12 ದಿನ 50 ಕೋಟಿ ಕಲೆಕ್ಷನ್ – SU ಫ್ರಮ್ SO ರೆಕಾರ್ಡ್ ಬ್ರೇಕ್
ಶೆಟ್ರು ಮಾಫಿಯಾ ಅಂದವರಿಗೆ ಡಿಚ್ಚಿ

ಯಾವ್ ಶೋ ನೋಡಿದ್ರೂ ಫುಲ್.. ಯಾವ್ ಥಿಯೇಟರ್ ನೋಡಿದ್ರೂ ಫುಲ್.. ಕಾಲಿಡೋಕೆ ಜಾಗ ವಿಲ್ಲದಂತೆ ಜನವೋ ಜನ.. ರಿಲೀಸ್ ಆಗಿ 12 ದಿನ ಕಳೆದ್ರೂ ಸು ಫ್ರಮ್ ಸೋ ಹವಾ ಚೂರೇ ಚೂರು ಕಮ್ಮಿಯಾಗಿಲ್ಲ. ಯಾರ್ ಬಾಯಿಲ್ಲಿ ಹೇಳಿದ್ರೂ ಒಂದೇ ಮಾತು ಸು ಫ್ರಮ್ ಸೋ ನೋಡಿದ್ರಾ.. ನೋಡಿಲ್ಲ ಅಂದ್ರೆ ಮಿಸ್ಸ್ ಮಾಡ್ಡೆ ನೋಡಿ ಅನ್ನೋ ಮಾತು.. ಯಾವುದೇ ಪ್ರಚಾರವಿಲ್ಲದೇ ಬಂದ ಸು ಫ್ರಮ್ ಸೋ ಬಾಯಿಂದ ಬಾಯಿಗೆ ಪ್ರಚಾರ ಸಿಕ್ಕಿ ದೊಡ್ಡ ಸಕ್ಸಸ್ ಪಡೆಯುತ್ತಿದೆ.. ಬಾಕ್ಸ್ ಆಫೀಸ್ನಸಲ್ಲಿ ದಾಖಲೆಯ ಕಲೆಕ್ಷನ್ ಮಾಡ್ತಿದೆ. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕಾಮಿಡಿ ಎಂಟರ್ಟೈನರ್ ಸಿನಿಮಾ ಆಗಿದೆ..
ಮುಂಗಾರು ಮಳೆ , ಕಿರಿಕ್ ಪಾರ್ಟಿ’ ಸಿನಿಮಾಗಳ ರೀತಿ ಸು ಫ್ರಂ ಸೋ’ ಸೆನ್ಸೇಷನಲ್ ಹಿಟ್ ಆಗಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದಕ್ಕೆ ಹಿಂದೇಟು ಹಾಕುವವರನ್ನು ಕೂಡ ‘ಸು ಫ್ರಂ ಸೋ’ ಸೆಳೆಯುತ್ತಿದೆ. ಮನೆಮಂದಿ ಎಲ್ಲಾ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನೋಡಿದವರೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಲ್, ಇನ್ಸ್ಟಾಗ್ರಾಮ್, ಎಕ್ಸ್ ವೇದಿಕೆಯಲ್ಲಿ ‘ಸು ಫ್ರಂ ಸೋ’ ಟ್ರೆಂಡ್ ಆಗ್ತಿದೆ. ಅದೆಲ್ಲವರೂ ಪ್ರೇಕ್ಷಕರ ಸಂಖ್ಯೆ ಹೆಚ್ಚುಸುತ್ತಲೇ ಸಾಗಿದೆ. ಒಂದು ಊರಿನ ಸುಂದರ ಕಥೆ ಫ್ಯಾನ್ಸ್ ಸೆಳೆಯುತ್ತಿದೆ. ಅದ್ರಲ್ಲೂ ಬಾವಬಂದನೋ ಸಾಂಗ್ ಅಂತೂ ಸಖತ್ ಟ್ರೆಂಡ್ ಆಗ್ತಿದೆ.
