ಭಾಗ್ಯ ಮೇಲೆ ಆದೀಶ್ವರ್ ಗೆ ಲವ್? – ಪ್ರೀತಿಗೆ ಓಕೆ ಹೇಳ್ತಾಳಾ ಕುಸುಮಾ ಸೊಸೆ?

ತಾಂಡವ್‌ನಿಂದ ದೂರವಾದ ಬಳಿಕ ಭಾಗ್ಯ ಹೊಸ ಜೀವನ ಶುರು ಮಾಡಿದ್ದಾಳೆ. ಗಂಡ ದೂರ ಆದ್ಮೇಲೆ ಹೊಸ ಬ್ಯುಸಿನೆಸ್ ಶುರು ಮಾಡಿದ್ಲು. ಅದಾದ್ಮೇಲೆ ಪೂಜಾ ಮದ್ವೇನೂ ಮಾಡಿಸಿದ್ಲು.. ಇದೀಗ ಭಾಗ್ಯ ಬಾಳಲ್ಲಿ ಹೊಸ ಬೆಳಕು ಮೂಡ್ತಿದ್ಯಾ ಅನ್ನೋ ಅನುಮಾನ ಈಗ ವೀಕ್ಷರನ್ನ ಕಾಡ್ತಿದೆ. ಭಾಗ್ಯಳನ್ನ ಶತ್ರುವಿನಂತೆ ಕಾಣ್ತಿದ್ದ ಆದೀಶ್ವರ್ ಈಗ ಪ್ರೀತಿಯಲ್ಲಿ ಬಿದ್ನಾ ಅನ್ನೋ ಪ್ರಶ್ನೆ ಈಗ ಕಾಡ್ತಿದೆ.
ಇದನ್ನೂ ಓದಿ: ಆನೆಗಳ ಕ್ಯೂಟ್ ಚುಂಬನ..! – ಇದು ಒಡಹುಟ್ಟಿದವರ ಶುದ್ಧ ಪ್ರೀತಿ!
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಸೋತು ಸುಣ್ಣವಾಗ್ಬೇಕು.. ತನ್ನ ಮುಂದೆ ಮಂಡಿಯೂರಿ ಸಹಾಯ ಕೇಳ್ಬೇಕು ಅಂತಾ ತಾಂಡವ್ ಅಂದ್ಕೊಂಡಿದ್ದಾನೆ. ಹೀಗಾಗಿ ಆತ ಶ್ರೇಷ್ಠಾ, ಕನ್ನಿಕಾ ಜೊತೆ ಸೇರ್ಕೊಂಡು ಮಾಡಬಾರದ ಕೆಲ್ಸ ಮಾಡಿದ್ದ. ಭಾಗ್ಯ ವಿರುದ್ಧ ಒಂದಾದ ಮೇಲೊಂದು ಕುತಂತ್ರ ಮಾಡ್ತಾ ಬಂದಿದ್ದ.. ತಾಂಡವ್ ಏನೇ ಮಾಡಿದ್ರು, ಗೆಲುವು ಮಾತ್ರ ಭಾಗ್ಯಳದ್ದೇ.. ಭಾಗ್ಯಗೆ ಕಾಟ ಕೊಟ್ಟಿದ್ದು ಸಾಕಾಗಿಲ್ಲ ಅಂತಾ ಪೂಜಾ ಕಿಶನ್ ಮದುವೆ ನಿಲ್ಲಿಸಲು ಕೂಡ ಪ್ರಯತ್ನಿಸಿದ್ದ. ಪೂಜಾ ಕಿಶನ್ ಮದುವೆ ಮಾಡಿಸಲು ಹಣದ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದೆಡೆ ತಾಂಡವ್, ಕನ್ನಿಕಾ, ಮಾತು ಕೇಳ್ಕೊಂಡು ಅದೀಶ್ವರ್ ಕೂಡ ಭಾಗ್ಯಾಳಿಗೆ ತೊಂದರೆ ಕೊಟ್ಟಿದ್ದ. ಆದ್ರೆ ಕುತಂತ್ರಿಗಳ ಆಟ ನಡೆಯಲಿಲ್ಲ.. ಭಾಗ್ಯಾಳ ಒಳ್ಳೆಯ ಗುಣ ಆದಿಗೆ ತಿಳಿಯಿತು. ಪೂಜ ಕಿಶನ್ ಮದುವೆ ಕೂಡ ನಡೆಯಿತು. ಇದೀಗ ಆದಿಗೆ ಭಾಗ್ಯ ಮೇಲೆ ಲವ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರನ್ನ ಕಾಡಿದೆ.
