ಸಿಕ್ಕೇ ಬಿಡ್ತಾ ಗೌತಮ್‌ ಮೊದಲ ಮಗು? – ಶುರುವಾಯ್ತು ಭೂಮಿ OVER Acting!

ಸಿಕ್ಕೇ ಬಿಡ್ತಾ ಗೌತಮ್‌ ಮೊದಲ ಮಗು? – ಶುರುವಾಯ್ತು ಭೂಮಿ OVER Acting!

ಭೂಮಿಕಾ ಎಲ್ಲ ಸಂಕಷ್ಟಗಳಿಂದ ಪಾರಾಗಿ ಕಡೆಗೂ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.. ಮೊದಲ ಮಗು ಕಿಡ್ನ್ಯಾಪ್‌ ಆಗಿದ್ರೆ, ಎರಡನೇ ಮಗು ಭೂಮಿ ಮಡಿಲಲ್ಲಿದೆ. ಮೊದಲ ಮಗುವನ್ನ ಹುಡುಕಲು ಗೌತಮ್‌ ಕೂಡ ಒದ್ದಾಡ್ತಿದ್ದಾನೆ.  ಆದ್ರೀಗ ಭೂಮಿಕಾ ಕೈಗೆ ಮಗು ಬರ್ತಿದ್ದಂತೆ ಆಕೆಯ ವರ್ತನೆ ಕೂಡ ಚೇಂಜ್‌ ಆಗಿದೆ.. ಮಗು ಮೇಲಿನ ಪ್ರೀತಿ ಓಕೆ.. ಆದ್ರೆ ಓವರ್‌ ಆಕ್ಟಿಂಗ್‌ ಯಾಕೆ ಅಂತ ವೀಕ್ಷಕರೇ ಕೇಳ್ತಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಸಮಂತಾ? – ಸ್ಯಾಮ್‌ ಬೆರಳಲ್ಲಿ ಹೊಸ ರಿಂಗ್‌!

