GPRನಿಂದ 13ರ ಗುಟ್ಟು ರಟ್ಟು? – ಮಣ್ಣು ಅಗೆಯದೆ ಸತ್ಯ ಹೊರಗೆ?
ಧರ್ಮಸ್ಥಳ ಹಲ್ಲೆ ಕೇಸ್ಗೆ ಬಿಗ್ ಟ್ವಿಸ್

ಧರ್ಮಸ್ಥಳ ತಲೆ ಬರುಡೆ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ.. ತಣ್ಣಗೆ ನಡೆಯುತ್ತಿದ್ದ ತನಿಖೆ ಈಗ ಕೊತ ಕೊತ ಕುದಿಯುವಂತೆ ಮಾಡ್ತಿದೆ..ಪರ ವಿರೋಧದ ಚರ್ಚೆ ನಡುವೆ ಸತ್ಯ ಮರಿಚಿಕೆ ಆಗುತ್ತಾ ಅನ್ನೋ ಭಯ ಹೆಚ್ಚಾಗಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಯಟ್ಯೂಬರ್‌ಗಳ ಮೇಲಿನ ಹಲ್ಲೆಯ ನಂತ್ರ ಧರ್ಮಸ್ಥಳ ಬೂದಿ ಮುಚ್ಚಿದ ಕೆಂಡವಾಗಿದೆ.. ಈಗಾಗಲೇ ಮಾಸ್ಕ್ ಮ್ಯಾನ್ ತೋರಿಸಿದ 12 ಜಾಗವನ್ನ ಅಗೆದು ಹುಡಕಾಡಿರೋ ಎಸ್‌ಐಟಿಗೆ ತಲೆನೋವು ಆಗಿರೋದು ಪಾಯಿಂಟ್ ನಂಬರ್13.. ನದಿ ಮತ್ತು ರಸ್ತೆ ಮಧ್ಯೆ ಇರೋ ಜಾಗದಲ್ಲಿ ಅಸ್ತಿ ಪಂಜರ ಹುಡುಕಾಡೋದು ದೊಡ್ಡ ಯುದ್ಧದಂತಾಗಿದೆ ಎಸ್‌ಐಟಿಗೆ.. ಅದ್ದಕ್ಕೆ ಈಗ ತಂತ್ರಜ್ಞಾನದ ಮೊರೆ ಹೊಗಲಾಗಿದೆ..
ಮಾಸ್ಕ್ ಮ್ಯಾನ್ ತೋರಿಸಿದ 1 ರಿಂದ 12 ಜಾಗದಲ್ಲಿ ಈಗಾಗಲೇ ಎಸ್‌ಐಟಿ ಶೋಧ ನಡೆಸಿದೆ.. 12 ಜಾಗದಲ್ಲಿ ಪಾಯಿಂಟ್ ನಂಬರ್ 6 ರಲ್ಲಿ ಕೆಲ ಮೂಳೆ ಸಿಕ್ಕಿದ್ದು ಬಿಟ್ರೆ ಬೇರೆ ಕಡೆ ಏನೂ ಸಿಕ್ಕಿಲ್ಲ ಅನ್ನೋ ಮಾಹಿತಿ ಇದೆ.. ಆದ್ರೆ ಎಸ್‌ಐಟಿ ಇಲ್ಲಿ ತನಕ ಏನೆಲ್ಲಾ ಸಿಕ್ಕಿದೆ ಅನ್ನೋ ಮಾಹಿತಿ ಕೊಟ್ಟಿಲ್ಲ.. ಇದ್ರ ಜೊತೆ ಪಾಯಿಂಟ್ ನಂಬರ್ 11 Aನಲ್ಲಿ ಅಸ್ತಿ ಪಂಜರ ಸಿಕ್ಕಿದೆ ಅನ್ನೋ ಸುದ್ದಿ ಇದೆ. ಆದ್ರೆ ಅದು ಕಳೆದ 1 -2 ವರ್ಷದ್ದು ಅಂತ ಹೇಳಲಾಗುತ್ತಿದೆ.. ಇಲ್ಲಿ ಯಾರಿಗೂ ಕ್ಲಿಯರ್ ಕಟ್ ಮಾಹಿತಿ ಸಿಕ್ಕಿಲ್ಲ.. ಯಾರು ಕೂಡ ಇದಿದ್ದು ಇದ್ದಂಗೆ ಹೇಳ್ತಾ ಇಲ್ಲ.. ಗೊಂದಲ ಗೂಡಿನ ನಡುವೆ ಗಲಾಟೆ ಕೂಡ ನಡೆಯುತ್ತಿದೆ.. ಪರ ವಿರೋಧ ಚರ್ಚೆ ಕೂಡ ನಡೆಯುತ್ತಿದೆ.. ಹಲ್ಲೆ ಮಾಡಿದವರ ಮೇಲೆ FIR ಕೂಡ ಆಗಿದೆ. ಇದೆಲ್ಲದರ ನಡುವೆ ಈಗ ಪಾಯಿಂಟ್ ನಂಬರ್ 13ರತ್ತ ಎಲ್ಲರ ಚಿತ್ತ ನೆಟ್ಟಿದೆ..
