ವೋಟರ್​ಲಿಸ್ಟ್​​ ಕಳ್ಳತನ ಆರೋಪ – ಆಗಸ್ಟ್​​ 5 ರಂದು ಬೆಂಗಳೂರಿನಲ್ಲಿ ರಾಹುಲ್​​​ ಗಾಂಧಿ ಪಾದಯಾತ್ರೆ!

ವೋಟರ್​ಲಿಸ್ಟ್​​ ಕಳ್ಳತನ ಆರೋಪ – ಆಗಸ್ಟ್​​ 5 ರಂದು ಬೆಂಗಳೂರಿನಲ್ಲಿ ರಾಹುಲ್​​​ ಗಾಂಧಿ ಪಾದಯಾತ್ರೆ!

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗಷ್ಟೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಕೆಲ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಬಗ್ಗೆ ದಾಖಲೆ ಇದೆ ಎಂದು ರಾಹುಲ್ ಗಾಂಧಿ ಸ್ಫೋಟಕ ಹೇಳಿಕೆ ನೀಡಿದ್ರು. ಇದೀಗ ಕಾಂಗ್ರೆಸ್‌ ಈ ಸಂಬಂಧ ಪ್ರತಿಭಟನೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ಇಂದು ನಿರ್ಧಾರ – 14 ತಿಂಗಳ ಸೆರೆವಾಸಕ್ಕೆ ಮುಕ್ತಿ ಸಿಗುತ್ತಾ?

ಹೌದು, ರಾಜ್ಯದಲ್ಲಿ ವೋಟ್‌ ಕಳ್ಳತನ ನಡೆದಿದೆ ಎಂದು ರಾಹುಲ್‌ ಗಾಂಧಿ ಆರೋಪ ಮಾಡಿದ್ರು. ಈ ಹೇಳಿಕೆ ಈಗ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ನಡೆಸಲಾಗಿದ್ದು, ಆಗಸ್ಟ್​ 5 ರಂದು ಬೆಂಗಳೂರಿಗೆ ರಾಹುಲ್​​ ಆಗಮಿಸ್ತಿದ್ದು, ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹದೇವಪುರದಿಂದ ಚುನಾವಣಾ ಆಯೋಗದ ಕಚೇರಿವರೆಗೂ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಕೈ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

ಪ್ರತಿಭಟನೆ ರೂಪರೇಷೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳು ಭಾಗಿ ಆಗಿದ್ರು. ಬಹಿರಂಗ ಸಭೆ ಬಳಿಕ ಚುನಾವಣಾ ಆಯೋಗದ ಕಚೇರಿವರೆಗೆ ಕಾಲ್ನಡಿಗೆ ಹೊರಡಲು ತೀರ್ಮಾನಿಸಲಾಗಿದೆ. ಬಳಿಕ ಚುನಾವಣಾ ಆಯೋಗ ಅಧ್ಯಕ್ಷರಿಗೆ ರಾಹುಲ್ ಗಾಂಧಿ ದೂರು ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ, ಸಿಎಂ, ಡಿಸಿಎಂ ಮತ್ತು ಎಐಸಿಸಿ ಪದಾಧಿಕಾರಿಗಳು ಸಾಥ್ ನೀಡಲಿದ್ದಾರೆ.

ಮತಗಳವಿನ ಬಗ್ಗೆ ಆಘಾತಕಾರಿ ವರದಿಗಳು ಆಗಸ್ಟ್​​ 5ರಂದು ಬಹಿರಂಗಗೊಳ್ಳಲಿವೆ ಅಂತ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​​ ಹೇಳಿದ್ದಾರೆ. ಮತದಾರರ ಹಕ್ಕನ್ನ ಕದೀಯೋದು ಬಹಳ ಗಂಭೀರ ವಿಷಯ. ಇದು ಪ್ರಜಾಪ್ರಭುತ್ವ ಕಗ್ಗೊಲೆ.. ಈಗ ಕಾಂಗ್ರೆಸ್​​ ಹೋರಾಟಕ್ಕೆ ಅಣಿ ಆಗ್ತಿದೆ.. ಆಗಸ್ಟ್​ ಐದರಂದು ರಾಹುಲ್​ ಗಾಂಧಿ ಏನೆಲ್ಲಾ ದಾಖಲೆಗಳನ್ನ ರಿಲೀಸ್​​ ಮಾಡ್ತಾರೆ ಅನ್ನೋದು ಕಾದು ನೋಡಬೇಕು.

Shwetha M