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಮನೆಯಲ್ಲೇ ಇದ್ದುಕೊಂಡು ಶಕುಂತಲಾ, ಗೌತಮ್‌ ವಂಶವನ್ನ ಸರ್ವನಾಶ ಮಾಡಲು ಹೊರಟಿದ್ದಾಳೆ. ಇಷ್ಟು ದಿನ ಶಕುಂತಲಾ ಆಟ ನಡಿತಾ ಇತ್ತು. ಆದ್ರೆ ಭೂಮಿಕಾ ಬಂದ್ಮೇಲೆ ಶಕುಂತಲಾ ಆಟಕ್ಕೆ ಅಲ್‌ಮೋಸ್ಟ್‌ ಬ್ರೇಕ್‌ ಬಿದ್ದಿದೆ.. ಈಗ ಭಾಗ್ಯ ಆರೋಗ್ಯದಲ್ಲೂ ಚೇತರಿಕೆ ಕಾಣ್ತಿದೆ. ಭೂಮಿಕಾಗೆ ಮಗು ಆಗ್ಬಾರ್ದು.. ವಂಶ ಬೆಳಿಬಾರ್ದು ಅಂತಾ ಶಕುಂತಲಾ ಮಗುವನ್ನ ಸಾಯಿಸಲು ಹೊರಟಿದ್ಲು.. ಆದ್ರೆ  ಭೂಮಿಕಾ ಎಲ್ಲಾ ಸಂಕಷ್ಟಗಳಿಂದ ಪಾರಾಗಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದ್ರೆ ಒಂದು ಮಗುವನ್ನ ಜೈದೇವ್‌ ಶಕುಂತಲಾ ಸೇರಿಕೊಂಡು ಕಿಡ್ನ್ಯಾಪ್‌ ಮಾಡಿದ್ದಾರೆ. ಇನ್ನೊಂದು ಮಗು ಈಗ ಗೌತಮ್‌ ಮನೆಯಲ್ಲಿದೆ. ಆದ್ರೆ, ಆ ಮಗುವಿನ ಮೇಲೆ ಕೂಡ ಕುತಂತ್ರಿಗಳ ವಕ್ರ ದೃಷ್ಠಿ ಬಿದ್ದಿದೆ. ಶಕುಂತಲಾ ಹಾಗೂ ಜೈದೇವ್‌ ಸೇರ್ಕೊಂಡು ಗಂಡು ಮಗುವನ್ನ ಕೂಡ ಕಿಡ್ನ್ಯಾಪ್‌ ಮಾಡಲು ಮುಂದಾಗಿದ್ರು.. ಆದ್ರೆ ಮಲ್ಲಿ ಸುಧಾ ಆ ಮಗುವನ್ನ ಬಚಾವ್‌ ಮಾಡಿದ್ದಾಳೆ. ಬಳಿಕ ಈ ವಿಚಾರವನ್ನ ಗೌತಮ್‌ಗೆ ಹೇಳಿದ್ದಾಳೆ. ಇದೀಗ ಗೌತಮ್‌ ಕಿಡ್ನ್ಯಾಪರ್‌ ಯಾರು? ಮಗು ಎಲ್ಲಿದೆ ಅಂತ ಹುಡುಕ್ತಿದ್ದಾನೆ.. ಆದ್ರೆ ಈ ವಿಚಾರ ಭೂಮಿಗೆ ಗೊತ್ತಿಲ್ಲ.. ಈಗಾಗಲೇ ಭೂಮಿ ಮಗು ವಿಚಾರದಲ್ಲಿ ಫುಲ್‌ ಪೊಸೆಸಿವ್‌ ಆಗಿದ್ದಾಳೆ. ಮೊದಲ ಮಗು ಕಿಡ್ನ್ಯಾಪ್‌ ಆಗಿರೋ ವಿಚಾರ ಆಕೆಗೆ ಗೊತ್ತಾದ್ರೆ ಆಕೆಗೆ ಆಘಾತ ಆಗುತ್ತೆ. ಇದ್ರಿಂದಾಗಿ ಭೂಮಿ ಜೀವಕ್ಕೆ ಅಪಾಯ ಕೂಡ ಇದೆ ಅಂತಾ ಡಾಕ್ಟರ್‌ ಹೇಳಿದ್ದಾರೆ. ಹೀಗಾಗಿ ಗೌತಮ್‌ ಈ ವಿಚಾರವನ್ನ ಮುಚ್ಚಿಟ್ಟಿದ್ದಾನೆ. ಇದೀಗ ಗೌತಮ್‌ ಮಗುವನ್ನ ಹೇಗಾದ್ರೂ ಮಾಡಿ ಹುಡುಕಿಸುತ್ತಾನೆ.. ಭೂಮಿ ಮಡಿಲಿಗೆ ಆ ಪುಟ್ಟ ಕಂದಮ್ಮ ಸೇರೆ ಸೇರುತ್ತೆ.. ಆದ್ರೀಗ ವೀಕ್ಷಕರು ಭೂಮಿಕಾ ಮೇಲೆ ಅದ್ಯಾಕೋ ಸಿಟ್ಟಾಗಿದ್ದಾರೆ. ಭೂಮಿಕಾ ಕೈಗೆ ಮಗು ಬರ್ತಿದ್ದಂತೆ ಓವರ್‌ ಆಕ್ಟಿಂಗ್‌ ಶುರುವಾಗಿದೆ ಅಂತಾ ಹೇಳ್ತಿದ್ದಾರೆ.

