ಹಣ ಕೊಟ್ಟು ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್!? – ಕೂರ್ಗ್‌ ಬ್ಯೂಟಿ ಆರೋಪ ಮಾಡಿದ್ದು ಯಾರ ಮೇಲೆ?

ಹಣ ಕೊಟ್ಟು ರಶ್ಮಿಕಾ ಮಂದಣ್ಣ ವಿರುದ್ಧ ಟ್ರೋಲ್!? – ಕೂರ್ಗ್‌ ಬ್ಯೂಟಿ ಆರೋಪ ಮಾಡಿದ್ದು ಯಾರ ಮೇಲೆ?

ಕಾಂಟ್ರವರ್ಸಿ ಕ್ವೀನ್‌ ನಟಿ ರಶ್ಮಿಕಾ ಮಂದಣ್ಣ ಈಗ ಮುಟ್ಟಿದ್ದೆಲ್ಲಾ ಚಿನ್ನ. ಒಂದಾದಮೇಲೊಂದು ಸಿನಿಮಾದ ಮೂಲಕ ನಟಿ ಮುಂಚುತ್ತಿದ್ದಾರೆ. ಆಗಾಗ ಕಾಂಟ್ರವರ್ಸಿ ಹೇಳಿಕೆ ನೀಡಿ ಟ್ರೋಲ್‌ಗೂ ಆಹಾರ ಆಗೋದು ಕಾಮನ್‌ ಆಗಿದೆ. ಇದೀಗ ನಟಿ ರಶ್ಮಿಕಾ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಹಣ ಕೊಟ್ಟು ತನ್ನ ಬಗ್ಗೆ ಟ್ರೋಲ್‌  ಮಾಡಿಸಲಾಗಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದೇಗುಲ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ದೇಣಿಗೆ ಕೊಟ್ಟ ಭಿಕ್ಷುಕಿ!

ನಟಿ ರಶ್ಮಿಕಾ ಮಂದಣ್ಣಗೂ ಟ್ರೋಲ್‌ಗಳಿಗೂ ಅವಿಭಾವ ಸಂಬಂಧ. ರಶ್ಮಿಕಾ ಅವರ ಭಾಷೆ, ಅವರು ನಡೆದುಕೊಳ್ಳುವ ರೀತಿ ಹೀಗೆ ಪ್ರತಿ ವಿಚಾರವನ್ನೂ ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತದೆ. ಆದರೆ, ಇದಕ್ಕೆಲ್ಲ ರಶ್ಮಿಕಾ ಮಂದಣ್ಣ ಒಂಚೂರು ತಲೆಕೆಡಿಸಿಕೊಳ್ಳೋದಿಲ್ಲ. ಆದ್ರೀಗ ನಟಿ ರಶ್ಮಿಕಾ ಮಂದಣ್ಣ  ಒಂದು ಗಂಭೀರ ಆರೋಪ ಮಾಡಿದ್ದಾರೆ. ಹಣ ಕೊಟ್ಟು ತಮ್ಮ ಬಗ್ಗೆ ಟ್ರೋಲ್ ಮಾಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಣ ನೀಡಿ ನನ್ನ ಮೇಲೆ ಟ್ರೋಲ್ ಮಾಡಲಾಗಿತ್ತು, ನಕಾರಾತ್ಮಕ ವಿಚಾರಗಳನ್ನು ಹರಡಲಾಗಿತ್ತು. ಅದನ್ನು ನಾನು ಎದುರಿಸಿದ್ದೇನೆ. ದಯೆ ತೋರಿಸಲು ಸಾಧ್ಯವಾಗದಿದ್ದರೆ, ಮೌನವಾಗಿರಿ. ಈ ವಿಶಾಲ ಜಗತ್ತಿನಲ್ಲಿ ನಾವೆಲ್ಲರೂ ಬೆಳೆಯಲು ಸಾಕಷ್ಟು ಸ್ಥಳವಂತೂ ಇದೆ. ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ ಅದನ್ನು ಏಕೆ ತಡೆಯಬೇಕು? ಜನರು ಈ ರೀತಿ ಏಕೆ ಕ್ರೂರವಾಗಿ ವರ್ತಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಇದು ತುಂಬಾ ದುಃಖಕರ ವಿಷಯ’ ಎಂದು ರಶ್ಮಿಕಾ ಬೇಸರ ಮಾಡಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ತಮ್ಮ ಮನದಾಳದ ನೋವುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವುಗಳನ್ನು ತಾವು ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ನಾನು ಭಾವನಾತ್ಮಕ ಜೀವಿ. ನಾನು ಹೇಗಿದ್ದೇನೋ ಹಾಗೆಯೇ ಇರಲು ಬಯಸುತ್ತೇನೆ. ನಾನು ಇದನ್ನು ಹೊರಗೆ ತೋರಿಸಿಕೊಳ್ಳಲು ಇಷ್ಟಪಡಲ್ಲ. ಇತ್ತೀಚಿನ ದಿನಗಳಲ್ಲಿ ದಯೆ ತೋರುವುದು ಫೇಕ್ ಎಂದು ನೋಡುತ್ತಾರೆ ಅಥವಾ ದೌರ್ಬಲ್ಯ ಎಂದು ಪರಿಗಣಿಸುತ್ತಾರೆ. ಕ್ಯಾಮೆರಾಗಾಗಿ ರಶ್ಮಿಕಾ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಎಂಬುದು ರಶ್ಮಿಕಾ ಮಾತು.

ರಶ್ಮಿಕಾ ಅವರು ವೃತ್ತಿ ಜೀವನದ ಉದ್ದಕ್ಕೂ ಈ ರೀತಿಯ ಅಡೆ-ತಡೆಗಳನ್ನು ಎದುರಿಸಿದ್ದಾರೆ. ಈಗ ಅವರು ಬೇಡಿಕೆಯ ನಟಿಯಾಗಿದ್ದಾರೆ. ಅವರ ಬಳಿ ಸಾಕಷ್ಟು ಸಿನಿಮಾಗಳಿವೆ. ಅವರ ನಟನೆಯ ಹಲವು ಚಿತ್ರಗಳು ಹಿಟ್ ಆಗಿವೆ. ‘ಕುಬೇರ’ ಸಿನಿಮಾದಲ್ಲಿ ಅವರು ನಟಿಸಿದ್ದು, ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ‘ಗರ್ಲ್​​ಫ್ರೆಂಡ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇನ್ನೂ ಕೆಲವು ಸಿನಿಮಾಗಳು ಅವರ ಬಳಿ ಇವೆ.

Shwetha M