ಚರ್ಮದ ಕಾಂತಿ ಹೆಚ್ಚಿಸಲು ಈ ಫುಡ್ ಬೆಸ್ಟ್! – ಮುಖದ ಅಂದವೂ ಹೆಚ್ಚಾಗುತ್ತೆ ಗೊತ್ತಾ?

ಅಂದವಾಗಿ ಕಾಣ್ಬೇಕು.. ಚರ್ಮದ ಕಾಂತಿ ಹೆಚ್ಚಿಸಿಕೊಳ್ಬೇಕು ಅಂತಾ ಪ್ರತಿಯೊಬ್ಬರಿಗೂ ಆಸೆ ಇರುತ್ತೆ. ಹೀಗಾಗಿ ಕೆಲವರು ಬ್ಯೂಟಿ ಪಾರ್ಲರ್ಗೆ ಹೋಗಿ ಏನೇನೋ ಫೇಶಿಯಲ್ ಮಾಡಿಸಿಕೊಳ್ತಾರೆ. ಇನ್ನೂ ಕೆಲವರು ಬ್ಯೂಟಿ ಸರ್ಜರಿಗೆ ಒಳಗಾಗುತ್ತಾರೆ. ಇದ್ರಿಂದ ಇರೋ ಸೌಂದರ್ಯ ಕಳೆದುಕೊಳ್ಳೋ ಸಾಧ್ಯತೆ ಇದೆ. ಆದ್ರೆ ಈ ಆಹಾರಗಳನ್ನ ಸೇವಿಸಿದ್ರೆ ಬ್ಯೂಟಿ ಜೊತೆಗೆ ಚರ್ಮದ ಕಾಂತಿ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಸ್ಟೋಕ್ಸ್ ಇಲ್ಲದ್ದಕ್ಕೇ IND ಗೆದ್ದಿದ್ದಾ? – ಡ್ರಾ ಬೆನ್ನಲ್ಲೇ ಆಂಗ್ಲರ ಹೊಸ ವರಸೆ
ಊಟ ಬಲ್ಲವನಿಗೆ ರೋಗವಿಲ್ಲ.. ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನೋ ಗಾದೆ ಮಾತು ಎಲ್ಲ ಕಾಲಕ್ಕೂ ಪ್ರಸ್ತುತ.. ಈಗಿನ ಯುವಕ ಯುವತಿಯರಿಗೆ ಸೌಂದರ್ಯದ ಕಾಳಜಿ ಹೆಚ್ಚಾಗ್ತಿದೆ. ಆದ್ರೆ ಆಹಾರ ಕ್ರಮ ಮಾತ್ರ ಸರಿಯಾಗಿಲ್ಲ.. ಅನೇಕರು ಜಂಕ್ ಫುಡ್ ತಿಂದು ಇರೋ ಆರೋಗ್ಯ ಕೂಡ ಹಾಳು ಮಾಡಿಕೊಳ್ತಿದ್ದಾರೆ. ಇದ್ರಿಂದಾಗಿ ಅವ್ರ ಸೌಂದರ್ಯದ ಮೇಲೂ ಪರಿಣಾಮ ಬೀಳ್ತಿದೆ. ಹೀಗಾಗೇ ಅನೇಕರು ಬ್ಯೂಟಿ ಪಾರ್ಲರ್, ಬ್ಯೂಟಿ ಸರ್ಜರಿಗೆ ಒಳಗಾಗ್ತಾರೆ.. ಇದು ಆರೋಗ್ಯದ ಮೇಲೂ ಪರಿಣಾಮ ಬೀಳೋ ಸಾಧ್ಯತೆ ಇರುತ್ತೆ.. ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಆಹಾರ ಸೇವಿಸಿದ್ರೆ ಉತ್ತಮ.
ಸೂಕ್ತ ಪೋಷಣೆ: ವಿಟಮಿನ್ ಎ ಅಥವಾ ಕೆರೋಟಿನಾಯ್ಡ್ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್ ಎ ಯಥೇಚ್ಛವಾಗಿ ದೊರೆಯುತ್ತದೆ. ಚರ್ಮದ ಮೇಲೆ ಸೂಕ್ಷ್ಮ ನೆರಿಗೆಗಳು ಬರುವುದನ್ನು ತಡೆಯಲು ಈ ಸತ್ವ ಅಗತ್ಯವಾಗಿ ಬೇಕು. ವಿಟಮಿನ್ ಎ ಸತ್ವವಿರುವ ಆಹಾರಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.
