ಔರಾ ಗುಂಗಲ್ಲಿ ಕ್ರಿಕೆಟ್‌ ಲೋಕ.. ಟಗರು ಪುಟ್ಟಿ ಜೊತೆ ಸೂರ್ಯ ರೀಲ್ಸ್!‌  – ಶ್ರೇಯಾಂಕ SKY ಜೋಡಿ ಸೂಪರ್!‌ 

ಔರಾ ಗುಂಗಲ್ಲಿ ಕ್ರಿಕೆಟ್‌ ಲೋಕ.. ಟಗರು ಪುಟ್ಟಿ ಜೊತೆ ಸೂರ್ಯ ರೀಲ್ಸ್!‌  – ಶ್ರೇಯಾಂಕ SKY ಜೋಡಿ ಸೂಪರ್!‌ 

ಜನ ಮರುಳೋ ಜಾತ್ರೆ ಮರುಳೋ.. ಅನ್ನುವಂತಾಗಿದೆ ಈಗಿನ ಸೋಶಿಯಲ್‌ ಮೀಡಿಯಾ ಟ್ರೆಂಡ್‌.. ಯಾವಾಗ ಏನ್‌ ವೈರಲ್‌ ಆಗುತ್ತೆ? ಏನ್‌ ಟ್ರೆಂಡ್‌ ಆಗುತ್ತೆ? ಅಂತ ಹೇಳೋಕೆ ಸಾಧ್ಯ ಇಲ್ಲ.. ಇದೀಗ 11 ವರ್ಷದ ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಹವಾ ಕ್ರಿಯೆಟ್‌ ಮಾಡಿದ್ದಾನೆ.. 5ನೇ ಕ್ಲಾಸ್‌ ಹುಡುಗನ ಔರಾ ಫಾರ್ಮಿಂಗ್​ ರೀಲ್ಸ್ ರಾತ್ರೋರಾತ್ರಿ ವಲ್ಡ್‌ ಫೇಮಸ್‌ ಆಗಿದೆ.. ಔರಾ ಫಾರ್ಮಿಂಗ್​ ರೀಲ್ಸ್‌ಗೆ ಕ್ರೀಡಾ ಲೋಕ ಕೂಡ ಫಿದಾ ಆಗಿದೆ.. ಸುರ್ಯಕುಮಾರ್‌ ಯಾದವ್‌ ಜೊತೆ ಕನ್ನಡತಿ ಶ್ರೇಯಾಂಕ ಪಾಟೀಲ್‌ ಕೂಡ ಔರಾ ಫಾರ್ಮಿಂಗ್‌ ರೀಲ್ಸ್‌ ಮಾಡಿದ್ದಾರೆ.. ಅಷ್ಟಕ್ಕೂ ಔರಾ ರೀಲ್ಸ್‌ ಟ್ರೆಂಡ್ ಆಗಿದ್ದು ಹೇಗೆ? ಆ ಬಾಲಕ ಯಾರು? ಔರಾ ಫಾರ್ಮಿಂಗ್‌ ಅಂದ್ರೆ ಏನು? ಯಾರ್ಯಾರು ಔರಾ ಫಾರ್ಮಿಂಗ್‌ ಸ್ಟೆಪ್ಸ್‌ ಹಾಕಿದ್ರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆನೆಗಳ ಕ್ಯೂಟ್‌ ಚುಂಬನ..! – ಇದು ಒಡಹುಟ್ಟಿದವರ ಶುದ್ಧ ಪ್ರೀತಿ!

