ಫೈನಲ್‌ನಲ್ಲಿ ಸೋತಿದ್ದಕ್ಕೆ WCLನಿಂದ ಹೊರ ನಡೆದ ಪಾಕಿಸ್ತಾನ
PCBಗೆ ಬಂತಾ ಕರಾಳ ದಿನ?

ಭಾರತ ಚಾಂಪಿಯನ್ಸ್ ಪಾಕಿಸ್ತಾನ ಚಾಂಪಿಯನ್ಸ್ ಜೊತೆ ಆಡಲ್ಲ ಅಂದಿದ್ದಕ್ಕೆ ಪಾಕಿಸ್ತಾನ ಎಷ್ಟು ಉರ್ಕೋಂಡಿದೆ ಅಂದ್ರೆ ಇನ್ನೂ ನಾವ್ ಲೈಫ್‌ನಲ್ಲಿ WCL ಆಡಲ್ಲ ಅಂತ ಹೇಳ್ತಿದೆ. ಟೂರ್ನಿಯ ಆಯೋಜಕರ ತಾರತಮ್ಯವೇ ಈ ನಿರ್ಧಾರಕ್ಕೆ ಕಾರಣ ಎಂದು ಪಾಕಿಸ್ತಾನ ತಿಳಿಸಿದೆ.
WCL ಟೂರ್ನಿ ಯಿಂದ ಹಿಂದೆ ಸರಿದ ಪಾಕ್
ಪಾಕಿಸ್ತಾನ ಇನ್ಮುಂದೆ WCL ಆಡಲ್ಲ ಅಂತ ತಿರ್ಮಾನಕ್ಕೆ ಬಂದಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪಿಸಿಬಿ WCL ಆಡಳಿತ ಮಂಡಳಿಯ ಈ ನಡೆ ಸಮರ್ಪಕವಲ್ಲ. ಅವರು ಪಕ್ಷಪಾತ ಮತ್ತು ತಾರತಮ್ಯ ಧೋರಣೆ ಅನುಸರಿಸಿದ್ದಾರೆ. ಕ್ರೀಡೆಯ ಮೂಲ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ನಾವು ಈ ಟೂರ್ನಿಯಲ್ಲಿ ಇನ್ನು ಮುಂದೆ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದೆ. ಅಷ್ಟೇ ಅಲ್ಲ ಕ್ರೀಡೆಯ ಮೂಲಕ ಶಾಂತಿ ಎಂಬ ಸಂದೇಶವನ್ನು ಟೂರ್ನಿಯ ಆಯೋಜಕರು ಕೇವಲ ಬಾಯಿಮಾತಿಗೆ ಹೇಳಿದ್ದು ವ್ಯಾಪಾರದ ಉದ್ದೇಶದಿಂದ ರಾಜಕೀಯವನ್ನು ಬಳಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ.
ಪಾಕ್ ಸಿಟ್ಟಾಗಿದ್ದು ಯಾಕೆ ?
ಪಾಕ್ ಟೂರ್ನಿಂದಲೇ ಹಿಂದೆ ಸರಿಯೋಕೆ ಕಾರಣ ಭಾರತಕ್ಕೆ ಅಂಕ ಕೊಟ್ಟಿದ್ದು. ಇಂಗ್ಲೆಂಡ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡ ಲೀಗ್ ಹಂತದಲ್ಲಿ ಆಡಬೇಕಿತ್ತು. ಆದರೆ ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತ ತಂಡದ ಶಿಖರ್ ಧವನ್ ಅವರು ಮೊದಲಿಗೆ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಆಡುವುದಿಲ್ಲ ಎಂದು ಘೋಷಿಸಿದರು. ಆ ನಂತ್ರ ಭಾರತದ ಎಲ್ಲಾ ಆಟಗಾರರು ಇದೇ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಮುಂದಾಗಬಲ್ಲ ಮುಜುಗರ ತಪ್ಪಿಸಲು ಟೂರ್ನಿಯ ಆಯೋಜಕರು ಪಂದ್ಯವನ್ನು ರದ್ದುಗೊಳಿಸಿ ಇತ್ತಂಡಗಳಿಗೂ ಸಮಾನವಾಗಿ ಅಂಕಗಳನ್ನು ಹಂಚಿದ್ದರು. ಇದು ಪಾಕಿಸ್ತಾನದ ವಿರೋಧಕ್ಕೆ ಕಾರಣವಾಗಿತ್ತು. ಬಳಿಕ ಸೆಮಿಫೈನಲ್ ನಲ್ಲೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಸೆಣಸಬೇಕಿತ್ತು. ಆದರೆ ಭಾರತ ಆಡುವುದಿಲ್ಲ ಎಂದು ತಿಳಿಸಿದ ಕಾರಣ ಟೂರ್ನಿಯ ಆಯೋಜಕರು ಪಂದ್ಯವನ್ನು ರದ್ದುಗೊಳಿಸಿ ಪಾಕಿಸ್ತಾನ ತಂಡಕ್ಕೆ ಫೈನಲ್ ಗೆ ಪ್ರವೇಶ ನೀಡಿದರು. ಅಲ್ಲಿಗೆ ಭಾರತ ತಂಡ ಟೂರ್ನಿಯಿಂದ ಹೊರಬಿತ್ತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಗಳಿಂದ ಗೆದ್ದುಗೊಂಡಿತ್ತು. ಪೈನಲ್‌ಗೆ ಹೋಗಿ ಸೋತ ಪಾಕಿಸ್ತಾನ ಮುಜಗರ ತಪ್ಪಿಸಿಕೊಳ್ಳೋಕೆ ಈಗ ನಾವ್ ಇನ್ನೂ ಲೆಜೆಂಡ್ಸ್ ಟೂರ್ನಿ ಆಡಲ್ಲ ಎನ್ನುತ್ತಿದ್ದಾರೆ. ಆಯೋಜಕರು ಭಾರತವನ್ನು ಬೆಂಬಲಿಸುತ್ತಿದ್ದಾರೆ ಎಂದು ಪಿಸಿಬಿ ಆರೋಪಿಸಿದೆ.. ಭಾರತ ಹಿಂದೆ ಸರಿದ್ರಿಂದ ಪಾಕ್‌ಗೆ ನಷ್ಟ ಆಗಿಲ್ಲ ಲಾಭವೇ ಆಗಿದೆ. ಪೈನಲ್ ತನಕ ಹೋಗಿದೆ. ಆದ್ರೆ ಫೈನಲ್‌ನಲ್ಲಿ ಸೋತ ಶತ್ರುದೇಶ ಇನ್ನೂ ನಾವ್ WCl ಆಡಲ್ಲ ಅಂತ ಹೇಳಿದೆ.
ಇದು ಐಸಿಸಿ ಮಾನ್ಯತೆ ಇರುವ ಟೂರ್ನಿಯಲ್ಲ. ಇದರಲ್ಲಿ ಭಾಗವಹಿಸಿದ ಭಾರತ ತಂಡ ಬಿಸಿಸಿಐ ಸುಪರ್ದಿಯಲ್ಲಿ ಆಯ್ಕೆಗೊಂಡಿದ್ದಲ್ಲ. ಇದೊಂದು ಖಾಸಗಿ ಟೂರ್ನಿ. ಆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನಗಾಗಿರುವ ಮುಖಭಂಗದಿಂದ ಪಾರಾಗಲು ಈ ನಿರ್ಧಾರಕ್ಕೆ ಬಂದಿದೆ.

ನೋಡಿರಿ