ವಿಟಮಿನ್ ಡಿ: ಚರ್ಮದ ಜೀವಕೋಶಗಳ ಬೆಳವಣಿಗೆ ಮತ್ತು ಗುಣಪಡಿಸುವಲ್ಲಿ ಡಿ-ಜೀವಸತ್ವವೂ ಸಹಕಾರಿ. ಮಾತ್ರವಲ್ಲ, ಸೋಂಕುಗಳು ಕಾಡದಂತೆ ಚರ್ಮವನ್ನು ಕಾಪಾಡುತ್ತದೆ ಇದು. ಸೂರ್ಯರಶ್ಮಿಯ ಹೊರತಾಗಿ, ತೈಲಭರಿತ ಮೀನುಗಳಲ್ಲಿ, ಕೆಂಪು ಮಾಂಸ ಮತ್ತು ಮೊಟ್ಟೆಯ ಹಳದಿಭಾಗಗಳಲ್ಲಿ ಇದು ದೊರೆಯುತ್ತದೆ.
ವಿಟಮಿನ್ ಇ: ಎಂಟು ಬೇರೆಬೇರೆ ವಸ್ತುಗಳು ಒಟ್ಟಾಗಿ ಸೇರಿ ಇ-ಜೀವಸತ್ವವನ್ನು ಪೂರ್ಣಗೊಳಿಸುತ್ತವೆ. ಇವೆಲ್ಲ ಸೇರಿ ವಿಟಮಿನ್ ಸಿ ಜೊತೆಗೂಡಿ ದೇಹದಲ್ಲಿನ ಮುಕ್ತ ಕಣಗಳನ್ನು ನಿರ್ಬಂಧಿಸುತ್ತವೆ. ಸೂರ್ಯಕಾಂತಿ ಬೀಜ, ಬಾದಾಮಿ, ಅವಕಾಡೊ, ಕೆಲವು ಸಸ್ಯಜನ್ಯ ಎಣ್ಣೆಗಳು, ಸಾಲ್ಮನ್ನಂಥ ಮೀನುಗಳಲ್ಲಿ ವಿಟಮಿನ್ ಇ ಲಭ್ಯವಿದೆ. ಇಂಥ ಪೋಷಣೆಗಳು ದೊರೆತಷ್ಟೂ ಚರ್ಮ ಹೊಳಪು ಪಡೆಯುವುದರಲ್ಲಿ ಅನುಮಾನವಿಲ್ಲ.
ಲೈಕೋಪೇನ್: ಟೊಮೇಟೊನಂಥ ಅಚ್ಚಕೆಂಪು ಬಣ್ಣದ ಹಣ್ಣು-ತರಕಾರಿಗಳಲ್ಲಿ ದೊರೆಯುವ ಸತ್ವವಿದು. ಗಾಯಗಳನ್ನು ಗುಣಪಡಿಸುವ, ಉರಿಯೂತವನ್ನು ತಗ್ಗಿಸುವ ಮತ್ತು ಕೊಲಾಜಿನ್ ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಲೈಕೋಪೇನ್ಗಳು ಹೊಂದಿವೆ. ಚರ್ಮಕ್ಕಾಗುವ ಯಾವುದೇ ಹಾನಿಯನ್ನು ಗುಣಪಡಿಸಲು ಲೈಕೋಪೇನ್ ನೆರವು ಬೇಕು.
ವಿಟಮಿನ್ ಬಿ 3: ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಬಾರ್ಲಿ, ಓಟ್ಸ್ ಮುಂತಾದವುಗಳಿಂದ ದೊರೆಯುವ ಜೀವಸತ್ವವಿದು. ಚರ್ಮದ ಮೇಲೆ ಅತಿಯಾದ ಪಿಗ್ಮೆಂಟ್ಗಳನ್ನು ತಡೆಯಲು, ಸೂರ್ಯನ ಬಿಸಿಲಿನಿಂದ ಹಾನಿ ಆಗದಂತೆ ಮಾಡಲು, ಚರ್ಮ ಒಣಗಿ ಸುಕ್ಕಾಗವುದನ್ನು ಕಡಿಮೆ ಮಾಡಲು ಅವಶ್ಯವಾಗಿ ಬೇಕಾದ ಪೋಷಣೆಯಿದು. ಹಾಗಾಗಿ ಇವೆಲ್ಲ ಇರಲಿ ನಿಮ್ಮ ತಟ್ಟೆಯಲ್ಲಿ.
ವಿಟಮಿನ್ ಸಿ: ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಕೊಲಾಜಿನ್ ಹೆಚ್ಚಿಸುವ ಅತಿ ಮುಖ್ಯ ಉತ್ಕರ್ಷಣ ನಿರೋಧಕವಿದು. ಹುಳಿ ಹಣ್ಣುಗಳು ಮಾತ್ರವಲ್ಲ, ಪೇರಲೆ, ಪಪ್ಪಾಯ, ದಾಳಿಂಬೆ, ಕಿವಿ ಹಣ್ಣು, ಬ್ರೊಕೊಲಿ, ದಪ್ಪಮೆಣಸು- ಹೀಗೆ ಸಿ-ಜೀವಸತ್ವ ಇರುವಂಥ ಹಣ್ಣುತರಕಾರಿಗಳು ಬಹಳಷ್ಟಿವೆ.

ನೋಡಿರಿ

