ದೆಹಲಿಯಿಂದ ಮಂಡ್ಯಕ್ಕೆ ಹಾರಿಬಂದ ಪಾರಿವಾಳ- ಮಾಲೀಕನಿಗಾಗಿ 52 ದಿನಗಳವರೆಗೆ ನಿರಂತರ ಹಾರಾಟ ಮಾಡಿದ ಅಭಿಮನ್ಯುವಿನ ದಾಖಲೆ
ಪ್ರೀತಿಯ ಪಾರಿವಾಳ ಹಾರಿ ಬಂತು ಗೆಳೆಯ

ಪ್ರೀತಿಯ ಪಾರಿವಾಳ ಹಾರಿಹೋಯ್ತೋ ಗೆಳೆಯ ಎಂಬ ಉತ್ತರ ಕರ್ನಾಟಕ ಮಂದಿಯ ಸೂಪರ್ ಹಿಟ್ ಹಾಡು ನೀವೆಲ್ಲಾ ಕೇಳಿಯೇ ಇರ್ತೀರಾ. ಇದೀಗ ಪ್ರೀತಿಯ ಪಾರಿವಾಳ ಹಾರಿ ಬಂತು ಗೆಳೆಯ ಅನ್ನೋ ರಿಯಲ್ ಸ್ಟೋರಿ ನಡೆದಿದೆ. ಅದು ಕೂಡಾ ದೂರದ ದೆಹಲಿಯಿಂದ ನಮ್ಮ ಮಂಡ್ಯದವರೆಗೆ ಪ್ರೀತಿಯ ಪಾರಿವಾಳ ಹಾರಿಕೊಂಡು ಬಂದಿದೆ. ಅದು ಕೂಡಾ ಒಂದು ವರ್ಷ ವಯಸ್ಸಿನ ಪುಟ್ಟ ಪಾರಿವಾಳ. ದೆಹಲಿಯಿಂದ ಮಂಡ್ಯಕ್ಕೆ 1790 ಕಿಮೀ ದೂರವನ್ನು 52 ದಿನಗಳಲ್ಲಿ ಕ್ರಮಿಸಿ ತನ್ನ ಮಾಲೀಕರನ್ನು ಹುಡುಕಿಕೊಂಡು ಬಂದಿದೆ. ಈ ಮೂಲಕ ರೇಸ್‌ನಲ್ಲೂ ಗೆಲುವು ದಾಖಲಿಸಿದೆ.
ಇದನ್ನೂ ಓದಿ:ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಶಾಕ್ – ಇಂದಿನಿಂದ ಆಟೋ ದರ ಏರಿಕೆ!
ಹೌದು.. ಈ ಅಚ್ಚರಿಗೆ ಮಂಡ್ಯ ಜಿಲ್ಲೆಯ ಯುವಕ ಸಾಕ್ಷಿಯಾಗಿದ್ದಾನೆ. ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್ನಿಂದ ಡೆಲ್ಲಿ ರೇಸ್ ಆಯೋಜಿಸಲಾಗಿತ್ತು. ಈ ರೇಸ್ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಟ್ಟು 22 ಪಾರಿವಾಳಗಳು ಭಾಗವಹಿಸಿದ್ದವು. ಎಲ್ಲ ಪಾರಿವಾಳಕ್ಕೂ ರೇಸ್ಗೂ ಮುನ್ನವೇ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏಪ್ರಿಲ್ 5 ರಂದು ದೆಹಲಿಯಿಂದ ಪಾರಿವಾಳಗಳನ್ನ ಹಾರಿಬಿಡಲಾಗಿತ್ತು. ಆ ಡೆಲ್ಲಿ ರೇಸ್ನಲ್ಲಿ ಭಾಗವಹಿಸಿದ್ದ ಮಂಡ್ಯದ ವಿ.ಸಿ.ಫಾರಂನ ಶ್ರೀಧರ್ ಎಂಬುವವರಿಗೆ ಸೇರಿದ ಒಂದು ವರ್ಷದ ಅಭಿಮನ್ಯು ಹೆಸರಿನ ಪಾರಿವಾಳ, ದೆಹಲಿಯಿಂದ ಮೇ 28ಕ್ಕೆ ಮಂಡ್ಯಕ್ಕೆ ವಾಪಸ್ಸಾಗಿದೆ. ಆ ಮೂಲಕ ಬರೋಬ್ಬರಿ 1790 ಕಿ.ಮೀ ದಾಟಿ ತನ್ನ ಮಾಲೀಕನ ಹುಡುಕಿಕೊಂಡು ಬಂದಿದೆ. 22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗಳಿಗೆ ವಾಪಸ್ಸಾಗಿವೆ.
ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಪಾರಿವಾಳವಾಗಿರುವ ಮಂಡ್ಯದ ಅಭಿಮನ್ಯು, ತನ್ನ ಮಾಲೀಕನನ್ನ ಹುಡುಕಿಕೊಂಡು ಬರುವ ಮೂಲಕ ಹೊಸ ಸಾಧನೆ ಮಾಡಿದೆ. ಆ ಮೂಲಕ ಮೊದಲ ರೇಸ್ನಲ್ಲೇ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳವೆಂಬ ದಾಖಲೆ ಬರೆದಿದೆ. ದೆಹಲಿಯಿಂದ ಮಂಡ್ಯಕ್ಕೆ ಬಂದ ಪಾರಿವಾಳ ಮಾಲೀಕನನ್ನ ಹುಡುಕಿಕೊಂಡು ದೆಹಲಿಯಿಂದ ಮಂಡ್ಯಕ್ಕೆ ಬರುವ ಮೂಲಕ ಒಂದು ವರ್ಷ ವಯಸ್ಸಿನ ಅಭಿಮನ್ಯು ಹೆಸರಿನ ಪಾರಿವಾಳ ವಿಶೇಷ ದಾಖಲೆ ನಿರ್ಮಿಸಿದೆ. 52 ದಿನದಲ್ಲಿ 1790 ಕಿ.ಮೀ ಕ್ರಮಿಸಿದ ಅತಿ ಚಿಕ್ಕ ವಯಸ್ಸಿನ ಅಭಿಮನ್ಯು ಪಾರಿವಾಳ ಈಗ ದಾಖಲೆ ಬರೆದಿದೆ.

ನೋಡಿರಿ

