28 ನಿಮಿಷ.. 34 ಬಾಲ್.. 4 ವಿಕೆಟ್ – 224 ರನ್ ಗಳಿಗೆ ಇಂಡಿಯಾ ಆಲೌಟ್
ಆಂಗ್ಲರ BAZBALL ಮುಂದೆ ಗೆಲ್ತಾರಾ?

ಮಸ್ಟ್ ವಿನ್ ಮ್ಯಾಚ್ಗಾಗಿ ಓವಲ್ನಲ್ಲಿ ಕಣಕ್ಕಿಳಿದಿರೋ ಟೀಂ ಇಂಡಿಯಾ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ಗೆ ಇಳೀತು. ಬಟ್ ಭಾರತದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. 100 ರನ್ ಗಳಿಸುವಷ್ಟರಲ್ಲೇ ಪ್ರಮುಖ ನಾಲ್ವರು ಆಟಗಾರರ ವಿಕೆಟ್ ಉರುಳಿತ್ತು. ಅಂತಿಮವಾಗಿ ಮೊದಲ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತ್ತು. ಸೆಕೆಂಡ್ ಡೇ ಸ್ವಲ್ಪ ನಿರೀಕ್ಷೆ ಇತ್ತಾದ್ರೂ ಎರಡನೇ ದಿನ ಮತ್ತೆ ಇಂಗ್ಲೆಂಡ್ ಬೌಲರ್ಸ್ ಕಂಪ್ಲೀಟ್ ಡಾಮಿನೇಟ್ ಮಾಡಿದ್ದಾರೆ.
ಇದನ್ನೂ ಓದಿ : ದೆಹಲಿಯಿಂದ ಮಂಡ್ಯಕ್ಕೆ ಹಾರಿಬಂದ ಪಾರಿವಾಳ- ಮಾಲೀಕನಿಗಾಗಿ 52 ದಿನಗಳವರೆಗೆ ನಿರಂತರ ಹಾರಾಟ ಮಾಡಿದ ಅಭಿಮನ್ಯುವಿನ ದಾಖಲೆ
ಮೊದಲೇ ಬಾಝ್ ಬಾಜ್ ಅಸ್ತ್ರವನ್ನೇ ಇಟ್ಟುಕೊಂಡು ಬ್ಯಾಟಿಂಗ್ಗೆ ಇಳಿಯೋ ಇಂಗ್ಲೆಂಡ್ ಮುಂದೆ ಎಷ್ಟೇ ಬಿಗ್ ಸ್ಕೋರ್ ನೀಡಿದರೂ ಕಡಿಮೆಯೇ ಅನ್ನಿಸುತ್ತೆ. ಅಂತಾದ್ರಲ್ಲಿ ಟೀಂ ಇಂಡಿಯಾ ಬ್ಯಾಟರ್ಗಳು ಅದ್ಯಾವುದನ್ನೂ ಲೆಕ್ಕಕ್ಕೇ ಇಟ್ಟುಕೊಳ್ಳದಂತೆ ಬ್ಯಾಟಿಂಗ್ ಮಾಡಿದ್ರು. ಓಪನರ್ ಆಗಿ ಕಣಕ್ಕಿಳಿದ ಜೈಸ್ವಾಲ್ ಎರಡೇ ರನ್ಗಳಿಗೆ ಔಟಾದ್ರೆ ಕೆಎಲ್ ರಾಹುಲ್ 14 ರನ್ಗಳಿಗೆ ಆಟ ಮುಗಿಸಿದ್ರು. ಇನ್ನು ಸಾಯಿ ಸುದರ್ಶನ್ ಸೆಟಲ್ ಆದ್ರೂ ಕೂಡ ಬಿಗ್ ಸ್ಕೋರ್ ಆಗಿ ಕನ್ವರ್ಟ್ ಮಾಡೋಕೆ ಆಗ್ಲಿಲ್ಲ. 38 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಶುಭ್ಮನ್ ಗಿಲ್ ರನ್ ಔಟ್ ಪರಿಣಾಮ 21 ರನ್ಗಳಿಗೆ ಆಟ ಮುಗೀತು. ರವೀಂದ್ರ ಜಡೇಜಾ 9 ರನ್, ಧ್ರುವ್ ಜುರೇಲ್ 19 ರನ್ಗಳಿಗೆ ವಿಕೆಟ್ ಒಪ್ಪಿಸಿದ್ರು. ಅರ್ಧಶತಕ ಗಳಿಸಿ ಕರುಣ್ ಭರವಸೆ ಮೂಡಿಸಿದ್ರೂ ಕೊನೇಗೆ 57 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಸುಂದರ್ 26 ರನ್ ಗಳಿಸಿ ಪೆವಿಲಿಯನ್ ಸೇರ್ಕೊಂಡ್ರು. ಬಟ್ ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಡಕೌಟ್ ಆದ್ರು. ಫೈನಲಿ ಭಾರತಕ್ಕೆ 224 ರನ್ಗಳಿಸಲಷ್ಟೇ ಸಾಧ್ಯವಾಯ್ತು.
ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ 2 ನೇ ದಿನ ಟೀಂ ಇಂಡಿಯಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಅದೂ ಪಂದ್ಯ ಶುರುವಾದ ಕೇವಲ 28 ನಿಮಿಷಗಳಲ್ಲೇ ಆಲೌಟ್ ಆಗಿದೆ. ಅದೂ ಕೂಡ ಎರಡನೇ ದಿನ ಎದುರಿಸಿದ್ದು ಕೇವಲ 34 ಎಸೆತಗಳನ್ನ. ಭಾರತ ಕೇವಲ 20 ರನ್ ಹಾಗೂ 5.4 ಓವರ್ಗಳ ಅಂತರದಲ್ಲಿ ಉಳಿದ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ 224 ರನ್ಗಳಿಗೆ ಆಲೌಟ್ ಆಗಿದೆ. ಮೊದಲ ದಿನದಾಟದದಲ್ಲಿ ಸೆಟಲ್ ಆಗಿದ್ದ ಕರುಣ್ ನಾಯರ್ ಮತ್ತು ವಾಷಿಂಗ್ಟನ್ ಸುಂದರ್ ಎರಡನೇ ದಿನ ಇನ್ನಿಂಗ್ಸ್ ಕಂಟಿನ್ಯೂ ಮಾಡಿದ್ರು. ಆದ್ರೆ ಐದೇ ರನ್ಗಳಿಗೆ ಕರುಣ್ ಸುಸ್ತಾದ್ರೆ ಸುಂದರ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಐದು ವಿಕೆಟ್ಗಳನ್ನು ಪಡೆದು ಮಿಂಚಿದರು. ಸದ್ಯ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಭುಜದ ಗಾಯದಿಂದಾಗಿ ಟೆಸ್ಟ್ನಿಂದ ಹೊರಗುಳಿದ ಕಾರಣ ಇಂಗ್ಲೆಂಡ್ಗೆ ತೀವ್ರ ಹೊಡೆತ ಬಿದ್ದಿದೆ. ಸರಣಿಯನ್ನು ಸಮಬಲಗೊಳಿಸಲು ಭಾರತ ಈ ಟೆಸ್ಟ್ ಗೆಲ್ಲಲೇಬೇಕು.
