ಬ್ಯಾಟರ್ ಕೆಣಕಿ ಚಚ್ಚಿಸಿಕೊಂಡ ರಾಥಿ – ಬ್ಯಾಕ್ ಟು ಬ್ಯಾಕ್ ಸಿಕ್ಸರ್.. ಬೇಕಿತ್ತಾ?
IPL ಆಯ್ತು.. ಈಗ DPLನಲ್ಲೂ ಕಿರಿಕ್!

ಬ್ಯಾಟರ್ ಕೆಣಕಿ ಚಚ್ಚಿಸಿಕೊಂಡ ರಾಥಿ – ಬ್ಯಾಕ್ ಟು ಬ್ಯಾಕ್ ಸಿಕ್ಸರ್.. ಬೇಕಿತ್ತಾ?IPL ಆಯ್ತು.. ಈಗ DPLನಲ್ಲೂ ಕಿರಿಕ್!

2025ರ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೇಂಟ್ಸ್​ ಪರ ಅದ್ಭುತ ಪ್ರದರ್ಶನ ನೀಡಿದ್ದ ದಿಗ್ವೇಶ್ ರಾಥಿ ತಮ್ಮ ಡೆಬ್ಯೂ ಸೀಸನ್​ನಲ್ಲಿ ಫುಲ್ ಶೈನ್ ಆಗಿದ್ರು. ಬೌಲಿಂಗ್​ಗಿಂತ ಹೆಚ್ಚಾಗಿ ಅವ್ರದ್ದೊಂದು ಐಕಾನಿಕ್ ಸೆಲೆಬ್ರೇಷನ್ ಸ್ಟೈಲ್​ನಿಂದಲೇ ಮನೆ ಮಾತಾಗಿದ್ರು. ಬಟ್ ಅದು ವಿವಾದವೂ ಆಗಿ ಕೊನೆಗೆ ಆ ಥರ ಸಂಭ್ರಮಾಚರಣೆ ಮಾಡುವಂತಿಲ್ಲ ಅಂತಾ ಒಂದು ಪಂದ್ಯದಿಂದ ನಿಷೇಧವನ್ನೂ ಹೇರಿದ್ರು. ಬಟ್ ಈಗ ಡಿಪಿಎಲ್ ನಲ್ಲಿ ರಾಥಿ ಮತ್ತೊಮ್ಮೆ ಕಿಚ್ಚು ಹಚ್ಚಿದ್ದಾರೆ.

ಇದನ್ನೂ ಓದಿ : KL ಮೇಲೆ ಬಿತ್ತು CSK ಕಣ್ಣು? – ಕ್ಯಾಪ್ಟನ್, ಬ್ಯಾಟರ್, ಕೀಪರ್ ಟಾಸ್ಕ್!

ಡೆಲ್ಲಿ ಪ್ರೀಮಿಯರ್ ಲೀಗ್ ಅಂದ್ರೆ ಡಿಪಿಎಲ್ 2025ರ ಪಂದ್ಯದ ವೇಳೆ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಜ್ ಬೌಲರ್ ಆಗಿರೋ ರಾಥಿ ಬ್ಯಾಟರ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ವೆಸ್ಟ್ ಡೆಲ್ಲಿ ಲಯನ್ಸ್ ತಂಡದ ಆರಂಭಿಕ ಆಟಗಾರ ಅಂಕಿತ್ ಕುಮಾರ್ ಅವರೊಂದಿಗೆ ರಾಠಿ ಮಾತಿನ ಚಕಮಕಿ ನಡೆಸಿದ್ದಾರೆ. ರಾಥಿ ಬೌಲಿಂಗ್ ಟೈಮಲ್ಲಿ ಹಿಂದೆ ಸರಿಯುತ್ತಿದ್ದ ತಂತ್ರವನ್ನು ಡಿಪಿಎಲ್‌ನಲ್ಲೂ ಅಪ್ಲೈ ಮಾಡಿದ್ರು. ಇದ್ರಿಂದ ಸಿಟ್ಟಾದ ಬ್ಯಾಟರ್ ಕೂಡ ರಾಥಿ ಬೌಲಿಂಗ್ ಮಾಡುವಾಗ ಕ್ರೀಸ್​ನಿಂದ ದೂರ ಸರಿದ್ರು. ಇದು ಇಬ್ಬರು ಕ್ರಿಕೆಟಿಗರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು, ಇಷ್ಟಕ್ಕೇ ಸುಮ್ಮನಾಗದ ಅಂಕಿತ ಆ ಬಳಿಕ ಮುಂದಿನ ಎರಡೂ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾಇಸಿದ್ರು.  ಬಳಿಕ ಬ್ಯಾಟ್ಸ್‌ಮನ್ ರಾಠಿ ಕಡೆಗೆ ತಿರುಗಿ ‘ಎರಡು’ ಎಂದು ಸನ್ನೆಯನ್ನು ಸಹ ಮಾಡಿ ತಿರುಗೇಟು ಕೊಟ್ರು.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಈ ಲೀಗ್​ನ 7ನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿದೆ. ಅದು ಕೂಡ ಎಡಗೈ ದಾಂಡಿಗ ಅಂಕಿತ್ ಕುಮಾರ್ ಹಾಗೂ ದಿಗ್ವೇಶ್ ರಾಥಿ ನಡುವೆ. ಅಷ್ಟಕ್ಕೂ ಇಲ್ಲಿ ರಾಥಿ ಮಾಡಿಕೊಂಡ ಎಡವಟ್ಟಿನಿಂದ ಒಳದೇ ಒಂದು ವಿಕೆಟ್ ತೆಗೆಯೋಕೆ ಸಾಧ್ಯವಾಗ್ಲಿಲ್ಲ. ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ಅಂಕಿತ್ ಕುಮಾರ್ ಹಾಗೂ ಕ್ರಿಶ್ ಯಾದವ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.  ಅಂಕಿತ್ ಕೇವಲ 46 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ 96 ರನ್ ಗಳಿಸಿದರು. ಪರಿಣಾಮ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 15.4 ಓವರ್​ಗಳಲ್ಲಿ 189 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Shantha Kumari