ಆಂಗ್ಲರ ನಾಡಲ್ಲಿ DSPಯದ್ದೇ ಸದ್ದು – 10 ಪಂದ್ಯ.. 43 ವಿಕೆಟ್.. ಗ್ರೇಟ್!
ಸಿರಾಜ್ ಭಯ್ಯಾಗೆ ಕೊಹ್ಲಿ ಸೆಲ್ಯೂಟ್

ಆಂಗ್ಲರ ನಾಡಲ್ಲಿ DSPಯದ್ದೇ ಸದ್ದು – 10 ಪಂದ್ಯ.. 43 ವಿಕೆಟ್.. ಗ್ರೇಟ್!ಸಿರಾಜ್ ಭಯ್ಯಾಗೆ ಕೊಹ್ಲಿ ಸೆಲ್ಯೂಟ್

ಇಂಗ್ಲೆಂಡ್​ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ರಣರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಆ್ಯಂಡರ್ಸನ್​​- ತೆಂಡೂಲ್ಕರ್​ ಟೆಸ್ಟ್​ ಸರಣಿ 2-2 ಅಂತರದಿಂದ ಸಮ ಬಲಗೊಂಡಿದೆ. ಅದ್ರಲ್ಲೂ ಕೊನೇ ದಿನದ ಕ್ಲೈಮ್ಯಾಕ್ಸ್ ಕ್ಷಣಕ್ಷಣಕ್ಕೂ ರೋಚಕತೆ ಹೆಚ್ಚಿಸಿತ್ತು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಬೌಲಿಂಗ್​ನಲ್ಲಿ ಆಂಗ್ಲರ ಸೊಕ್ಕು ಮುರಿದಿದ್ರು. ಎರಡನೇ ಇನ್ನಿಂಗ್ಸ್‌ನಲ್ಲಿ ಸಿರಾಜ್​ 5 ವಿಕೆಟ್‌ ಪಡೆದರೆ, ಕರ್ನಾಟಕದ ಪ್ರಸಿದ್ಧ ಕೃಷ್ಣ 4 ವಿಕೆಟ್​ ಉರುಳಿಸಿ ಆಂಗ್ಲರ ಸೋಲಿಗೆ ಷರಾ ಬರೆದರು. ಆದ್ರೆ ಕೊನೇ ದಿನ ಮೊಹಮ್ಮದ್ ಸಿರಾಜ್ 3 ವಿಕೆಟ್ ಬೇಟೆಯಾಡಿದ್ರಿಂದ ಇಡೀ ಪಂದ್ಯದ ಗೆಲುವಿನ ಕ್ರೆಡಿಟ್​ ಸಿರಾಜ್​ಗೆ ಸಿಗ್ತಿದೆ. ಅಲ್ದೇ ಸರಣಿಯುದ್ದಕ್ಕೂ ಸಿರಾಜ್ ಪ್ರದರ್ಶನ ಕೂಡ ಅಷ್ಟೇ ಪ್ರೈಸ್​ಲೆಸ್ ಆಗಿತ್ತು.

ಇದನ್ನೂ ಓದಿ : 5ನೇ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ – ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿ ಸಮಬಲ

ಟೆಸ್ಟ್ ಕ್ರಿಕೆಟ್ ಅಂದ್ರೇನೇ ಹಾಗೆ.. ಬ್ಯಾಟರ್ಸ್​ಗಿಂತ ಬೌಲರ್ಸ್​ ಸಿಕ್ಕಾಪಟ್ಟೆ ಸ್ಟ್ರೈನ್ ಆಗ್ತಾರೆ. ಅದ್ರಲ್ಲೂ ವೇಗಿಗಳಿಗಂತೂ ರನ್ ಅಪ್ ತಗೊಂಡು ಬೌಲ್ ಮಾಡೋದ್ರಿಂದ ಇಂಜುರಿ ಚಾನ್ಸಸ್ ಜಾಸ್ತಿ ಇರುತ್ತೆ. ಇದೇ ಕಾರಣಕ್ಕೆ ಜಸ್ಪ್ರೀತ್ ಬುಮ್ರಾಗೆ ಪದೇಪದೆ ರೆಸ್ಟ್ ನೀಡೋದು. ಬಟ್ ಸಿರಾಜ್ ಮಾತ್ರ ಹಾಗಲ್ಲ. ಇಡೀ ಸರಣಿಯುದ್ದಕ್ಕೂ ಕಂಪ್ಲೀಟ್ ಫಿಟ್ ಌಂಡ್ ಫೈನ್ ಆಗಿದ್ರು.

 ಸಿರಾಜ್ ರಿಯಲ್ ವಾರಿಯರ್!