ದೂರುದಾರ ತೋರಿಸಿದ 13 ಕಡೆಗಳಲ್ಲೂ ಭೂಮಿ ಅಗೆದು ಹುಡುಕಿದರೂ ಪಾಯಿಂಟ್ ಸಂಖ್ಯೆ 6 ಹೊರತು ಪಡಿಸಿ ಬೇರೆ ಕಡೆ ಏನೂ ಸಿಗಲಿಲ್ಲ. ಇದೀಗ ಪಾಯಿಂಟ್ ನಂಬರ್ 13ರಲ್ಲಿ ರಾಶಿ ರಾಶಿ ಹೆಣಗಳಿದೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ಸಾಕಷ್ಟು ಉದ್ದ ಅಗಲಕ್ಕೆ ಮಾರ್ಕ್ ಮಾಡಲಾಗಿದೆ. ಅದರೆ ಈ ಪಾಯಿಂಟ್ ಎಸ್‌ಐಟಿ ಅಧಿಕಾರಿಗಳಿಗೆ ಕಗ್ಗಂಟಾಗಿದೆ. ಬುಧವಾರ ಉತ್ಖನನ ಮಾಡಿ ಮುಗಿಸಬೇಕಿದ್ದ ಈ 13ನೇ ಪಾಯಿಂಟ್ ಅಗೆಯದೇ 14 ನೇ ಪಾಯಿಂಟ್ ಉತ್ಖನನ ನಡೆಸಿದ್ದರು. ಈ 13ನೇ ಪಾಯಿಂಟ್‌ನ ಮಧ್ಯಭಾಗದಲ್ಲೇ ಎರಡು ವಿದ್ಯುತ್ ಕಂಬಗಳಿದೆ. ಅಷ್ಟೇ ಅಲ್ಲದೇ ಪಕ್ಕದಲ್ಲೇ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಸಣ್ಣ ಅಣೆಕಟ್ಟು ಇದೆ. ಪಾಯಿಂಟ್ ಪಕ್ಕದಲ್ಲೇ ಸಾರ್ವಜನಿಕ ರಸ್ತೆ ಇದೆ. ಗುರುವಾರ ಕೂಡ ಪಾಯಿಂಟ್ ನಂಬರ್ 13ರಲ್ಲಿ ಉತ್ಖನನ ಮಾಡಿಲ್ಲ.
GPR ಅಂದ್ರೆ ಏನು?
ಧರ್ಮಸ್ಥಳದಲ್ಲಿ ಸಮಾಧಿ ಅಗೆಯೋ ಕಾರ್ಯಾಚರಣೆ ಶುರುವಾದಗಿಂದ ಕೇಳಿ ಬರ್ತಿರೋ ಹೆಸರು ಅಂದ್ರೆ GPR.. ಮಾಸ್ಕ್ ಮ್ಯಾನ್ ತೋರಿಸಿದ ಜಾಗ ಆ ಕಡೆ ಈ ಕಡೆ ಆಗಿರಬಹುದು.. GPR ಬಳಸಿ ಅಕ್ಕ ಪಕ್ಕ ಹುಡುಕಿದ್ರೆ ಸಿಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೆ ಇಲ್ಲಿ ತನಕ ಇದ್ದನ್ನ ಬಳಸಲಾಗಿಲ್ಲ.. ಆದ್ರೆ 13 ಪಾಯಿಂಟ್‌ನಲ್ಲಿ GPR ಬಳಸೋಕೆ ಮುಂದಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ.. ಅದ್ದಕ್ಕೆ ಕಾರಣ ಈ ಜಾಗ ರಸ್ತೆ ಪಕದಲ್ಲಿ ಇರೋದ್ರಿಂದ. ಈ GPR ಭೂಮಿ ಅಗೆಯದೇಮಣ್ಣಿನೊಳಗೆ ಇರೋ ವಸ್ತುಗಳನ್ನ ಕಂಡು ಹಿಡಿಯುತ್ತೆ.. ಉದಾಹರಣೆಗೆ ನಮ್ಮ ದೇಹದೊಳಗೆ ಮೂಳೆ ಏನ್ ಆಗಿದೆ ಅನ್ನೋದ್ದನ್ನ ಕಂಡು ಹಿಡಿಯೋ ಸ್ಕ್ಯಾನಿಂಗ್ ತರನೇ ಇದು ವರ್ಕ್ ಆಗುತ್ತೆ. ಇದರಲ್ಲಿರೋ ರೆಡಿಯೋ ವೇವ್‌ಗಳು ಮಣ್ಣಿನೊಳಗೆ ಹೋಗುತ್ತೆ.. ಆ ವಸ್ತು ಹೋಗಿ ಭೂಮಿಯೊಳಗೆ ಇರೋ ವಸ್ತುವಿಗೆ ಹಿಟ್ ಆಗಿ ವಾಪಸ್ ಬಂದಾಗ ಅಲ್ಲಿ ಏನೋ ಇದೆ ಅಂತ ಗೊತ್ತಾಗುತ್ತೆ.. ಮಿನಿಮಮ್ 20 ರಿಂದ 30 ಮೀಟರ್ ಭೂಮಿಯೊಳಗೆ ಏನಿದೆ ಅನ್ನೋದ್ದನ್ನ ಕಂಡು ಹಿಡಿಯುತ್ತೆ. ಇದು ಪಕ್ಕಾ ಇದೆ ವಸ್ತು ಇದೆ ಅಂತ ಹೇಳಲ್ಲ.. ಗಟ್ಟಿಯಾದ ವಸ್ತುವಿದೆ ಅನ್ನೋದು ಮಾತ್ರ ಗೊತ್ತಾಗುತ್ತೆ.. ಕೆಲ ಲಕ್ಷಣ ಮಾತ್ರ ಗೊತ್ತಾಗುತ್ತೆ.. ಹೀಗಾಗಿ ಈ ವಸ್ತುವನ್ನ ಬಳಸಿದ್ರೆ 13ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರ ಇದ್ಯಾ ಇಲ್ವಾ ಅನ್ನೋದು ಗೊತ್ತಾಗಲಿದೆ.

ನೋಡಿರಿ

