ಭಾರತದಿಂದ PAKಗೆ ಫೈನಲ್ ಭಿಕ್ಷೆ – ಶತ್ರುಗಳ ಜೊತೆ ಸೆಮಿ ಆಡದ IND
ಇಂಡಿಯಾ ಚಾಂಪಿಯನ್ಸ್‌ಗೆ ಸಲಾಂ

ಭಾರತದಿಂದ PAKಗೆ ಫೈನಲ್ ಭಿಕ್ಷೆ –  ಶತ್ರುಗಳ ಜೊತೆ ಸೆಮಿ ಆಡದ INDಇಂಡಿಯಾ ಚಾಂಪಿಯನ್ಸ್‌ಗೆ ಸಲಾಂ

ಆಡಲ್ಲ ಅಂದ್ರೆ ಆಡಲ್ಲ..  ನಮ್ಗೆ ದೇಶ ಮುಖ್ಯ..  ನಮ್ಮ ದೇಶದ ಸುದ್ದಿಗೆ ಬರೋ ನಮ್ಮ ದೇಶಕ್ಕೆ ಕೆಟ್ಟದ್ದನ್ನ ಬಯಸೋ ಶತ್ರುಗಳ ಜೊತೆ ನಾವ್ ಆಡೋದೆ ಇಲ್ಲ ಅಂತ ಟೀಂ ಇಂಡಿಯಾ ಚಾಂಪಿಯನ್ಸ್ ನಿರ್ಧಾರ ಮಾಡಿ ಬಿಟ್ಟಿದ್ದಾರೆ.. ಹೀಗಾಗಿ  ಲೆಜೆಂಡ್ಸ್ ವರ್ಲ್ಡ್ ಚಾಂಪಿಯನ್ ಶಿಪ್‌ ಟೂರ್ನಿಯಿಂದ ಇಂಡಿಯಾ ಚಾಂಪಿಯನ್ಸ್ ಹೊರ ಬಿದ್ದಿದ್ದಾರೆ .ದೇಶಕ್ಕಿಂತ ನಮ್ಗೆ ಆಟ ಮುಖ್ಯ ಅಲ್ಲ ಅಂತ ಹೇಳಿ ಪಾಕ್‌ಗೆ ಭಾರತ ಭಿಕ್ಷೆ ಹಾಕಿದೆ..

ವರ್ಲ್ಡ್‌ ಚಾಂಪಿಯನ್‌ಶಿಪ್‌ ಆಫ್ ಲೆಜೆಂಡ್ಸ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇವತ್ತು ಭಾರತ ಹಾಗೂ ಪಾಕಿಸ್ತಾನ ದಿಗ್ಗಜರ ನಡುವಿನ ಸೆಮಿಫೈನಲ್‌ ಪಂದ್ಯ ನಡೆಯಬೇಕಿತ್ತು.. ಆದ್ರೆ ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿ ಖಂಡಿಸಿ ಭಾರತ ತಂಡ ಪಾಕ್‌ ವಿರುದ್ಧ ನಾವ್ ಆಡಲ್ಲ, ನಮ್ಗೆ ದೇಶ ಪ್ರೇಮವೇ ಮುಖ್ಯ ಅಂತ ಹೇಳಿದೆ. ವಾಕ್‌ ಓವರ್‌ ಪಡೆದ ಪಾಕಿಸ್ತಾನ ನೇರವಾಗಿ ಫೈನಲ್‌ಗೇರಿದರೆ, ಭಾರತ ತಂಡ ಟೂರ್ನಿಯಿಂದಲೇ ಹೊರಬಿತ್ತು.

ನಮ್ಮ ದೇಶ ನಮಗೆ ಯಾವಾಗಲೂ ಮುಖ್ಯ. ನಮ್ಮ ಭಾರತಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ನಾವು ಭಾರತ ತಂಡದ ಹೆಮ್ಮೆಯ ಸದಸ್ಯರು. ಭಾರತದ ಧ್ವಜವನ್ನು ನಮ್ಮ ಜೆರ್ಸಿಯಲ್ಲಿ ಹಾಕಿಕೊಳ್ಳಲು ನಾವು ಬಹಳಷ್ಟು ಕಷ್ಟಪಟ್ಟು ದುಡಿದಿದ್ದೇವೆ. ನಮ್ಮ ದೇಶವನ್ನು ನಾವು ಕೈಬಿಡುವುದಿಲ್ಲ ಪ್ರಶ್ನೆ ಎಂದಿಗೂ ಇಲ್ಲ. ಭಾರತ ತಂಡವು ಪಾಕಿಸ್ತಾನದ ವಿರುದ್ಧ ಬಿಲ್ ಕುಲ್ ಸೆಮಿಫೈನಲ್ ಪಂದ್ಯನನ್ನು ಆಡುವುದಿಲ್ಲ. ಎಂದು ಬಾರತ ಚಾಂಪಿಯನ್ಸ್  ಹೇಳಿದ್ದಾರೆ.