ಇಂಗ್ಲೆಂಡ್ ಪರ ಗಸ್ ಅಟ್ಕಿನ್ಸನ್ ಬಿರುಗಾಳಿಯಂತೆ ಬೌಲಿಂಗ್ ಪ್ರದರ್ಶನ ಮಾಡಿದ್ರು. ಅದೂ ಅಲ್ದೇ ಬೌಲರ್ಗಳಿಗೆ ನೆರವು ನೀಡುವ ಪಿಚ್ನಲ್ಲಿ ಫಸ್ಟ್ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸವಾಲೇ ಆಗಿತ್ತು. ಸ್ವಿಂಗ್ ಆಗಿ ಬರ್ತಿದ್ದ ಬಾಲ್ನ ಜಡ್ಜ್ ಮಾಡೋಕೆ ಆಗದೆ ವಿಕೆಟ್ ಒಪ್ಪಿಸುತ್ತಾ ಇದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ ಮೊದಲ ದಿನ ಭಾರತ 66.4 ಓವರ್ಗಳಲ್ಲಿ 218 ರನ್ಗೆ 6 ವಿಕೆಟ್ ಕಳೆದುಕೊಂಡಿತ್ತು. ಎರಡನೇ ದಿನ 69.4 ಓವರ್ ಆಗುಷ್ಟರಲ್ಲಿ ಟೀಮ್ ಇಂಡಿಯಾ 224 ರನ್ಗಳಿಗೆ ಆಲೌಟ್ ಆಯಿತು. ಗಸ್ ಅಟ್ಕಿನ್ಸನ್ ಅಂತೂ ಫೈಫರ್ ವಿಕೆಟ್ ಕಿತ್ತು ಮಿಂಚಿದ್ರು. 21.4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಇನ್ನು ಇಂಗ್ಲೆಂಡ್ ಪರ ಜೋಶ್ ಟಂಗ್ ಕೂಡ ಮೂರು ವಿಕೆಟ್ ಕಬಳಿಸಿದ್ರು. ಸದ್ಯ ಬೌಲಿಂಗ್ ನಲ್ಲಿ ಸಕ್ಸಸ್ ಕಂಡಿರೋ ಆಂಗ್ಲರು ಬ್ಯಾಟಿಂಗ್ ನಲ್ಲೂ ಬಿರುಗಾಳಿ ಎಬ್ಬಿಸೋಕೆ ರೆಡಿಯಾಗಿದ್ದಾರೆ.
228 ರನ್ ಗಳ ಟಾರ್ಗೆಟ್ ಬೆನ್ನತ್ತಿರೋ ಇಂಗ್ಲೆಂಡ್ ಪರ ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಬ್ಯಾಟಿಂಗ್ ಆರಂಭಿಸಿದ್ರು. ಇವ್ರಿಬ್ರು ಓಪನಿಂಗ್ ನಲ್ಲೇ ಅಗ್ರೆಸ್ಸಿವ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ಆರಂಭಕ್ಕೆ 6ಕ್ಕೂ ಹೆಚ್ಚು ಎಕಾನಮಿಯಲ್ಲಿ ರನ್ಸ್ ಬಿಟ್ಟುಕೊಟ್ರು. ಈ ಎಕಾನಮಿ ಹೀಗೇ ಕಂಟಿನ್ಯೂ ಆದ್ರೆ ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲೂ 500 ಪ್ಲಸ್ ರನ್ಸ್ ಕಲೆ ಹಾಕಿದ್ರೂ ಅಚ್ಚರಿ ಇಲ್ಲ. ಅದೂ ಅಲ್ದೇ ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕೂಡ ಇಲ್ಲ. ಬುಮ್ರಾ ಇದ್ದ ಮಾತ್ರಕ್ಕೆ ವಿಕೆಟ್ ಬೀಳುತ್ತಿತ್ತು ಅಂತಲ್ಲ. ಆದ್ರೆ ಬುಮ್ರಾ ಇದ್ದಿದ್ರೆ ರನ್ ರೇಟ್ ಕೊಂಚ ಕಡಿಮೆಯಾದ್ರೂ ಇರ್ತಿತ್ತು. ವಿಕೆಟ್ ಬರದೇ ಇದ್ರೂ ರನ್ಸ್ ಕೊಡ್ತಾ ಇರ್ಲಿಲ್ಲ. ಹೀಗಾಗಿ ಪ್ರಸಿದ್ಧ್, ಆಕಾಶ್ ಮತ್ತು ಸಿರಾಜ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ನೋಡಿರಿ

