ಬಂದೇ ಬಿಟ್ಟ ರಾಮಾಚಾರಿ? -ಚಾರು ಆತುರದ ನಿರ್ಧಾರ.. ಮಗು ಕತೆ?
ರುಕ್ಮಿಣಿ ಸೇಡು.. ಕೃಷ್ಣ ಬಲಿ?

ಬಂದೇ ಬಿಟ್ಟ ರಾಮಾಚಾರಿ? -ಚಾರು ಆತುರದ ನಿರ್ಧಾರ.. ಮಗು ಕತೆ?ರುಕ್ಮಿಣಿ ಸೇಡು.. ಕೃಷ್ಣ ಬಲಿ?

ರಾಮಾಚಾರಿ ಸೀರಿಯಲ್‌ನಲ್ಲಿ ವೀಕ್ಷಕರಿಗೆ ಅದೊಂದು ಡೌಟ್‌ ಇನ್ನೂ ಇದೆ.. ಸತ್ತಿದ್ದೂ ಕೃಷ್ಣನಾ? ರಾಮಾಚಾರಿಯಾ ಅನ್ನೋ ಗುಟ್ಟು ಇನ್ನೂ ರಟ್ಟಾಗಿಲ್ಲ.. ಸೀರಿಯಲ್‌ ಕತೆಯಲ್ಲೂ ರಾಮಾಚಾರಿ ಸತ್ತಿದ್ದಾನೆ ಅಂತಾನೇ ತೋರಿಸಲಾಗ್ತಿದೆ. ಚಾರು ಗಂಡನ ನೆನಪಲ್ಲೇ ಕಾಲ ಕಳಿತಾ ಇದ್ದಾಳೆ.. ರಾಮಾಚಾರಿ ಜೊತೆ ಕಳೆದ ಪ್ರತಿ ಕ್ಷಣ ಕೂಡ ಆಕೆಯನ್ನ ಕಾಡ್ತಾ ಇದೆ.. ಆದ್ರೆ ವೀಕ್ಷಕರು ಮಾತ್ರ ಸತ್ತಿದ್ದೂ ಕೃಷ್ಣ ಅಂತಾನೇ ವಾದ ಮಾಡ್ತಿದ್ದಾರೆ? ಹಾಗಾದ್ರೆ ಸೀರಿಯಲ್‌ನಲ್ಲಿ ಮುಂದೆ ದೊಡ್ಡ ಟ್ವಿಸ್ಟ್‌ ಕಾದಿದ್ಯಾ? ಸೀರಿಯಲ್‌ ಕತೆ ಮುಂದೇನಾಗ್ಬೋದು ಅನ್ನೋ ಕ್ಯೂರಿಯಾಸಿಟಿ ಕಾಡಿದೆ.

ಇದನ್ನೂ ಓದಿ: ENGಗೆ 35 ರನ್.. INDಗೆ 4 ವಿಕೆಟ್ – 5ನೇ ಪಂದ್ಯ.. 5ನೇ ದಿನ.. ಗೆಲ್ಲೋದ್ಯಾರು?

ರಾಮಾಚಾರಿ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ರಾಮಾಚಾರಿಯನ್ನ ಸಾಯಿಸ್ಬೇಕು ಅಂತಾ ಕುತಂತ್ರಿಗಳೆಲ್ಲಾ ಒಟ್ಟಾಗಿದ್ರು.. ಅವ್ರು ಅಂದಕೊಂಡಂತೆ ಎಲ್ಲವೂ ನಡೆದಿದೆ.. ನಾವು ಗೆದ್ದೇ ಬಿಟ್ವಿ ಅನ್ನೋ ಖುಷಿಯಲ್ಲಿ ಮಾನ್ಯತಾ, ರುಕ್ಮಿಣಿ, ನವದೀಪ್‌ ಸಕ್ಸೇನಾ ಇದ್ದಾರೆ.. ಇತ್ತ ಗಂಡನನ್ನ ಕಳೆದುಕೊಂಡ ಗರ್ಭಿಣಿ ಚಾರು ರಾಮಾಚಾರಿ ನೆನಪಲ್ಲೇ ಕೊರಗುತ್ತಿದ್ದಾಳೆ. ನನ್ನ ಗಂಡನನ್ನ ಸಾಯಿಸಿದವರನ್ನ ಸುಮ್ನೆ ಬಿಡೋದಿಲ್ಲ ಅಂತಾ ಪಣ ತೊಟ್ಟಿದ್ದಾಳೆ.. ಇದೀಗ ರಾಮಾಚಾರಿ ಕಾರ್ಯ ಮುಗಿದಿದೆ. ರಾಮಾಚಾರಿ ಫೋಟೋ ಮುಂದೆ ಕುಳಿತು ಚಾರುಲತಾ ಕಣ್ಣೀರು ಹಾಕ್ತಿದ್ದಾಳೆ. ಆತನ ಜೊತೆ ಕಳೆದ ಕ್ಷಣವೆಲ್ಲ ಚಾರು ಕಣ್ಣುಮುಂದೆ ಬರ್ತಿದೆ.. ರಾಮಾಚಾರಿ ಸತ್ತಿದ್ದಾನೆ ಅಂತಾ ಚಾರು ಏನೋ ನಂಬಿದ್ದಾಳೆ.. ಆದ್ರೆ ವೀಕ್ಷಕರು ಮಾತ್ರ ಇದನ್ನ ನಂಬೋಕೆ ರೆಡಿ ಇಲ್ಲ.. ರಾಮಾಚಾರಿ ಸತ್ತಿಲ್ಲ.. ಸತ್ತಿರೋದು ಕೃಷ್ಣ ಅಂತ ಕಾಮೆಂಟ್‌ ಹಾಕ್ತಿದ್ದಾರೆ.

