ಆಹಾ.. ಅಪ್ಪುಗೆ ಎಷ್ಟು ಚೆಂದ..! – ದಂಪತಿಯನ್ನ ಗಟ್ಟಿಯಾಗಿ ತಬ್ಬಿಕೊಂಡ ಮರಿಯಾನೆ!

ಮರಿಯಾನೆಗಳ ಆಟ ತುಂಟಾಟ ನೋಡುವುದೇ ಚೆಂದ.. ಪುಟಾಣಿ ಆನೆಗಳ ಚೇಷ್ಟೇಗಳನ್ನ ನೋಡ್ತಾ ಇದ್ರೆ ನಗುಬಂದು ಬಿಡುತ್ತೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದೆ. ಆನೆ ಮರಿಯೊಂದು ಪಾರ್ಕ್ನಲ್ಲಿ ಕುಳಿತಿದ್ದ ದಂಪತಿಯನ್ನ ಮುದ್ದಾಡಿದೆ.
ಇದನ್ನೂ ಓದಿ: KRSಗೆ ಟಿಪ್ಪು ಹೆಸರು ಇಡೋಕೆ ಹುನ್ನಾರ – ಕಾಂಗ್ರೆಸ್ ಮೇಲೆ ಆರ್ ಅಶೋಕ್ ಕಿಡಿ
ವೈರಲ್ ಆದ ವಿಡಿಯೋದಲ್ಲಿ ದಂಪತಿ ಪಾರ್ಕ್ನಲ್ಲಿ ಸಮಯ ಕಳೆಯುತ್ತಿರುತ್ತಾರೆ. ಈ ವೇಳೆ ಮರಿಯಾನೆಯೊಂದು ಅಲ್ಲಿಗೆ ಬಂದಿದೆ. ಹಿಂದಿನಿಂದ ಬಂದ ಮರಿಯಾನೆ, ತನ್ನ ಸೊಂಡಿಲನ್ನು ಚಾಚಿ, ಅವರ ಭುಜಗಳ ಮೇಲೆ ಇಡುತ್ತದೆ. ಪ್ರೀತಿಯಿಂದ ತನ್ನ ಮುಂಭಾಗದ ಕಾಲುಗಳನ್ನು ಮೇಲೆತ್ತಿ ವ್ಯಕ್ತಿಯ ಭುಜದ ಮೇಲೆ ಇಡುತ್ತದೆ. ಇದ್ರ ವಿಡಿಯೋವನ್ನ @Amaazing Nature ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಮರಿ ಆನೆಗಳು ಮನುಷ್ಯರು ತುಂಬಾ ಮುದ್ದಾಗಿದ್ದಾರೆಂದು ಭಾವಿಸುತ್ತವೆ, ನಮ್ಮನ್ನು ಅಪ್ಪಿಕೊಳ್ಳಲು ಬಯಸುತ್ತವೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
ಈ ವಿಡಿಯೋ ಈಗಾಗಲೇ 1.3 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು,ಈ ಆನೆಗಳ ತುಂಟಾಟ ನೋಡುವುದೇ ಚಂದ, ಎಷ್ಟು ಮುದ್ದಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಈ ದೃಶ್ಯವು ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಈ ಆನೆಗಳು ಮನುಷ್ಯರನ್ನು ಕಂಡಾಗ ಮಗುವಾಗುತ್ತದೆ. ತನ್ನನ್ನು ಅವರುಗಳು ಪ್ರೀತಿಸಬೇಕೆಂದು ಬಯಸುತ್ತದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ನೋಡಿರಿ