ಈಗ ಏನಿದ್ರೂ ರೀಲ್ಸ್‌, ಮೀಮ್ಸ್​​, ಟ್ರೋಲ್​ಗಳದ್ದೇ ದರ್ಬಾರ್..‌ ಚಿಕ್ಕ ಚಿಕ್ಕ ವಿಷಯವನ್ನು ದೊಡ್ಡ ಮಟ್ಟದಲ್ಲಿ ಟ್ರೆಂಡ್​​ ಮಾಡುವ ಕಲೆ ಸೋಶಿಯಲ್‌ ಮೀಡಿಯಾ ಬಳಕೆದಾರರಿಗೆ ಗೊತ್ತಿದೆ. ಇತ್ತೀಚೆಗೆ ಅರಶಿನ ಪುಡಿಯ ಮ್ಯಾಜಿಕಲ್ ಸ್ಪ್ಲಾಶ್ ಪ್ರಯೋಗ ಟ್ರೆಂಡ್‌ ಆಗಿತ್ತು.. ಅದಾದ ಬಳಿಕ ಬ್ಯಾಂಗಲ್‌ ಬಂಗಾರಿ ಸಾಂಗ್‌ ಕೂಡ ಹವಾ ಕ್ರಿಯೇಟ್‌ ಮಾಡಿತ್ತು.. ಇದೀಗ 11 ವರ್ಷದ ಬಾಲಕ ಸೋಶಿಯಲ್‌ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾನೆ.. ಆತನ ಸ್ಟೆಪ್ಸ್‌ಗೆ ಸಾಮಾನ್ಯ ಜನರು ಮಾತ್ರವಲ್ಲ.. ಸೆಲೆಬ್ರಿಟಿಗಳು ಕೂಡ ರೀಲ್ಸ್‌ ಮಾಡ್ತಿದ್ದಾರೆ.  ಕ್ರೀಡಾ ಲೋಕದಲ್ಲೂ ಔರಾ ರೀಲ್ಸ್‌ ಸೌಂಡ್‌ ಮಾಡ್ತಿದೆ. ಟೀಮ್‌ ಇಂಡಿಯಾದ ಟಿ20 ಕ್ಯಾಪ್ಟನ್ ಸೂರ್ಯ ಕುಮಾರ್‌ ಯಾದವ್‌ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್‌ ಕೂಡ ಈ ರೀಲ್ಸ್‌ಗೆ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.. ಇವರಿಬ್ರ ರೀಲ್ಸ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡ್ತಿದೆ.

