KKRಗೆ KL ರಾಹುಲ್ ನಾಯಕ? – ಡೆಲ್ಲಿಯಿಂದ 25 ಕೋಟಿಗೆ ಡೀಲ್!?
ಕೊಲ್ಕತ್ತಾದಿಂದ ರಹಾನೆ ಕಿಕ್ಔಟ್?

KKRಗೆ KL ರಾಹುಲ್ ನಾಯಕ? – ಡೆಲ್ಲಿಯಿಂದ 25 ಕೋಟಿಗೆ ಡೀಲ್!?ಕೊಲ್ಕತ್ತಾದಿಂದ ರಹಾನೆ ಕಿಕ್ಔಟ್?

ಈ ಸಲ ಕಪ್ ಆರ್‌ಸಿಬಿ ಪಾಲಾಗಿದೆ.. ಐಪಿಎಲ್‌ 2025 ಸಿಸೀನ್ ಚರ್ಚೆ ಇನ್ನೂ ಹಸಿ ಹಸಿಯಾಗಿರುವಾಗಲೇ ಎಲ್ಲಾ ಪ್ರಾಂಚೈಸಿಗಳು 2026ರ ಸೀಜನ್‌ಗೆ ರೆಡಿಯಾಗುತ್ತಿವೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕೆಕೆಆರ್ ತಂಡ ಸೀಸನ್ 18 ರಲ್ಲಿ ಕಳಪೆ ಪ್ರದರ್ಶ ತೋರಿಸಿದ್ದು, ಸೀಸನ್ 19 ಕ್ಕೆ ಬಲಿಷ್ಟ ತಂಡ ಕಟ್ಟೋಕೆ ರೆಡಿಯಾಗಿದೆ. ಅದ್ದಕ್ಕಾಗಿ ತಮ್ಮ ತಂಡಕ್ಕೆ ಕನ್ನಡಿಗನನ್ನ ಕರೆಸಿಕೊಳ್ಳೋಕೆ ಸಕರ್ಸ್ ಮಾಡ್ತಿದೆ..

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಈಗಲೇ ಕಸರತ್ತು ಆರಂಭಿಸಿದೆ. ಕೆಕೆಆರ್‌ ತನ್ನ ತಂಡದ ಕೋಚಿಂಗ್‌ ಸಿಬ್ಬಂದಿ ಹಾಗೂ ನಾಯಕತ್ವ ಸೇರಿದಂತೆ ಹಲವು ಚೇಂಜಸ್ ಮಾಡ್ತಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕಳೆದ ಆವೃತ್ತಿಯ ಕೆಕೆಆರ್‌ ತಂಡವನ್ನು ಮನ್ನಡೆಸಿದ್ದ ಅಜಿಂಕ್ಯ ರಹಾನೆ ಬದಲು ಸೀಜನ್‌ 19ಕ್ಕೆ ಕೆಎಲ್‌ ರಾಹುಲ್‌ರನ್ನ  ಕರೆ ತಂದು ನಾಯಕತ್ವವನ್ನು ನೀಡಲು ಕೋಲ್ಕತಾ ಫ್ರಾಂಚೈಸಿ ಎದುರು ನೋಡುತ್ತಿದೆ.

