ಹೃದಯವಂತ ರಿಷಭ್ ಪಂತ್ – ಬಡ ವಿದ್ಯಾರ್ಥಿನಿ ಭವಿಷ್ಯಕ್ಕೆ ‘ಜ್ಯೋತಿ’
ಬಾಗಲಕೋಟೆ ಹುಡುಗಿಗೆ ಸಹಾಯ ಸಿಕ್ಕಿದ್ದೇಗೆ?

ಹೃದಯವಂತ ರಿಷಭ್ ಪಂತ್ –  ಬಡ ವಿದ್ಯಾರ್ಥಿನಿ ಭವಿಷ್ಯಕ್ಕೆ ‘ಜ್ಯೋತಿ’ಬಾಗಲಕೋಟೆ ಹುಡುಗಿಗೆ ಸಹಾಯ ಸಿಕ್ಕಿದ್ದೇಗೆ?

ಆಕೆ ಓರ್ವ ಪ್ರತಿಭಾವಂತ ಬಡ ವಿದ್ಯಾರ್ಥಿನಿ, ಮನೆಯಲ್ಲಿನ ಬಡತನದಿಂದ ಮುಂದಿನ ಶಿಕ್ಷಣಕ್ಕೆ ಹಣಕಾಸಿನ ತೊಂದರೆಯಾಗಿತ್ತು.. ಹಣಕಾಸಿನ ಸಮಸ್ಯೆಯಿಂದ ಮುಂದಿನ ಓದು ಹೇಗೆ ಅನ್ನೋ ಚಿಂತೆ ಕಾಡಿತ್ತು.. ಆದ್ರೆ ಆಕೆ ಕಂಡ ಕನಸು ಈಗ ನನಸಾಗಿದೆ.. ವಿದ್ಯಾರ್ಥಿನಿಯ ಆರ್ಥಿಕ ನೆರವಿಗೆ ಟೀಮ್‌ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ನಿಂತಿದ್ದಾನೆ.. ಅಪಘಾತವಾಗಿ ಸಾವು ನೋವಿನ ನಡುವೆ ಹೋರಾಡಿ ಮತ್ತೆ ಕ್ರಿಕೆಟ್‌ನಲ್ಲಿ ಕಮಾಲ್ ಮಾಡುತ್ತಿರೋ ರಿಷಬ್ ಪಂತ್‌ ಸಾಹಯದ ಹಸ್ತ ಚಾಚಿಸಿದ್ದಾರೆ..

ಇದನ್ನೂ ಓದಿ: ಮಹಾರಾಷ್ಟ್ರ ಮತ್ತು ಕರ್ನಾಟಕ ಎಲೆಕ್ಷನ್‌ನಲ್ಲಿ ಮತಗಳ್ಳತನ – ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆರೋಪ

ಜ್ಯೋತಿ ಕಣಬೂರ್. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದವಳು. ತಂದೆ ತೀರ್ಥಯ್ಯ ಹಾಗೂ ತಾಯಿ ರೂಪಾ. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕ ಹೋಟೆಲ್ ಇರಿಸಿಕೊಂಡು 4 ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಇವುಗಳ ಮಧ್ಯೆ ಇಬ್ಬರು ಸಹೋದರರು ಹೊಲದಲ್ಲಿ ಕೂಲಿ ಮಾಡ್ತಿದ್ದಾರೆ. ನಾನು ಓದಿ ನನ್ನ ಕುಟಂಬಕ್ಕೆ ಆಸರೆ ಆಗಬೇಕು ಅನ್ನೋ ಹಂಬದಲ್ಲಿ ಇರೋ ಜ್ಯೂತಿ ಪಿಯುಸಿ ಕಾಮರ್ಸ್‌ ವಿಭಾಗದಲ್ಲಿ 85 ಪರ್ಸೆಂಟ್ ಪೆಡಿದಿದ್ದಾಳೆ.. ಕಣಬೂರ ಕುಟುಂಬದ ಕೊನೆಯ ಮಗಳಾಗಿರೋ ಜ್ಯೋತಿ ಹೊಲದಲ್ಲಿ ಕೆಲಸ ಮಾಡುತ್ತಲೇ ಬಂದ ಹಣದಿಂದ ಪಿಯುಸಿ ಶಿಕ್ಷಣ ಮುಗಿಸಿದ್ದಳು. ಬಳಿಕ ಜಮಖಂಡಿ ಬಿಎಲ್ ಡಿ ಕಾಲೇಜಿನಲ್ಲಿ ಬಿಸಿಎ ತರಗತಿಗೆ ಪ್ರವೇಶ ಪಡೆಯಲು ಮುಂದಾದಾಗ ಹಣಕಾಸಿನ ತೊಂದರೆಯುಂಟಾಗಿದೆ.