ಮೊದಲ ದಿನ ₹0.78 ಕೋಟಿ
2ನೇ ದಿನ ₹2.17 ಕೋಟಿ
3ನೇ ದಿನ ₹3.50 ಕೋಟಿ
4ನೇ ದಿನ ₹3.05 ಕೋಟಿ
5ನೇ ದಿನ ₹3.40 ಕೋಟಿ
6ನೇ ದಿನ ₹3.50 ಕೋಟಿ
7ನೇ ದಿನ ₹3.75 ಕೋಟಿ
8ನೇ ದಿನ ₹3.80 ಕೋಟಿ
9ನೇ ದಿನ ₹5.40 ಕೋಟಿ
10ನೇ ದಿನ ₹6.55 ಕೋಟಿ
11ನೇ ದಿನ ₹3.50 ಕೋಟಿ
12ನೇ ದಿನ₹3 ಕೋಟಿಗೂ ಹೆಚ್ಚು
ಒಟ್ಟು ₹42 ಕೋಟಿಗೂ ಹೆಚ್ಚು ಕಲೆಕ್ಷನ್
ಇದು ಒಂದು ಅಂದಾಜಿನ ಮಾಹಿತಿ.. ಇದ್ದಕ್ಕಿಂತ ಹೆಚ್ಚಿನ ಕಲೆಕ್ಷನ್ ಕೂಡ ಆಗಿರಬಹುದು. ‘ಸು ಫ್ರಮ್ ಸೋ’ ಪರಭಾಷೆಯ ಸೂಪರ್ಸ್ಟಾರ್ಗಳ ಸಿನಿಮಾಗಳನ್ನು ಕ್ಯಾರೇ ಎನ್ನಲಿಲ್ಲ. ಈ ಸಿನಿಮಾ ಜೊತೆ ಕಂಡಿದ್ದ ಪವನ್ ಕಲ್ಯಾಣ್ ಸಿನಿಮಾ ‘ಹರಿ ಹರ ವೀರಮಲ್ಲು’ ಹೇಳ ಹೆಸರಿಲ್ಲದೆ ಹೋಯ್ತು. ಹಾಗೇ ವಿಜಯ್ ದೇವರಕೊಂಡ ಸಿನಿಮಾ ‘ಕಿಂಗ್ಡಮ್’ ಹೇಳ ಹೆಸರಿಲ್ಲದೆ ಹೋಯ್ತು. ಇನ್ನೇನು ಆಗಸ್ಟ್ 8 ರಿಂದ ತೆಲುಗು ರಾಜ್ಯಗಳಲ್ಲೂ ರಿಲೀಸ್ ಆಗಲಿದೆ. ಮಲಯಾಳಂನಲ್ಲಿ ರಿಲೀಸ್ ಆಗಿ ಕೂಡ ಅದ್ದೂರಿ ಯಶಸ್ಸು ಕಾಣ್ತಿದೆ.
ಶೆಟ್ರು ಮಾಫಿಯಾ ಅನ್ನೋರಿಗೆ ರಾಜ್ ಬಿ ಶೆಟ್ರು ಕೌಂಟರ್
ಸಂದರ್ಶನವೊಂದರಲ್ಲಿ ರಾಜ್ ಬಿ ಶೆಟ್ಟಿ ಶೆಟ್ರು ಗ್ಯಾಂಗ್ ಅನ್ನೋರಿಗೆ ಕೌಂಟರ್ ಕೊಟ್ಟಿದ್ದಾರೆ. ಸಿನಿಮಾರಂಗದಲ್ಲಿ ಪ್ರಾಮಾಣಿಕ ಸ್ನೇಹಿತರು ಸಿಗೋದು ಕಷ್ಟ. ಆದರೆ, ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಪ್ರಾಮಾಣಿಕವಾಗಿದ್ದಾರೆ. ಆ ಕಾರಣಕ್ಕೇನೆ ನಮ್ಮ ಸ್ನೇಹ ಗಟ್ಟಿಯಾಗಿದೆ. ಪರಸ್ಪರ ಚಿತ್ರಗಳನ್ನು ನೋಡುತ್ತೇವೆ. ಮೆಚ್ಚಿಕೊಳ್ಳುತ್ತೇವೆ. ಸು ಫ್ರಮ್ ಸೋ ಚಿತ್ರದ ರಿಪೋರ್ಟ್ ತಿಳಿದ ರಕ್ಷಿತ್ ಶೆಟ್ಟಿ ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಶೆಟ್ಟಿ ಮಾಫಿಯಾ…ಶೆಟ್ಟಿ ಗ್ಯಾಂಗ್ ಅಂತ ಹೇಳ್ತಾರೆ. ಹಾಗಂತ ಹೇಳೋರಿಗೆ ನಾನು ಒಂದು ಮಾತು ಹೇಳುತ್ತೇನೆ. “ನೀವು ಗ್ಯಾಂಗ್ ಮಾಡಿಕೊಳ್ಳಿ ಬ್ರದರ್. ಬೇಡ ಅಂತ ಹೇಳಿದವ್ರು ಯಾರು” ನೀವು ಒಂದು ಗ್ಯಾಂಗ್ ಕಟ್ಟಿಕೊಳ್ಳಿ ಅಂತಲೇ ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ಅದೇನ್ ಇದ್ರೂ ಕನ್ನಡ ಇಂಡಸ್ಟ್ರಿ ಬೆಳೆಯುತ್ತಿದ್ದು, ಒಳ್ಳೆಒಳ್ಳೆಯ ಸಿನಿಮಾ ಪ್ರೇಕ್ಷರನ್ನ ರಂಜಿಸುತ್ತಿದೆ.

ನೋಡಿರಿ

