ಕ್ಯಾಚ್.. ಬೌಂಡರಿ ಲೈನ್ ಟಚ್.. ಮಿಸ್ಟೇಕ್ – ಮೊಹಮ್ಮದ್ ಸಿರಾಜ್ ಎಡವಟ್ಟಿಗೆ ಸೋಲುತ್ತಾ ಭಾರತ?
ಬ್ರೂಕ್ & ರೂಟ್ ಗೆಲುವಿನ ಸೆಂಚುರಿ!

ಕ್ರಿಕೆಟ್ನಲ್ಲಿ ಯಾವ ಟೈಮಲ್ಲಿ ಬೇಕಿದ್ರೂ ಟ್ವಿಸ್ಟ್ ಸಿಗಬಹುದು. ಮ್ಯಾಚ್ ಟರ್ನಿಂಗ್ ಪಾಯಿಂಟ್ ಪಡೆದುಕೊಳ್ಬೋದು ಅನ್ನೋದಕ್ಕೆ ಭಾನುವಾರ ನಡೆದ ಅದೊಂದು ಪ್ರಮಾದವೇ ಕಾರಣ. ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯ ಇಡೀ ಸರಣಿಯ ನಿರ್ಣಾಯಕ ಪಂದ್ಯ. ಭಾರತ ಗೆದ್ರೆ ಸರಣಿ ಸಮಬಲ. ಆಂಗ್ಲರು ಗೆದ್ರೆ ಇಂಗ್ಲೆಂಡ್ ಕೈವಶ. ಮಸ್ಟ್ ವಿನ್ ಮ್ಯಾಚ್ಗಾಗಿ ಫೀಲ್ಡಿಗಿಳಿದ ಭಾರತ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದ್ರೆ ಬೌಲಿಂಗ್ನಲ್ಲಿ ನಿರೀಕ್ಷಿತ ಯಶಸ್ಸು ಸಿಗ್ಲಿಲ್ಲ. ಅದ್ರಲ್ಲೂ ಫೀಲ್ಡಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ ಮಾಡಿಕೊಂಡ ಎಡವಟ್ಟೇ ದೊಡ್ಡದಾಗಿ ಕಾಣ್ತಿದೆ.
ಇದನ್ನೂ ಓದಿ : ಬಿಗ್ ಚೇಸ್.. IND ಗೆಲುವು ಫಿಕ್ಸ್? – ಓವಲ್ ನಲ್ಲಿ 270+ ರನ್ಸ್ ಗೆದ್ದೇ ಇಲ್ಲ!
1 ವಿಕೆಟ್ ನಷ್ಟ ಹಾಗೇ 50 ರನ್ಗಳೊಂದಿಗೆ 4ನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಟೀಮ್ ಇಂಡಿಯಾ ಶಾಕ್ ಕೊಡ್ತು. ಓಪನರ್ ಬೆನ್ ಡಕೆಟ್ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಕಣಕ್ಕಿಳಿದ ನಾಯಕ ಒಲಿ ಪೋಪ್, ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. 27 ರನ್ಗಳಿಸಿದ್ದ ಪೋಪ್ನ ಸಿರಾಜ್ ಎಲ್ಬಿ ಬಲೆಗೆ ಬೀಳಿಸಿದ್ರು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಹ್ಯಾರಿ ಬ್ರೂಕ್ 21 ಬಾಲ್ಗಳಲ್ಲಿ 19 ರನ್ಸ್ ಕಲೆ ಹಾಕಿದ್ರು. ಈ ವೇಳೆ ಸಿಕ್ಸರ್ ಸಿಡಿಸಲು ಹೋಗಿ ಕ್ಯಾಚ್ ನೀಡಿದ್ರು. ಮತ್ತೊಂದು ಬಿಗ್ ವಿಕೆಟ್ ಬಿತ್ತು ಅನ್ಕೊಳ್ಳುವಾಗ್ಲೇ ಟೀಂ ಇಂಡಿಯಾ ಶಾಕಿಂಗ್ ಆಗುವಂತ ಸತ್ಯ ಗೊತ್ತಾಗಿತ್ತು.