ಹೌದು.. ಭೂಮಿಕಾ ಪ್ರೆಗ್ನೆಂಟ್‌ ಆದಾಗಿನಿಂದ ಭೂಮಿಕಾ ಪಾತ್ರ ಚರ್ಚೆಯಲ್ಲಿದೆ. ಭೂಮಿಕಾ ಪ್ರೆಗ್ನೆಂಟ್‌ ಆಗಿದ್ದಾಗ, ಆಕೆ ಹೊಟ್ಟೆ ಹಿಟ್ಕೊಂಡು ಹೋಗೋ ರೀತಿ ಟ್ರೋಲ್‌ ಆಗಿತ್ತು.. ಮಗು ಹುಟ್ಟಿದ ಬಳಿಕ ಭೂಮಿಕಾ ಸ್ಟೈಲ್‌ ಕೂಡ ಚೇಂಜ್‌ ಆಯ್ತು.. ಸಾಮಾನ್ಯವಾಗಿ ಬಾಣಂತಿಯರು ಕಿವಿ ಬಟ್ಟೆ ಸುತ್ತಿಕೊಂಡಿರ್ತಾರೆ. ಆದ್ರೆ ಭೂಮಿಕಾ ಚೆಂದ ಸೀರೆ ಉಟ್ಕೊಂಡು ತಲೆ ತುಂಬಾ ಹೂ ಮುಡ್ಕೊಂಡಿರ್ತಾಳೆ. ಅದ್ರ ಮೇಲೆ ಶಾಲ್ ಹಾಕಿಕೊಂಡು ಇರ್ತಾಳೆ.. ಇದ್ರು ಕೂಡ ಟ್ರೋಲ್‌ ಪೇಜ್‌ಗಳಿಗೆ ಕಂಟೆಂಟ್‌ ಆಗ್ಬಿಟ್ಟಿದೆ. ಬಾಣಂತಣ ಸಮಯದಲ್ಲಿ ಯಾರಾದ್ರು ದುಬಾರಿ ಸೀರೆ ಉಟ್ಟಿರ್ತಾರಾ?, ಹೂವು ಮುಡಿದುಕೊಂಡು ದಿನವೂ ಓಡಾಡುವ ಬಾಣಂತಿಯನ್ನು ನಾನು ಇದುವರೆಗೂ ನೋಡಿಯೇ ಇಲ್ಲ ಎಂದು ಮತ್ತೆ ಕೆಲವರು ಟ್ರೋಲ್​ ಮಾಡಿದ್ರು.. ಇದೀಗ ಭೂಮಿಕಾ ಓವರ್‌ ಆಕ್ಟಿಂಗ್‌ ಬೇಡವಾಗಿತ್ತು ಅಂತಾ ಹೇಳ್ತಿದ್ದಾರೆ.

ಭೂಮಿಕಾ ಮಗು ಜೊತೆ ಮುದ್ದು ಮುದ್ದಾಗಿ ಮಾತಾಡ್ತಿರ್ತಾಳೆ.. ಆದ್ರೆ ಗೌತಮ್‌ ಜೊತೆ ಕೂಡ ಹಂಗೇ ಮಾತಾಡ್ತಾಳೆ.. ಇದು ತುಂಬಾ ಓವರ್‌ ಅನ್ನಿಸ್ತಿದೆ.. ಭೂಮಿಕಾ ನೀನು ಜಸ್ಟ್‌ ಆಕ್ಟಿಂಗ್‌ ಮಾಡಿದ್ರೆ ಸಾಕಮ್ಮ.. ನಮ್ಮ ಎರಡು ಕಣ್ಣುಗಳಿಂದ ಓವರ್‌ ಎಕ್ಸ್‌ಪ್ರೆಷನ್ ನೊಡೋಕೆ ಆಗ್ತಿಲ್ಲ.. ವಾಯ್ಸ್‌ ಕೂಡ ಕೆಟ್ಟದಾಗಿ ಕೇಳಿಸುತ್ತೆ.. ಭೂಮಿಕಾ ಯಾವತ್ತಿಗೂ ರೆಬಲ್‌ ಆಗಿ ಇದ್ರೆ ನೋಡೋಕೆ ಚೆಂದ ಅಂತ ಹೇಳ್ತಿದ್ದಾರೆ ಸೀರಿಯಲ್‌ ಫ್ಯಾನ್ಸ್.‌

Shwetha M