5ನೇ ಪಂದ್ಯ 2ನೇ ದಿನವೇ ರದ್ದು? – ENG ಗೇಮ್ ಪ್ಲ್ಯಾನ್ ವರ್ಕೌಟ್!
ಗಿಲ್ RUN OUT ದುಬಾರಿಯಾಗುತ್ತಾ?

5ನೇ ಪಂದ್ಯ 2ನೇ ದಿನವೇ ರದ್ದು? – ENG ಗೇಮ್ ಪ್ಲ್ಯಾನ್ ವರ್ಕೌಟ್!ಗಿಲ್ RUN OUT ದುಬಾರಿಯಾಗುತ್ತಾ?

ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 204 ರನ್ ಗಳಿಸಿತು, ಇದರಲ್ಲಿ ಕರುಣ್ ನಾಯರ್ 52 ರನ್ ಗಳಿಸಿ ಆಡುತ್ತಿದ್ದರೆ ಮತ್ತು ವಾಷಿಂಗ್ಟನ್ ಸುಂದರ್ 19 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಸೋ ಸೆಕೆಂಡ್ ಡೇ ಇವ್ರಿಬ್ರೂ ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ. ಇದು ಎಂಥಾ ಕ್ರೂಶಿಯಲ್ ಗೇಮ್.. ಎಂಥಾ ಕ್ರೂಶಿಯಲ್ ಟೈಂ.. ಒಂದ್ಕಡೆ ಜೈಸ್ವಾಲ್ 2 ರನ್​ಗಳಿಗೆ ಔಟ್ ಆಗಿದ್ರು. ಅತ್ತ ಕೆಎಲ್ ರಾಹುಲ್ 14 ರನ್​ಗಳಿಗೆ ಆಟ ಮುಗಿಸಿದ್ರು. ಮೂರನೇ ವಿಕೆಟ್​ಗೆ ಜೊತೆಯಾಗಿದ್ದ ಸಾಯಿ ಸುದರ್ಶನ್ ಮತ್ತು ಶುಭ್​ಮನ್ ಗಿಲ್ ಮೇಲೆ ತುಂಬಾನೇ ನಿರೀಕ್ಷೆ ಇತ್ತು. ಅದ್ರಲ್ಲೂ ಒಬ್ಬ ನಾಯಕನಾಗಿ ಗಿಲ್ ಬಿಗ್ ಸ್ಕೋರ್ ಕಡೆ ಲೀಡ್ ಮಾಡ್ಬೇಕಿತ್ತು. ಬಟ್ ಗಿಲ್ ತಮ್ಮದೇ ತಪ್ಪಿಂದ ತಮ್ಮ ಕೈಯ್ಯಾರೆ ವಿಕೆಟ್ ತೆಗೆದುಕೊಟ್ರು.

ಇದನ್ನೂ ಓದಿ : ಚುನಾವಣೆ ಹೊಸ್ತಿಲಲ್ಲೇ ಬಿಹಾರ ಜನತೆಗೆ ಬಂಪರ್!‌ – ಬಿಸಿಯೂಟ ತಯಾರಕರು, ಶಿಕ್ಷಕರ ಗೌರವಧನ ಡಬಲ್‌!

