ENGಗೆ 35 ರನ್.. INDಗೆ 4 ವಿಕೆಟ್ – 5ನೇ ಪಂದ್ಯ.. 5ನೇ ದಿನ.. ಗೆಲ್ಲೋದ್ಯಾರು?
ಆಂಗ್ಲರಿಗೆ ಟಾರ್ಗೆಟ್ ಗಳೇ ಲೆಕ್ಕಕ್ಕಿಲ್ವಾ?

ಒಂದೂವರೆ ತಿಂಗಳ ಸುದೀರ್ಘ ಟೆಸ್ಟ್ ಸರಣಿ ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರೋ ಐದನೇ ಪಂದ್ಯದ ಕೊನೆ ದಿನದಾಟ ಭಾರೀ ಕುತೂಹಲ ಮೂಡಿಸಿದೆ. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಗೆಲುವಿನ ದಡಕ್ಕೆ ಬಂದು ನಿಂತಿದೆ. ನಾಲ್ಕನೇ ದಿನದಾಟದ ವೇಳೆಗೆ 6 ವಿಕೆಟ್ ಕಳ್ಕೊಂಡು 339 ರನ್ಗಳಿಸಿದೆ. ಸೋ ಇವತ್ತು ಫೈನಲ್ ಡೇ 35 ರನ್ ಗಳಿಸಿದ್ರೆ ಗೆಲುವು ಫಿಕ್ಸ್ ಆಗುತ್ತೆ. ಬಟ್ ಇಲ್ಲಿ ಭಾರತ ಮೂರು ವಿಕೆಟ್ ತೆಗೀಬೇಕಾ ಅಥವಾ ನಾಲ್ಕು ವಿಕೆಟ್ ತೆಗೀಬೇಕಾ ಅನ್ನೋದು ಡೌಟ್ ಇದೆ. ಯಾಕಂದ್ರೆ ಕ್ರಿಸ್ ವೋಕ್ಸ್ಗೆ ಶೋಲ್ಡರ್ ಇಂಜುರಿಯಾಗಿದ್ರಿಂದ ಬ್ಯಾಟಿಂಗ್ಗೆ ಬರಲ್ಲ ಅಂತಾನೇ ಅಂದಾಜಿಸಲಾಗಿತ್ತು. ಬಟ್ ಅವಶ್ಯಕತೆ ಬಂದ್ರೆ ಅವ್ರನ್ನ ಬ್ಯಾಟಿಂಗ್ಗೆ ಇಳಿಸೋ ಚಾನ್ಸಸ್ ಇದೆ. ಹೀಗಾದ್ರೆ ಭಾರತ ನಾಲ್ಕು ವಿಕೆಟ್ಗಳನ್ನ ತೆಗೀಬೇಕಾಗುತ್ತೆ. ಪ್ರಸ್ತುತ ಜೇಮಿ ಸ್ಮಿತ್ ಅಜೇಯ 2 ರನ್ ಹಾಗೇ ಜೇಮಿ ಓವರ್ಟನ್ ಖಾತೆ ತೆರೆಯದೇ ಮೈದಾನದಲ್ಲಿದ್ದಾರೆ. ಌಕ್ಚುಲಿ ಎಲ್ಲವೂ ಅಂದುಕೊಂಡಂತೆಯೇ ಆಗಿದ್ರೆ ಭಾರತ ನಾಲ್ಕನೇ ದಿನದಾಟದಲ್ಲೇ ಪಂದ್ಯವನ್ನ ಗೆಲ್ಲಬೇಕಿತ್ತು. ಬಟ್ ಇವ್ರೇ ಮಾಡಿಕೊಂಡ ಕೆಲ ಮಿಸ್ಟೇಕ್ಸ್ ಪಂದ್ಯ ಕೈಜಾರುವಂತೆ ಮಾಡಿದೆ.