ಟೀಂ ಇಂಡಿಯಾ ಫೀಲ್ಡಿಂಗ್ ವೇಳೆ ಮೊಹಮ್ಮದ್ ಸಿರಾಜ್ ಮಾಡಿದ ಎಡವಟ್ಟೊಂದು ಟೀಮ್ ಇಂಡಿಯಾ ಪಾಲಿಗೆ ಕಾಸ್ಟ್ಲಿಯಾಗಿ ಪರಿಣಮಿಸಿದೆ. ಎರಡನೇ ಇನಿಂಗ್ಸ್ ನಲ್ಲಿ ಹ್ಯಾರಿ ಬ್ರೂಕ್ ನೀಡಿದ ಕ್ಯಾಚ್ ಹಿಡಿದ ಸಿರಾಜ್ ಬೌಂಡರಿ ಲೈನ್ ಟಚ್ ಮಾಡಿದ್ದರು. ಸೋ ಅಲ್ಲಿಗೆ ಬ್ರೂಕ್ಗೆ ಜೀವದಾನ ಸಿಕ್ಕಿತ್ತು. ಅದು ಎಂಥಾ ಟೈಮಲ್ಲಿ ಅಂದ್ರೆ ಬ್ರೂಕ್ 11 ರನ್ ಗಳಿಸಿದ್ದ ವೇಳೆ. ಇದೇ ಲೈಫ್ ಲೈನ್ ಮುಂದೆ ಇಂಥಾ ಹೊಡೆತ ಕೊಡುತ್ತೆ ಅಂತಾ ಯಾರೊಬ್ರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಸಿಕ್ಕ ಅವಕಾಶವನ್ನ ಬಳಸಿಕೊಂಡ ಹ್ಯಾರಿ ಬ್ರೂಕ್ ಆ ಬಳಿಕ ಕಲೆಹಾಕಿದ್ದು ಬರೋಬ್ಬರಿ 92 ರನ್ಗಳು. ಜೀವದಾನ ಪಡೆದ ಹ್ಯಾರಿ ಬ್ರೂಕ್ ಡೇಂಜರಸ್ ಆಗಿ ಬ್ಯಾಟ್ ಬೀಸಿದ್ರು. ಬ್ರೂಕ್ ಮತ್ತು ಜೋ ರೂಟ್ 4ನೇ ವಿಕೆಟ್ಗೆ 195 ರನ್ಗಳ ಜೊತೆಯಾಟವಾಡಿದ್ರು. ಈ ಮೂಲಕ ನಾಲ್ಕನೇ ದಿನದಾಟದಲ್ಲಿ ಕೇವಲ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 14 ಫೋರ್ ಗಳೊಂದಿಗೆ 111 ರನ್ ಬಾರಿಸಿದರು. ಹ್ಯಾರಿ ಬ್ರೂಕ್ ಸಿಡಿಸಿದ ಈ ಭರ್ಜರಿ ಸೆಂಚುರಿ ಹಾಗೇ ರೂಟ್ ಸೆಂಚುರಿ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಕಲೆಹಾಕಿದೆ.
ಸದ್ಯ ಐದನೇ ದಿನದಾಟದಲ್ಲಿ ಒಂದು ಟೀಂ ಅಂತೂ ಗೆಲ್ಲೋದು ಪಕ್ಕಾ ಇದೆ. ಕೇವಲ 35 ರನ್ ಗಳಿಸಿದ್ರೆ ಗೆಲುವು ಇಂಗ್ಲೆಂಡ್ ಪಾಲಾಗಲಿದೆ. ಬಟ್ ಟೀಮ್ ಇಂಡಿಯಾ 4 ವಿಕೆಟ್ ಕಬಳಿಸಿದರೆ ಗೆಲುವನ್ನ ತನ್ನದಾಗಿಸಿಕೊಳ್ಳಬಹುದು.

ನೋಡಿರಿ