ಓಪನಿಂಗ್​ನಲ್ಲಿ ಇಬ್ಬರು ಪ್ಲೇಯರ್ಸ್​ನ ಕಳ್ಕೊಂಡಿದ್ದ ಟೀಂ ಇಂಡಿಯಾಗೆ ಗಿಲ್ ಆಸರೆಯಾಗ್ಬೇಕಿತ್ತು.  21 ರನ್ ಗಳಿಸಿ ಮತ್ತೊಂದು ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಆದರೆ ಇನ್ನಿಂಗ್ಸ್‌ನ 28 ನೇ ಓವರ್‌ನ ಎರಡನೇ ಚೆಂಡನ್ನು ಗಿಲ್, ಶಾರ್ಟ್ ಕವರ್ ಕಡೆಗೆ ಆಡಿದರು. ಶಾಟ್ ಆಡಿದ ತಕ್ಷಣವೆ ಗಿಲ್ ರನ್ ತೆಗೆದುಕೊಳ್ಳಲು ಓಡಿಹೋದರು. ಆದರೆ ಇತ್ತ ನಾನ್-ಸ್ಟ್ರೈಕ್‌ನಲ್ಲಿ ನಿಂತಿದ್ದ ಸಾಯಿ ಸುದರ್ಶನ್ ಓಡಲಿಲ್ಲ. ಹೀಗಾಗಿ ಕ್ರೀಸ್​ನ ಮಧ್ಯಕ್ಕೆ ಬಂದು ಇದನ್ನು ಗಮನಿಸಿದ ಗಿಲ್, ಮತ್ತೆ ಕ್ರಿಸ್​ನತ್ತ ಓಡಲು ಆರಂಭಿಸಿದರು. ಆದರೆ ಅಷ್ಟರಲ್ಲಾಗಲೇ ಗಸ್ ಅಟ್ಕಿನ್ಸನ್ ಚೆಂಡನ್ನು ಹಿಡಿದು ನೇರವಾಗಿ ಸ್ಟಂಪ್‌ ಗೆ ಹೊಡೆದಿದ್ದರು. ಪರಿಣಾಮ ಗಿಲ್ ರನೌಟ್ ಆಗಿ ಪೆವಿಲಿಯನ್ ಸೇರ್ಬೇಕಾಯ್ತು. ಆತುರವಾಗಿ ರನ್​ಗೆ ಓಡಿದ ಗಿಲ್ ತಮ್ಮದೇ ತಪ್ಪಿಂದ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಬಂದ ಕರುಣ್ ಕೊಂಚ ಭರವಸೆ ಮೂಡಿಸಿದ್ದಾರೆ. ಅರ್ಧಶತಕ ಗಳಿಸಿ ಎರಡನೇ ದಿನವೂ ಬ್ಯಾಟ್ ಬೀಸಲಿದ್ದಾರೆ. ಆದ್ರೆ ಜಡ್ಡು ಮತ್ತು ಜುರೇಲ್ ಬೇಗನೇ ಔಟ್ ಆದ್ರು. ಸದ್ಯದ ಸ್ಥಿತಿಯಲ್ಲಿ ಟೀಂ ಇಂಡಿಯಾ ಸ್ವಲ್ಪ ಡೇಂಜರ್ ಝೋನ್​ನಲ್ಲೇ ಇದೆ. ಕರುಣ್ ಮತ್ತು ಸುಂದರ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಸರಣಿಯುದ್ದಕ್ಕೂ ಕಳಪೆ ಫಾರ್ಮ್​ನಿಂದ ಬಳಲ್ತಾ ಇದ್ದ ಕರುಣ್ ನಾಯರ್ ಸದ್ಯ ಆಫ್ ಸೆಂಚುರಿ ಸಿಡಿಸಿ ಕ್ರೀಸ್​ನಲ್ಲಿದ್ದಾರೆ. ಅದೂ ಕೂಡ 9 ವರ್ಷಗಳ ಬಳಿಕ. 2016ರಲ್ಲಿ ತ್ರಿಬಲ್ ಸೆಂಚುರಿ ಸಿಡಿಸಿದ್ದೇ ಲಾಸ್ಟ್.. ಆ ಬಳಿಕ ಬಂದ ಮೊದಲ ಅರ್ಶಶತಕ ಇದು. 3 ಸಾವಿರದ 146 ದಿನಗಳ ನಂತರ ಐವತ್ತು ಪ್ಲಸ್ ಸ್ಕೋರ್ ಗಳಿಸಿದ್ದಾರೆ. ಇದೇ ಅರ್ಧಶತಕವನ್ನ ಶತಕ, ದ್ವಿಶತಕ ಮಾಡೋಕೆ ಒಳ್ಳೆ ಚಾನ್ಸ್ ಇದೆ. ಯಾಕಂದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ ಕಂಟಿನ್ಯೂ ಆಗ್ಬೇಕು ಅಂದ್ರೆ ಕರುಣ್​ರಿಂದ ಒಂದೊಳ್ಳೆ ಇನ್ನಿಂಗ್ಸ್ ಬರಲೇಬೇಕಿದೆ. ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಜೊತೆ ಕ್ರೂಶಿಯಲ್ ಇನ್ನಿಂಗ್ಸ್ ಆಡಿ ಸೆಂಚುರಿ ಸಿಡಿಸಿದ್ದ ವಾಷಿಂಗ್ ಟನ್ ಸುಂದರ್ 19 ರನ್ಸ್ ನಿಂದ ಕ್ರೀಸ್​​ನಲ್ಲಿದ್ದಾರೆ. ಸುಂದರ್ ಈ ಪಂದ್ಯದಲ್ಲೂ ಅಷ್ಟೇ ಜವಾಬ್ದಾರಿಯಿಂದ ಆಡ್ಬೇಕು. ಈ ಇಬ್ಬರು ಬ್ಯಾಟರ್ಸ್ ರಿಂದ ಬಿಗ್ ಪಾರ್ಟ್ನರ್ ಶಿಪ್ ಬಂದ್ರೆ ಭಾರತ ಒಂದೊಳ್ಳೆ ಸ್ಕೋರ್ ಕಲೆ ಹಾಕಲಿದೆ. ಆದ್ರೀಗ ಎರಡನೇ ದಿನದ ಪಂದ್ಯ ನಡೆಯುತ್ತಾ ಅನ್ನೋದೇ ಡೌಟಿದೆ.

ಓವಲ್ ಮೈದಾನದಲ್ಲಿ ಮೊದಲ ದಿನವೇ ಮಳೆಯಿಂದಾಗಿ ಪಂದ್ಯಕ್ಕೆ ಸಾಕಷ್ಟು ಸಮಸ್ಯೆಗಳಾಗಿತ್ತು. ಇದೀಗ ಎರಡನೇ ದಿನವೂ ಮತ್ತೆ ಮಳೆ ಕಾಟ ಕೊಡೋ ಲಕ್ಷಣಗಳಿವೆ. ಅಕ್ಯೂವೆದರ್ ವರದಿಯ ಪ್ರಕಾರ, ಇಂಗ್ಲೆಂಡ್ ಸಮಯದ ಪ್ರಕಾರ ಬೆಳಿಗ್ಗೆ 11 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ಆ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಲಂಚ್ ಟೈಂವರೆಗೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮಧ್ಯಾಹ್ನ 2 ರಿಂದ 4 ರ ನಡುವೆ ಸುಮಾರು 50 ಪ್ರತಿಶತ ಮಳೆಯಾಗುವ ಸಾಧ್ಯತೆಯಿದೆ. ಹಾಗೇ ಕೊನೆಯ ಸೆಷನ್​ನಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಹೀಗಿದ್ರೂ ಪಂದ್ಯ ನಡೆಯುವ ಮಳೆ ಕಣ್ಣಾಮುಚ್ಚಾಲೆ ಇರೋದಂತೂ ಪಕ್ಕಾ.

Shantha Kumari