ಆಗ ತಂದೆ ತೀರ್ಥಯ್ಯ ಗ್ರಾಮದ ಅನಿಲ್ ಹುಣಸಿಕಟ್ಟಿ ಅವರ  ಬಳಿ ಹೇಳಿದಾಗ,  ಇವರ ಗೋಳು ಕೇಳಿ ಅನಿಲ್ ನೇರವಾಗಿ ಬೆಂಗಳೂರಿನ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುವ ತಮ್ಮ ಸ್ನೇಹಿತರ ಮೂಲಕ ಕ್ರಿಕೆಟಿಗ ರಿಷಬ್ ಪಂತ್‌ ಅವರನ್ನು ಸಂಪರ್ಕಿಸಿದ್ದಾರೆ.  ಜ್ಯೋತಿಯ ಸಮಸ್ಯೆ ಕೇಳಿ ತಕ್ಷಣ  ರಿಷಬ್ ಪಂತ್‌ ಆಕೆಯ ಮೊದಲ ವರ್ಷದ ಬಿಸಿಎ ತರಗತಿಗೆ ಅವಶ್ಯಕತೆ ಇರುವ 40 ಸಾವಿರ ಹಣ ನೆರವು ನೀಡಿದ್ದಾರೆ.   ನೇರವಾಗಿ ಕಾಲೇಜ್ ಗೆ ಹಣ ಸಂದಾಯ ಮಾಡಿದ್ದಾರೆ. ಕ್ರಿಕೆಟಿಗ ರಿಷಬ್ ನೆರವಿನ ಹಿನ್ನೆಲೆಯಲ್ಲಿ ಬಿಎಲ್ ಡಿ ಸಂಸ್ಥೆಯಿಂದ ಅಭಿನಂದನಾ ಪತ್ರವನ್ನ ಬರೆಯಲಾಗಿದ್ದು, ರಿಷಬ್ ಪಂತ್‌ ಅವರ  ಕೆಲಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರಿಕೆಟ್ ಕ್ಷೇತ್ರದಲ್ಲಿ ತಾನು, ತಮ್ಮ ಸಾಧನೆ ಅಂತಾ ಬೀಗುತ್ತಿರೋ ಕ್ರಿಕೆಟಿಗರ ಮಧ್ಯೆ ರಿಷಬ್ ಪಂತ್‌ ಬಡ ವಿದ್ಯಾರ್ಥಿನಿಗೆ ಹಣಕಾಸಿನ ನೆರವು ನೀಡುವ ಮೂಲಕ ಗಮನಸೆಳೆದಿದ್ದು, ಅಭಿಮಾನಪಡುವ ಸಂಗತಿ ಆಗಿದೆ. ದೊಡ್ಡ ಆಕ್ಸಿಡೆಂಟ್ ಆಗಿ ಸಾವು ಗೆದ್ದ ಬಂದ ಪಂತ್ ಕ್ರಿಕೆಟ್‌ ಲೋಕದಲ್ಲಿ ಮತ್ತೆ ಮಿಂಚುತ್ತಿದ್ದಾರೆ.. ಇಂಗ್ಲೆಂಡ್‌ ವಿರುದ್ಧದ  ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ..ಈಗ ಕರ್ನಾಟಕದ ಹುಡುಗಿಗೆ ಸಹಾಯ ಮಾಡಿದ್ದು ಹೆಮ್ಮಯ ಸಂಗತಿ..

Kishor KV