300 ಕೋಟಿ ಬಾಚಿದ ಸೈಯ್ಯಾರಾ – ಬಾಕ್ಸ್ಆಫೀಸ್ ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ನ ಹೊಸ ಜೋಡಿ
ಸೈಯ್ಯಾರಾ ನೋಡಿದ ಸೆಲೆಬ್ರಿಟಿಗಳು ಹೇಳಿದ್ದೇನು?

ಬಾಲಿವುಡ್ನಲ್ಲಿ ಮತ್ತೆ ಪ್ರೇಮಕಥೆಯ ಸ್ಟೋರಿ ಸದ್ದು ಮಾಡುತ್ತಿದೆ. ಮೋಹಿತ್ ಸೂರಿ ನಿರ್ದೇಶನದ ಸೈಯ್ಯಾರಾ ಚಿತ್ರ ದಿನೇ ದಿನೇ ಗಳಿಕೆಯಲ್ಲಿ ಧೂಳೆಬ್ಬಿಸುತ್ತಿದೆ. ಅಹಾನ್ ಪಾಂಡೆ ಮತ್ತು ಅನೀತ್ ಚಡ್ಡಾ ಜೋಡಿ ಯುವ ಮನಸ್ಸುಗಳನ್ನ ಗೆದ್ದಿದ್ದು, ಸೈಯ್ಯಾರಾ, ಬಾಕ್ಸ್ಆಫೀಸ್ನಲ್ಲಿ 300 ಕೋಟಿ ಗಳಿಕೆ ಕಂಡು ದಾಖಲೆಯತ್ತ ಮುನ್ನುಗ್ಗುತ್ತಿದೆ.
ಇದನ್ನೂ ಓದಿ:ಕಲೆಕ್ಷನ್ನಲ್ಲಿ ‘ಸು ಫ್ರಮ್ ಸೋ’ ರೆಕಾರ್ಡ್ – 5 ದಿನ 13 ಕೋಟಿ.. ಶೆಟ್ರಿಗೆ ಲಾಟ್ರಿ
ಮೋಹಿತ್ ಸೂರಿ ನಿರ್ದೇಶನದ ಸೈಯ್ಯಾರಾ ಅಲೆ ಜೋರಾಗಿಯೇ ಬೀಸುತ್ತಿದೆ. ರಿಲೀಸ್ ದಿನದಿಂದಲೂ ಡಿಫರೆಂಟ್ ಲವ್ ಸ್ಟೋರಿಯ ಈ ಸಿನಿಮಾ ಯುವ ಜನತೆಯನ್ನ ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. ಇದೀಗ ಫ್ಯಾಮಿಲಿ ಸಮೇತ ಸೈಯ್ಯಾರ ಸಿನಿಮಾ ನೋಡಿ ವೀಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲರ ಬಾಯಲ್ಲೂ ಸೈಯ್ಯಾರಾದ್ದೇ ಮಾತು, ಈ ಚಿತ್ರದ್ದೇ ಹಾಡು ಎಂಬಂತಾಗಿಬಿಟ್ಟಿದೆ. ಸೈಯ್ಯಾರಾ ಈಗಾಗಲೇ ಬಾಕ್ಸ್ಆಫೀಸ್ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದು, 300 ಕೋಟಿ ಗಳಿಕೆ ಕಂಡಿದೆ. ಹೀಗಿದ್ದರೂ ಕೂಡಾ ಸೈಯ್ಯಾರಾ ಮತ್ತಷ್ಟು ಗಳಿಕೆಯತ್ತ ದಾಪುಗಾಲಿಟ್ಟಿದೆ. ಹೊಸಬರನ್ನು ಹಾಕಿಕೊಂಡೇ ಮೋಹಿತ್ ಸೂರಿ ಗೆದ್ದಿದ್ದಾರೆ.
ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಕೂಡ ಸೈಯ್ಯಾರಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಚಿತ್ರದ ಬಗ್ಗೆ ನಟ, ನಟಿಯರ ಬಗ್ಗೆ ಹಾಡು, ಚಿತ್ರಕಥೆಗಳ ಬಗ್ಗೆ ಮನಸಾರೆ ಹೊಗಳಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಕೂಡ ಸೈಯ್ಯಾರವನ್ನು ಮನಸಾರೆ ಹೊಗಳಿದ್ದು ಬಾಲಿವುಡ್ನಲ್ಲಿ ನಡೆದ ಅದ್ಭುತ ಇದಾಗಿದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಹೊಸಬರ ಚಿತ್ರ ಬಾಕ್ಸ್ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಸಾಧಾರಣ ವಿಷಯವಲ್ಲ ಇದೊಂದು ಸೋಜಿಗ ಎಂದು ಹೇಳಿದ್ದಾರೆ ಅಕ್ಷಯ್ ಕುಮಾರ್. ಚಿತ್ರೋದ್ಯಮದಲ್ಲೇ ನಡೆದ ಒಂದು ಪವಾಡ ಇದಾಗಿದೆ. ನಮ್ಮ ಹಿಂದಿ ಚಿತ್ರೋದ್ಯಮದಲ್ಲೇ ಒಂದು ಒಳ್ಳೆಯ ವಿಷಯವೆಂದರೆ ಹೊಸಬರು, ಹೊಸ ಹುಡುಗ ಹಾಗೂ ಹೊಸ ಹುಡುಗಿಯ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೊಂದು ಒಳ್ಳೆಯ ವಿಷಯ. ನಮ್ಮ ಇಂಡಸ್ಟ್ರಿಯಲ್ಲಿ ನಿಧಾನವಾಗಿಯಾದರೂ ಒಳ್ಳೆಯ ಚಿತ್ರಗಳು ಸದ್ದು ಮಾಡುತ್ತಿವೆ, ಪ್ರೇಕ್ಷಕರು ಅದನ್ನು ಮೆಚ್ಚಿಕೊಳ್ಳುತ್ತಿದ್ದಾರೆ, ಹೊಸಬರನ್ನು ಸ್ವಾಗತಿಸುತ್ತಿದ್ದಾರೆ, ಅವರಿಗೆ ಬೆಳೆಯಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಸೈಯ್ಯಾರಾ ಮೂವಿಯನ್ನ ಮನಸಾರೆ ಹೊಗಳಿದ್ದಾರೆ ಅಕ್ಷಯ್ ಕುಮಾರ್.
ಪ್ರೇಮಕಥೆಯುಳ್ಳ ಚಿತ್ರ ಸೈಯ್ಯಾರಾ ಪ್ರೇಮಕಥೆಯುಳ್ಳ ಸಿನಿಮಾವಾಗಿದ್ದು ಗಾಯಕ ಕ್ರಿಶ್ ಕಪೂರ್ ಹಾಗೂ ಉದಯೋನ್ಮುಖ ಪತ್ರಕರ್ತೆ ವಾಣಿ ಬಾತ್ರಾ ಸುತ್ತ ಸುತ್ತುತ್ತದೆ. ಅವರ ಪ್ರೀತಿ ಬೆಳೆದಂತೆ ಸಾಕಷ್ಟು ಅಡೆ ತಡೆ ಎದುರಾಗುತ್ತದೆ. ಯುವ ಮನಸ್ಸುಗಳಿಗೆ ಇಷ್ಟವಾಗುವಂತೆಯೇ ಸೂರಿ ಚಿತ್ರವನ್ನು ಹೆಣೆದಿದ್ದು, ಪ್ರಣಯ, ಮಹತ್ವಾಕಾಂಕ್ಷೆ ಮತ್ತು ಭಾವನಾತ್ಮಕ ಅಂಶವನ್ನು ಹೈಲೈಟ್ ಮಾಡಿದೆ. ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದ್ದು, ಇದುವರೆಗೆ ಬಾಕ್ಸ್ಆಫೀಸ್ನಲ್ಲಿ 300 ಕೋಟಿ ಗಳಿಸಿದೆ.

ನೋಡಿರಿ

