ಹೊಸ ಶೋಗೆ ಐಶು ಜಡ್ಜ್! – BBK ರಜತ್‌, ಸಮೀರ್‌ಗೂ ಚಾನ್ಸ್!
 ನಾವು ನಮ್ಮವರು‌ ಸ್ಪರ್ಧಿಗಳು ಇವರೇ!

ಹೊಸ ಶೋಗೆ ಐಶು ಜಡ್ಜ್! – BBK ರಜತ್‌, ಸಮೀರ್‌ಗೂ ಚಾನ್ಸ್! ನಾವು ನಮ್ಮವರು‌ ಸ್ಪರ್ಧಿಗಳು ಇವರೇ!

ಭರ್ಜರಿ ಬ್ಯಾಚುಲರ್ಸ್‌  ಸೀಸನ್‌ 2 ಮುಗಿತು.. ಇನ್ಯಾವ ಹೊಸ ಶೋ ಬರುತ್ತೆ ಅಂತ ಕಾಯ್ತಾ ಇದ್ದ ವೀಕ್ಷಕರಿಗೆ ಜೀ ಕನ್ನಡ ವಾಹಿನಿ ಹೊಸ ಶೋ ತರ್ತಿದೆ. ಇಂದಿನಿಂದ ನಾವು ನಮ್ಮವರು ಹೊಸ ರಿಯಾಲಿಟಿ ಶೋ ವೀಕ್ಷಕರನ್ನ ರಂಜಿಸಲಿದೆ. ಇದೀಗ ಈ ಕಾರ್ಯಕ್ರಮ ವೀಕ್ಷಕರಲ್ಲಿ ಭಾರಿ ಕ್ಯೂರಿಯಾಸಿಟಿ ಮೂಡಿಸಿದೆ.

ಇದನ್ನೂ ಓದಿ: ENG ಚೆಂಡಾಡಿದ ಸಿರಾಜ್ & ಪ್ರಸಿದ್ಧ್ – T20I ಬ್ಯಾಟಿಂಗ್ ನಂಬಿ ಕೆಟ್ಟ ಆಂಗ್ಲರು!

ಸದಾ, ವಿಭಿನ್ನ ಕಥೆಯುಳ್ಳ ಧಾರಾವಾಹಿ… ಹೊಸ ಹೊಸ ರಿಯಾಲಿಟಿ ಶೋಗಳ ಮೂಲಕ ಜೀಕನ್ನಡ ವಾಹಿನಿ ಪ್ರೇಕ್ಷಕರ ಮನರಂಜಿಸ್ತಿದೆ.. ಈಗಾಗಲೇ ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಸೂಪರ್ ಕ್ವೀನ್, ಭರ್ಜರಿ ಬ್ಯಾಚುಲರ್ಸ್‌, ಮಹಾನಟಿಯಂತಹ ಅನೇಕ ರಿಯಾಲಿಟಿ ಶೋಗಳ ಮೂಲಕ ವಾಹಿನಿ ಸಾಕಷ್ಟು ಹೆಸರು ಮಾಡಿದೆ. ಕಳೆದ ವಾರ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2  ಶೋ ಮುಕ್ತಾಯಗೊಂಡಿದೆ. ಇಂದಿನಿಂದ ಮತ್ತೊಂದು ವಿನೂತನವಾದ ರಿಯಾಲಿಟಿ ಶೋವನ್ನ ಪ್ರೇಕ್ಷಕರ ಮುಂದಿಡ್ತಿದೆ ಜೀಕನ್ನಡ ವಾಹಿನಿ.. ನಾವು ನಮ್ಮವರು ಶೋ ಇಂದಿನಿಂದ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ನಾವು ನಮ್ಮವರು ಇದು ಪಕ್ಕಾ ಫ್ಯಾಮಿಲಿ ಶೋ ಆಗಿದೆ. ಸಂಬಂಧಗಳ ನಡುವಿನ ಪ್ರೀತಿ, ಮಹತ್ವ ಸಾರುವ ನಾವು ನಮ್ಮವರು ಶೋ ಕಿರುತೆರೆ ಇತಿಹಾಸದಲ್ಲಿ ವಿಭಿನ್ನ ಪ್ರಯತ್ನವಾಗಿದೆ. ಸೆಲೆಬ್ರಿಟಿಗಳು  ತಮ್ಮ ಕುಟುಂಬದವರ ಜೊತೆ ಹೇಗೆ ಇರ್ತಾರೆ.. ಅವ್ರ ನಡುವಿನ ಬಾಂಧವ್ಯ ಹೇಗಿದೆ ಅನ್ನೋದನ್ನ ಈ ಶೋನಲ್ಲಿ ತೋರಿಸಲಾಗ್ತಿದೆ. ಇದ್ರಲ್ಲಿ ಸೆಲೆಬ್ರಿಟಿಗಳಿಗೆ ಹಾಗೂ ಅವ್ರ ಫ್ಯಾಮಿಲಿಗೆ ಟ್ವಿಸ್ಟ್ ಇರುವ ಬೇರೆ ಬೇರೆ ಟಾಸ್ಕ್ಸ್ ಗಳನ್ನ ಕೊಡಲಾಗುತ್ತೆ.. ಹೀಗಾಗಿ 100% ಮನರಂಜನೆ ಇರೋದಂತೂ ಪಕ್ಕಾ!  ಅಷ್ಟೇ ಅಲ್ಲದೇ ಪ್ರತಿ ವಾರ ವಿಭಿನ್ನ ಬಗೆಯ ರೌಂಡ್ಸ್ ಕೂಡ ಇರಲಿದೆ. ಹೀಗಾಗಿ ಯಾರು ಹೇಗೆ ಪರ್ಫಾರ್ಮ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.