ಐದು ಪಂದ್ಯಗಳ 10 ಇನ್ನಿಂಗ್ಸ್ ಗಳಲ್ಲಿ ಸಿರಾಜ್ ಬೌಲಿಂಗ್

ಎರಡು ಫೈಫರ್ ​ಗಳೊಂದಿಗೆ ಟೋಟಲ್ ಆಗಿ 23 ವಿಕೆಟ್‌

ಭಾರತೀಯ ವೇಗಿಯೊಬ್ಬರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌

ಮೊದಲ ಟೆಸ್ಟ್‌ ನಲ್ಲಿ ಎರಡು, ಎರಡನೇ ಟೆಸ್ಟ್‌ ಪಂದ್ಯದಲ್ಲಿ 7 ವಿಕೆಟ್‌

ಮೂರನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ ಗಳಲ್ಲಿ ನಾಲ್ಕು ವಿಕೆಟ್‌

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಸಾಧ್ಯ

ಐದನೇ ಟೆಸ್ಟ್‌ ನಲ್ಲಿ 9ವಿಕೆಟ್‌ ಪಡೆಯುವ ಮೂಲಕ ಸಿರಾಜ್ 23 ವಿಕೆಟ್

​ಪ್ರವಾಸದಲ್ಲಿ 185.3 ಓವರ್​ ಅಂದ್ರೆ 1113 ಎಸೆತಗಳಲ್ಲಿ 23 ವಿಕೆಟ್

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಸಿರಾಜ್ 5 ಪಂದ್ಯಗಳಲ್ಲಿ 20 ವಿಕೆಟ್‌

ಇಂಗ್ಲೆಂಡ್‌ ಪ್ರವಾಸದಲ್ಲಿ 23 ವಿಕೆಟ್‌ ಗಳನ್ನು ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ

ಇಂಗ್ಲೆಂಡ್ ವಿರುದ್ಧದ ಎಲ್ಲಾ ಇನಿಂಗ್ಸ್ ​ಗಳಲ್ಲೂ ಕಾಣಿಸಿಕೊಂಡ ಬೌಲರ್

ಕಳೆದ 10 ಪಂದ್ಯಗಳಲ್ಲಿ ಪಡೆದಿರುವ ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 43

ಭಾನುವಾರ ಹ್ಯಾರಿ ಬ್ರೂಕ್ ಕ್ಯಾಚ್ ಬಿಟ್ಟು ಅಭಿಮಾನಿಗಳು ಹಾಗೇ ತಂಡದ ಪಾಲಿಗೆ ವಿಲನ್ ಆಗಿದ್ದ ಮೊಹಮ್ಮದ್ ಸಿರಾಜ್ ಸೋಮವಾರ ಮೂರು ವಿಕೆಟ್ ಉರುಳಿಸಿ ಭಾರತದ ಗೆಲುವಿನ ರೂವಾರಿಯಾಗಿದ್ದಾರೆ. ಹೀಗಾಗೇ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಟೀಂ ಇಂಡಿಯಾ ಆಟಗಾರರು ಹಾಗೇ  ಸ್ಪೆಷಲ್ ಆಗಿ ಮೊಹಮ್ಮದ್ ಸಿರಾಜ್ ಅವರನ್ನು ಹಾಡಿ ಹೊಗಳಿದ್ದಾರೆ.

ಓವಲ್​ನಲ್ಲಿ ಗೆದ್ದ ಟೀಂ ಇಂಡಿಯಾವನ್ನ ವಿರಾಟ್ ಕೊಹ್ಲಿ ವಿಶ್ ಮಾಡಿದ್ದಾರೆ. ಕೊಹ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು ಟೀಂ ಇಂಡಿಯಾದ ಮಹಾನ್ ಗೆಲುವು. ಸಿರಾಜ್ ಮತ್ತು ಪ್ರಸಿದ್ಧ್ ಅವರ ಹೋರಾಟದ ಮನೋಭಾವ ಮತ್ತು ಧೈರ್ಯ ನಮಗೆ ಅದ್ಭುತ ಗೆಲುವನ್ನು ನೀಡಿತು. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಸಿರಾಜ್ ಅವರನ್ನು ನಾನು ಇಲ್ಲಿ ವಿಶೇಷವಾಗಿ ಸ್ಮರೀಸುತ್ತೇನೆ. ಸಿರಾಜ್ ಅವರ ಪ್ರದರ್ಶನದಿಂದ ನನಗೆ ತುಂಬಾ ಸಂತೋಷ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಯಾಕ್ಟ್ ಮಾಡಿರೋ ಸಿರಾಜ್, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ ಎಂದಿದ್ದಾರೆ.

Shantha Kumari