ಆನೆಗಳ ಕ್ಯೂಟ್ ಚುಂಬನ..! – ಇದು ಒಡಹುಟ್ಟಿದವರ ಶುದ್ಧ ಪ್ರೀತಿ!

ಆನೆಗಳು ಬುದ್ಧಿವಂತ ಪ್ರಾಣಿಗಳು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲಿಯೂ ಮರಿ ಆನೆಗಳು ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಮರಿಯಾನೆಗಳ ಆಟ, ತುಂಟಾಟ, ಕಸರತ್ತುಗಳ ವಿಡಿಯೋ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತವೆ. ಇದೀಗ ಇಲ್ಲೊಂದು ಕಡೆ ಆನೆಗಳು ಚುಂಬಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಇದನ್ನೂ ಓದಿ: ಬಣ್ಣದ ಲೋಕಕ್ಕೆ ಮತ್ತೆ ಬಂದ ಐಶು – ರಿಯಾಲಿಟಿ ಶೋಗೆ ಜಡ್ಜ್ ಆಗಿ ಅಮೂಲ್ಯ ಎಂಟ್ರಿ
ಸಾಮಾನ್ಯವಾಗಿ ಆನೆಗಳ ತುಂಟಾ, ಫೈಟ್ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತವೆ. ಇದೀಗ ಎರಡು ಆನೆಗಳು ಪರಸ್ಪರ ಚುಂಬಿಸುತ್ತಿರೋ ವಿಡಿಯೋ ವೈರಲ್ ಆಗ್ತಿದೆ. ವೈರಲ್ ಆದ ವಿಡಿಯೋದಲ್ಲಿ ಕಾಡಿನ ಮಧ್ಯೆ ಆನೆಗಳ ಗುಂಪೊಂದಿದೆ. ಇದ್ರಲ್ಲಿ ಎರಡು ಮರಿಯಾನೆಗಳು ಪರಸ್ಪರ ಹತ್ತಿರ ನಿಂತಿರುವುದು ಕಾಣಬಹುದು, ನಿಧಾನವಾಗಿ ಎರಡು ಆನೆಗಳು ತಲೆಯನ್ನು ಹತ್ತಿರ ತರುತ್ತದೆ.ತಮ್ಮ ಸೊಂಡಿಲನ್ನ ಎತ್ತಿ ನಿಧಾನವಾಗಿ ಕಿಸ್ ಮಾಡುತ್ತಿವೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾದರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಒಡಹುಟ್ಟಿದವರ ಪ್ರೀತಿ ಎಂದಿಗೂ ಇಷ್ಟು ಮುದ್ದಾಗಿ ಕಾಣಲಿಲ್ಲ, ಎರಡು ಮರಿ ಆನೆಗಳು ಮುತ್ತು ಹಂಚಿಕೊಳ್ಳುತ್ತಿವೆ. ಪ್ರಕೃತಿಯ ನೇರವಾಗಿ ಕಾಣುವ ಶುದ್ಧ ಕಾಡು ಪ್ರೀತಿ” ಎಂದು ಬರೆದುಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರೂ, ಸಹೋದರ ಪ್ರೀತಿ ಮತ್ತು ಬಾಂಧವ್ಯದ ಸಂಕೇತವೆಂದು ಎಂದು ಹೇಳಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ನೋಡಿರಿ

