ಪ್ರೇಮ ಸೌಧಕ್ಕೂ ತಟ್ಟಿದ ತೆರಿಗೆ ಬಿಸಿ –ತಾಜ್ ಮಹಲ್ ಗೆ ತೆರಿಗೆ ಪಾವತಿಸಲು 15 ದಿನಗಳ ಗಡವು!

ಪ್ರೇಮ ಸೌಧಕ್ಕೂ ತಟ್ಟಿದ ತೆರಿಗೆ ಬಿಸಿ –ತಾಜ್ ಮಹಲ್ ಗೆ ತೆರಿಗೆ ಪಾವತಿಸಲು 15 ದಿನಗಳ ಗಡವು!

ಆಗ್ರಾ: ಇದೇ ಮೊದಲ ಬಾರಿಗೆ ಆಗ್ರಾ ಮಹಾನಗರ ಪಾಲಿಕೆ ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೆ ನೋಟಿಸ್ ನೀಡಿದೆ. ಜಗತ್ಪ್ರಸಿದ್ಧ ಸ್ಮಾರಕ ತಾಜ್ ಮಹಲ್‌ ಆಸ್ತಿ ತೆರಿಗೆ 1.9 ಕೋಟಿ ರೂಪಾಯಿ ಹಾಗೂ ನೀರಿನ ತೆರಿಗೆ 1.5 ಲಕ್ಷ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಈ ಬಿಲ್ ಗಳು 2021 – 22 ಮತ್ತು 2022- 23 ನೇ ವರ್ಷದ್ದು ಎಂದು ಸ್ಪಷ್ಟಪಡಿಲಾಗಿದೆ.

ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್ ಗಾಗಿ ಕಳುಹಿಸಲಾದ ಬಾಕಿ ನೋಟಿಸ್ ನಲ್ಲಿ 15 ದಿನಗಳೊಳಗೆ ತೆರಿಗೆಯನ್ನು ಠೇವಣಿ ಮಾಡಬೇಕು. ಇಲ್ಲದಿದ್ದರೆ ತಾಜ್ ಮಹಲ್ ಅನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಟ್ವಿಟ್ಟರ್ ಸ್ಥಾನದಿಂದ ಮಸ್ಕ್ ಕೆಳಗಿಳಿಯಬೇಕೇ? – ಬಳಕೆದಾರರಲ್ಲಿ ಬೇಕು ಎಂದವರೆಷ್ಟು, ಬೇಡ ಎಂದವರೆಷ್ಟು?

“ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸುವುದಿಲ್ಲ. ನೀರಿನ ವಾಣಿಜ್ಯ ಬಳಕೆ ಮಾಡುತ್ತಿಲ್ಲವಾದ್ದರಿಂದ ನೀರಿನ ತೆರಿಗೆ ಪಾವತಿಸುವ ಹೊಣೆಗಾರಿಕೆ ನಮಗಿಲ್ಲ. ಈ ಆವರಣದಲ್ಲಿ ಗಿಡ-ಮರಗಳನ್ನು ಉಳಿಸಿಕೊಳ್ಳಲು ನೀರನ್ನು ಬಳಸಲಾಗುತ್ತಿದೆ. ಇದೇ ಮೊದಲ ಬಾರಿಗೆ ತಾಜ್ ಮಹಲ್ ಗೆ ನೀರಿನ ಹಾಗೂ ಆಸ್ತಿ ತೆರಿಗೆ ವಿಧಿಸಿ ನೋಟಿಸ್ ನೀಡಲಾಗಿದೆ. 15 ದಿನಗಳಲ್ಲಿ ತೆರಿಗೆ ಪಾವತಿಸದಿದ್ದರೆ, ತಾಜ್ ಮಹಲ್ ಅನ್ನು ಜಪ್ತಿ ಮಾಡಲಾಗುವುದು ಎಂದು ಹೇಳಿದೆ. ಆದರೆ ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯಿಸುವುದಿಲ್ಲ” ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಎಎಸ್‌ಐ ರಾಜ್ ಕುಮಾರ್ ಪಟೇಲ್ ಹೇಳಿದ್ದಾರೆ.

ತಾಜ್ ಮಹಲ್ ಗೆ ಸಂಬಂಧಿಸಿದಂತೆ ತೆರಿಗೆ ಸಂಬಂಧಿ ಪ್ರಕಿಯೆಗಳು ನನ್ನ ಗಮನಕ್ಕೆ ಬಂದಿಲ್ಲ. ತೆರಿಗೆ ಲೆಕ್ಕಾಚಾರಕ್ಕಾಗಿ ನಡೆಸಿರುವ ರಾಜ್ಯವ್ಯಾಪಿ  ಭೌಗೋಳಿಕ ಮಾಹಿತಿಯ ವ್ಯವಸ್ಥೆಯ ಆಧಾರದಲ್ಲಿ ನೋಟಿಸ್ ನೀಡಲಾಗಿದೆ. ಸರ್ಕಾರಿ ಹಾಗೂ ಧಾರ್ಮಿಕ ಕಟ್ಟಡಗಳು ಸೇರಿದಂತೆ, ನಮಗೆ ಬಾಕಿ ಇರುವ ಎಲ್ಲ ಕಟ್ಟಡಗಳಿಗೆ ನೋಟಿಸ್ ನೀಡಿದ್ದೇವೆ. ಕಾನೂನಿನ ಅನ್ವಯ ರಿಯಾಯಿತಿಗಳನ್ನು  ನೀಡಲಾಗುತ್ತದೆ. ಎಎಸ್ ಐ ಒಂದು ಪಕ್ಷ ನೋಟಿಸ್ ನೀಡಿದ್ದಲ್ಲಿ ಅವರಿಂದ ಪ್ರತಿಕ್ರಿಯೆ ಬಂದ ಬಳಿಕ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ನಿಖಿಲ್ ಟಿ ಫುಂಡೆ ಸ್ಪಷ್ಟಪಡಿಸಿದ್ದಾರೆ.

suddiyaana