ಭಾರತದ ಸ್ಟಾರ್​ ಬ್ಯಾಟರ್​ ಸೂರ್ಯಕುಮಾರ್​ ಯಾದವ್ ಹಾಗೂ ಮಹಿಳಾ ತಂಡದ ಕ್ರಿಕೆಟರ್​ ಶ್ರೇಯಾಂಕ್ ಪಾಟೀಲ್​​​ ಗಾಯದ ಸಮಸ್ಯೆಯಿಂದಾಗಿ ಟೀಮ್‌ನಿಂದ ದೂರ ಉಳಿದಿದ್ದಾರೆ. ಇದೀಗ ಸೂರ್ಯಕುಮಾರ್‌ ಹಾಗೂ ಶ್ರೇಯಾಂಕ ಬೆಂಗಳೂರಿನ ಎನ್​ಸಿಎನಲ್ಲಿದ್ದಾರೆ.. ಇಂಜುರಿಯಿಂದ ಚೇತರಿಸಿಕೊಳ್ತಿರೋ ಇಬ್ಬರೂ ರಿಹ್ಯಾಬ್​ಗೆ ಒಳಗಾಗಿದ್ದಾರೆ. ಇದೀಗ ಇವರಿಬ್ರು ಫ್ರೀ ಟೈಮ್‌ನಲ್ಲಿ ಔರಾ ಫಾರ್ಮಿಂಗ್‌ ರೀಲ್ಸ್‌ ಮಾಡಿದ್ದಾರೆ. ಇದು ಈಗ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡ್ತಿದೆ. ಈ ರೀಲ್ಸ್‌ನಲ್ಲಿ ಜಿಮ್‌ನಲ್ಲಿ ಟ್ರಾಲಿ ಮಾದರಿಯ ವ್ಯಾಯಾಮದ ಸಾಧನದ ಮೇಲೆ ನಿಂತು ಸೂರ್ಯ ಔರಾ ಫಾರ್ಮಿಂಗ್​ ಸ್ಟೆಪ್ಸ್​ ಹಾಕುತ್ತಿದ್ದಾರೆ.. ಇವ್ರ ಹಿಂದೆ ಕೂತಿರುವ ಶ್ರೇಯಾಂಕ ಪಾಟೀಲ್​ ವೇಟ್​ ಲಿಫ್ಟಿಂಗ್​ ರಾಡ್​ ಬಳಸಿಕೊಂಡು ಬೋಟ್​ ಚಲಾಯಿಸುತ್ತಿರುವವರಂತೆ ಆ್ಯಕ್ಷನ್​ ಮಾಡಿದ್ದಾರೆ. ಸದ್ಯ ಇವರಿಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಇನ್ನು ಔರಾ ಫಾರ್ಮಿಂಗ್‌ ರೀಲ್ಸ್‌ಗೆ ನಮ್ಮ ಟೀಮ್‌ ಇಂಡಿಯಾ ಪ್ಲೇಯರ್ಸ್‌ ಮಾತ್ರವಲ್ಲ ಫಾರಿನ್‌ ಪ್ಲೇಯರ್ಸ್‌ ಕೂಡ ಫಿದಾ ಆಗಿದ್ದಾರೆ. ಆರ್‌ಸಿಬಿ ಮಾಜಿ ವೇಗಿ ವೇಯ್ನ್​ ಪಾರ್ನೆಲ್ ಕೂಡ ಮೈದಾನಲ್ಲೇ ಸ್ಟೆಪ್ಸ್‌ ಹಾಕಿದ್ದಾರೆ. ವೇಯ್ನ್‌ ಪಾರ್ನೆಲ್‌ ಸದ್ಯ ಲೆಜೆಂಡ್​​ ಲೀಗ್​ನಲ್ಲಿ ಸೌತ್​ ಆಫ್ರಿಕಾ ಚಾಂಪಿಯನ್ಸ್​ ಪರ ಆಡ್ತಿದ್ದಾರೆ. ಇಂಗ್ಲೆಂಡ್​​​ ವಿರುದ್ಧದ ಪಂದ್ಯದಲ್ಲಿ ರವಿ ಬೋಪಾರ ವಿಕೆಟ್​ ಉರುಳಿಸಿದ ಪಾರ್ನೆಲ್​ ಔರಾ ಫಾರ್ಮಿಂಗ್​ ಸೆಲಬ್ರೇಷನ್​ ಮಾಡಿದ್ದಾರೆ. ಇದ್ರ ವಿಡಿಯೋ ಕೂಡ ವೈರಲ್‌ ಆಗಿದೆ. ಪಾರ್ನೆಲ್‌ ಸೆಲೆಬ್ರೇಷನ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ವೆಸ್ಟ್​ ಇಂಡೀಸ್​​​ ಆಲ್​​ರೌಂಡರ್​​ ಕಾರ್ಲಸ್​ ಬ್ರಾಥ್​ವೇಟ್​​ ಕೂಡ ಔರಾ ಟ್ರೆಂಟ್‌ ಗೆ ಫಿದಾ ಆಗಿದ್ದಾರೆ. ಕಾರ್ಲಸ್‌ ಮೈದಾನದಲ್ಲಿ ವಿಕೆಟ್‌ ಉರುಳಿಸ್ತಿದ್ದಂತೆ ಔರಾ ಫಾರ್ಮಿಂಗ್‌ ಸ್ಟೆಪ್ಸ್‌ ಹಾಕಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

