ಗಾಳಿ ಆಂಜನೇಯ ಭಕ್ತರಿಗೆ ಗುಡ್‌ನ್ಯೂಸ್! –ಹೋಮ, ಹವನ ಮಾಡಿಸಲು ಆನ್‌ಲೈನ್ ಸೇವೆ ಆರಂಭ

ಬೆಂಗಳೂರಿನ ಪ್ರತಿಷ್ಠಿತ ಗಾಳಿ ಆಂಜನೇಯ ದೇಗುಲವನ್ನು ಮುಜುರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಂಡ ತೆಗೆದುಕೊಂಡಿದೆ. ಇದೀಗ ಮುಜರಾಯಿ ಇಲಾಖೆ ಭಕ್ತರಿಗೆ ಹೊಸ ಸೇವೆಗಳನ್ನ ಪರಿಚಯಿಸ್ತಿದೆ. ದೇಗುಲದಲ್ಲಿ ಶೀಘ್ರದಲ್ಲೇ ಹೋಮ, ಹವನ ಮಾಡಿಸಲು ಆನ್‌ಲೈನ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಲು ಮುಂದಾಗಿದೆ.
ಇದನ್ನೂ ಓದಿ: ಆದಿ ಮಾತು.. ಭಾಗ್ಯ ಇಂಪ್ರೆಸ್.. ಸೊಸೆ ಮದ್ವೆ ಮಾಡಿಸ್ತಾಳಾ ಕುಸುಮಾ? – ಭಾಗ್ಯಲಕ್ಷ್ಮೀಗೆ ಶ್ರೇಷ್ಠಾ ಗುಡ್‌ಬೈ?
ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಳಿ ಆಂಜನೇಯ ದೇವಸ್ಥಾನದ ಯಂತ್ರ, ಪ್ರಸಾದವನ್ನು ಆನ್‌ಲೈನ್ ಮೂಲಕ ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಜೊತೆಗೆ ಹೋಮ, ಹವನ ಮಾಡಿಸಲು ಶೀಘ್ರದಲ್ಲೇ ಆನ್‌ಲೈನ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ದೇಗುಲ ಮುಜರಾಯಿ ವ್ಯಾಪ್ತಿಗೆ ಸೇರಿದ ಬಳಿಕ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅಲ್ಲದೇ ಪೂಜಾದರ, ಹೋಮ, ಹವನ, ಪ್ರಸಾದ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಎಲ್ಲಾ ಸೇವೆಗಳನ್ನು ಭಕ್ತರಿಗೆ ಸಿಗುವಂತೆ ಮಾಡಲು ಮುಜರಾಯಿ ಇಲಾಖೆ ಮುಂದಾಗಿದೆ ಎಂದಿದ್ದಾರೆ.

ನೋಡಿರಿ