ಇದನ್ನೂ ಓದಿ : ಬಿಗ್ ಚೇಸ್.. IND ಗೆಲುವು ಫಿಕ್ಸ್? – ಓವಲ್ ನಲ್ಲಿ 270+ ರನ್ಸ್ ಗೆದ್ದೇ ಇಲ್ಲ!
ತಪ್ಪಿಗೆ ಬೆಲೆ ತೆರುತ್ತಾ ಭಾರತ?
ಹ್ಯಾರಿ ಬ್ರೂಕ್ ಗೆ ಜೀವದಾನ ನೀಡಿ ಕೆಟ್ಟ ಸಿರಾಜ್
19 ರನ್ ಗಳಿಸಿ ಔಟ್ ಆಗ್ಬೇಕಿದ್ದ ಬ್ರೂಕ್ ಸೆಂಚುರಿ
ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಪಾರ್ಟ್ನರ್ ಶಿಪ್
ಜೊತೆಯಾಟಕ್ಕೆ ಬ್ರೇಕ್ ಹಾಕಲು ಭಾರತ ಕಂಪ್ಲೀಟ್ ಆಗಿ ಫೇಲ್ಯೂರ್
ಇಬ್ಬರೂ ಸೇರಿ 195 ರನ್ ಗಳ ಪಾಟ್ನರ್ ಶಿಪ್ ನೀಡಿದ್ರು
ವೇಗದ ಬೌಲರ್ಗಳನ್ನೇ ನೆಚ್ಚಿಕೊಂಡು ಅವ್ರಿಂದಲೇ ಬೌಲಿಂಗ್
ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಲೇಟಾಗಿ ಬೌಲಿಂಗ್
ಸುಂದರ್ ಅನೇಕ ಬಾರಿ ವಿಕೆಟ್ ತೆಗೆದು ಬ್ರೇಕ್ ಥ್ರ್ಯೂ ತಂದುಕೊಟ್ಟಿದ್ರು
ಪೇಸರ್ಸ್ ಕಡೆಯಿಂದ್ಲೂ ಅಗ್ರೆಸ್ಸಿವ್ ಬೌಲಿಂಗ್ ಸ್ಟ್ರೆಂಥ್ ಕಾಣಿಸಲೇ ಇಲ್ಲ
ಸಿರಾಜ್, ಪ್ರಸಿದ್ಧ್ ಹಾಗೇ ಆಕಾಶ್ ದೀಪ್ ಬೌಲಿಂಗ್ ಎಫೆಕ್ಟಿವ್ ಆಗಿ ಇರ್ಲಿಲ್ಲ
ಸದ್ಯ ಟೀಂ ಇಂಡಿಯಾ ಕಡೆಗಿದ್ದ ಇಡೀ ಪಂದ್ಯ ನಾಲ್ಕನೇ ದಿನದಾಟದಲ್ಲಿ ಕಂಪ್ಲೀಟ್ ಆಗಿ ಇಂಗ್ಲೆಂಡ್ ಪರ ವಾಲಿದೆ. 80 ಪರ್ಸೆಂಟ್ ಆಂಗ್ಲರೇ ಗೆಲ್ಲಬಹುದು ಅಂತಾ ಕ್ರಿಕೆಟ್ ವಿಶ್ಲೇಷಕರು ಪ್ರೆಡಿಕ್ಟ್ ಮಾಡ್ತಿದ್ದಾರೆ. ಹಾಗಂತ ಭಾರತ ಈ ಪಂದ್ಯವನ್ನ ಸೋಲುತ್ತೆ ಅಂತಾನೂ ಅಲ್ಲ. ಎಷ್ಟು ಬೇಗ ವಿಕೆಟ್ಗಳನ್ನ ಬೇಟೆಯಾಡ್ತಾರೋ ಅಷ್ಟು ಒಳ್ಳೇದು. ಇಲ್ಲದೇ ಇದ್ರೆ ಇಂಗ್ಲೆಂಡ್ ತಂಡ ಓವಲ್ ಮೈದಾನದಲ್ಲಿ ಐತಿಹಾಸಿಕ ಗೆಲುವು ಸಾಧಿಸಲಿದೆ.