ಅಂದ್ಹಾಗೆ ಈ ಔರಾ ಫಾರ್ಮಿಂಗ್‌ ಟ್ರೆಂಡ್‌ ಹುಟ್ಟಿಕೊಂಡಿದ್ದು 5 ನೇ ಕ್ಲಾಸ್‌ ಹುಡುಗನಿಂದ.. ಆತನ ಒಂದು ಸ್ಟೆಪ್‌ ಈಗ ವಲ್ಡ್‌ ಫೇಮಸ್‌ ಆಗಿದೆ.. ಇತ್ತೀಚೆಗೆ ಇಂಡೋನೇಷ್ಯಾದ ಸುಮಾತ್ರಾದಲ್ಲಿ ಪಾಕು ಜಾಲುರ್ ಫೆಸ್ಟಿವೆಲ್​ನಲ್ಲಿ ನಡೆದಿತ್ತು. ಈ ವೇಳೆ ಅಲ್ಲಿ ದೋಣಿ ಸ್ಫರ್ಧೆ ಆಯೋಜಿಸಲಾಗಿತ್ತು. ಔರಾ ಫಾರ್ಮಿಂಗ್ ಬೋಟ್ ರೇಸಿಂಗ್ ನಲ್ಲಿ ರಯಾನ್​ ಅರ್ಕಾನ್​ ಡಿಕಾ ಎಂಬ ಬಾಲಕ ಸ್ಪರ್ಧಿಸಿದ್ದ. ಬೋಟ್​ ಮುಂದೆ ನಿಂತು ತನ್ನ ತಂಡವನ್ನ ಹುರಿದುದುಂಬಿಸೋದು ಈತನ ಕೆಲಸ. ಕಪ್ಪು ಬಣ್ಣದ ಬಟ್ಟೆ ಧರಿಸಿ ಬೋಟ್​ನ ತುದಿಯಲ್ಲಿ ನಿಂತ ರಯಾನ್‌  ಸ್ಪೆಷಲ್​​ ಸ್ಟೆಪ್ಸ್​​   ಹಾಕಿದ್ದ..  ವೇಗವಾಗಿ ಚಲಿಸ್ತಿರೋ ಬೋಟ್‌ನ ತುದಿಯಲ್ಲಿ ನಿಂತು ಕೂಲ್​​​ ಡಾನ್ಸ್  ಮಾಡಿದ್ದ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಫೇಮಸ್‌ ಆಯ್ತು.. ಕೆಲವೇ ಹೊತ್ತಲ್ಲಿ ರಯಾನ್ ವಿಡಿಯೋ ವಿಶ್ವಾದ್ಯಂತ ವೈರಲ್​ ಆಗಿದ್ದಾರೆ. ಸದ್ಯ ಆತ ಬೋಟ್‌ ಮೇಲೆ ನಿಂತು ಹಾಕಿರುವ ಸ್ಟೆಪ್​ ಈತ ಟ್ರೆಂಡ್ ಸೆಟ್‌ ಮಾಡಿದೆ.

ಇನ್ನು ಈ ಔರಾ ಫಾರ್ಮಿಂಗ್‌ ಅಂದ್ರೆ ಏನು ಅನ್ನೋ ಪ್ರಶ್ನೆ ಕೂಡ ನಿಮ್ಮನ್ನ ಕಾಡ್ಬೋದು.. ಈ ಔರಾ ಫಾರ್ಮಿಂಗ್​ ಅಂದ್ರೆ, ತನಗೆ ಇಷ್ಟ ಬಂದಿದ್ದನ್ನ ಮಾಡೋದು.. ಏಂಜಾಯ್​ ಮಾಡೋದು ಅನ್ನೋ ಅರ್ಥವಿದೆ. ಇಂಡೋನೇಷ್ಯಾದ ಪುಟ್ಟ ಹುಡುಗ ತನಗಿಷ್ಟ ಬಂದ ಸ್ಟೆಪ್ಸ್‌ ಹಾಕಿ ರಾತ್ರೋ ರಾತ್ರಿ ಫೇಮಸ್‌ ಆಗಿದ್ದಾನೆ.. ಆತನ ಸ್ಟೆಪ್ಸ್‌ನ ಜಗತ್ತೇ ಮೆಚ್ಚಿಕೊಂಡಿದೆ.. ಆದ್ರೆ ರಯಾನ್ ನಿಜಕ್ಕೂ ಗ್ರೇಟ್‌.. ಯಾಕಂದ್ರೆ ಅಷ್ಟು ವೇಗವಾಗಿ ಹೋಗೋ ಬೋಟ್‌ನಲ್ಲಿ ನಿಂತು ಸ್ಟೆಪ್ಸ್‌ ಹಾಕೋದು ತುಂಬಾನೇ ಕಷ್ಟ.. ಸ್ಪಲ್ಪ ಎಚ್ಚರ ತಪ್ಪಿದ್ರೂ ಅನಾಹುತ ಕಟ್ಟಿಟ್ಟ ಬುತ್ತಿ.. ಆದ್ರೆ ಈ ಪುಟ್ಟ ಪೋರನ ಧೈರ್ಯ, ಸಾಹಸವನ್ನ ಮೆಚ್ಚಲೇಬೇಕು..

Shwetha M