ಇತ್ತೀಚೆಗೆ ಲೀಗ್‌ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಭಾರತ ತಂಡ ಆಡಲು ನಿರಾಕರಿಸಿದ್ದರಿಂದ ಪಂದ್ಯ ರದ್ದುಗೊಂಡಿತ್ತು. ಲೀಗ್‌ ಹಂತದಲ್ಲಿ ಒಟ್ಟು 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೇರಿದೆ. ಭಾರತ ಮಂಗಳವಾರ ವಿಂಡೀಸ್‌ ವಿರುದ್ಧ ಗೆದ್ದು 4ನೇ ಸ್ಥಾನಿಯಾಗಿ ಸೆಮೀಸ್‌ ತಲುಪಿದೆ. ಹೀಗಾಗಿ ಈ 2 ತಂಡಗಳು ಸೆಮೀಸ್‌ನಲ್ಲಿ ಆಡಬೇಕಿದ್ದವು. ಆದ್ರೆ ಭಾರತ ಆಡಲ್ಲ ಅಂದಿದ್ದಕ್ಕೆ ಪಾಕ್ ಡೈರೆಕ್ಟ್ ಫೈನಲ್‌ಗೆ ಎಂಟ್ರಿಕೊಟ್ಟಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪೈನಲ್ ಆಡಲಿದ್ದು, ಗೆದ್ದ ತಂಡ ಪಾಕಿಸ್ತಾನ ವಿರುದ್ಧ ಆಗಸ್ಟ್ 2ರಂದು ಫೈನಲ್‌ನಲ್ಲಿ ಸೆಣಸಾಡಲಿದೆ.  ಕಳೆದ ಬಾರಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧವೇ ಗೆದ್ದು ಚಾಂಪಿಯನ್‌ ಆಗಿತ್ತು. ಆದ್ರೆ ಈ ಸಲ ಭಾರತ ಆಡದೇ ಭಾರತೀಯರ ಮನಸ್ಸು ಗೆದ್ದಿದೆ..

ಬಿಸಿಸಿಐನ ದಿಟ್ಟ ನಿರ್ಧಾರ ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ನಿಲುವಿನಲ್ಲಿ ಭಾರತೀಯ ಆಟಗಾರರಿದ್ದಾರೆ. ಈಗಾಗಲೇ ಭಯೋತ್ಪಾದಕ ದಾಳಿಯ ನಂತರ, ಬಿಸಿಸಿಐ ಮುಂದಿನ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಸೇರಿಸಬಾರದು ಎಂದು ಐಸಿಸಿಗೆ ಪತ್ರ ಬರೆದಿತ್ತು. 2019ರ ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ನೇರವಾಗಿ ಕ್ರಿಕೆಟ್ ಆಡುತ್ತಿಲ್ಲ. ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದಾಗ ಭಾರತ ಅಲ್ಲಿಗೆ ಹೋಗಲು ನಿರಾಕರಿಸಿತ್ತು. ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದಾದ ಬಳಿಕ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದಾಗಲೂ ಭಾರತ ಪಾಕಿಸ್ತಾನಕ್ಕೆ ಹೋಗದೆ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಿ ಟ್ರೋಫಿ ಗೆದ್ದುಕೊಂಡಿತು. ಅದೇ ರೀತಿ ಪಾಕಿಸ್ತಾನ ಕೂಡ ಭಾರತದಲ್ಲಿ ಆಡುವುದಿಲ್ಲ ಎಂದು ನಿರ್ಧರಿಸಿದೆ. ಹೀಗಾಗಿ ಭಾರತದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ದುಬೈನಲ್ಲಿ ನಡೆಯಲಿದೆ..

Kishor KV