ಭಾಗ್ಯಗೆ ಡಿವೋರ್ಸ್ ಕೊಟ್ಟು ತಾಂಡವ್.. ಶ್ರೇಷ್ಠಾಳನ್ನ ಮದುವೆಯಾಗಿದ್ದಾಯ್ತು. ತಾಂಡವ್ ಅಂತೂ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಇನ್ನು ಭಾಗ್ಯ ತಾಂಡವ್ ಒಂದಾಗೋದೇ ಸಾಧ್ಯ ಇಲ್ಲ. ಭಾಗ್ಯ ಈಗ ಇಬ್ಬರು ಮಕ್ಕಳನ್ನೂ ಭಾಗ್ಯ ಸಾಕಬೇಕು.. ಮನೆಯ EMI ಕಟ್ಟಬೇಕಿದೆ. ಪೂಜಾ ಮದುವೆಗೆ ಮಾಡಿದ ಸಾಲ ತೀರಿಸೋ ಜವಾಬ್ದಾರಿ ಭಾಗ್ಯ ಮೇಲಿದೆ, ಇದೀಗ ಭಾಗ್ಯಗೆ ಆದೀಶ್ವರ್ ಸಹಾಯ ಮಾಡ್ಬೋದು.. ಇಲ್ಲಿಂದಲೇ ಅವ್ರ ಪ್ರೀತಿ ಶುರು ಆಸ್ಬೋದು ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಹೌದು ಆದೀಶ್ವರ್‌ಗೆ ಇನ್ನೂ ಮದುವೆಯಾಗಿಲ್ಲ. ಮದುವೆ ಮ್ಯಾಟರ್‌ನಲ್ಲಿ ಮಿಡಲ್ ಕ್ಲಾಸ್ ಹುಡುಗಿಯಿಂದ ಆದೀಶ್ವರ್ ನೊಂದಿದ್ದಾರೆ. ನಂಬಿಕೆಗೆ ಮೋಸ ಆದ್ಮೇಲೆ ಆದೀಶ್ವರ್ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದಾರೆ. ಕಿಶನ್ – ಪೂಜಾ ಮದುವೆ ವೇಳೆ ಭಾಗ್ಯ ಬಗ್ಗೆ ಇಲ್ಲದ್ದೆಲ್ಲಾ ಆರೋಪ ಮಾಡಿ ಆದೀಶ್ವರ್ ನ ನಂಬಿಸಿದ್ಲು. ಕನ್ನಿಕಾ ಮಾತನ್ನಕೇಳಿ ಭಾಗ್ಯ ಬಗ್ಗೆ ಆದಿ ತಪ್ಪು ಕಲ್ಪನೆ ಮಾಡಿಕೊಂಡಿದ್ದ. ಆದರೆ, ಭಾಗ್ಯಳ ಸ್ವಾಭಿಮಾನ – ನಿಷ್ಕಲ್ಮಶ ಮನಸ್ಸು ಆದಿಗೆ ಅರ್ಥವಾಗಿದೆ. ಹೀಗಾಗಿಯೇ, ಆದೀಶ್ವರ್ ಮಂಡಿಯೂರಿ ಭಾಗ್ಯಗೆ ಕ್ಷಮೆ ಕೇಳಿದ್ದ. ಇದೀಗ ಭಾಗ್ಯಳ ಒಂಟಿ ಹೋರಾಟ ಆದೀಶ್ವರ್‌ಗೆ ಇಂಪ್ರೆಸ್ ಆಗುತ್ತಿದೆ. ಇದೀಗ ಭಾಗ್ಯಾ ಜೀವನ ಹೊಸ ಆಯಾಮ ಪಡೆದುಕೊಳ್ಳಲಿದೆ. ಮುಂದೆ ಭಾಗ್ಯ – ಆದಿ ಲವ್ ಸ್ಟೋರಿ ಶುರುವಾಗೋದು ಪಕ್ಕಾ ಅಂತಾ ವೀಕ್ಷಕರು ಹೇಳ್ತಿದ್ದಾರೆ..