ಹೌದು.. ರಾಮಾಚಾರಿ ಸೀರಿಯಲ್‌ ಹೀರೋ.. ಆತ ಸತ್ರೆ ಸೀರಿಯಲ್‌ ಮುಗಿದಂಗೆ ಲೆಕ್ಕ! ಒಬ್ಬ ಬಾಹುಬಲಿ ಹೋದಮೇಲೆ ಇನ್ನೊಬ್ಬ ಬಾಹುಬಲಿ ಬರುವ ಹಾಗೆ ಇನ್ನೊಬ್ಬ ರಾಮಾಚಾರಿ ಬರ್ತಾನಾ? ಸೀರಿಯಲ್‌ನ ರಬ್ಬರ್‌ ತರ ಎಳೆದಿದ್ದು ಸಾಕು.. ರಾಮಾಚಾರಿ ಸತ್ತಿಲ್ಲ.. ಆತ ಬಂದೇ ಬರ್ತಾನೆ.. ಸತ್ತಿರೋದು ಕೃಷ್ಣನೇ.. ರುಕ್ಮಿಣಿ, ಮಾನ್ಯತಾ ರಾಮಾಚಾರಿಗೆ ಚಾಕು ಚುಚ್ಚಿದಾಗಿನಿಂದ ಆತನ ಫೋನ್‌ ಸ್ವಿಚ್‌ ಆಫ್‌ ಬರ್ತಿದೆ.. 100% ಸತ್ತಿರೋದು ಕೃಷ್ಣವೇ ಅಂತ ವೀಕ್ಷಕರು ವಾದ ಮಾಡ್ತಿದ್ದಾರೆ.

ಮತ್ತೊಂದ್ಕಡೆ ಕುತಂತ್ರಿಗಳೆಲ್ಲಾ ಒಟ್ಟಾಗಿ ರಾಮಾಚಾರಿ ಸಾವನ್ನ ಸಂಭ್ರಮಿಸಿದ್ದಾರೆ. ಈ ವೇಳೆ ರಾಮಾಚಾರಿ ಮೇಲೆ ಸೇಡು ತೀರಿಸಿಕೊಂಡಿದ್ದು ಆಯ್ತಲ್ಲ.. ಮಗಳು ತುಂಬು ಗರ್ಭಿಣಿ.. ಹೊಟ್ಟೆಯಲ್ಲಿ ಪುಟ್ಟ ಕಂದಮ್ಮ ಬೆಳಿತಾ ಇದೆ ಅನ್ನೋ ಕರುಣೆ ಕೂಡ ಮಾನ್ಯತಾಗೆ ಇಲ್ಲ.. ರಾಮಾಚಾರಿ ಸತ್ತಿದ್ದಾನೆ ಅಂತ ಅಂದ್ಕೊಂಡು, ಇನ್ನು ನನ್ನ ಬೇಬಿಯನ್ನ ಬಿಟ್ಟುಬಿಡು ಅಂತ ಮಾನ್ಯತಾ ರುಕ್ಮಿಣಿಗೆ ಹೇಳಿದ್ದಾಳೆ. ಆಗ ರುಕ್ಮಿಣಿ ನನ್ನ ಕೆಲಸ ಇನ್ನೂ ಮುಗಿದಿಲ್ಲ.. ಇನ್ನೂ ಬಾಕಿ ಇದೆ  ಅಂತಾ ಹೇಳಿದ್ದಾಳೆ. ರಾಮಾಚಾರಿ ಸತ್ತು ಆಯ್ತಲ್ಲ. ಇನ್ನು ಯಾರನ್ನ ಸಾಯಿಸ್ಬೇಕು ಅಂತ ಮಾನ್ಯತಾ ಕೇಳಿದ್ದಾಳೆ.. ಅದಕ್ಕೆ ರುಕ್ಮಿಣಿ ಚಾರು ಬಿಳಿ ಸೀರೆ ಉಟ್ಕೊಂಡು ವಿಧವೆ ಆದೆನಲ್ಲಾ ಅಂತ ಗೋಳಾಡೋದನ್ನ ನೋಡಿ ಖುಷಿ ಪಡ್ಬೇಕು ಅಂತಾ ಹೇಳಿದ್ದಾಳೆ. ಅದಾದ ಬಳಿಕ ಚಾರು ಬಳೆ ಒಡೆದು ಕುಂಕುಮ ಅಳಿಸಿದ್ದಾರೆ. ಈ ವೇಳೆ ಚಾರು ಕಣ್ಣೀರು ಹಾಕಿದ್ದಾಳೆ. ಏಕಾಏಕಿ ಆಕೆ ರೂಮ್‌ನೊಳಗೆ ಹೋಗಿ ಡೋರ್‌ ಲಾಕ್‌ ಮಾಡಿಕೊಂಡಿದ್ದಾಳೆ.. ಎಷ್ಟು ಬಾಗಿಲು ಬಡಿದ್ರೂ ಆಕೆ ಡೋರ್‌ ಓಪನ್‌ ಮಾಡ್ತಿಲ್ಲ.. ಇದೀಗ ಚಾರು ಆತುರದ ನಿರ್ಧಾರ ತೆಗೆದುಕೊಂಡ್ಲಾ? ಚಾರುನಾ ಕಾಪಾಡೋಕೆ ರಾಮಾಚಾರಿ ಬರ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ..  ಇದೀಗ ಚಾರು ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ ಈಗ ರುಕ್ಮಿಣಿಯೇ ಸಂಕಷ್ಟಕ್ಕೆ ಸಿಲುಕಿದಂತಾಗದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M