫ್ರೆಂಟ್‌ ಆಗೇ ಮಾಡ್ಬೇಕು.. ಮದುವೆಗೂ ಮುನ್ನ ಬ್ರೈಡ್‌ ಟು ಬಿ,  ಬ್ಯಾಚುಲರ್ಸ್ ಪಾರ್ಟಿ ಮಾಡಲಾಗ್ತಿತ್ತು.. ಅದಾದ್ಮೇಲೆ ಡಿವೋರ್ಸ್‌ ಕೊಟ್ಟ ಬಳಿಕ ಡಿವೋರ್ಸ್‌ ಪಾರ್ಟಿ ಕೂಡ ಮಾಡಲಾಗ್ತಿದೆ. ಇದೀಗ ಮತ್ತೊಂದು ಹೊಸ ಸೆಲೆಬ್ರೇಷನ್‌ ಮುನ್ನಲೆಗೆ ಬಂದಿದೆ. ಇದೀಗ ಸಾಸ್‌ ಟು ಬಿ ಅನ್ನೋ ಹೊಸ ಸೆಲೆಬ್ರೇಷನ್‌ನ ಹುಟ್ಟು ಹಾಕಿದ್ದು, ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಹಣ ಕೊಟ್ಟು ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್!? – ಕೂರ್ಗ್‌ ಬ್ಯೂಟಿ ಆರೋಪ ಮಾಡಿದ್ದು ಯಾರ ಮೇಲೆ?

ಅಂದ್ಹಾಗೆ ಸಾಸ್‌ ಟು ಬಿ ಸೆಲೆಬ್ರೇಷನ್‌ ಮುಂದೆ ಅತ್ತೆ ಆಗುವವರಿಗಾಗಿ ಮಾಡಲಾಗಿದೆ. ಮಗನ ಮದುವೆಗೂ ಮುನ್ನ ಮಹಿಳೆಯರು ಸೇರಿಕೊಂಡು ಸಾಸ್‌ ಟು ಬಿ ಸೆಲೆಬ್ರೇಷನ್‌ ಮಾಡಿದ್ದಾರೆ. ಇದ್ರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  ಅದರಲ್ಲಿ ಮುಂದೆ ಸೊಸೆ ಬಂದಾಗ ಅತ್ತೆಯಾಗುವವಳು ಹೇಗೆ ಇರಬೇಕು. ಎಂಬುದನ್ನು ಸೂಕ್ಷ್ಮವಾಗಿ ಹೊಸದಾಗಿ ಅತ್ತೆಯಾಗುವಳಿಗೆ ಹೇಳಲಾಗಿದೆ. ಬಳಿಕ ಅತ್ತೆಯಾಗುವವಳ ಬಾಯಿಗೆ ಪ್ಲಾಸ್ಟರ್‌ ಹಾಕಲಾಗಿದೆ. ಇದ್ರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ವೈರಲ್‌ ಆದ ವೀಡಿಯೋದಲ್ಲಿ, ಹೊಸದಾಗಿ ಅತ್ತೆಯಾಗಲಿರುವ ಮಹಿಳೆಯನ್ನ ಕುರ್ಚಿಯೊಂದರ ಮೇಲೆ ಕೂರಿಸಲಾಗಿದೆ. ನಂತರ ಒಬ್ಬೊಬ್ಬರೇ ಹೆಣ್ಣು ಮಕ್ಕಳು ಅವರ ಬಳಿ ಬಂದು ಅವರಿಗೆ ಒಂದೊಂದು ಉಡುಗೊರೆ ಕೊಟ್ಟು ಹೋಗುತ್ತಾರೆ. ಎಲ್ಲರೂ ಹಸಿರು ಬಟ್ಟೆಯನ್ನೇ ಧರಿಸಿದ್ದು, ಮೊದಲಿಗೆ ಬಂದವರು ‘ಸಾಸ್ ಟು ಬಿ’ ಎಂಬ ಬ್ಯಾಂಡನ್ನು ಅವ್ರಿಗೆ ಹಾಕುತ್ತಾರೆ. ನಂತರ ಬಂದ ಇಬ್ಬರು ಅವರ ತಲೆಗೆ ಹಳದಿ ಹೂಗಳ ಪುಟ್ಟ ಕಿರೀಟವನ್ನು ಇಡುತ್ತಾರೆ. ನಂತರ ಬಂದ ಯುವತಿ ಅವರ ಕಣ್ಣಿಗೆ ಕನ್ನಡಕ ಹಾಕುತ್ತಾರೆ. ನಂತರ ಒಬ್ಬರು ಮಹಿಳೆ ಊರುಗೋಲನ್ನು ಹಿಡಿದುಕೊಂಡು ಬಂದು ಅವರ ಬಲಗೈಗೆ ಅದನ್ನು ಕೊಡ್ತಾರೆ. ಬಳಿಕ ಭಗವದ್ಗೀತೆ ಪುಸ್ತಕವೊಂದನ್ನು ಅವರ ಕೈಗಿಡುತ್ತಾರೆ. ನಂತರ ಬಂದವರು ಕೈಯಲ್ಲಿ ಭಜನೆ ಮಾಡುವಾಗ ತಟ್ಟುವ ತಾಳವೊಂದನ್ನು ಹಿಡಿದುಕೊಂಡು ಬಂದು ಅವರ ಕೈಗಿಡುತ್ತಾರೆ. ನಂತರ ಕೊನೆಗೆ ಬಂದ ಹುಡುಗಿ ಅವರ ಬಾಯಿಗೆ ಗಮ್ ಟೇಪ್‌ ಅಂಟಿಸಿ ಬಿಡುತ್ತಾಳೆ. ನಂತರ ಎಲ್ಲರೂ ಜೊತೆಯಾಗಿ ಸೇರಿ ಹಾಡಿಗೆ ಸಂಭ್ರಮಿಸಿ ಫೋಟೋ ವೀಡಿಯೋ ತೆಗೆಸಿಕೊಳ್ಳುತ್ತಾರೆ. ಸದ್ಯ ಈ ವಿಡಿಯೋ  ಈಗ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

pratikkiaaradhana and prerna_mukasdar ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಸಾಸುವಿನಿಂದ ಆರಂಭವಾಗಿ ಶ್‌ಶ್‌ ಎನ್ನುವಲ್ಲಿಗೆ ಮುಕ್ತಾಯವಾಯ್ತು. ತಲೆಗೆ ಕಿರೀಟವಿಡುವುದರಿಂದ ಹಿಡಿದು ಬಾಯಿಗೆ ಗಮ್‌ಟೇಪ್ ಹಾಕಿ ಕೋಪಗೊಳಿಸುವವರೆಗೆ ನಮ್ಮದೇ ಆದ ಸಸುಮಾ(ಅತ್ತೆ) ಆಗುತ್ತಿರುವವರನ್ನು ಪ್ರಸ್ತುತಪಡಿಸುತ್ತಿದ್ದೇವೆ ಈಗ ಸಂಪೂರ್ಣವಾಗಿ ವಾಕಿಂಗ್ ಸ್ಟಿಕ್, ಭಜನ್ ವೈಬ್‌ಗಳು ಮತ್ತು ಅಪೇಕ್ಷಿಸದ ಸಲಹೆಗಳಿಂದ ಮುಕ್ತವಾದ ಮೌನದೊಂದಿಗೆ ಸಜ್ಜುಗೊಂಡಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

Shwetha M