ಈಗಾಗಲೇ ಆದೀಶ್ವರ್ ಮತ್ತು ಭಾಗ್ಯಾ ಪ್ರೇಮಾಂಕುರದ ಮೊದಲ ಹಂತವನ್ನು ತೋರಿಸಲಾಗಿದೆ. ಭ್ಯಾಗ್ಯ ಒಂದು ಕಡೆ ತೆರಳುತ್ತಿರುವಾಗ ರೋಡ್ ಮಧ್ಯೆ ಕಾರ್‌ನ ಹಿಂಭಾಗದ ಟಯರ್ ಪಂಚರ್ ಆಗಿರುತ್ತದೆ. ಸ್ವಾವಲಂಭಿ ಭಾಗ್ಯಾ ಯಾರ ಸಹಾಯವಿಲ್ಲದೇ ಟಯರ್ ಚೇಂಜ್ ಮಾಡ್ತಾಳೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಆದಿ, ಕಾರ್ ನಿಲ್ಲಿಸಿ ಭಾಗ್ಯ ಕಷ್ಟ ಪಡುತ್ತಿರುವುದನ್ನು ಕಂಡು ಓಡಿ ಬಂದು ಸಹಾಯ ಮಾಡುತ್ತಾನೆ. ಭಾಗ್ಯ ಎಷ್ಟೇ ಬೇಡ ಎಂದರೂ ಆದೀ ಕೇಳುವುದಿಲ್ಲ. ಬಳಿಕ ಕೈ ತೊಳೆದುಕೊಳ್ಳಲು ಭಾಗ್ಯಾ ನೀರು ನೀಡಲು ಬಂದಾಗ, ಮೊದಲು ನೀವು ಕೈಗಳನ್ನು ಸ್ವಚ್ಛಗೊಳಿಸಿ ಎಂದು ಆದೀ ಭಾಗ್ಯಾಳ ಕೈಗೆ ನೀರು ಹಾಕುತ್ತಾನೆ. ಈ ವೇಳೆ ಇಬ್ಬರು ಮುಖ-ಮುಖ ನೋಡಿಕೊಂಡಿದ್ದಾರೆ. ಇಬ್ಬರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ಪ್ರೀತಿಯ ಮುನ್ಸೂಚನೆಯಂತೆ ನಿರ್ದೇಶಕರು ತೋರಿಸಿದ್ದಾರೆ.
ಇದೀಗ ಸೀರಿಯಲ್ ನೋಡಿದ ವೀಕ್ಷಕರು ಭಾಗ್ಯ – ಆದಿ ಮದುವೆ ಆಗಬೇಕು. ಆಗ ತಾಂಡವ್ ಸೊಕ್ಕು ಕಮ್ಮಿ ಆಗುತ್ತೆ.. ತಾಂಡವ್ ಯಾವಾಗಲೂ ದಡ್ಡಿನ ಮದುವೆಯಾದೆ, ನಾನು ಬುದ್ಧಿವಂತ, ನಾನು ಎಜುಕೇಟೆಡ್, ನಾನು ದೊಡ್ಡ ಜಾಬ್‌ಗೆ ಹೋಗ್ತೀನಿ ಅಂತೆಲ್ಲಾ ಹೇಳಿ ಭಾಗ್ಯನ ಅವಮಾನ ಮಾಡ್ತಿದ್ದ. ಇದೀಗ ಆದೀಶ್ವರ್ ಜೊತೆ ಮಾಡಿಸಿದ್ರೆ ಸೊಕ್ಕು ಕಡಿಮೆಯಾಗುತ್ತೆ ಅಂತ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಮುಂದೆ ಏನಾಗುತ್ತೆ ಅಂತಾ ವೀಕ್ಷಕರೇ ಲೆಕ್ಕಾಚಾರ ಹಾಕ್ತಿದ್ದಾರೆ.

ನೋಡಿರಿ

