ಡಾ ರಾಜ್ಕುಮಾರ್ ಸಹೋದರಿ ವಿಧಿವಶ! – ಅಪ್ಪು ಇಲ್ಲ ಅನ್ನೋ ಸುದ್ದಿ ಸಾಯೋವರೆಗೂ ಗೊತ್ತಾಗಲೇ ಇಲ್ಲ!

ಡಾ ರಾಜ್ಕುಮಾರ್ ಅವರ ಸಹೋದರಿ, ಪುನೀತ್ ರಾಜ್ಕುಮಾರ್ ಅವರ ಪ್ರೀತಿಯ ನಾಗಮ್ಮತ್ತೆಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ಅವರು ಗಾಜನೂರಿನ ಮನೆಯಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ:ಆಂಗ್ಲರ ಜೊತೆ ಅಂಪೈರ್ ಡೀಲ್? – ಸಿಗ್ನಲ್ ಕೊಟ್ಟು DRS ತಡೆದ್ರಾ?
ಚಾಮರಾಜನಗರ ಜಿಲ್ಲೆಯ ಗಾಜನೂರಿನ ಸ್ವಗ್ರಹದಲ್ಲಿ ನಾಗಮ್ಮ ಅವರು ವಾಸಿಸುತ್ತಿದ್ದರು. ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ರಾಜ್ಕುಮಾರ್ ತಲೆಮಾರಿನ ಕೊನೆಯ ಹಿರಿಯ ಸದಸ್ಯೆಯಾಗಿದ್ದ ಇವರು ತಮ್ಮ 92ನೇ ವಯಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಪ್ಪು ಬದುಕಿಲ್ಲ ಎನ್ನುವ ಸುದ್ದಿ ಸಾಯುವವರೆಗೂ ನಾಗಮ್ಮ ತಿಳಿಯಲೇ ಇಲ್ಲ!
ಅಂದ್ಹಾಗೆ ನಾಗಮ್ಮ ಅವರು ಅಪ್ಪು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಗೆ ತುಂಬಾ ಅಚ್ಚುಮೆಚ್ಚು. ದೊಡ್ಮನೆ ಕುಟುಂಬದವರು ಗಾಜನೂರಿಗೆ ಹೋದಾಗಲೆಲ್ಲ ನಾಗಮ್ಮ ಅವರನ್ನ ಭೇಟಿ ಆಗಿ ಬರುತ್ತಿದ್ದರು. ದೊಡ್ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ನಾಗಮ್ಮ ಅವರು ಇರುತ್ತಿದ್ದರು. ಆದರೆ ವಯಸ್ಸಿನ ಕಾರಣ ಕಳೆದ ಕೆಲ ವರ್ಷಗಳಿಂದ ಅವರು ಗಾಜನೂರಿನಲ್ಲಿಯೇ ನೆಲೆಸಿದ್ದರು. ಇನ್ನು ಪುನೀತ್ ರಾಜ್ ಕುಮಾರ್ ನಿಧನ ಸುದ್ದಿಯೂ ಇವರಿಗೆ ತಿಳಿದಿಲ್ಲ.
ವಯಸ್ಸಾಗಿದೆ ಅನ್ನೋ ಕಾರಣ, ಅವರಿಗೆ ಆಘಾತ ಆಗಬಾರದೆಂದು ಪುನೀತ್ ರಾಜ್ಕುಮಾರ್ ನಿಧನದ ಸುದ್ದಿಯನ್ನು ಅವರಿಗೆ ಕುಟುಂಬದವರು ತಿಳಿಸಿರಲಿಲ್ಲ. ಕಂದ ಬಂದು ಒಂದು ಸಲ ನನ್ನನ್ನ ನೋಡಿಕೊಂಡು ಹೋಗು ಎಂದು ಕಳೆದ ನಾಲ್ಕು ತಿಂಗಳ ಹಿಂದೆ ಹೇಳಿದ್ರು. ಇದ್ರ ವಿಡಿಯೋ ಕೂಡ ವೈರಲ್ ಆಗಿತ್ತು.
ಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆಯಷ್ಟೆ ಸಿನಿಮಾ ಕಾರ್ಯಕ್ಕಾಗಿ ಗೋವಾಕ್ಕೆ ತೆರಳಿದ್ದರು. ಆದರೆ ನಾಗಮ್ಮನವರ ನಿಧನದ ಸುದ್ದಿ ತಿಳಿದು ಅವರು ಮರಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಘವೇಂದ್ರ ರಾಜ್ಕುಮಾರ್ ಮತ್ತು ಕುಟುಂಬದವರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಗಳು ಸಹ ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ (ಆಗಸ್ಟ್ 2) ಗಾಜನೂರಿನಲ್ಲಿಯೇ ನಡೆಯಲಿದೆ.

ನೋಡಿರಿ