2024ರ ಐಪಿಎಲ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೂರನೇ ಬಾರಿ ಚಾಂಪಿಯನ್‌ ಆಗಿತ್ತು. ಬಳಿಕ 2025ರ ಟೂರ್ನಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಅವರು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ತೆರಳುವ ಮೂಲಕ ಅಲ್ಲಿ ತಂಡವನ್ನು ಫೈನಲ್‌ ತನಕ ತೆಗೆದುಕೊಂಡು ಹೋಗಿದ್ದರು. ಶ್ರೇಯಸ್‌ ಅಯ್ಯರ್‌ ನಿರ್ಗಮಿಸಿದ ಬಳಿಕ ಅಜಿಂಕ್ಯ ರಹಾನೆಗೆ ಕೆಕೆಆರ್‌ ತಂಡದ ನಾಯಕತ್ವವನ್ನು ನೀಡಲಾಗಿತ್ತು. ಕೆಕೆಆರ್‌ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದ ಮೂಲಕ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು. ತೀರ ಕಳಪೆ ಪ್ರದರ್ಶನ ನೀಡಿತ್ತು.. ಇದು ಕೆಕೆಆರ್ ಪ್ರಾಂಚೈಸಿಯನ್ನ ಕೆರಳಸಿದ್ದು, 19ನೇ ಸೀಜನ್‌ಗೆ ಸ್ಟ್ರಾಂಗ್ ಟೀಂ ಕಟ್ಟೋಕೆ ಮುಂದಾಗಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ಗೆ ಕೆಎಲ್‌  ರಾಹುಲ್‌ ನಾಯಕ?

2026ರ ಐಪಿಎಲ್‌ ಟೂರ್ನಿಯ ನಿಮಿತ್ತ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಕೆಎಲ್‌ ರಾಹುಲ್‌ ಅವರನ್ನು ಟ್ರೇಡ್‌ ಡೀಲ್‌ ಮೂಲಕ ಕರೆಸಿಕೊಳ್ಳಲು ಕೆಕೆಆರ್‌ ಎದುರು ನೋಡುತ್ತಿದೆ ಅನ್ನೋ ಬಗ್ಗೆ ವರದಿಯಾಗಿದೆ.  ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಕಳೆದ ಆವೃತ್ತಿಯಲ್ಲಿ 14 ಕೋಟಿ ರೂ. ಗಳಿಗೆ ಕೆಎಲ್‌ ರಾಹುಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಖರೀದಿಸಿತ್ತು. ಅದರಂತೆ ರಾಹುಲ್‌ 500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದರು. ಇದೀಗ ಅವರು ಕೋಲ್ಕತಾ ತಂಡಕ್ಕೆ ಬಂದರೆ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ಬ್ಯಾಟಿಂಗ್‌ ಹಾಗೂ ನಾಯಕತ್ವದ ಜೊತೆಗೆ ಕೆಎಲ್‌ ರಾಹುಲ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ಕೂಡ ನಿರ್ವಹಿಸಬಹುದು. ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳನ್ನು ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿರುವ ಕೆ ಎಲ್ ರಾಹುಲ್‌ ಅವರನ್ನು ಕರೆತಂದು ನಾಯಕತ್ವ ಪಟ್ಟ ಕಟ್ಟಬೇಕೆನ್ನುವುದು ಕೆಕೆಆರ್ ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ ಹೀಗಾಗಿ ಕೆಕೆಆರ್ ಫ್ರಾಂಚೈಸಿಯು ಕೆಎಲ್ ರಾಹುಲ್‌ಗೆ ಬರೋಬ್ಬರಿ 25 ಕೋಟಿ ರುಪಾಯಿ ನೀಡಲು ರೆಡಿಯಿದೆ. ಟ್ರೇಡ್‌ ವಿಂಡೋದಲ್ಲಿ ಕೇವಲ ಆಟಗಾರರಿಗೆ ಹಣ ನೀಡಿ ತಮ್ಮ ಕಡೆ ಸೆಳೆದುಕೊಳ್ಳಬಹುದು. ಇದಲ್ಲದಿದ್ದರೇ ಆಟಗಾರರ ವಿನಿಮಯವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವ ಆಟಗಾರರನ್ನು ಡೆಲ್ಲಿಗೆ ನೀಡಿ ಕೆ ಎಲ್ ರಾಹುಲ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಮ್ಮ ಕಡೆ ಸೆಳೆಯಲು ಮುಂದಾಗಿದೆ ಎನ್ನುವುದಕ್ಕೆ ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

Kishor KV