ಟ್ರಂಪ್ ಸುಂಕ ಬೆದರಿಕೆ – ಸದ್ಯದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಅನ್ನೋ ಬಗ್ಗೆ ವರದಿಯಾಗಿದೆ. ಅವರ ಭೇಟಿಗೆ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೂ ಪುಟಿನ್ ಈ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ. ಮಾಸ್ಕೋಗೆ ಭೇಟಿ ನೀಡಿರುವ ಅಜಿತ್ ದೋವಲ್ ಈ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಇನ್ನೂ ಅಂತಿಮ ದಿನಾಂಕಗಳನ್ನು ನಿಗದಿಪಡಿಸಿಲ್ಲ. ಈ ವರ್ಷದಲ್ಲಿ ಅವರು ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ ಎಂದು ಅವರು ಹೇಳಿದರು.
ರಷ್ಯಾ ಮತ್ತು ಭಾರತದ ನಡುವೆ ದೀರ್ಘ ಸಂಬಂಧವಿದೆ. ನಾವು ಈ ಸಂಬಂಧವನ್ನು ಗೌರವಿಸುತ್ತೇವೆ. ಉನ್ನತ ಮಟ್ಟದ ನಾಯಕರ ಈ ಭೇಟಿಯು ಈ ಹಿಂದೆ ಗಣನೀಯ ಕೊಡುಗೆಗಳನ್ನು ನೀಡಿವೆ. ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ಸಂತೋಷಪಡುತ್ತೇವೆ ಎಂದು ಅಜಿತ್ ದೋವಲ್ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಶೇ. 25 ಸುಂಕವನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಒಂದು ದಿನದ ಬಳಿಕ ರಷ್ಯಾದಿಂದ ಈ ಪ್ರಕಟಣೆ ಬಂದಿದೆ.
ಭಾರತವು ಪ್ರಸ್ತುತ ರಷ್ಯಾ ಒಕ್ಕೂಟದಿಂದ ತೈಲವನ್ನು ನೇರವಾಗಿ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾವು ಉಕ್ರೇನ್ ಮೇಲೆ ನಡೆಸಿದ ಆಕ್ರಮಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತುರ್ತು ನಿಬಂಧನೆಗಳ ಅಡಿಯಲ್ಲಿ ಸುಂಕಗಳನ್ನು ಹೆಚ್ಚಿಸುವುದು ಅಗತ್ಯ ಮತ್ತು ಸೂಕ್ತ ಎಂದು ಅಮೆರಿಕ ಹೇಳಿದೆ. ಮುಂದಿನ 21 ದಿನಗಳಲ್ಲಿ ಹೊಸ ಸುಂಕ ಜಾರಿಗೆ ಬರಲಿದ್ದು, ಇದರಿಂದ ಭಾರತೀಯ ಸರಕುಗಳ ಮೇಲಿನ ಒಟ್ಟು ಅಮೆರಿಕ ಸುಂಕ ಸುಮಾರು ಶೇ. 50 ಆಗಲಿದೆ. ಇದು ಟ್ರಂಪ್ ಆಡಳಿತವು ಏಷ್ಯಾದ ವ್ಯಾಪಾರ ಪಾಲುದಾರರ ಮೇಲೆ ವಿಧಿಸಿರುವ ಅತ್ಯಧಿಕ ಸುಂಕವಾಗಿದೆ.

ನೋಡಿರಿ