ಓವಲ್ ಮೈದಾನದ ರೆಕಾರ್ಡ್ಸ್ ನೋಡಿದ್ರೆ ಇಂಗ್ಲೆಂಡ್ ತಂಡ ಪ್ರಸ್ತುತ ಎಷ್ಟರ ಮಟ್ಟಿಗೆ ಸ್ಟ್ರಾಂಗ್ ಇದೆ ಅನ್ನೋದು ಗೊತ್ತಾಗುತ್ತೆ. ಈ ಮೈದಾನದಲ್ಲಿ ಕಳೆದ ಒಂದು ಶತಮಾನದ ಕ್ರಿಕೆಟ್ ಇತಿಹಾಸವನ್ನು ಕೆದಕಿದರೆ ಇಂಗ್ಲೆಂಡ್ ತಂಡ 1902ರಲ್ಲಿ ಆಸ್ಟ್ರೇಲಿಯಾದ ವಿರುದ್ಧ 263 ರನ್ ಗಳನ್ನು ಗಳಿಸಿದ್ದೇ ಈವರೆಗಿನ ಅತೀ ದೊಡ್ಡ ಗೆಲುವು. ಅದಕ್ಕಿಂತ ದೊಡ್ಡ ಮೊತ್ತವನ್ನು ಯಾವ ತಂಡವೂ ಎರಡನೇ ಇನಿಂಗ್ಸ್ ನಲ್ಲಿ ಬೆನ್ನತ್ತಿ ಗೆದ್ದಿದ್ದೇ ಇಲ್ಲ. ಆದ್ರೆ ಅದನ್ನ ಬ್ರೇಕ್ ಮಾಡಿ ಇತಿಹಾಸ ಸೃಷ್ಟಿಸೋಕೆ ಇಂಗ್ಲೆಂಡ್ ರೆಡಿಯಾದಂತಿದೆ.
ಓವಲ್ ಪಿಚ್ ಕನ್ಫ್ಯೂಷನ್!
ಇಂಗ್ಲೆಂಡ್ ಬ್ಯಾಟಿಂಗ್ ಶೈಲಿಗೆ ಈಗ ದೊಡ್ಡ ಮೊತ್ತಗಳೂ ಲೆಕ್ಕಕ್ಕೇ ಇಲ್ಲ
ಓವಲ್ ನಲ್ಲಿ ಮೊದಲ ಎರಡು ದಿನ ರನ್ಸ್ ಇಲ್ಲ, ಆನಂತ್ರ ರನ್ ಮಳೆ
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 224 ರನ್ ಗಳಿಸಲಷ್ಟೇ ಸಾಧ್ಯ
ಇಂಗ್ಲೆಂಡ್ ತಂಡ ಕೂಡ 247 ರನ್ ಗಳಿಸುವಷ್ಟರಲ್ಲಿಯೇ ಆಲೌಟ್
ಭಾರತ 396 ರನ್ ಗಳನ್ನು ಕಲೆ ಹಾಕಿದ್ರೆ ಇಂಗ್ಲೆಂಡ್ 339 ರನ್ಸ್ ಸ್ಕೋರ್
ಇಂಗ್ಲೆಂಡ್ ಪಂದ್ಯವನ್ನ ಗೆಲ್ಲೋಕೆ ಕೇವಲ 35 ರನ್ ಗಳಿಂದ ದೂರ
5ನೇ ದಿನದ ಪಿಚ್ ಹೇಗಿರಬಹುದು ಅನ್ನೋದ್ರ ಮೇಲೆ ಪಂದ್ಯದ ರಿಸಲ್ಟ್

ನೋಡಿರಿ