ಇನ್ನು ಈ ಹೊಚ್ಚ ಹೊಸ ಶೋನಲ್ಲಿ ಯಾರಲ್ಲಾ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ.. ಈ ಶೋನಲ್ಲಿ  ಬಿಗ್‌ ಬಾಸ್‌ ಖ್ಯಾತಿಯ ರಜತ್ ಹಾಗೂ ಅವ್ರ ಪತ್ನಿಅಕ್ಷತಾ, ರಾಜಾರಾಣಿ ಶೋ ಮಾಜಿ ಸ್ಪರ್ಧಿಗಳಾದ ಸುಜಯ್-ಸಿಂಚನ, ಪ್ರಿಯ ಕೇಸರಿ-ಶಿವರಾಂ, ಸೋಶಿಯಲ್‌ ಮೀಡಿಯಾ ಸ್ಟಾರ್ಸ್‌ ಅಲ್ಲು ರಘು-ಸುಶ್ಮಿತಾ, ಮಲ್ಲಯ್ಯ-ನೀಲಮ್ಮ, ಮೋಹನ್ ಕುಮಾರ್-ಪಲ್ಲವಿ, ವಿಶಾಲ್ ಹೆಗ್ಡೆ-ಪ್ರಿಯ, ಶಿಲ್ಪಿ-ಶೈಲೇಶ್, ಬಿಗ್‌ಬಾಸ್‌ ಖ್ಯಾತಿಯ ಸಮೀರ್ ಆಚಾರ್ಯ-ಶ್ರಾವಣಿ  ಸ್ಪರ್ಧಿಸುತ್ತಿದ್ದಾರೆ.. ಇವ್ರರೆಲ್ಲಾ ಕುಟುಂಬದವರು ಕೂಡ ಕೆಲ ಟಾಸ್ಕ್‌ಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗ್ತಿದೆ..

ಇನ್ನು ಈ ಶೋನ ನಿರಂಜನ್‌ ದೇಶಪಾಂಡೆ ನಾವು ನಮ್ಮವರು ಶೋನ ಹೋಸ್ಟ್‌ ಮಾಡ್ತಾ ಇದ್ದಾರೆ. ಸ್ಯಾಂಡಲ್​ವುಡ್​ನ ನಟಿ ಅಮೂಲ್ಯ ಈ  ಶೋನಲ್ಲಿ ಜಡ್ಜ್‌ ಆಗಿ ಭಾಗವಹಿಸ್ತಿದ್ದಾರೆ.  ಅವ್ರ ಜೊತೆ ಎವರ್ಗ್ರೀನ್ ಚೆಲುವೆ.. ಪೊಲಿಟಿಷಿಯನ್ ತಾರಾ ಅನುರಾಧ, ನಟ ಶರಣ್ ಅವರು ತೀರ್ಪುಗಾರರಾಗಿ ಈ ಶೋನಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಸಂಬಂಧಗಳನ್ನು ಸಂಭ್ರಮಿಸೋ ‘ನಾವು ನಮ್ಮವರು ರಿಯಾಲಿಟಿ ಶೋ  ಆರಂಭವಾಗ್ತಿದೆ.. ಕುಟುಂಬದ ಹಳೆಯ ನೆನಪುಗಳನ್ನು ಸೆಲೆಬ್ರಿಟಿ ಸ್ಪರ್ಧಿಗಳ ಮೂಲಕ ವೀಕ್ಷಕರ ಮುಂದಿಡುವ ವಿಭಿನ್ನ ಪ್ರಯತ್ನ ಇದಾಗಿದೆ. ಈ ಶೋ ವೀಕ್ಷಕರ ಮನ ಗೆಲ್ಲುತ್ತಾ ಅಂತ ಕಾದು ನೋಡ್ಬೇಕು.

Shwetha M